Type Here to Get Search Results !

ಭಾರತದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ 2023

 ಸಾಂಸ್ಕೃತಿಕ ವಿಭಾಗದಲ್ಲಿ ಸರ್ಪಡೆಗೊಂಡಿರುವ ಭಾರತದ 30 ತಾಣಗಳು 


1. ಖಜುರಾಹೋ ಸ್ಮಾರಕ ಸಮೂಹಗಳು 

       ಸ್ಥಳ - ಮಧ್ಯಪ್ರದೇಶದ ಚತ್ತಾಪುರ ಜಿಲ್ಲೆ 

        ಸೇರಿದ ವರ್ಷ - 1982 

ವಿಶೇಷತೆ :- 

                   ಚಂದೇಲ ವಂಶಸ್ತರಿಗೆ ಸಂಬಂಧಿಸಿದೆ. ಜೈನ, ಹಿಂದೊ ಮತ್ತು ಬೌದ್ಧ ಧರ್ಮದ ಸಮೂಹ ಸ್ಮಾರಕಗಳನ್ನು ಹೊಂದಿದೆ ಸ್ಥಳವಾಗಿದೆ. 


2. ಅಜಂತಾ ಗುಹೆಗಳು 

      ಸ್ಥಳ - ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆ 

      ಸೇರಿದ ವರ್ಷ - 1983 

 ವಿಶೇಷತೆ :-

                     ಬೌದ್ಧ ಗುಹೆಗಳಿಗೆ ಸಂಬಂಧಿಸಿದೆ. 


3. ಎಲ್ಲೋರಾ ಗುಹೆಗಳು 

      ಸ್ಥಳ - ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆ 

      ಸೇರಿದ ವರ್ಷ - 1983 

ವಿಶೇಷತೆ 

                ರಾಷ್ಟ್ರಕೂಟ ಅರಸರು ನಿರ್ಮಿಸಿದ್ದರು. ಜೈನ, ಬೌದ್ಧ, ಹಿಂದೂ ಧರ್ಮದ ಸಾಂಸ್ಕೃತಿಕ ಸಮ್ಮಿಲನ ಸಂಕೀರ್ಣ. 1-12 ಗುಹೆಗಳು-ಬೌದ್ಧ ದರ್ಮ, 13-34 ಜೈನ ಧರ್ಮಕ್ಕೆ ಸಂಬಂಧಿಸಿದ ಗುಹೆಗಲಾಗಿದೆ. ಇಲ್ಲಿ ರಾಷ್ಟ್ರಕೂಟರ ಒಂದನೇ ಕೃಷ್ಣ ಹೆಸರಾಂತ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದ್ದು. 


4. ತಾಜ್ ಮಹಲ್ 

      ಸ್ಥಳ - ಉತ್ತರ ಪ್ರದೇಶ ಆಗ್ರಾ 

      ಸೇರಿದ ವರ್ಷ - 1983 

ವಿಶೇಷತೆ :-

                    ಇದು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ. ಯಮುನಾ ನದಿಯ ದಾದದಲ್ಲಿದ್ದು, ಷಾಜಹಾನ್ ಕಟ್ಟಿಸಿದನು. 


5. ಆಗ್ರಾ ಕೋಟೆ 

      ಸ್ಥಳ - ಉತ್ತರಪ್ರದೇಶ 

      ಸೇರಿದ ವರ್ಷ - 1983 

ವಿಶೇಷತೆ :-

              " ಲಾಲ್ ಕಿಲಾ, ಆಗ್ರಾದ ಕೆಂಪು ಕೋಟೆ" ಎನ್ನುವರು. ತಾಜ್ ಮಹಲ್ ಮತ್ತು ಆಗ್ರಾ ಕೋಟೆಗಳಿವೆ. ಯಮುನಾ ನದಿಯ ಬಲ ದಂಡೆಯ ಮೇಲಿದೆ. 


6. ಮಹಾಬಲಿಪುರಂ 

       ಸ್ಥಳ- ತಮಿಳುನಾಡಿನ ಕಾಂಚೀಪುರಂ 

      ಸೇರಿದ ವರ್ಷ - 1984 

ವಿಶೇಷತೆ :

                ದಕ್ಷಿಣ ಭಾರತವನ್ನು ಆಳುತ್ತಿದ್ದ ಪಲ್ಲವರ ಬಂದರು ನಗರವಾಗಿತ್ತು. ಇಲ್ಲಿ ಮಾಮಲ್ಲಪುರಂ ದೇವಾಲಯಗಳ ನಿರ್ಮಾಣ. ಪಂಚರಥಗಳು ಸುಪ್ರಸಿದ್ದವಾಗಿದ್ದು, ದೇವಗಂಗೆ ಭೂಮಿಗೆ ಇಳಿದು ಬರುತ್ತಿರುವ ದೃಶ್ಯ ಪ್ರಮುಖವಾಗಿದೆ. 


7. ಕೊನಾರ್ಕ್ ಸೂರ್ಯ ದೇವಾಲಯ 

      ಸ್ಥಳ - ಓದಿಶಾದ ಕೊನರ್ಕ್ 

      ಸೇರಿದ ವರ್ಷ - 1984 

ವಿಷಶತೆ :

             ಇದನ್ನು "ಬ್ಲಾಕ್ ಪಗೋಡ" ಎನ್ನುವರು. 24 ಚಕ್ರಗಳನ್ನು ಹೊಂದಿದ ಸೂರ್ಯ ದೇವತೆಯ ರೋಪದಲ್ಲಿ ನಿರ್ಮಾಣ. ಪ್ರತಿ ವರ್ಷ ಫೆಬ್ರವರಿಯಲ್ಲಿ ಚಂದ್ರ ಭಾಗ ಮೇಳೆ ಜರುಗುವ ಸ್ಥಳ. ಓಡಿಶಾದ ನಾಗರ ಶೈಲಿಯಲ್ಲಿ ನಿರ್ಮಾಣ. 2018 ರ ಜನವರಿಯಲ್ಲಿ ಬಿಡುಗಡೆಗೊಂಡ ಹೊಸ 10 ರೊ ನೋಟಿನಲ್ಲಿ ಹಿಂಭಾಗದಲ್ಲಿ ಸೂರ್ಯ ದೇವಾಲಯದ ಚಿತ್ರವಿದೆ. 


8. ಚರ್ಚ್ ಮತ್ತು ಕಾನ್ವೆಂಟ್ಸ್ 

      ಸ್ಥಳ - ಗೋವ 

      ಸೇರಿದ ವರ್ಷ - 1986 

ವಿಶೇಷತೆ :

               ಪೋರ್ಚುಗೀಸ್ ರ ಅಲ್ಪಾನ್ಸೋ ಅಲ್ಬುಕರ್ಕ ನಿಂದ 1510 ರಲ್ಲಿ ಹಳೆ ಗೋವಾ ನಿರ್ಮಾಣ. ಪೋರ್ಚುಗೀಸರ ರಾಹಧಾನಿಯಾಗಿತ್ತು. ಗೋವಾ ನಗರವನ್ನು ಮಾಂಡವಿ ನದಿ ದಡದಲ್ಲಿ ಬೀಜಾಪುರದ ಸುಲ್ತಾನರು 15 ನೇ ಶತಮಾನದಲ್ಲಿ ಕಟ್ಟಿದರು. 

ಪ್ರಮುಖ ಚರ್ಚ್ :- 

                           ಸೆಂಟ್ ಕ್ಯಾಥಡ್ರಾಲ್,ಸೆಂಟ್ ಫ್ರಾನ್ಸಿಸ್ ಆಫ್ ಅಸಿಸಿ, ಸೆಂಟ್ ಕ್ಯಾಟೆನೊ, ಸೆಂಟ್ ಕ್ಷವೀಯರ. 


9. ಫತೇಫುರ್ ಸಿಕ್ರಿ 

      ಸ್ಥಳ - ಉತ್ತರ ಪ್ರದೇಶದ ಆಗ್ರಾ 

      ಸೇರಿದ ವರ್ಷ - 1986 

ವಿಶೇಷತೆ :

            1570ರಲ್ಲಿ ಮೊಘಲ್ ದೊರೆ ಅಕ್ಬರ್ ಕಟ್ಟಿಸಿದನು. ದೌಲತಾಬಾದ್, ಬುಲಂದರ್ವಾಜ, ಪಂಚಮಹಲ್ ಮುಖ್ಯಾ ಸ್ಮಾರಕಗಳಾಗಿವೆ. 1573 ರ ಅಕ್ಬರ್ ನ ಗುಜರಾತ್ ದಂಡೆಯಾತ್ರೆ, ಇದರ ವಿಜಯದ ನೆನೆಪಿಗಾಗಿ ನಿರ್ಮಾಣ. ಇದನ್ನು ವಿಜಯಗಳ ನಗರ ಎಂದು ಕರೆಯುತ್ತಾರೆ. 


10. ಹಂಪೆ 

      ಸ್ಥಳ - ಕರ್ನಾಟಕ -ಬಳ್ಳಾರಿ 

      ಸೇರಿದ ವರ್ಷ - 1986 

ವಿಶೇಷತೆ :

            ಹಂಪೆಯು ತುಂಗಭದ್ರಾ ನದಿ ದಾದದಲ್ಲಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಜೈನ, ಹಿಂದೂ ಹಜು ಜೈನ ಧರ್ಮಗಳ ಧಾರ್ಮಿಕ ಕೇಂದ್ರವಾಗಿತ್ತು. 

* ಪ್ರಾಚೀನ ಹೆಸರು - "ಕಿಷ್ಕಿಂದ"

*ಪ್ರಮುಖ ಸ್ಮಾರಕ -

                          ವಿರೋಪಕ್ಷ ದೇವಾಲಯ, ಕಲ್ಲಿನ ರಥ, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯದ, ವಿಠಲ ದೇವಾಲಯ, ಇತರೆ ಸ್ಮಾರಕಗಳು ಜಗತ್ಪ್ರಸಿದ್ದಿಯಾಗಿವೆ. 


11. ಎಲಿಫೆಂಟಾ ಗುಹೆಗಳು 

      ಸ್ಥಳ - ಮಹರಾಷ್ಟ್ರ ಮುಂಬೈ 

      ಸೇರಿದ ವರ್ಷ - 1987 

ವಿಶೇಷತೆ :

                  ಎಲಿಫೆಂಟಾ ದ್ವೀಪದ ಮೂಲ ಮರಾಠಿ ಹೆಸರು ಪಾರಾಪುರಿ. ಇಲ್ಲಿ 5 ಹಿಂದೂ ಧರ್ಮಕ್ಕೆ, 2 ಗುಹಗಳು ಬೌದ್ಧ ಧರ್ಮಕ್ಕೆ ಸೇರಿವೆ. 


12. ಚೋಳ ದೇವಾಲಯ 

      ಸ್ಥಳ - ತಮಿಳುನಾಡು 

      ಸೇರಿದ ವರ್ಷ - 1987 

ವಿಶೇಷತೆ :

                ಬೃಹದೀಶ್ವರ ದೇವಾಲಯ (ಗಂಗೈಕೊಂಡ ಚೋಳಪುರಂ) , ಐರಾವತೇಶ್ವರ, ಬೃಹದೀಶ್ವರ ದೇವಾಲಯ ಕಂಡುಬರುತ್ತದೆ. 


13.ಪಟ್ಟದ ಕಲ್ಲು 

      ಸ್ಥಳ - ಕರ್ನಾಟಕ ಬಾಗಲಕೋಟೆ 

      ಸೇರಿದ ವರ್ಷ - 1987 

ವಿಶೇಷತೆ :

              ಚಾಲುಕ್ಯ ಕಾಲದ ವಾಸ್ತುಶಿಲ್ಪಗಳು, ವಿರೋಪಾಕ್ಷ, ಮಲ್ಲಿಕಾರ್ಜುನ ದೇವಾಲಯ, ಪಾಪನಾಥ, ಜೈನ ನಾರಾಯಣ ಸ್ಮಾರಕಗಳು. (ನಾಗರ ಮತ್ತು ದ್ರಾವಿಡ ಶೈಲಿ). ಮಲಪ್ರಭಾ ನದಿಯ ದಡದಲ್ಲಿದೆ. 


14. ಸಾಂಚಿಯ ಬುದ್ಧ ಸ್ಮಾರಕ 

      ಸ್ಥಳ - ಮಧ್ಯೆ ಪ್ರದೇಶ ಸಾಂಚಿ 

      ಸೇರಿದ ವರ್ಷ - 1989 

ವಿಶೇಷತೆ :

                  ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿವೆ. ಮೌರ್ಯರ ದೊರೆ ಅಶೋಕನ ಕಾಲದಲ್ಲಿ ನಿರ್ಮಿತವಾಗಿ ಉಳಿದಿರುವ ಏಕೈಕ ಸ್ತೂಪವಾಗಿದೆ. ಬುದ್ಧನ ಗೌರವಾರ್ಥ ಅಥವಾ ಆತನ ಅವಶೇಷಗಳ ಮೇಲೆ ನಿರ್ಮಿಸಲಾದ ಗುಮ್ಮಟವೇ ಸ್ತೂಪ. 

15. ಕುತುಬ್ ಮಿನಾರ್ ಸಂಕೀರ್ಣ ಮತ್ತು ಸ್ಮಾರಕಗಳು 

      ಸ್ಥಳ - ದೆಹಲಿ ಬಳಿಯ ಮೆಹರೌಲಿ 

      ವರ್ಷ - 1993 

ವಿಶೇಷತೆ :

                    ಇಂಡೋ - ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿ. 238 ಅಡಿ ಎತ್ತರ. 47 ಅಡಿ ತಳಹದಿ ಹೊಂದಿರುವ ಮಿನಾರ್ 5 ಅಂತಸ್ತಿನ ಕಟ್ಟಡವಾಗಿದ್ದು, ಭಾರತದ ಎತ್ತರದ ಗೋಪುರ. ಕುತುಬುದ್ದೀನ್ ಐಬಕ್ ನಿಂದ ನಿರ್ಮಾಣ ಆರಂಭವಾಗಿದ್ದು, ಇಲ್ತಮಶ್ ನು ಮಿನಾರ್ ನಿರ್ಮಾಣದ ಕಾರ್ಯ ಪೂರ್ಣಗೊಳಿಸಿದನು. ಪ್ರತೀ ವರ್ಷ ನವೆಂಬರ್ - ಡಿಸೆಂಬರ್ ನಲ್ಲಿ ಕುತುಬ್ ಫೆಸ್ಟಿವಲ್ ಆಯೋಜನೆಯಾಗುತ್ತದೆ. ಕುತುಬ್ ಮಿನಾರ್ bali 3 ಅಡಿ ಮತ್ತು 8 ಅಂಗುಲ ಎತ್ತರದ ಹಾಗೂ 6 ಸಾವಿರ ಕಿ.ಗ್ರಾಂ ತೂಕವಿರುವ ಕಬ್ಬಿಣದ ಸ್ತಂಭವಿದೆ. 


16. ಪರ್ವತ ರೈಲುಗಳು - 

      ದಿ ಡಾರ್ಜಲಿಂಗ್ ಹಿಮಾಲಯ ರೈಲ್ವೆ (1999), ಕಾಲ್ಕಾ-ಶಿಮ್ಲಾ ರೈಲ್ವೆ (2008), ಹಾಗೂ ದಿ ನೀಲಗಿರಿ ಮೌಂಟೈನ್ ರೈಲ್ವೆ (2005)ಗಳನ್ನು ಒಟ್ಟಾಗಿ "ಮೌಂಟೈನ್ ರೈಲ್ವೆ" ಎಂಬ ಹೆಸರಿನಡಿಯಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. 


17. ಮಹಾಬೋಧಿ ದೇವಾಲಯ 

      ಸ್ಥಳ - ಬಿಹಾರದ ಪಾಟ್ನಾ 

      ಸೇರಿದ ವರ್ಷ - 2002 

ವಿಶೇಷತೆ :

            ಸಾಮ್ರಾಟ ಅಶೋಕ ಇಲ್ಲಿ ಮೊದಲ ಮಹಾಬೋಧಿ ದೇವಾಲಯ ನಿರ್ಮಿಸಿದನು. 180 ಅಡಿ ಎತ್ತರದ ಶಿಖರವನ್ನು ಹೊಂದಿರುವ ದೇವಾಲಯಗಳ ಸಂಕೀರ್ಣ (ಪಗೋಡ ಸ್ವರೂಪ). 


18. ಬಿಂಬಿಟ್ಕ ಶಿಲಾಶ್ರಯಗಳು 

      ಸ್ಥಳ - ಮಧ್ಯ ಪ್ರದೇಶದ ರಾಯ್ ಸೇನ್ ಜಲ್ಲೆ 

      ಸೇರಿದ ವರ್ಷ - 2003 

ವಿಶೇಷತೆ :-

             ಅತಿ ಪ್ರಾಚೀನ ಕಾಲದ ಜನಜೀವನದ ಕುರುಹುಗಳನ್ನು ಹೊಂದಿದೆ. ಇದು ಸಹಜ ರೀತಿಯ ವರ್ಣಚಿತ್ರಗಳನ್ನು ಶಿಲೆಗಳ ಮೇಲೆ ಹೊಂದಿದೆ. 1957 ರಲ್ಲಿ ಮೊದಲ ಬಾರಿಗೆ ಇದರ ಅನ್ವೇಷಣೆ. ಬಿಂಬಿಟ್ಕ ಎಂಬುದು ಮಹಾಭಾರತದ ಭೀಮನಿಗೆ ಸಂಬಂಧಿಸಿದೆ. ಬಿಂಬಿಟ್ಕ ಎಂದರೆ ಭೀಮ ಕುಳಿತುಕೊಳ್ಳುತ್ತಿದ್ದ ಸ್ಥಳವಾಗಿದೆ. 


19. ಚಂಪನಾರ್-ಪವಗದ ಆರ್ಕಿಯಾಲಾಜಿಕಲ್ ಪಾರ್ಕ್ 

      ಸ್ಥಳ - ಗುಜರಾತ್ ನ ಪಂಚಮಹಲ್ ಜಿಲ್ಲೆ 

      ಸೇರಿದ ವರ್ಷ - 2004 

ವಿಶೇಷತೆ :

              ಐತಿಹಾಸಿಕ ಮತ್ತು ಜೀವಂತ ಸಾಂಸ್ಕೃತಿಕ ಪರಂಪರೆಗಳ ತಾಣವಾಗಿದೆ. ಕಾಲಿಕ ಮಠ ಮತ್ತು ಜೈನ ದೇವಾಲಯಗಳಿವೆ. ಹಿಂದೂ - ಮುಸ್ಲಿಂ ಸಾಂಸ್ಕೃತಿ ಮತ್ತು ವಾಸ್ತುಶಿಲ್ಪ ಶೈಲಿಯ ಸಂಯೋಜನೆ. ದೇವಸ್ಥಾನ, ಘೋರಿ, ಮಸೀದಿ, ಗೋಡೆ ಹೀದೆ 11 ರೀತಿಯ ಸ್ಮಾರಕಗಳ ಪಾರ್ಕ್ ಆಗಿದೆ. 


20) ಛತ್ರಪತಿ ಶಿವಾಜಿ ಟರ್ಮಿನಲ್ಸ್ 

      ಸ್ಥಳ - ಮಹಾರಾಷ್ಟ್ರದ ಮುಂಬೈ 

      ಸೇರಿದ ವರ್ಷ - 2004 

ವಿಶೇಷತೆ :

           ಕೇಂದ್ರ ರೈಲ್ವೆ ಕೇಂದ್ರ ಕಚೇರಿ ಹೊಂದಿದೆ. ಇದನ್ನು ವಿಕ್ಟೋರಿಯಾ ಟರ್ಮಿನಲ್ಸ್ ಎನ್ನುವರು. ಇಂಡೋ ಸಾರ್ಸೆನಿಕ್ ಶೈಲಿಯಲ್ಲಿದೆ. 


21) ಹುಮಾಯಾನ ಘೋರಿ 

      ಸ್ಥಳ - ದೆಹಲಿ 

      ಸೇರಿದ ವರ್ಷ - 1993 

ವಿಶೇಷತೆ :

              ಮೋಘಲ ದೊರೆ ಹುಮಾಯಾನ್ ಘೋರಿ 1570 ರಲ್ಲಿ ನಿರ್ಮಿತವಾಗಿರುವುದು. ಮೋಘಲ ವಾಸ್ತುಶಿಲ್ಪ ಶೈಲಿಯಲ್ಲಿ ಮಿರ್ಜಾ ಗಿಯಾತ್ ವಾಸ್ತುಶಿಲ್ಪಿಕಾರ ನಿರ್ಮಿಸಿರುವುದು. 2 ಬಾಗಿಲುಗಳು (ದಕ್ಷಿಣ ಮತ್ತು ಪಶ್ಚಿಮ), 42.5 ಮೀ. ಎತ್ತರ ಇದೆ 


22. ಕೆಂಪು ಕೋಟೆ 

      ಸ್ಥಳ - ದೆಹಲಿ 

      ಸೇರಿದ ವರ್ಷ - 2007 

ವಿಶೇಷತೆ :

               ಮೊಘಲ್ ದೊರೆ ಷಾಜಹಾನ್ ನು 1638ರಲ್ಲಿ ಕೆಂಪುಕೋಟೆಯನ್ನು ಕಟ್ಟಲು ಪ್ರಾರಂಭಿಸಿ 1648ರಲ್ಲಿ ಪೂರ್ತಿಗೊಳಿಸಿದನು. ಇದು ಷಾಜಹಾನ್ ನ ಹೊಸ ರಾಜಧಾನಿ ಷಹಜಹನಾಬಾದ್ ಅರಮನೆಯಾಗಿದೆ. ಯಮುನಾ ನದಿಯ ಬಲದಂಡೆಯ ಮೇಲಿದೆ. ಪ್ರತಿವರ್ಷ ಆಗಸ್ಟ್ 15 ರಂದು ಭಾರತದ ಪ್ರಧಾನಿ ತ್ರಿವರ್ಣ ಧ್ವಜವನ್ನು ಕೆಂಪು ಕೋಟೆಯ ಲಾಹೋರಿ ಗೇಟ್ ಬಳಿ ಹಾರಿಸಿ ಸ್ವತಂತ್ರ್ಯೋತ್ಸವ ಭಾಷಣವನ್ನು ಮಾಡುವ ಸ್ಥಳ.  1996 ರ ನಂತರ ಮಹಾತ್ಮ ಗಾಂಧಿ ಸರಣಿಯ ಹೊಸ 500 ರೂ ನೋಟುಗಳ ಹಿಂಭಾಗದಲ್ಲಿ ಕೆಂಪು ಕೋಟೆಯ ಚಿತ್ರವಿದೆ. 


23. ಜಂತರ ಮಂತರ್ - ಜೈಪುರ 

      ಸ್ಥಳ - ರಾಜಸ್ಥಾನ 

      ಸೇರಿದ ವರ್ಷ - 2010 

ವಿಶೇಷತೆ :

            ರಜಪೂತರ ದೊರೆ 2 ನೇ ಜೈಸಿಂಗ್ ಜಂತರ್ ಮಂತರ್ ಸ್ಮಾರಕ ನಿರ್ಮಾಣ. ವಾಸ್ತುಶಿಲ್ಪದಲ್ಲಿರುವ ಖಗೋಳಶಾಸ್ತ್ರದ ಉಪಕರಣಗಳ ಸಂಗ್ರಹವಾಗಿದೆ. 


24. ರಾಜಸ್ಥಾನ ಕೋಟೆಗಳು 

      ಸ್ಥಳ - ರಾಜಸ್ಥಾನ (ಒಟ್ಟು 6 ಕೋಟೆಗಳು )

      ಸೇರಿದ ವರ್ಷ - 2013

ವಿಶೇಷತೆ :

                ಈ ಕೋಟೆಗಳಲ್ಲಿ ಅಂಬರ್, ಚಿತೆಸ್ತೋಗಾರ್, ಕುಂಭಾಲ್ಗರ್, ರಣತನಭೋರ್, ಜೈಸಲ್ಮೇರ್, ಗಾಗ್ರಾನ್ ಒಟ್ಟು 6 ಕೋಟೆಗಳನ್ನು ಒಳಗೊಂಡಿದೆ. ಇವು ಬೆಟ್ಟದ ಕೋಟೆಗಲಾಗಿದ್ದು, ಸಂಕೀರ್ಣವಾಗಿವೆ . ರಜಪೂತರು ರಕ್ಷಗಾಗಿ ನಿರ್ಮಿಸಿದ ಕೋಟೆಗಳಾಗಿವೆ 


25. ರಾಣಿ ಕಿ ಬಾವಿ 

      ಸ್ಥಳ - ಗುಜರಾತ್ ನ ಪಠಾಣ್ 

      ಸೇರಿದ ವರ್ಷ - 2014 ಜೂನ್ 22 

ವಿಶೇಷತೆ :

            ಸೋಲಂಕಿ ಸಾಮ್ರಾಜ್ಯದ ಅವಧಿಯಲ್ಲಿ ರಾಣಿ ಕಿ ವಾವ್ ಅಥವಾ ರಾಣಿ ಬಾವಿಯನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದೊಂದು ಸಂಪದ್ಭರಿತ ಕೆತ್ತನೆಯ ಸ್ಮಾರಕವಾಗಿದೆ. ಇದನ್ನು ಒಂದನೇ ಭೀಮದೇವ (1026-1063) ತನ್ನ ಪತ್ನಿ ಉದಯಮತಿ  ಜ್ಞಾಪಕಾರ್ಥ ನಿರ್ಮಿಸಿದನು. 


26. ಚಂಡೀಘಡ - ಕ್ಯಾಪಿಟಲ್ ಕಾಂಪ್ಲೆಕ್ಸ್ 

      ಸ್ಥಳ - ಚಂಡೀಘಡ 

      ಸೇರಿದ ವರ್ಷ - 2016 

ವಿಶೇಷತೆ :

            ಚಂಡೀಘಡ ಕ್ಯಾಪಿಟಲ್ ಕಾಂಪ್ಲೆಕ್ಸ್ ಈಗ ಸಾಂಸ್ಕೃತಿಕ ವಿಭಾಗದಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ. ಈ ತಾಣಕ್ಕೆ ಯುನೊಸ್ಕೋ ಯಾವುದೇ ಹಣ ನಿಡುವುದಲ್ಲ. ಆದರೆ ಕಾಂಪ್ಲೆಕ್ಸ್ ರಕ್ಷಣೆಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹೆಗಳನ್ನು ನೀಡುತ್ತದೆ. 


27. ನಲಂದಾ ವಿಶ್ವವಿದ್ಯಾಲಯ 

      ಸ್ಥಳ - ಬಿಹಾರ 

      ಸೇರಿದ ವರ್ಷ - 2016 

ವಿಶೇಷತೆ :

          ಇದು ಪ್ರಾಚೀನ ವಿ.ವಿ ಆಗಿದ್ದು. ಬೌದ್ಧ ಪ್ರಾಣಿತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ರಾಷ್ಟ್ರಪತಿಯದ್ದ A. P. J ಅಬ್ದುಲ್ ಕಲಾಂ ಅವರ ಆದೇಶದನ್ವಯ ಈ ವಿ. ವಿ. ಯನ್ನು ಮತ್ತೆ 2010 ರಲ್ಲಿ ಪುನರ್ ಮತ್ತೆ ಕಾರ್ಯಾರಂಭ ಮಾಡಲಾಯಿತು. ಗುಪ್ತರ ಅರಸ 1 ನೇ ಕುಮಾರ ಗುಪಟನ್ನು ಕ್ರಿ. ಶ 427 ರಲ್ಲಿ ನಿರ್ಮಾಣ ಮಾಡಿದ ವಿ. ವಿ. ಆಗಿದೆ. ಈ ವಿವಿಯನ್ನು 1026 ರಲ್ಲಿ ಮಹಮ್ಮದ್ ಘೋರಿಯ ದಂಡನಾಯಕ ಭಕ್ತಿಯಾರ್ ಖಿಲ್ಜಿಯು ಸಂಪೂರ್ಣವಾಗಿ ನಾಶ ಮಾಡಿದನು. 


28. ಅಹಮದಾಬಾದ್ ನಗರ 

      ಸ್ಥಳ - ಗುಜರಾತ್ 

      ಸೇರಿದ ವರ್ಷ - 2017 

ವಿಶೇಷತೆ :

              ಹಿಂದು, ಇಸ್ಲಮಿಕ್, ಜೈನ ಸಮುದಾಯದ ಸಹಬಾಳ್ವ ದೇಗುಲಗಳುಹಾಗೂ ಪುರಾತನ ವಾಸ್ತುಶಿಲ್ಪಗಳಿಗೆ ಪ್ರಸಿದ್ದವಾಗಿದೆ. 


29. ಕಾಂಚನ ಜುಂಗ ರಾಷ್ಟ್ರೀಯ ಉದ್ಯಾನವನ 

      ಸ್ಥಳ - ಸಿಕ್ಕಿಂ 

      ಸೇರಿದ ವರ್ಷ - 2016 

ವಿಶೇಷತೆ :

              ಇದು ಮಿಶ್ರವರ್ಗದಲ್ಲಿ ಆಯ್ಕೆಯಾದ ಭಾರತದ ಏಕೈಕ ತಾಣವಾಗಿದೆ. ಇದು ರಾಷ್ಟ್ರೀಯ ಉದ್ಯಾನವನ ಮತ್ತು ಜೈವಿಕ ಸಂರಕ್ಷಣಾ ತಾಣವನ್ನು ಹೊಂದಿದೆ. ಕಾಂಚನ ಜುಂಗಾ ಪರ್ವತದಿಂದಾಗಿ ಈ ಉದ್ಯಾನವನವು ಈ ಹೆಸರನ್ನು ಪಡೆದಿದೆ. 


30. ವಿಕ್ಟೋರಿಯನ್ ಕಟ್ಟಡಗಳ ಮತ್ತು ಆರ್ಟ್ ಡೆಕೊ ಕಟ್ಟಗಳು 

      ಸ್ಥಳ - ಮಹಾರಾಷ್ಟ್ರದ ಮುಂಬೈ

      ಸೇರಿದ ವರ್ಷ - 2018 

ವಿಶೇಷತೆ :

                ವಿಕ್ಟೋರಿಯಾ ಗೋಥಿಕ್ ಶೈಲಿಯ ಕಟ್ಟದಾಗಲಾಗಿದ್ದು, ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ 1880 ರಿಂದ 1940ರ ಅವಧಿಯಲ್ಲಿ ನಿರ್ಮಿಸಿದ ಕಟ್ಟಡಗಳು. ಹೈಕೋರ್ಟ್, ಮುಂಬೈ ವಿಶ್ವವಿದ್ಯಾನಿಲಯ, ಎಲಿಸ್ಪನ್ ಕಾಲೇಜ್, ಡೇವಿಡ್ ಸಸ್ಸೊಲ್ ಗ್ರಂಥಾಲಯ, ಹಳೆ ಸಚಿವಾಲಯ, ರೈಲ್ವೆ ಮುಖ್ಯಾ ಕಚೇರಿ ಮತ್ತು ವಿವಿಧ ಸಂಕೀರ್ಣಗಳು. 



ಭಾರತದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ 2023
ಭಾರತದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ 2023 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad