Type Here to Get Search Results !

ಭಾಷಾವಾರು ರಾಜ್ಯಗಳ ವಿಂಗಡಣೆಯ ಕೆಲವು ಆಯೋಗಗಳು

 ಭಾಷಾವಾರು ರಾಜ್ಯಗಳ ವಿಂಗಡಣೆ

ಭಾರತದೊಂದಿಗೆ ದೇಶೀಯ ಸಂಸ್ಥಾನಗಳ ಸೇರ್ಪಡೆಗೆ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡಣೆಯಾಗಬೇಕೆಂಬ ಬೇಡಿಕೆಯನ್ನು ದಕ್ಷಿಣ ಭಾರತದ ವಿವಿಧ ಪ್ರಾಂತ್ಯಗಳು ಇಟ್ಟುವು. ಈ ಬೇಡಿಕೆಯನ್ನು ಪರಿಶೀಲಿಸಲು ಭಾರತ ಸರ್ಕಾರವು ಕೆಲವು ಸಮಿತಿಗಳನ್ನು ನೇಮಿಸಿತ್ತು. 


ಧಾರ್ ಆಯೋಗ 

ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುಣ್ಯರವಿಂಗಡಿಸಬೇಕು ಎಂಬ ಬೇಡಿಕೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ಭಾರತ ಸರ್ಕಾರವು 1946 ರಲ್ಲಿ ಎಸ್.ಕೆ. ಧಾರ್ ರವರ ನೇತೃತ್ವದಲ್ಲಿ ಭಾಷಾವಾರು ಪ್ರಾಂತ್ಯಗಳ ಆಯೋಗವನ್ನು ರಚಿಸಿತು. ಭಾಷೆ ಆಧರಿಸಿ ರಾಜ್ಯಗಳನ್ನು ಪುನರ್ ರಚಿಸದೆ ಆಡಳಿತದ ಅನುಕೂಲತೆಯನ್ನು ಆಧರಿಸಿ ಪುನರ್ ರಚಸಬೇಕು ಎಂಬುದಾಗಿ 1948 ರಲ್ಲಿ ಸಲ್ಲಿಸಲಾದ ತನ್ನ ವರದಿಯಲ್ಲಿ ಧಾರ್ ಆಯೋಗವು ಶಿಫಾರಸು ಮಾಡಿತು. 


ಜೆ. ವಿ. ಪಿ ಆಯೋಗ 

ಧಾರ್ ಆಯೋಗದ ಶಿಫಾರಸಿನ ವಿರುದ್ಧವಾಗಿ ವ್ಯಾಪಕ ಪ್ರತಿಭಟನೆ ಕಂಡುಬಂದಿದ್ದರಿಂದ ವಿಷಯಗಳನ್ನು ಹೊಸದಾಗಿ ಪರಿಶೀಲಿಸಲು ಭಾರತ ಸರ್ಕಾರವು 1948 ರಲ್ಲಿ ಇನ್ನೊಂದು ಸಮಿತಿಯನ್ನು ನೇಮಿಸಿತು. ಜವಾಹರಲಾಲ್ ನೆಹರು, ವಲ್ಲಭಬಾಯ್ ಪಟೇಲ್. ಮತ್ತು ಪಟ್ಟಾಭಿ ಸೀತಾರಾಮಯ್ಯ ಇವರನ್ನು ಒಳಗೊಂಡ ಈ ಸಮಿತಿಯು ಜೆ.ವಿ.ಪಿ ಸಮಿತಿ ಎಂದೇ ಜನ ಪ್ರಿಯವಾಯಿತು. ವಿಶೇಷವೆಂದರೆ ಈ ಸಮಿತಿಯು ಅಧ್ಯಕ್ಷರನ್ನು ಹೊಂದಿರಲಿಲ್ಲ. ಮೂವರೂ ಸದಸ್ಯರೇ ಆಗಿದ್ದರು. 1949 ರಲ್ಲಿ ವರದಿ ಸಲ್ಲಿಸಿದ ಈ ಸಮಿತಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್ ರಚಿಸುವ ಬೇಡಿಕೆಯನ್ನು ತಿರಸ್ಕರಿಸಿತು. 


ಆಂಧ್ರ ಪ್ರದೇಶ ರಚನೆ 

    ತೆಲುಗು ಭಾಷಿಕರನ್ನು ಒಟ್ಟುಗೂಡಿಸುವುದರ ಮೂಲಕ ಆಂಧ್ರ ಪ್ರದೇಶ ಎಂಬ ರಾಜ್ಯವನ್ನು ರಚಿಸಬೇಕು ಎಂದು ಆಗ್ರಹಿಸಿ 56 ದಿನಗಳ ಕಾಲ ಆಮರಣಾಂತ ಉಪವಾಸ ಕೈಗೊಂಡ ಕಾಂಗ್ರೆಸ್ ನಾಯಕರಾದ ಪೊಟ್ಟಿ ಶ್ರೀ ರಾಮುಲು ರವರು ನಿಧನರಾದರು. ಪರಿಣಾಮವಾಗಿ ಎಚ್ಚೆತ್ತುಗೊಂಡ ಸರ್ಕಾರ 1953 ರಲ್ಲಿ ತೆಲುಗು ಭಾಷೆ ಮಾತನಾಡುವವರನ್ನು ಮದ್ರಾಸ್ ರಾಜ್ಯದಿಂದ ಪ್ರತ್ಯೇಕಿಸಿ ಆಂಧ್ರ ಎಂಬ ಮೊಟ್ಟ ಮೊದಲ ಭಾಷಾವಾರು ರಾಜ್ಯವನ್ನು ರಚಿಸಿತು. 


ಡಾ|| ಫಜಲ್ ಆಲಿ ಆಯೋಗ 

ಆಂಧ್ರ ಪ್ರದೇಶದ ರಚನೆಯು ಭಾಷೆಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಬೇಕೆಂಬ ಬೇಡಿಕೆಯನ್ನು ತೀವ್ರಗೊಳಿಸಿತು. ಪರಿಣಾಮವಾಗಿ ಈ ಬೇಡಿಕೆಯನ್ನು ಮರು ಪರಿಶೀಲಿಸಲು ಭಾರತ ಸರ್ಕಾರವು ಫಜಲ್ ಆಲಿಯವರ ಅಧ್ಯಕ್ಷತೆಯಲ್ಲಿ 1953 ರಲ್ಲಿ ಒಂದು ತ್ರಿಸದಸ್ಯ ಆಯೋಗವನ್ನು ನೇಮಿಸಿತು. ಕೆ.ಎಂ ಪಣಿಕ್ಕರ್ ಮತ್ತು ಖುಂಜ್ರು ರವರು ಆಯೋಗದ ಸದಸ್ಯರಾಗಿದ್ದರು. 1955 ರಲ್ಲಿ ಸಲ್ಲಿಸಲಾದ ತನ್ನ ವರದಿಯಲ್ಲಿ ಆಯೋಗವು ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್ ರಚಿಸುವ ಬೇಡಿಕೆಯನ್ನು ಸಮ್ಮಿತಿಸಿತು. ಒಂದು ಭಾಷೆ ಒಂದು ರಾಜ್ಯ ಎಂಬ ಸಿದ್ದಾಂತವನ್ನು ಆಯೋಗವು ತಿರಸ್ಕರಿಸಿತು. ರಾಜ್ಯಗಳ ಪುನರ್ ರಚನೆಯಲ್ಲಿ ರಾಷ್ಟ್ರೀಯ ಏಕತೆಗೆ ಪ್ರಥಮ ಆದ್ಯತೆಯನ್ನು ನೀಡಬೇಕು ಎಂಬುದು ಆಯೋಗದ ಸಲಹೆಯಾಗಿತ್ತು. ರಾಜ್ಯಗಳ ಪುನರ್ ರಚನೆಯ ಸಂದರ್ಭದಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು ಎಂದು ಆಯೋಗ ಸಲಹೆ ನೀಡಿತು. 

1. ರಾಷ್ಟ್ರೀಯ ಏಕತೆ ಮತ್ತು ಭದ್ರತೆಯ ಸಂರಕ್ಷಣೆ ಹಾಗೂ ಸಂವರ್ಧನೆ. 

2. ಭಾಷೆ ಮತ್ತು ಸಾಂಸ್ಕೃತಿಕ ಏಕತೆ ( ಏಕರೂಪತೆ). 

3. ಆರ್ಥಿಕ ಮತ್ತು ಆಡಳಿತಾತ್ಮಕ ಅಂಶಗಳು. 

4. ಪ್ರತಿ ರಾಜ್ಯದ ಜನತೆಯ ಕಲ್ಯಾಣ ಹಾಗೂ ಇಡೀ ರಾಷ್ಟ್ರದ ಕಲ್ಯಾಣ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad