ಪೂರ್ವ ಕರಾವಳಿ ( Eastern Coastal )
ಬಂಗಾಳ ಕೊಲ್ಲಿಯ ತೀರದಲ್ಲಿರುವ ಪ್ರದೇಶವನ್ನು ಪೂರ್ವ ಕರಾವಳಿ ಪ್ರದೇಶ ( Eastern Coastal Plain ) ಎಂದು ಕರೆಯುತ್ತಾರೆ. ಇದು ಪೂರ್ವ ಘಟ್ಟಗಳು ಮತ್ತು ಬಂಗಾಳ ಕೊಲ್ಲಿಗಳ ಮಧ್ಯೆ ಉತ್ತರದಲ್ಲಿ ಹೂಗ್ಲಿ ನದಿಯ ಮುಖಜಭೂಮಿಯಿಂದ ದಕ್ಷಿಣದಲ್ಲಿ ಕನ್ಯಾಕುಮಾರಿವರೆಗೆ ವ್ಯಾಪಿಸಿದೆ.
ಪಶ್ಚಿಮ ಕರಾವಳಿಯ ಮೈದಾನಕ್ಕೆ ಹೋಲಿಸಿದರೆ ಪೂರ್ವ ಕರಾವಳಿಯ ಮೈದಾನವು ವಿಶಾಲವಾಗಿದೆ. ಈ ಕರಾವಳಿ ಮೈದಾನದಲ್ಲಿ ರೇವೆಯ ಸಂಚಲನ ಜತೆಗೆ ಮರಳಿನ ಬೀಚ್ ಗಳು ಮತ್ತು ಬೆಣಚು ಕಲ್ಲಿನ ರಾಶಿಗಳಿವೆ. ಉದಾ: ಚೆನ್ನೈನ ಮೆರಿನಾ ಬೀಚ್, ದಕ್ಷಿಣ ಭಾರತದ ಅನೇಕ ನದಿಗಳು ಪೂರ್ವ ಕರಾವಳಿ ಮೈದಾನದ ಮೂಲಕ ಹರಿಯುತ್ತವೆ ಮತ್ತು ಮುಖಜಭೂಮಿಯನ್ನು ನಿರ್ಮಿಸಿವೆ.
ಮಹಾನದಿ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿ ಮುಖಜಭೂಮಿಗಳು ಪೂರ್ವ ಕರಾವಳಿಯಲ್ಲಿ ಕಂಡು ಬರುತ್ತದೆ.
ಪೂರ್ವ ಕರಾವಳಿ ತೀರಗಳು
1. ವಂಗ ತೀರ
2. ಉತ್ಕಲ ತೀರ
3. ಆಂಧ್ರ ತೀರ ( ಸರ್ಕಾರ್ ತೀರ )
4. ಕೋರಮಂಡಲ ತೀರ ( ತಮಿಳುನಾಡು )
1. ವಂಗ ತೀರ :-
ವಂಗ ತೀರವು ಪಶ್ಚಿಮ ಬಂಗಾಳದ ಪೂರ್ವಭಾಗದಲ್ಲಿ ಹಂಚಿಕೆಯಾಗಿದೆ. ಇಲ್ಲಿ ಕೋಲ್ಕತಾ ಮತ್ತು ಹಾಲ್ಡಿಯಾ ಬಂದರು ಕಂಡು ಬರುತ್ತದೆ
2. ಉತ್ಕಲ ತೀರ :-
ಉತ್ಕಲ ತೀರವು ಒಡಿಶಾ ರಾಜ್ಯದ ಪೂರ್ವ ಭಾಗದಲ್ಲಿದ್ದು, ಇಲ್ಲಿ ಪಾರದೀಪ ಬಂದರು ಮತ್ತು ಭಾರತದ ಅತಿ ದೊಡ್ಡ ಉಪ್ಪಿನ ಸರೋವರವಾದ ಚಿಲ್ಕಾ ಸರೋವರ ಮತ್ತು DRDO ಕ್ಷಿಪಣಿ ಪರೀಕ್ಷಾ ಕೇಂದ್ರವಾದ ವ್ಹೀಲರ್ ದ್ವೀಪ ಕಂಡು ಬರುತ್ತದೆ.
3. ಆಂಧ್ರ/ಸರ್ಕಾರ್ ತೀರ :-
ಆಂಧ್ರ ಪ್ರದೇಶದ ಪೂರ್ವ ಭಾಗದಲ್ಲಿ ಕಂಡು ಬರುತ್ತದೆ. ಈ ತೀರವನ್ನು ಸರ್ಕಾರ್ ಅಥವಾ ಸಿರಿಕಾರ್ ತೀರ ಎಂತಲೂ ಕರೆಯುತ್ತಾರೆ. ಇಲ್ಲಿ ವಿಶಾಖ ಪಟ್ಟಣ ಬಂದರು ಮತ್ತು ಶ್ರಿ ಹರಿಕೋಟದ ಸತೀಶ್ ಧಾವನ್ ಉಪಗ್ರಹ ಉಡಾವಣಾ ಕೇಂದ್ರ ಕಂಡು ಬರುತ್ತದೆ.
4. ಕೋರಮಂಡಲ ತೀರ :-
ಇದು ಆಂಧ್ರ ಪ್ರದೇಶದ ದಕ್ಷಿಣದಿಂದ ತಮಿಳುನಾಡು ಪೂರ್ವದಲ್ಲಿರುವ ತೀರವಾಗಿದೆ. ಇಲ್ಲಿ ಭಾರತದ ಅತ್ಯಂತ ದೊಡ್ಡ ಹವಳ ಮತ್ತು ಮುತ್ತುಗಳನ್ನು ಬೆಳೆಸುವ ಟೂಟಿಕೋರಿಯನ್ ಕಂಡು ಬರುತ್ತದೆ.
ಪೂರ್ವ ಕರಾವಳಿಯಲ್ಲಿ ವಿಶಾಖಪಟ್ಟಣ ಮಾತ್ರವೇ ಸ್ವಾಭಾವಿಕ ಬಂದರಾಗಿದ್ದು, ಇತರೆ ಬಂದರುಗಳಾದ ಚೆನ್ನೈ, ಕೋಲ್ಕತಾ, ಪಾರಾದೀಪ ಮುಂತಾದವುಗಳು ಕೃತಕ ಬಂಡರುಗಳಾಗಿವೆ. ಕೋರಮಂಡಲ ಕರಾವಳಿ ಮೈದಾನವು ಈಶಾನ್ಯ ಮಾರುತಗಳಿಂದ ಮಳೆ ಪಡೆಯುತ್ತವೆ ಮತ್ತು ತೀವ್ರವಾಗಿ ಚಂಡಮಾರುತ, ಪ್ರವಾಹಕ್ಕೆ ಒಳಗಾಗುತ್ತವೆ.
ಧನ್ಯವಾದಗಳು