Type Here to Get Search Results !

ಪಶ್ಚಿಮ ಕರಾವಳಿ ಮತ್ತು ಅವುಗಳ ವಿಶೇಷತೆಯ ಸಂಪೂರ್ಣ ಮಾಹಿತಿ

ಪಶ್ಚಿಮ ಕರಾವಳಿ ಮತ್ತು ಅವುಗಳ ವಿಶೇಷತೆ 

 
  ಅರಬೀ ಸಮುದ್ರದ ಕಡೆ ಇರುವ ಪ್ರದೇಶವನ್ನು ಪಶ್ಚಿಮ ಕರಾವಳಿ ಪ್ರದೇಶ ( Western Coastal Plain ) ಎನ್ನುವರು. ಇದು ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರಗಳ ಮಧ್ಯದಲ್ಲಿ ಸುಮಾರು 1,500 ಕಿ.ಮೀ ಉದ್ದವಾಗಿ ಮತ್ತು 10 ರಿಂದ 80 ಕಿ.ಮೀ ಆಗಳವಾಗಿ ಗುಜರಾತ್ ನ ರಾಣಾಕಛ್ ನಿಂದ ತಮಿಳುನಾಡಿನ ಕನ್ಯಾಕುಮಾರಿ ವರೆಗೆ ವಿಸ್ತರಿಸಿದೆ. ಇದು ಕಿರಿದಾಗಿಯೂ, ಕಡಿದಾಗಿಯೂ ಮತ್ತು ಶಿಲಾಮಯವಾಗಿದೆ. ಸಮುದ್ರ ಮಟ್ಟದಿಂದ 150 ಮೀಟರ್ ಎತ್ತರವಾಗಿದೆ. ಪೂರ್ವ ಕರಾವಳಿಗೆ ಹೊಲಿಸಿದಾಗ ಪಶ್ಚಿಮ ಕರವಳಿಯು ಕಡಿದಾಗಿದೆ. ಕಾರಣ ಪಶ್ಚಿಮ ಘಟ್ಟಗಳು ಸಮಾನಾಂತರವಾಗಿ ಹಾದು ಹೋಗಿವೆ. 

* ಪಶ್ಚಿಮ ಕರಾವಳಿಯನ್ನು ಉತ್ತರದಿಂದ ದಕ್ಷಿಣಕ್ಕೆ ಕ್ರಮವಾಗಿ ವಿಗಂಡಿಸಿದಾಗ 

   1. ಗುಜರಾತ್ ಕರಾವಳಿ 
   2. ಕೊಂಕಣ ತೀರ 
   3. ಕರ್ನಾಟಕ ಅಥವಾ ಕೆನರಾ ತೀರ 
   4. ಮಲಬಾರ್ ತೀರ 
ಪಶ್ಚಿಮ ಕರಾವಳಿ



1. ಗುಜರಾತ್ ಕರಾವಳಿ 

  ಗುಜರಾತ್ ಕರಾವಳಿಯು ರಾಣ್ ಆಫ್ ಕಛ್ ಮತ್ತು ಕ್ಯಾಂಬೆ ಕರಾವಳಿಯನ್ನು ಒಳಗೊಂಡಿದೆ. ಇದು ಸಬರಮತಿ, ಲೂನಿ ಮತ್ತು ಇತರ ಸಣ್ಣ ನದಿಗಳ ರೇಖೆಯ ಸಂಚಯನದಿಂದ ನಿರ್ಮಿತವಾಗಿದೆ. ಗುಜರಾತ್ ರಾಜ್ಯವು ದೇಶದ ಅತಿ ಉದ್ದವಾದ ಕರಾವಳಿ ಹೊಂದಿದೆ. ಕಾಂಡ್ಲಾ ಮತ್ತು ಓಕಾಗಳು ಇಲ್ಲಿನ ಪ್ರಮುಖ ಬಂದರುಗಳು ಗುಜಾರತನಲ್ಲಿ ಅತಿ ಹೆಚ್ಚು ಉಪ್ಪನ್ನು ತಯಾರಿಸಲಾಗುತ್ತದೆ. 

2. ಕೊಂಕಣ ಕರಾವಳಿ 

  ಕೊಂಕಣ ಕರಾವಳಿಯು ಗುಜರಾತ್ ಕರಾವಳಿಯ ದಕ್ಷಿಣದಲ್ಲಿದೆ. ಇದು ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕದ ವರೆಗೆ 530 ಕಿ.ಮೀ ಉದ್ದವಾಗಿ ವಿಸ್ತರಿಸಿದೆ. ಇದು ಒಳಚಾಚು ಮತ್ತು ಅಳಿವೆಗಳನ್ನು ಹೊಂದಿದೆ ಕರಾವಳಿ ತೀರವಾಗಿರುವುದರಿಂದ ನೈಸರ್ಗಿಕ ಬಂದರುಗಳಿಗೆ ಸೂಕ್ತವಾಗಿದೆ . ಉದಾ: ಮುಂಬೈ, ನವಸೇವ, ಮರ್ಮ ಗೋವಾ, ಕಾರವಾರ, ನವಮಂಗಳೂರು ಇತ್ಯಾದಿ. ಈ ಕರಾವಳಿಯು ಅತ್ಯಧಿಕ ಸವೆತಕ್ಕೊಳಗಾಗುತ್ತಿದೆ. ಇಲ್ಲಿ ಪೆಟ್ರೋಲಿಯಂ, ನೈಸರ್ಗಿಕ ಅನಿಲ (ಬಾಂಬೈ ಹೈ) ಸಮೃದ್ಧವಾಗಿ ಲಭ್ಯವಾಗುತ್ತದೆ. 

3. ಕರ್ನಾಟಕ ಕರಾವಳಿ 

      ಕರಾವಳಿಯು ಕೊಂಕಣ ಕರಾವಳಿಯ ಒಂದು ಭಾಗವಾಗಿದೆ. ಇದು ಉತ್ತರ ಕಾರವಾರ ದಿಂದ ದಕ್ಷಿಣದಲ್ಲಿ ಮಂಗಳೂರು ವರೆಗೆ 320 ಕಿ.ಮೀ ವಿಸ್ತರಿಸಿದೆ. ಕರ್ನಾಟಕದ 3 ಜಿಲ್ಲೆಗಳಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾರವಾರ ಮತ್ತು ಉಡುಪಿ ಕರಾವಳಿಯನ್ನು ಹೊಂದಿದೆ. ಕರ್ನಾಟಕ ಕರಾವಳಿಯು ಪಶ್ಚಿಮ ಕರಾವಳಿ ಮೈದಾನದಲ್ಲಿ ಅತ್ಯಂತ ಕಿರಿದಾಗಿದೆ. ಕಾರವಾರ ಮತ್ತು ನವಮಂಗಳೂರು ಬಂಡರುಗಳು ಕರ್ನಾಟಕದ ಪ್ರಮುಖ ಬಂಡರುಗಲಾಗಿದೆ. ಕಾರವಾರದ ಸಮೀಪದಲ್ಲಿರುವ ಸೀ-ಬರ್ಡ್ ನೌಕಾನೆಲೆಯ ಭಾರತ ದೇಶದಲ್ಲಿ ಅತಿ ದೊಡ್ಡ ನೌಕಾ ನೆಲೆಯಾಗಿದೆ. ಕರ್ನಾಟಕದ ಕರಾವಳಿಯು ಅನೇಕ ಬೀಚ್ ಗಳನ್ನು ಒಳಗೊಂಡಿದೆ. ಅಂತಹ ಬೀಚ್ ಗಳೆಂದರೆ, ಗೋಕರ್ಣ, ಮಲ್ಪೆ, ಕಾಸರಕೋಡು, ಮುರುಡೇಶ್ವರ, ಮರವಂತೆ, ಪಣಂಬೂರ್ ಮತ್ತು ಉಲ್ಲಾಳ. 

4. ಮಲಬಾರ್ ಕಾರವಾಳಿ 

    ಮಂಗಳೂರುನಿಂದ ಕೇರಳದ ಮೂಲಕ ಕನ್ಯಾಕುಮಾರಿಯ ವರೆಗೆ ವಿಸ್ತರಿಸಿರುವ ಈ ಕರಾವಳಿಯು ಮರಳು ದಿಬ್ಬಗಳು, ಲಗೂನ್ ಗಳು ಮತ್ತು ಹಿನ್ನೀರುಗಳನ್ನು ಒಳಗೊಂಡಿದೆ. ಕೇರಳದ ಹಿನ್ನೀರು ನೌಕಾಯಾನ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಪ್ರವಾಸಿಗರು ಸಣ್ಣ ದೋಣಿಗಳ ಮೂಲಕ ಸಂಚರಿಸಿ ಮನರಂಜನೆ ಪಡೆಯುತ್ತಾರೆ. ಈ ಕರಾವಳಿಯು ನೈರುತ್ಯ ಮಾನ್ಸೂನ ಮಾರುತಗಳಿಂದ ಮೊಟ್ಟ ಮೊದಲಿಗೆ ಮಳೆಯನ್ನು ಮಡೆಯುತ್ತದೆ. ಮಲಬಾರ್ ಕರಾವಳಿಯಲ್ಲಿ ಕಂಡು ಬರುವ ಕೇರಳದ ಕೊಚ್ಚಿನ್ ಬಂದರು ಸ್ವಾಭಾವಿಕ ಬಂದರಾಗಿದ್ದು, ಇದನ್ನು "ಅರಬ್ಬೀ ಸಮುದ್ರದ ರಾಣಿ ಎಂದು ಕರೆಯುತ್ತಾರೆ. ಕೊಚ್ಚಿನಲ್ಲಿ ಭಾರತದ ನೌಕಾ ಪಡೆಗೆ ಸಂಬಂಧಿಸಿದ ಯುದ್ಧ ಹಡಗುಗಳನ್ನು ನಿರ್ಮಿಸಲಾಗುತ್ತದೆ. 
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad