ಪೂರ್ವ ಘಟ್ಟಗಳು (Eastern Ghats)
ಪೂರ್ವ ಘಟ್ಟಗಳು ನಿರಂತವಾಗಿ ಸಾಗಿರದೆ ಅಲ್ಲಲ್ಲಿ ಪೂರ್ವದ ಅಂಚಿನಲ್ಲಿ ಕಂಡು ಬರುವ ಘಟ್ಟಗಳನ್ನು "ಪೂರ್ವ ಘಟ್ಟಗಳು" ಎನ್ನುವರು. ಇವುಗಳನ್ನು ಮಹೇಂದ್ರಗಿರಿ ಪರ್ವತಗಳೆಂದು ಕರೆಯುತ್ತಾರೆ. ಪೂರ್ವ ಘಟ್ಟಗಳು ಉತ್ತದ ಪಶ್ಚಿಮ ಬಂಗಾಳ ರಾಜ್ಯದಿಂದ ಒಡಿಶಾದ ಮೂಲಕ ಆಧರಪ್ರದೇಶದ ಮಾರ್ಗವಾಗಿ ದಕ್ಷಿಣದ ತಮಿಳುನಾಡು ರಾಜ್ಯಕ್ಕೆ ಸಾಗುತ್ತದೆ.
* ಇವು ಉತ್ತರದಲ್ಲಿ ಮಹಾನದಿ ಕಣಿವೆಯಿಂದ ದಕ್ಷಿಣದಲ್ಲಿ ನೀಲಗಿರಿ ಬೆಟ್ಟಗಳವರೆಗೆ ಸುಮಾರು 800 ಕಿ.ಮೀ ಉದ್ದವಾಗಿ ಹಬ್ಬಿದೆ. ಇವುಗಳ ಸರಾಸರಿ ಎತ್ತರ 600 ಮೀ ಗಲಾಗಿವೆ.
* ಪ್ರಮುಖ ನದಿಗಳಾದ ಮಹಾನದಿ, ಕೃಷ್ಣ, ಗೋದಾವರಿ, ಕಾವೇರಿ ನದಿಗಳು ಬೆಟ್ಟ ಸಾಲುಗಳನ್ನು ಬೇರ್ಪಡಿಸುತ್ತವೆ. ಈ ನದಿಗಳಿಂದ ಪೂರ್ವ ಘಟ್ಟವು ಸವಕಳಿ ಹೊಂದಿದೆ. ಈ ಘಟ್ಟಗಳು ಬಂಗಾಳಕೊಲ್ಲಿಗೆ ಸಮಾನಾಂತರವಾಗಿ ಸಾಗುತ್ತದೆ. ಇಲ್ಲಿ "ಸಿಮ್ಲಿಪಾಲ ರಾಷ್ಟ್ರೀಯ ಉದ್ಯಾನವನ" ಕಂಡು ಬರುತ್ತದೆ. ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳಷ್ಟು ಕಡಿದಾಗಿಲ್ಲ. ಬದಲಿಗೆ ಇವುಗಳು ನದಿ ನೀರಿನ ಸವೆತದಿಂದ ಸವಕಲಿಯಾಗಿದ್ದು, ವಿಶಾಲವಾದ ರೀತಿಯಲ್ಲಿವೆ.
* ಪಶ್ಚಿಮ ಘಟ್ಟಗಳಲ್ಲಿ ಆಂಧ್ರಪ್ರದೇಶದಲ್ಲಿ ರಂಪಾ ಬೆಟ್ಟಗಳು ಕಂಡು ಬಂದಿದ್ದು, ಗೋದಾವರಿ ನದಿಯು ಈ ಬೆಟ್ಟವನ್ನು ಸೀಳಿಕೊಂಡು ಹರಿಯುತ್ತಡದೆ. ಈ ಬೆಟ್ಟದ ಸುತ್ತಮೂತಲೂ ರಂಪಾ ಬುಡಕಟ್ಟು ಜನಾಂಗ ಕಂಡು ಬರುತ್ತದೆ. ಆಂಧ್ರ ಪ್ರದೇಶದ ಆರಾಕ್ ಕಣಿವೆಯು ಕಾಫಿ ಬೆಳೆಗೆ ಹೆಚ್ಚು ಪ್ರಸಿದ್ದಿಯಾಗಿವೆ. ( ಅಸ್ಸಾಂ ನ ಬರಾಕಾ ಕಣಿವೆಯು ಸೆಣಬಿನ ಬೆಳೆಗೆ ಪ್ರಸಿದ್ದಿಯಾಗಿದೆ)
ಪೂರ್ವ ಘಟ್ಟಗಳ ಪ್ರಮುಖ ಶಿಖರಗಳು
ಅರ್ಮಕೊಂಡ ಬೆಟ್ಟ :-
ಈ ಬೆಟ್ಟವು ಪೂರ್ವ ಘಟ್ಟಗಳಲ್ಲಿ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಇದರ ಎತ್ತರವು 1,680 ಮೀ ಗಳಾಗಿವೆ. ಇದು ಆಂಧ್ರಪ್ರದೇಶದಲ್ಲಿ ಕಂಡು ಬರುತ್ತದೆ.
ಮಹೇಂದ್ರ ಗಿರಿ ಬೆಟ್ಟ :-
ಈ ಬೆಟ್ಟವು ತಮಿಳುನಾಡಿನ ಕನ್ಯಾಕುಮಾರಿಯ ನೆಗರಕಾಯ್ಲ್ ಬಳಿ ಇದೆ. ಇದು ಪೂರ್ವ ಬೆಟ್ಟಗಳ ಅತ್ಯಂತ 2ನೇ ಎತ್ತರದ ಶಿಖರವಾಗಿದೆ. ಇದು 1,645 ಮೀಟರ್ ಎತ್ತರವಿದೆ.
ಮಹೇಂದ್ರ ಗಿರಿಯಲ್ಲಿ ಇಸ್ರೋದ Liquid Propulsion Systems Centre ಕಂಡು ಬರುತ್ತದೆ. ಇಲ್ಲಿ ಇರುಳಿಗಾಸ್, ಬಡಿಗಾಸ್, ತೊಡಗಾಸ್ ಎಂಬ ಬುಡಕಟ್ಟು ಜನಾಂಗ ಕಂಡು ಬರುತ್ತದೆ.
ಪೂರ್ವ ಘಟ್ಟಗಳ ವಿಶೇಷತೆ
* ಹರಡಿರುವ ರಾಜ್ಯಗಳು
ಪಶ್ಚಿಮ ಬಂಗಾಳ. ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡು.
*ಕಂಡು ಬರುವ ನಗರಗಳು
ವಿಶಾಖಪಟ್ಟಣಂ ಮತ್ತು ಚೆನ್ನೈ.
* ವಿಶೇಷತೆ
ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳಿಗಿಂತ ಪ್ರಾಚೀನವಾದವು.
ಪೂರ್ವ ಘಟ್ಟಗಳಲ್ಲಿ ಕಂಡು ಬರುವ ಪ್ರಮುಖ ಶಿಖರಗಳು
ಅರ್ಮಕೊಂಡ (1,680 ಮೀ), ಮಹೇಂದ್ರ ಗಿರಿ (1,645 ಮೀ), ಸಿಂಗರಾಜ್ ಬೆಟ್ಟ (1,516 ಮೀ), ನೀಲಗಿರಿ ಬೆಟ್ಟ (1,515 ಮೀ), ಪೂರ್ವ ಘಟ್ಟಗಳಲ್ಲಿನ ಪಾಲ್ಕೋಂಡ್ ಶ್ರೇಣಿಯಲ್ಲಿ ಆಂಧ್ರ ಪ್ರದೇಶದ ತಿರುಮಲ ಎಂಬ ಪ್ರಸಿದ್ದ ಪುಣ್ಯ ಕ್ಷೇತ್ರ ಕಂಡು ಬರುತ್ತವೆ.
ಇತರ ಪ್ರಮುಖ ಪೂರ್ವ ಘಟ್ಟದ ಶ್ರೇಣಿಗಳು
* ಆಂಧ್ರ ಪ್ರದೇಶ :-
ನಲ್ಲ-ಮಲ್ಲ, ವೆನುಕೊಂಡ, ಪಾಲ್ಕೋಂಡ್ ಮತ್ತು ನಗಾರಿ ಬೆಟ್ಟಗಳು.
*ತಮಿಳು ನಾಡು :-
ಕಲ್ಲಮಲೈ, ಪಚ್ಚಮಲೈ , ಗೊಂಡಮಲೈ, ಶೇವಾರಾವ್ ಮತ್ತು ಜಾವಳಿ ಶ್ರೇಣಿಗಳು.
* ಕರ್ನಾಟಕ :-
ಬಿಳಿಗಿರಿರಂಗನ ಬೆಟ್ಟ ಮತ್ತು ಮಲೆ ಮಹದೇಶ್ವರ ಬೆಟ್ಟಗಳು.
* ನೀಲಗಿರಿ ಬೆಟ್ಟಗಳು :-
ನೀಲಗಿರಿ ಬೆಟ್ಟಗಳು ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳು ಸಂಧಿಸುವ ಸ್ಥಳವಾಗಿದೆ.
ಪೂರ್ವ ಘಟ್ಟದಲ್ಲಿ ಹರಿಯುವ ಪ್ರಮುಖ ನದಿಗಳು
ಚಂಪಾವತಿ, ನಾಗವಲ್ಲಿ, ಋಷಿಕೌಲ್ಯ, ಶಬರಿ.
ಧನ್ಯವಾದಗಳು