Type Here to Get Search Results !

ಭಾರತದ ಅರಣ್ಯ ಸಂಪತ್ತು | ಉಪಯೋಗಗಳು | ಸಂರಕ್ಷಣೆ ಮತ್ತು ಕ್ರಮಗಳು

 ಭಾರತದ ಅರಣ್ಯ ಸಂಪತ್ತು 


ಅರಣ್ಯವು ಮಾನವನ ನೈಸರ್ಗಿಕ ಸಂಪತ್ತಾಗಿದೆ. ಭಾರತ ದೇಶದ ಭೌಗೋಳಿಕ ಹಿನ್ನಲೆ, ವಾಯುಗುಣವುಅರಣಿ ಬೆಳವಣಿಗೆಗೆ ಪೂರಕವಾಗಿದೆ. ಅರಣ್ಯವು ಸ್ವಭಾವಿಕ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದದು, ಇದರಿಂದ ಅನೇಕ ಉಪಯೋಗಗಳಿವೆ. 


ಅರಣ್ಯದ ಉಪಯೋಗಗಳು 

          ಅರಣ್ಯವು ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುಲು ಅರಣ್ಯದ ಬೆಳವಣಿಗೆ ಪೂರಕವಾಗಿದೆ  ಅರಣ್ಯಗಳು ಅನೇಕ ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯ ನೀಡಿ ಜೈವಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. 


* ಕಾಡುಗಳು ತೇವಾಂಶವನ್ನು ಒದಗಿಸಿ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. 

* ಹಸಿರುಮನೆ ಪರಿಣಾಮವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ. ಕಾಡುಗಳಿಂದ ಹೇರಾಳವಾದ ಆಮ್ಲಜನಕ ದೊರೆಯುತ್ತದೆ. 

* ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವಂತೆ ಮಾಡುತ್ತದೆ. 

* ಪ್ರವಾಸಿಗರ ಆಕರ್ಷಣಾ ತಾಣವಾಗಿರುತ್ತದೆ. 

* ಅರಣ್ಯಗಳು ಮಣ್ಣಿನ ಸವಕಳಿಯನ್ನು ತಡೆಯುತ್ತದೆ ಮತ್ತು ಫಲವತ್ತದೆಯನ್ನು ಹೆಚ್ಚಿಸುತ್ತದೆ. 

* ಅರಣ್ಯಗಳು ಅನೇಕ ಔಷಧಿ ಸಸ್ಯಗಳನ್ನು, ಗಿಡಮೂಲಿಕೆಗಳನ್ನು ಒಳಗೊಂಡಿದೆ. 

* ಅರಣ್ಯಗಳು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಪ್ರವಾಹವನ್ನು ನಿಯಂತ್ರಿಸುತ್ತದೆ. 

* ಅರಣ್ಯಗಳು ಸುಂದರ ದೃಶ್ಯಗಳನ್ನು ಒಳಗೊಂಡಿದ್ದು, ಮನರಂಜನಾ ಕೇಂದ್ರವಾಗಿದೆ. ಅಲ್ಲದೇ ಜೈವಿಕ ಪರಿಸರ ಸಮತೋಲನವನ್ನು ಕಾಪಾಡುತ್ತದೆ. 

* ಅರಣ್ಯಗಳು ಮಾರುತಗಳನ್ನು ತಡೆದು ಕೃಷಿ ಬೆಳೆಗಳನ್ನು ರಕ್ಷಿಸುತ್ತದೆ. 


ಅರಣ್ಯ ಸಂರಕ್ಷಣೆ 

    ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶವಾಗುತ್ತಿದ್ದು, ಅರಣ್ಯವು ಕಾಡ್ಗಿಚ್ಚು, ರಸ್ತೆಗಳ ನಿರ್ಮಾಣ, ನಾಗರಿಕರಣ, ನೀರಾವರಿ ಮತ್ತು ವಿದ್ಯುತ್ ಯೋಜನೆಗಾಗಿ ನಾಶಗೊಳಿಸುವುದರಿಂದಾಗಿ ಅದರ ಪ್ರಮಾಣ ಕಾಡಿಮೆಯಾಗುತ್ತಿದೆ ಮತ್ತು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಿದೆ. 


* ಇಂತಹ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಇದಕ್ಕಾಗಿ ಕಾಡುಗಳ ಬೆಳವಣಿಗೆ ಮತ್ತು ಸಂರಕ್ಷಣೆಗಾಗಿ ಭಾರತ ದೇಶದಲ್ಲಿ ರಾಷ್ಟ್ರೀಯ ಅರಣ್ಯ ನೀತಿಯನ್ನು ರೂಪಿಸಲಾಗಿದೆ. 

* ಕಾಡುಗಳ ರಾಷ್ಟ್ರೀಕರಣ, ಸಾಮಾಜಿಕ ಕಾಡುಗಳ ವ್ಯವಸ್ಥೆ, ಕಾಡುಗಳನ್ನು ವಾಣಿಜ್ಯಕ್ಕೆ ಹೊಂದುವಂತೆ ಅರಣ್ಯವನ್ನು ಬೆಳೆಸುವ ಮೂಲಕ ಸಂರಕ್ಷಿಸಲಾಗುತ್ತಿದೆ. 


ಅರಣ್ಯ ಸಂರಕ್ಷಣೆ ಕ್ರಮಗಳು 


* ಅತಿಯಾದ ದನಕರು ಮೆಯಿಸುವಿಕೆಯನ್ನು ನಿಯಂತ್ರಿಸುವುದು. 

* ಅರಣ್ಯ ಪ್ರದೇಶಗಳ ಕಬಳಿಕೆ ಮಾಡುವುವರಿಗೆ ಕಠಿಣ ಶಿಕ್ಷೆ ವಿಧಿಸುವುದು. 

* ಸ್ಥಳಾಂತರ ಬೇಸಾಯವನ್ನು ನಿಷೇಧಿಸುವುದು. 

* ನಗರಗಳಲ್ಲಿ ಆರ್ಥಿಕ ವಲಯಗಳ ಮಾದರಿಯಲ್ಲಿಯೇ ಅರಣ್ಯ ವಲಯಗಳನ್ನು ಅಭಿವೃದ್ಧಿ ಪಡಿಸುವುದು. 

* ಅರಣ್ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವುದು. 

* ಅರಣ್ಯ ಅಭಿವೃದ್ಧಿಗೆ ಶ್ರಮಿಸಿದವರಿಗೆ ಸರ್ಕಾರದಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡುವುದರ ಮೂಲಕ ಪ್ರೋತ್ಸಾಹಿಸುವುದು. 

* ಅರಣ್ಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವುದು. 


ಭಾರತದ ಅರಣ್ಯ ಸಂಪತ್ತು | ಉಪಯೋಗಗಳು | ಸಂರಕ್ಷಣೆ ಮತ್ತು ಕ್ರಮಗಳು
 ಭಾರತದ ಅರಣ್ಯ ಸಂಪತ್ತು



◆ ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ 

         :- ಈ ಸಂಸ್ಥೆಯು 1906 ರಲ್ಲಿ ಸ್ಥಾಪನೆಯಾಯಿತು. ಈ ಸಂಸ್ಥೆಯ ಕೇಂದ್ರ ಕಛೇರಿ ಉತ್ತರಖಂಡ ಡೆಹರಾಡೂನ್ನಲ್ಲಿ ಕಂಡು ಬರುತ್ತದೆ. 

◆ ಕೇಂದ್ರೀಯ ನಿತ್ಯ ಹರಿದ್ವರ್ಣ ಕಾಡು ಸಂಶೋದನಾ ಸಂಸ್ಥೆ - ಕರ್ನಾಟಕ - ಶಿವಮೊಗ್ಗ - ಅಗೊಂಬೆ 

◆ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡಮಿ ಸಂಸ್ಥೆ - ಉತ್ತರಖಂಡ - ಡೆಹರಾಡೂನ್ 

◆ ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ - ಮಹಾರಾಷ್ಟ್ರ - ನಾಗ್ಪುರ 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad