Type Here to Get Search Results !

ಹಿಮಾಲಯದ ಸಸ್ಯವರ್ಗ ಬಗ್ಗೆ ಸಂಪೂರ್ಣ ಮಾಹಿತಿ

 ಹಿಮಾಲಯದ ಸಸ್ಯವರ್ಗ 

ಹಿಮಾಲಯ ಪರ್ವತದಲ್ಲಿ ಅನೇಕ ಸಸ್ಯವರ್ಗ ಮತ್ತು ಪ್ರಾಣಿ ವರ್ಗಗಳು ಕಂಡು ಬರುತ್ತದೆ. ಈ ಪ್ರದೇಶವು ಅನೇಕ ಅಳಿವಿನಾಚಿನ ಪ್ರಾಣಿ ಸಂಪತ್ತನ್ನು ಹೊಂದಿದ್ದು, ಇವುಗಳಲ್ಲಿ ಪ್ರಮುಖವಾದವು ಏಕ ಕೊಂಬಿನ ಘೇಂಡಾಂಮೃಗ, ಕಾಶ್ಮೀರಿ ಜಿಂಕೆ ಮತ್ತು ಹಿಮ ಚಿರತೆಗಳನ್ನು ಒಳಗೊಂಡಿದೆ . ಇಲ್ಲಿನ ತೇವಾಂಶ, ಇಟ್ಟ ಮತ್ತು ಮಳೆಯನ್ನು ಆಧರಿಸಿ ಹಿಮಾಲಯದ ಸಸ್ಯ ವರ್ಗದಲ್ಲಿ ವೈವಿಧ್ಯತೆ ಉಂಟುಮಾಡಿದೆ 


ಹಿಮಾಲಯ ಪರ್ವತದ ಅರಣ್ಯಗಳನ್ನು ಪ್ರಮುಖವಾಗಿ 3 ವಿಭಾಗಗಳಾಗಿ ವಿಂಗಡಿಸ ಬಹುದು. ಅವುಗಳೆಂದರೆ 

      1) ನಿತ್ಯ ಹರಿದ್ವರ್ಣದ ಕಾಡುಗಳು 

      2) ಸೂಜಿಪರ್ಣ ಕಾಡುಗಳು 

      3) ಆಲ್ಫೈನ್ ಅರಣ್ಯಗಳು 


* ಹಿಮಾಲಯದ ಪರ್ವತದ ನಿತ್ಯಹರಿದ್ವರ್ಣದ ಕಾಡುಗಳು 

       ಹಿಮಾಲಯದ ಕೆಳವಲಯಗಳಲ್ಲಿ ಸುಮಾರು 1,500 ಮೀ ಎತ್ತರದವರೆಗೂ ಕೊಡ ಶೀತವಾಲಯದ ಮಾದರಿಯ ನಿತ್ಯಹರಿದ್ವರ್ಣದ ಕಾಡುಗಳು ಕಂಡು ಬರುತ್ತದೆ. ಈ ಪ್ರದೇಶದಲ್ಲಿ ತೇಗ,ಸಾಲ್ ಮತ್ತು ಕರಿಮರಗಳು ಬೆಳೆಯುತ್ತವೆ. 


* ಸೂಚಿಪರ್ಣದ ಕಾಡುಗಳು 

 ಸೂಜಿಪರ್ಣದ ಕಾಡುಗಳು ಸಮುದ್ರ ಮಟ್ಟದಿಂದ ಸುಮಾರು 1,500 ರಿಂದ 3,650 ಮೀ ಎತ್ತರದ ವಲಯಗಳಲ್ಲಿ ಮೊನಚಾದ ಎಲೆಗಳುಳ್ಳ ಕಾಡುಗಳು ಕಂಡು ಬರುತ್ತದೆ. ಇವುಗಳನ್ನು ಸೂಜಿಪರ್ಣದ ಕಾಡು ಎಂದು ಕರೆಯುತ್ತಾರೆ. ಇಲ್ಲಿನ ಪ್ರಮುಖ ಮರಗಳೆಂದರೆ ದೇವದಾರ, ಸಿಲ್ವರ್, ಫರ್, ಓಕೆ, ಲಾರೆನ್, ಚೆಸ್ಟನೆಟ್, ಸ್ಟ್ರೋಸ್. ಇವು ಅತಿ ಹೆಚ್ಚು ಬೆಲೆಬಾಳುವ ಮತ್ತು ಹೆಚ್ಚು ಉಪಯುಕ್ತ ಮರಗಳಾಗಿವೆ. 


* ಆಲ್ಫೈನ್ ಹುಲ್ಲುಗಾವಲು 

3,650 ರಿಂದ 4,875 ಮೀ ಎತ್ತರದಲ್ಲಿ ಹುಲ್ಲುಗಾವಳುಗಳು ಕಂಡು ಬರುತ್ತದೆ. ಈ ಹುಲ್ಲುಗಾವಲುಗಳನ್ನು ಆಲ್ಫೈನ್ ಹುಲ್ಲುಗಾವಲು ಅಥವಾ ಆಲ್ಫೈನ್ ಸಸ್ಯ ವರ್ಗ ಎಂದು ಕರೆಯುತ್ತಾರೆ. ಈ ವಲಯವು ಮುಳ್ಳುಗಂಟಿ, ಪೊದೆಗಳಿಂದ ಕೊಡಿರುತ್ತಾದೆ. ಈ ಪ್ರದೇಶದಲ್ಲಿ ಹೆಚ್ಚು ಹಿಮ ಸೂರಿಯುವುದರಿಂದ ರೋಡ್ಹೋ ಡೆಂಡ್ರಾನ್, ವಿಲ್ಲೋ, ಜುನೀಫರ್, ಪ್ರಿಂ ರೋಸ್ ಮರಗಳು ಕಂಡು ಬರುತ್ತದೆ. ಇವು ಮರಗಳಂತೆ ಎತ್ತರವಾಗಿ ಬೆಳೆಯುತ್ತವೆ. ಆದರೆ ಬೆಳವಣಿಗೆ ಕುಂಠಿತವಾಗಿರುತ್ತದೆ. 4,875 ಮೆ ಎತ್ತರದಲ್ಲಿ ಕಲ್ಲು ಹೂ, ಪಾಚಿ ಮುಂತಾದವು ಬೇಸಿಗೆಯಲ್ಲಿ ಹಿಮ ಕರಗಿದಾಗ ಕಂಡು ಬರುತ್ತದೆ. 6,000 ಮೀ ಎತ್ತರದಲ್ಲಿ ಸದಾ ಕಾಲ ಹಿಮದಿಂದ ಆವೃತವಾಗಿದ್ದು, ಯಾವುದೇ ಸಸ್ಯ ವರ್ಗವು ಕಂಡು ಬರುವುದಿಲ್ಲ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad