Type Here to Get Search Results !

ಭಾರತದ ನದಿಗಳ ಬಗ್ಗೆ ವಿಶೇಷ ಮಾಹಿತಿ [For Exam Purpose]

 ಭಾರತದ ನದಿಗಳ ಬಗ್ಗೆ ವಿಶೇಷ ಮಾಹಿತಿ 

* ಭಾರತದ ರಾಷ್ಟ್ರೀಯ ನದಿ - ಗಂಗಾನದಿ


* ಪಾಕಿಸ್ತಾನದ ರಾಷ್ಟ್ರೀಯ ನದಿ - ಸಿಂದೂ ನದಿ 


* ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಗೆ ಸೇರುವ ನದಿಗಳೆಂದರೆ, ಬ್ರಹ್ಮಪುತ್ರ, ಗಾಂಗ(ಉಪನದಿಗಳು - ಯಮುನಾ,ಗೋಮತಿ, ಚಂಬಲ್, ಕಮೈಕಾ,) ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ. 


* ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರಕ್ಕೆ ಸೇರುವ ನದಿಗಳೆಂದರೆ - ಸಿಂಧೂ, ನರ್ಮದಾ, ತಪತಿ, ಶರಾವತಿ, ನೇತ್ರಾವತಿ, ಕಾಲಿ, ಅಘನಾಶಿನಿ, ಮಹಾದಾಯಿ, ಪೆರಿಯಾರ್. 


* ಕರ್ನಾಟಕದ ಜೀವನದಿ - ಕಾವೇರಿ 


* ಭಾರತದ ಅತಿ ಉದ್ದವಾದ ನದಿ ಭಾರತೀಯ ನದಿ ಗಂಗಾ ನದಿ ( ಭಾರತದಲ್ಲಿ ಹೆಚ್ಚು ಉದ್ದ ಹರಿಯುತ್ತದೆ.) 


* ಭಾರತದ ಪಂಚನದಿಗಳ ಬೀಡು - ಪಂಜಾಬ್


* ಕರ್ನಾಟಕದ ಪಂಚ ನದಿಗಳ ಬೀಡು - ವಿಜಯಪುರ. ಪಂಚ ನದಿಗಳೆಂದರೆ 1. ಕೃಷ್ಣ, 2. ದೋಣಿ, 3. ಮಲಪ್ರಭ, 4. ಘಟಪ್ರಭ, 5. ಭೀಮಾ. 


* ನದಿಗಳ ತಂದೆ ಎಂದು ಕರೆಯಲ್ಪಡುವ ನದಿ - ಸಿಂಧೂ 


* ದಕ್ಷಿಣ ಕನ್ನಡ ಜಿಲ್ಲೆಯ ಉದ್ದವಾದ ನದಿ - ನೇತ್ರಾವತಿ. 


* ಮಹಾದಾಯಿ ನದಿಯು ಖಾನಾಪುರ ತಾಲೂಕಿನ ಭೀಮಘಡ ಎಂಬಲ್ಲಿ ಜನಿಸುವುದು. 


* ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಕಾವೇರಿ ನದಿಯಿಂದ ಉಗಮವಾಗಿದೆ. 


* ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು - ಕೃಷ್ಣ, ಕಾವೇರಿ, ತುಂಗಭದ್ರಾ, ಭೀಮಾ, ಘಟಪ್ರಭ, ಮಲಪ್ರಭ, ದೋಣಿ. 


* ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳೆಂದರೆ ಶರಾವತಿ, ಕಾಳಿ, ನೇತ್ರಾವತಿ, ವಾರಾಹಿ. 


* ಜವಾಹರಲಾಲ್ ನೆಹರುರವರು ತಮ್ಮ ಗ್ರಂಥ "ಡಿಸ್ಕವರೀ ಆಫ್ ಇಂಡಿಯಾ"ದಲ್ಲಿ ಗಂಗಾನದಿಯನ್ನು ವರ್ಣಿಸಿದ್ದಾರೆ. 


* ಜಗತ್ತಿನ ಅತೀ ಉದ್ದವಾದ ನದಿ - ನೈಲ್ ನದಿ 


* ಜಗತ್ತಿನ ಅತೀ ದೊಡ್ಡ ನದಿ - ಅಮೇಜಾನ್ ನದಿ 


* ಜಗತ್ತಿನ ಅತಿ ಉದ್ದವಾದ ಹಿಮನದಿ - ಲ್ಯಾಂಬರ್ಟ್ 


* ಜಗತ್ತಿನ ಅತಿ ದೊಡ್ಡ ನದಿಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತವೆ. 


* ಚಳಿಗಾಲದಲ್ಲಿ ಹೆಪ್ಪುಗಟ್ಟುವ ನದಿ - ಕೆನಡಾದ ಸೇಂಟ್ ಲಾರೆನ್ಸ್ ನದಿ 


* ಚೀನಾದ ಯಾಂಗ್ ಟ್ಜೆ ( Yangtze ) ನದಿ. ಇದು ಜಗತ್ತಿನ 3 ನೇ ಉದ್ದವಾದ ನದಿಯಾಗಿದೆ. 


* ಸಬರಮತಿ ನದಿಯು ಅರಾವಳಿ ಬೆಟ್ಟಗಳಲ್ಲಿ ಉಗಮವಾಗುತ್ತದೆ 


* ಭಾರತದ ಭೂಮಿಗಳಲ್ಲಿ ನದಿ ಮುಖಜಭೂಮಿ ಹೊಂದಿರದ ನದಿ - ನರ್ಮದಾ ನದಿ 


* ಮಾಳವ ಪ್ರಸ್ತಭೂಮಿಯಲ್ಲಿ ಉಗಮವಾಗುವ ಗಂಗಾ ನದಿಯ ಉಪನದಿಗಳೆಂದರೆ - ಚಂಬಲ್ ಮತ್ತು ಬೆಟ್ಟಾ. 


* ಕಪಿಲಧಾರಾ ಮತ್ತು ದರ್ದಿ ಜಲಪಾತಗಳು ನರ್ಮದಾ ನದಿಯಿಂದ ಉಂಟಾದ ಜಲಪಾತಗಳಾಗಿವೆ. 


* ನದಿಗಳ ಕುರಿತು ವೈಜ್ಞಾನಿಕ ಅಧ್ಯಯನ ಮಾಡುವ ಶಾಸ್ತ್ರ -  Potamology 


* ಗಂಗಾ ನದಿಯ ಅತೀ ದೊಡ್ಡ ಉಪನದಿ - ಯಮುನಾ 


* ಸಿಂಧೂ ನದಿಯ ಅತೀ ದೊಡ್ಡ ಉಪನದಿ - ಸಟ್ಲೇಜ್ 


* ಸುಪ್ತ ಸೋದರಿ ನದಿಗಳು ಕಂಡು ಬರುವ ರಾಜ್ಯ - ಮೇಘಾಲಯ 


* ಕರ್ನಾಟಕದಲ್ಲಿ ಅತಿ ಉದ್ದವಾಗಿ ಹರಿಯುವ ನದಿ - ಕೃಷ್ಣ ನದಿ. ಈ ನದಿಯು ಕರ್ನಾಟಕಕ್ಕೆ ಅತೀ ಹೆಚ್ಚು ನೀರಾವರಿಯನ್ನು ಓದಗಿಸುತ್ತಿರುವ ನದಿಯಾಗಿದೆ. 


* ಯಾವ ನದಿಗೆ ಸ್ವತಂತ್ರ ಭಾರತದ ಮೊದಲ ಅಣೆಕಟ್ಟನ್ನು ಕಟ್ಟಲಾಯಿತು - ದಾಮೋದರ ನದಿ 


* ಗಂಡಕಿ ನದಿಯು ಟೆಬೆಟ್ ನಲ್ಲಿ ಉಗಮವಾಗುತ್ತದೆ. ಇದು ಗಂಗಾ ನದಿಯ ಎಡ ಭಾಗದ ನದಿಯಾಗಿದೆ. 


* ಗಂಡಕಿ ನದಿಯು ನೇಪಾಳದಲ್ಲಿ ನಾರಾಯಣೀ ನದಿ ಎನ್ನುವರು 


* ಕೋಸಿ ನದಿಯನ್ನು ನೇಪಾಲದಲ್ಲಿ ಅರುಣಾ ನದಿ ಎನ್ನುವರು 


* ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ನದಿ - ಗೋದಾವರಿ ನದಿ. 


* ಕುಂಭಮೇಳಗಳು ಜರುಗುವ ಸ್ಥಳಗಳೆಂದರೆ ಹರಿದ್ವಾರ, ಅಲಹಾಬಾದ್, ನಾಸಿಕ್, ಉಚ್ಜೈನಿ. 


* ಏಷ್ಯಾ ಖಂಡದ ಅತಿ ಉದ್ದವಾದ ನದಿ - ಯಾಂಗ್ ಟ್ಜೆ (Yangtze) ನದಿ 




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad