ವಿಧಾನ ಸಭೆಯ ರಚನೆ
ಸಂವಿಧಾನದ ಅನುಚ್ಛೇದ 170ರ ಪ್ರಕಾರ ಪ್ರತಿ ರಾಜ್ಯದಲ್ಲಿ ಒಂದು ವಿಧಾನಸಭೆ ಇರತಕ್ಕದ್ದು. ವಿಧಾನ ಸಭೆ ರಚಿಸಲು ಕನಿಷ್ಠ 60 ಸದಸ್ಯರು ಹಾಗೂ ಗರಿಷ್ಟ 500 ಸದಸ್ಯರನ್ನೂಳಗೊಂಡಿರಬೇಕು. 60ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರುವ ವಿಧಾನ ಸಭೆಗಳೆಂದರೆ
● ಗೋವಾ - 43 ಸದಸ್ಯರು
● ಮಿಜೋರಾಂ - 42 ಸದಸ್ಯರು
● ಸಿಕ್ಕಿಂ - 32 ಸದಸ್ಯರು
◆ ವಿಧಾನಸಭೆಯ ಸದಸ್ಯರ ಅರ್ಹತೆಗಳು
● ಭಾರತೀಯ ಪ್ರಜೆಯಾಗಿರಬೇಕು
● ಕನಿಷ್ಠ 25 ವರ್ಷ ವಯಸ್ಸಾಗಿರಬೇಕು
● ಸರಕಾರದ ಲಾಭದಾಯಕ ಹುದ್ದೆ ಹೊಂದಿರಬಾರದು
● ನ್ಯಾಯಾಲಯದ ಶಿಕ್ಷೆಗೆ ಒಳಗಾಗಿರಬಾರದು
● ಮತಿಭ್ರಮಣ ವ್ಯಕ್ತಿಯಾಗಿರಬಾರದು
◆ ವಿಧಾನ ಸಭೆಯ ಅವಧಿ ( ಅನುಚ್ಛೇದ 172 )
ವಿಧಾನ ಸಭೆಯ ಅವಧಿ ಐದು ವರ್ಷಗಳು, ತುರ್ತುಪರಿಸ್ಥಿತಿಯಲ್ಲಿ ಈ ಅವಧಿಯನ್ನು ಹೆಚ್ಚಿಸಬಹುದು ಆದರೆ ತುರ್ತು ಪರಿಸ್ಥಿತಿ ರದ್ದಾದ ಆರು ತಿಂಗಳ ಒಳಗಾಗಿ ಚುನಾವಣೆಯನ್ನು ನಡೆಸಬೇಕಾಗುತ್ತದೆ. ರಾಜ್ಯಪಾಲರು ವಿಧಾನಸಭೆಯನ್ನು ಅವಧಿಗೆ ಮುಂಚಿತವಾಗಿ ವಿಸರ್ಜಿಸ ಬಹುದು. ಐದು ವರ್ಷಗಳ ಅವಧಿಯಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೆ ಸಂಸತ್ತಿನಿಂದ ಅದರ ಅವಧಿ 1 ಬಾರಿಗೆ ಒಂದು ವರ್ಷಕ್ಕೆ ಹೆಚ್ಚಿಲ್ಲದಂತೆ ವಿಸ್ತರಿಸಲ್ಪದಬಹುದು.
◆ ವಿಧಾನ ಸಭೆಯ ಅಧಿವೇಶನಗಳು
ವಿಧಾನ ಸಭೆ ವರ್ಷದಲ್ಲಿ ಕನಿಷ್ಠ ಮೂರು ಬಾರಿ ಸೇರಬೇಕು ಮತ್ತು ಎರಡು ಅಧಿವೇಶನಗಳ ನಡುವಿನ ಅಂತರ ಆರು ತಿಂಗಳು ಗಿಂತ ಅಧಿಕವಾಗಬಾರದು ಅಥವಾ ಮೀರಬಾರದು
◆ ವಿಧಾನ ಸಭೆಯ ಅಧಿಕಾರ ಮತ್ತು ಕಾರ್ಯಗಳು
● ವಿಧಾನ ಸಭೆ ರಾಜ್ಯ ಪಟ್ಟಿ ಹಾಗೂ ಸಮಾವರ್ತ ಪಟ್ಟಿಯಲ್ಲಿ ಸಮೂದಿಸಿದ ವಿಷಯಗಳ ಬಗ್ಗೆ ಕಾನೂನುಗಳನ್ನು ಮಾಡಬಹುದು.
● ಹಣಕಾಸು ಮಸೂದೆಯನ್ನು ಮಂಡಿಸಲಾಗುತ್ತದೆ.
● ಪ್ರಶ್ನೆ ಕೇಳುವ, ಅವಿಶ್ವಾಸ ನಿರ್ಣಯ ಮಾಡಿಸುವ ಇತ್ಯಾದಿಗಳ ಮೂಲಕ ವಿಧಾನಸಭೆ ಮಂತ್ರಿಮಂಡಲದ ಮೇಲೆ ನಿಯಂತ್ರಣ ಹೊಂದಿದೆ.
● ವಿಧಾನ ಸಭೆ ಅದರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಚುನಾಯಿಸುತ್ತದೆ
◆ ವಿಧಾನ ಸಭೆಯ ಅಧ್ಯಕ್ಷರು
ವಿಧಾನ ಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪಕ್ಷ ರಾಜಕೀಯದಿಂದ ದೂರವಿದ್ದು, ಎಲ್ಲ ಗುಂಪುಗಳ ಗೌರವಕ್ಕೆ ಪಾತ್ರರಾಗುವಂತಿರಬೇಕು. ಈ ಉನ್ನತ ಪದವಿಗಳ ಲಕ್ಷಣಗಳೆಂದರೆ : ಗೌರವ, ಸ್ವಾತಂತ್ರ್ಯ ಮತ್ತು ಪಕ್ಷಪಾತ ರಾಹಿತ್ಯತೆ.


Super
ಪ್ರತ್ಯುತ್ತರಅಳಿಸಿಧನ್ಯವಾದಗಳು