ಕದಂಬರು : Kadamba history in kannada
ಕದಂಬರ ಮೂಲ ಪುರುಷ ಯಾರು ?
ಮಯೂರವರ್ಮ
ಕದಂಬರ ಮುಖ್ಯ ಕೇಂದ್ರಗಳು
ಹಲಸಿ, ಹಾನಗಲ್, ಗೋವಾ
ಕದಂಬರ ನಾಣ್ಯಗಳು
ಚಿನ್ನ, ಬೆಳ್ಳಿ ಮತ್ತು ತಾಮ್ರ
ಕದಂಬರ ಧರ್ಮ
ವೈದಿಕ ಮತ್ತು ಜೈನ ಧರ್ಮ
ಕದಂಬರ ಧ್ವಜ
ವಾನರ ಧ್ವಜ
ಕದಂಬರ ರಾಜಧಾನಿ
ಬನವಾಸಿ
ಕದಂಬರ ರಾಜ್ಯ ಲಾಂಛನ
ಸಿಂಹ
ಕದಂಬರ ಆಡಳಿತ ಭಾಷೆ
ಪ್ರಾಕೃತ, ಸಂಸ್ಕೃತ, ಕನ್ನಡ
ಪ್ರಮುಖ ಅರಸರು
| ● ಮಯೂರವರ್ಮ | ಕ್ರಿ. ಶ 345 - 360 |
|---|---|
| ● ಕಾಕುತ್ಸವರ್ಮ | ಕ್ರಿ. ಶ 425 - 450 |
| ● ಶಾಂತಿ ವರ್ಮ | ಕ್ರಿ. ಶ 450 - 75 |
| ● ಮೃಗೇಶವರ್ಮ | ಕ್ರಿ. ಶ 475 - 90 |
◆ ಕದಂಬ ವಂಶದ ಸ್ಥಾಪಕ ಮಯೂರವರ್ಮ. ಕದಂಬರು ಎರದುನೂರು ವರ್ಷಗಳ ಕಾಲ ಆಳ್ವಿಕೆ ನಡೆಸಿ ಕರ್ನಾಟಕ ಸಂಸ್ಕೃತಿಯನ್ನು ಬೆಳೆಸಿದರು. ಬನವಾಸಿಯನ್ನು ವೈಜಯಂತಿಯೆಂದು ಕರೆಯುತ್ತಿದ್ದರು
◆ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಇದನ್ನು ಬೈಜಾಂಟಿಯನ್ ಎಂದಿದ್ದಾರೆ.
◆ ಕದಂಬರಿಗೆ ಸಂಬಂಧಿಸಿದ ಆಧಾರಗಳೆಂದರೆ : ಶಿವಮೊಗ್ಗ ಜಿಲ್ಲೆಯ ತಾಳಕುಂದ ಶಾಸನ, ಹಾಸನ ಜಿಲ್ಲೆಯ ಹಲ್ಮಿಡಿ ಶಾಸನ, ಬೆಳಗಾವಿಯ ಹಲಸಿ ಶಾಸನಗಳು, ಕಲೆ ಮತ್ತು ವಾಸ್ತುಶಿಲ್ಪಗಳ ಮಾಹಿತಿ ನೀಡುತ್ತವೆ.
ಮಯೂರವರ್ಮ ( ಮಯೂರಶರ್ಮಾ )
◆ ಮಯೂರ ವಿದ್ಯಾರ್ಜನೆಗಾಗಿ ಅಂದಿನ ಪ್ರಸಿದ್ದ ವಿದ್ಯಾ ಕೇಂದ್ರವಾದ ಕಂಚಿಗೆ ತನ್ನ ಗುರುಗಳೊಂದಿಗೆ ತೆರಳಿದ. ಅಲ್ಲಿನ ಪಲ್ಲವರಿಂದ ಅವಮಾನಿತಗೊಂಡಾಗ, ಬ್ರಾಹ್ಮಣ್ಯವನ್ನು ತೆಜಿಸಿ ಕ್ಷತ್ರಿಯನಾದ. ಶ್ರೀಶೈಲಕ್ಕೆ ಬಂದು ಅಲ್ಲಿ ಒಂದು ಸಣ್ಣ ಸಶಸ್ತ್ರ ಪಡೆ ಕಟ್ಟಿ, ಕೂಟ ಯುದ್ಧದಲ್ಲಿ ತರಬೇತಿಗೊಳಿಸಿದ.
◆ ಮೊದಲ ಪಲ್ಲವರ ಗಡಿ ರಕ್ಷಣಾ ಪಡೆ ನಂತರ ಹೊಣರನ್ನು ಸೋಲಿಸಿದ. ಮಯೂರ ಶರ್ಮಾನನ್ನು ನಿರ್ಲಕ್ಷಿಸಿದ ಪಲ್ಲವರು ಕೊನೆಗೆ ಸೋಲೊಪ್ಪಿ ಅವನೊಂದಿಗೆ ಮೈತ್ರಿ ಮಾಡಿಕೊಂಡನು.
◆ ಪಶ್ಚಿಮ ಕರಾವಳಿಯಿಂದ ಪ್ರೇಹಾರದವರೆಗಿನ ಪ್ರದೇಶವನ್ನು ಮಯೂರವರ್ಮನಿಗೆ ಬಿಟ್ಟುಕೊಟ್ಟು ಸ್ವತಂತ್ರ ಅರಸನೆಂದು ಘೋಷಿಸಿದರು. ಮಯೂರವರ್ಮ ಚಿತ್ರದುರ್ಗದ ಚಂದ್ರವಳ್ಳಿಯ ಬಳಿ ಒಂದು ಕೆರೆ ಕಟ್ಟಿಸಿದ ಎಂದು ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ.
ಕಾಕುತ್ಸವರ್ಮ
◆ ಕಾಕುತ್ಸವರ್ಮನು ಕದಂಬರಲ್ಲೇ ಶ್ರೇಷ್ಟ ಅರಸನಾಗಿದ್ದನು. ಇವನು 'ಕದಂಬ ಕುಲ ಶಿರೋಮಣಿ' ಎಂಬ ಬಿರುದು ಹೊಂದಿದನು.
◆ ವಿವಾಹ ಸಂಬಂಧಗಳ ಮೂಲಕ ಗುಪ್ತರನ್ನು, ಅಲೂಪರನ್ನು ಮತ್ತು ಗಂಗರೊಡನೆ ಮೈತ್ರಿ ಬೆಳಸಿದನು. ತಾಳಗುಂಡದ ಶಾಸನ ಕಾಕುತ್ಸವರ್ಮನ ಕುರಿತು ತಿಳಿಸುತ್ತದೆ.
Kadamba history in kannada
ಮೃಗೇಶವರ್ಮ
ಉತ್ತಮ ಆಡಲಿತಗಾರನಾದ ಇವನು ಕಾಕುತ್ಸವರ್ಮನ ಮೊಮ್ಮಗ. ಇವನು ಪಲ್ಲವರನ್ನು ಸೋಲಿಸಿದನು. ಗಂಗರ ಅರಸ ವಿಷ್ಣುಗೋಪನನ್ನು ಕೋಲಾರದಿಂದ ಆಚೆ ನೂಕಿದ.
ಮೃಗೇಶನ ಮತ್ತೊಂದು ರಾಜಧಾನಿ ಹಲಸಿ(ಪಲಸಿಗೆ). ಇಲ್ಲಿ ಅವನ ತಂದೆಯ ನೆನಪಿಗಾಗಿ ಜಿನಾಲಯ ನಿರ್ಮಿಸಿದ. ಮೃಗೇಶ ವರ್ಮನ ನಂತರ ಕದಂಬರಲ್ಲಿ ಸಮನಾರ್ಥಕ ಅರಸರು ಬರಲಿಲ್ಲ
ಕಲೆ ಮತ್ತು ವಾಸ್ತುಶಿಲ್ಪ
ಹಲಸಿಯ ಜೈನ ಬಸದಿ, ತಾಳಕುಂದದ ಪ್ರಾಣೇಶ್ವರ ದೇವಾಲಯ, ಹಲಸಿಯ ಕಲ್ಮೇಶ್ವರ, ರಾಮೇಶ್ವರ, ಸುವರ್ಣೇಶ್ವರ ಮತ್ತು ಹತ್ತೀಕೇಶ್ವರ ದೇವಾಲಯಗಳು. ಬನವಾಸಿಯ ಮಧುಕೇಶ್ವರ, ವರಾಹ ನರಸಿಂಹ, ಹಾನಗಲ್ಲಿನ ಮಾಧವ ದೇವಾಲಯ, ಜಂಬೆ ಹಳ್ಳಿಯ ದುರ್ಗಾ ದೇವಾಲಯಗಳು ಗೋವೆಯ ಕದಂಬರ ಕಾಲದ ದೇವಗಾಂವನ ಕಮಲ ನಾರಾಯಣ ದೇವಾಲಯ ಅತ್ಯುತ್ತಮವಾಗಿದೆ.


ಧನ್ಯವಾದಗಳು