Type Here to Get Search Results !

ಶಾತವಾಹನರ ಸಾಮ್ರಾಜ್ಯ | Shaatavahana in kannada

 ಶಾತವಾಹನರು


ಶಾತವಾಹನರ ಮೂಲಪುರುಷ ಯಾರು ?

ಸಿಮುಖ 

ಶಾತವಾಹನರ ಲಾಂಛನ ಯಾವುದು ?

ವರುಣ 

ಶಾತವಾಹನರ ಆಡಳಿತ ಭಾಷೆ ಯಾವುದು ?

ಪ್ರಾಕೃತ 

ಶಾತವಾಹನರ ರಾಜಧಾನಿ ಯಾವುದು ?

ಪೈಠಾಣ ಅಥವಾ ಪ್ರತಿಷ್ಠಾನ 

ಶಾತವಾಹನರ ಧರ್ಮ ಯಾವುದು ?

ವೈದಿಕ ( ಬ್ರಾಹ್ಮಣ )

ಶಾತವಾಹನರ ನಾಣ್ಯಗಳು 

ದಿನಾರ್, ಕರ್ಷಪಣ, ಗದ್ಯಾಣ 


ಶಾತವಾಹನರ ಪ್ರಮುಖ ಅರಸರು : ಶಾತವಾಹನರು

◆ ಒಂದನೆಯ ಶಾತಕರ್ಣಿ  ( ಕ್ರಿ.ಪೂ. 202 ರಿಂದ 192 )

◆ ಎರಡನೇ ಶಾತಕರ್ಣಿ ( ಕ್ರಿ.ಪೂ. 156 ರಿಂದ 100 )

◆ ಹಾಲ ( ಕ್ರಿ.ಶ 46 ರಿಂದ 51 

◆ ಗೌತಮೀಪುತ್ರ ಶಾತಕರ್ಣಿ ( ಕ್ರಿ.ಶ 106 ರಿಂದ 130 )

◆ ವಸಿಷ್ಟಪುತ್ರ ಪುಲುಮಾಯಿ  ( ಕ್ರಿ.ಶ. 130 ರಿಂದ 158 )

◆ ಶ್ರೀಯಜ್ಞಶ್ರೀ ಶಾತಕರ್ಣಿ ( ಕ್ರಿ.ಶ 168 ರಿಂದ 197 ) 

ಶಾತವಾಹನರ : saatavahanara itihasa in kannada
ಶಾತವಾಹನರು


ಶಾತವಾಹನರ  ಶಾಸನಗಳು :-

1. ನಾನಾಘಾಟ್ 

2. ಬಡಗಾವ್ 

3. ಮಾಧವಪುರ ( ಬೆಳಗಾವಿ )

4. ಮ್ಯಾಕ್ ಡೋನಿ 

5. ಹಿರೇಹಡಗಲಿ ( ಬಳ್ಳಾರಿ )

6. ಬನವಾಸಿ 

7. ತಾಳಗುಂದ

8. ಸನ್ನತಿ ( ಗುಲ್ಬರ್ಗ ) 

ಶಾತವಾಹನರ ಪ್ರಮುಖ ಕೇಂದ್ರಗಳು 

ನಾಸಿಕ್, ಕನ್ಹೇರಿ, ಕಾರ್ಲೆ, ಧಾನ್ಯಕಟಕ, ಅಮರಾವತಿ, ಸನ್ನತಿ, ಪನ್ನಾಳ. 


ಗೌತಮೀಪುತ್ರ ಶಾತಕರ್ಣಿ 

ಗೌತಮೀಪುತ್ರ ಶಾತಕರ್ಣಿ ಶಕರ ನಹಪಾನನ್ನು ಸೋಲಿಸಿದನು. ಈ ಸಾಧನೆಯ ನೆನಪಿಗಾಗಿ ಹೊಸ ಶಕೆಯನ್ನು ಪ್ರಾರಂಭಿಸಿದನು. ನಾಸಿಕದ ಬಳಿ ಇರುವ ಗೌತಮಿ ಬಾಲಶ್ರೀ ಶಾಸನದಲ್ಲಿ ಈತನ ದಿಗ್ವಿಜಯಗಳನ್ನು ತಿಳಿಸಲಾಗಿದೆ. ಈತನು ವಿಶಾಲ ಸಾಮ್ರಾಜ್ಯದ ಒಡೆಯನಾಗಿದ್ದು, " ತ್ರೈ ಸಮುದ್ರ ತೋಯ ಪಿತವಾಹನ " ಎಂಬ ಬಿರುದನ್ನು ಹೊಂದಿದ್ದನು. ಅಂದರೆ ಮೂರು ಸಮುದ್ರಗಳ ನೀರು ಕೂಡಿದ ಕುದುರೆಯನ್ನು ವಾಹನವಾಗಿ ಹೊಂದಿರುವವನು. 

ಶಾತವಾಹನರ ಆಡಳಿತ 

● ಶಾತವಾಹನರು ಹಿಂದೂ ಧರ್ಮ ಶಾಸ್ತ್ರದ ಅನುಗುಣವಾಗಿ ಆಡಳಿತವನ್ನು ನಡೆಸಿದರು. ರಾಜನನ್ನು ಪೌರಾಣಿಕ ನಾಯಕರಿಗೆ ಹೊಲಿಸಲಾಗುತ್ತಿತ್ತು ( ಪೌರಾಣಿಕ ನಾಯಕರು :- ರಾಮ, ಭೀಮ, ಅರ್ಜುನ, ಕೃಷ್ಣ ). ಇವರು ಮೌರ್ಯರ ಆಡಳಿತ ಕ್ರಮವನ್ನು ಕೆಲಮಟ್ಟಿಗೆ ಅನುಸರಿಸಿದರು. 
● ಅಧಿಕಾರವನ್ನು ಅಮಾತ್ಯರು, ಮಹಾಮಾತ್ರರು ಎಂದು ಕರೆಯಲಾಗುತ್ತಿತ್ತು.
● ಸೇನಾಪತಿಯನ್ನು ಪ್ರಾಂತೀಯ ರಾಜ್ಯಪಾಲರನ್ನಾಗಿ ನೇಮಕ ಮಾಡುತ್ತಿದ್ದರು. 
● ಗ್ರಾಮದ ಆಡಳಿತವನ್ನು ಗ್ರಾಮಿಕ ಎನ್ನುವ ಅಧಿಕಾರಿ ನಡೆಸುತ್ತಿದ್ದನು , ಇವನು ಸ್ವಲ್ಪ ಪ್ರಮಾಣದ ಸೈನ್ಯವನ್ನು ಹೊಂದಿಸಬೇಕಾಗುತ್ತಿತ್ತು 
● ಕಟಕ್ ಮತ್ತು ಸ್ಕಂದಹಾರಗಳು ಸೈನಿಕ ನೆಲೆಗಲಾಗಿದ್ದವು. 
● ಶಾತವಾಹನರು ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬ್ರಾಹ್ಮಣರಿಗೆ ಭೂ ದತ್ತಿಗಳನ್ನು ಕೊಡಲು ಆರಂಭಿಸಿದರು. 
● ಇವರು ಮೂರು ಬಗೆಯ ಶ್ರೇಣಿಕೃತಸಾಮಂತರನ್ನು ಹೊಂದಿದ್ದರು. ಅವರೆಂದರೆ :  ರಾಜ ⇨ ಮಹಾಭೋಜ  ⇨ ಸೇನಾಧಿಪತಿ. 

ಶಾತವಾಹನರ ಅವನತಿಗೆ ಕಾರಣಗಳು 

◆ ಗೌತಮೀಪುತ್ರ ಶಾತಕರ್ಣಿಯ ನಂತರ ಇವನ ಮಗ ವಶಿಷ್ಟ ಪುತ್ರ ಪುಳಮಾಯಿ ಅಧಿಕಾರಕ್ಕೆ ಬಂದನು. ಇವನು ಸಾಮ್ರಾಜ್ಯದ ಕೆಲಭಾಗವನ್ನು ಕಳೆದುಕೊಂಡನು. ಇವನ ನಂತರ ಆಳಿದ ಯಜ್ಞ ಶ್ರೀ ಶಾತಕರ್ಣಿ ಪುಲಮಾಯಿಯು ಕಳೆದುಕೊಂಡಿದ್ದ ರಾಜ್ಯವನ್ನು ಮರಳಿ ಪಡೆದರೂ ನಂತರ ಶಾನವಾಹನರ ಸಾಮ್ರಾಜ್ಯ ಸಂಕಷ್ಟಕ್ಕೆ ಒಳಗಾಗಿ ಅವನತಿ ಹೊಂದಿತು 

ಶಾತವಾಹನರ  ಪ್ರಮುಖ ಆಡಳಿತಾಧಿಕಾರಿಗಳು


► ನಿಬಂಧಕ - ದಾಖಲೆ ವ್ಯವಸ್ಥಾಪಕ 
► ಭಾಂಡಗಾರಿಕ - ಗ್ರಾಗಾಧಿಕಾರಿ 
► ಹೇರಣಿಕ - ಹಣಕಾಸು ಅಧಿಕಾರಿ 
► ಲೇಖಕ - ರಾಜ್ಯ ಮುಖ್ಯ ಕಾರ್ಯದರ್ಶಿ

ಶಾತವಾಹನರ ಸಾಹಿತ್ಯ /ಕೃತಿ 

► ಹಾಲರಾಜ  - ಗಾಥಾಸಪ್ತಸತಿ 
► ಗುಣಾಢ್ಯ  - ವಡ್ಡಕಥಾ ಅಥವಾ ಬೃಹತ್ ಕಥಾ 
► ನಾಗರ್ಜುನ  - ಶತಸಹಸ್ರಿಕಾ - ಪ್ರಜ್ಞಾ ಪಾರಮಿಕ ಮತ್ತು ಮಾಧ್ಯಮಿಕ ಸೂತ್ರಗಳು, 
► ಸರ್ವವರ್ಮನ   - ಕಾತಂತ್ರ್ಯ ವ್ಯಾಕರಣ 

ಶಾತವಾಹನರ ಶಿಲಾಕಟ್ಟಡಗಳ 3 ವಿಧಗಳು


► ವಿಹಾರಗಳು
► ಚೈತ್ಯಾಲಯಗಳು
► ಸ್ಕೂಪಗಳು

ಶಾತವಾಹನರ ಪ್ರಾಮುಖ್ಯತೆ 

ಶಾತವಾಹನರು ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ರಾಜ್ಯವನ್ನು ಸ್ಥಾಪಿಸಿದವರಾಗಿದ್ದಾರೆ. 
ಉತ್ತರ ಭಾರತದ ವೈದಿಕ ಸಂಪ್ರದಾಯವನ್ನು ದಕ್ಷಿಣ ಭಾರತಕ್ಕೆ ಹರಡಲು ಇವರು ಪ್ರಮುಖ ಕಾರಣರಾಗಿದ್ದಾರೆ 
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad