ಪ್ರಪಂಚದ ಐತಿಹಾಸಿಕ ಕದನಗಳು
● ಮ್ಯಾರಥಾನ್ ಕದನ ( ಕ್ರಿ.ಪೂ.490 )
ಈ ಕದನವು ಗ್ರೀಕ್ ಮತ್ತು ಪರ್ಷಿಯನ್ ಸೈನ್ಯಗಳ ನಡುವೆ ನಡೆಯಿತು. ದೊಡ್ಡ ಸೈನ್ಯವನ್ನು ಹೊಂದಿದ್ದ ಪರ್ಷಿಯನ್ನರನ್ನು ಗ್ರೀಕರ ಚಿಕ್ಕ ಸೈನ್ಯವು ಸೋಲಿಸಿತ್ತು.
● ಸಾಲೋಮ್ಸ್ ಕದನ ( ಕ್ರಿ.ಪೂ 480 )
ಗ್ರೀಕ್ ಮತ್ತು ಪರ್ಷಿಯನ್ ಸೈನ್ಯಗಳ ನಡುವೆ ಕದನ, ಗ್ರೀಕರು ಪರ್ಷಿಯನ್ ಸೈನ್ಯವನ್ನು ಹಿಮ್ಮೆಟ್ಟಿಸಿದರು.
● ಆಕ್ಟಿಯಮ್ ಕದನ
ಈ ಕದನದಲ್ಲಿ ಮಾರ್ಕ್ ಅಂಥೋನಿ ಮತ್ತು ಕ್ಲಿಯೋಪಾತ್ರರ ಕೂಟಕ್ಕೆ ರೋಮನ್ ರಾಜ ಆಕ್ಟಿವೀನ್ ನಿಂದ ಸೋಲಾಯಿತು.
● ಹೇಸ್ಟಿಂಗ್ ಕದನ ( ಕ್ರಿ.ಪೂ 1066 )
ಈ ಕದನವು ಬ್ರಿಟಿಷ್ ಮತ್ತು ನಾರ್ಮನ್ನರ ನಡುವೆ ನಡೆಯಿತು. ಬ್ರಿಟಿಷ್ ರಾಜ ಹರ್ನಾಲ್ಡ್ ಗೆ ಸೋಲಾಗಿ ಇಂಗ್ಲೆಂಡ್ ನಾರಮನ್ನರ ನಿಯಂತ್ರಣಕ್ಕ ಬಂದಿತು.
● ನೇವಾ ಕದನ ( ಕ್ರಿ.ಶ 1240 )
ನೇವಾ ನದಿಯ ದಡದ ಮೇಲೆ ರಷ್ಯಾದ ದೊರೆ ಅಲೆಕ್ಸೆಂಡರ್ ನೆವ್ ನ್ಕಿಯು ಸ್ವೀಡಿಷ್ ಪಡೆಗಳನ್ನು ಸೋಲಿಸಿದವು.
Historical events with different perspectives
● ನೂರು ವರ್ಷದ ಯುದ್ಧ ( ಕ್ರಿ.ಶ 1338 - 1453 )
ಈ ಯುದ್ಧವು ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಜೋನ್ ಆಫ್ ಆರ್ಕ್ ಬಲಿದಾನದಿಂದ ಯುದ್ಧ ನಿಲುಗಡೆಯಾಗುತ್ತದೆ.
● ಇಟಲಿ ಯುದ್ಧಗಳು ( ಕ್ರಿ.ಶ 1494 - 1559 )
ಈ ಯುದ್ಧಗಳು ಫ್ರಾನ್ಸ್ ನ ಮೇಲೋಯಿಸ್ ರಾಜವಂಶ ಮತ್ತು ಹಾಪ್ಸ್ ಬರ್ಗ್ಸ್ ನಡುವೆ ಇಟಲಿಯ ಮೇಲಿನ ನಿಯಂತ್ರಣಕ್ಕಾಗಿ ನಡೆಯಿತು. ಇದರಲ್ಲಿ ಯಾವುದೇ ಪಲಿತಾಂಶ ಬರಲಿಲ್ಲ .
● ಇಂಗ್ಲೆಂಡ್ ನ ಆಂತರಿಕ ಯುದ್ಧ ( ಕ್ರಿ.ಶ 1642 ರಿಂದ 1649 )
ಈ ಆಂತರಿಕ ಯುದ್ಧವು ಚಾರ್ಲ್ಸ್ 1 ದೊರೆಯು ಮತ್ತು ಪಾರ್ಲಿಮೆಂಟ್ ಪಡೆಗಳ ನಡುವೆ ರಾಜನೀತಿಯ ಭಿನ್ನಾಭಿಪ್ರಾಯದಿಂದಾಗಿ ನಡೆಯಿತು.
● ಬೆನ್ ಹೀಮ್ ( ಕ್ರಿ.ಶ 1704 )
ಈ ಕದನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರಿಯಾ ಕೂಟವು ಫ್ರೆಂಚ್ ಮತ್ತು ಬವಾರಿಯನ್ ಕೂಟವನ್ನು ಸೋಲಿಸಿತು.
● ಸಪ್ತವಾರ್ಷಿಕ ಯುದ್ಧ ನಡೆದ ಅವಧಿ ( 1756 ರಿಂದ 1763 )
ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ನಡೆಯಿತು.
● ಅಮೆರಿಕದ ಸ್ವಾತಂತ್ರ್ಯ ಸಮರ ( 1776 ರಿಂದ 1783 )
ಜಾರ್ಜ್ ವಾಷಿಂಗ್ಟನ್ ನ ನಾಯಕತ್ವದಲ್ಲಿ ಜರುಗಿದ ಅಮೇರಿಕಾ ಸ್ವಾತಂತ್ರ್ಯ ಸಮರದಲ್ಲಿ ಬ್ರಿಟಿಷ್ ಪಡೆಗಳಿಗೆ ಸೋಲಾಗಿ. ಅಮೆರಿಕವು ಸ್ವಾತಂತ್ರ್ಯ ರಾಷ್ಟ್ರವಾಯಿತು.
● ನೈಲ್ ಕದನ ( 1798 )
ಅಲೆಗ್ಸಾಂಡ್ರಿಯಾ ಬಳಿಯ ಅಬೌಕಿರ್ ಕೊಲ್ಲಿಯಲ್ಲಿ ಬ್ರಿಟಿಷ್ ಮತ್ತು ಫ್ರಾಂಚ್ ಪಡೆಗಳ ನಡುವೆ ನಡೆದ ಈ ನೌಕಾ ಕದನದಲ್ಲಿ ಬ್ರಿಟಿಷ್ ಪಡೆಗಳಿಗೆ ಜಯವಾಯಿತು.
● ಟ್ರಾಫಲ್ಗರ್ ಕದನ ( 1798 )
ಬ್ರಿಟಿಷ್ ನೌಕಾಪಡೆ ಮತ್ತು ಫ್ರಾಂಚ್ ಹಾಗೂ ಸ್ಪೇನಿನ ಏಕೀಕೃತ
● ವಾಟರ್ ಲೂ ಕದನ ( 1815 )
ಬ್ರಿಟಿಷ್, ಹಾಲೆಂಡ್, ಬೆಲ್ಜಿಯಮ್ ಮತ್ತು ಪ್ರಸ್ಸಿಯಾದ ಏಕೀಕೃತ ಪಡೆಗಳ ನೆಪೋಲಿಯನ್ ನನ್ನು ಸೋಲಿಸಿ, ಸೆರೆ ಹಿಡಿದು ದಕ್ಷಿಣ ಅಟ್ಲಾಂಟಿಕ ದ್ವೀಪ ಸೇಂಟ್ ಹೆಲಿನಾಗೆ ಗದೀಪಾರು ಮಾಡಿದವು.
● ಕ್ರಿಮಿಯನ್ ಯುದ್ಧ ( 1854 ರಿಂದ 1856 )
ಇಂಗ್ಲೆಂಡ್, ಫ್ರಾನ್ಸ್ ಹಾಗೂ ಟರ್ಕಿಗಳ ಏಕೀಕೃತ ಪಡೆಗಳ ಮೇಲೆ ಸೆಣಸುತ್ತವೆ, ರಷ್ಯವು ಶಾಂತಿ ಮೂಡಿಸಲು ಮುಂದಾದ್ದರಿಂದ ಯುದ್ಧ ನಿಲುಗಡೆಯಾಯಿತು.
Historical events
● ಅಮೆರಿಕಾದ ಆಂತರಿಕ ಯುದ್ಧ ( 1861 - 1865 )
ಈ ಆಂತರಿಕ ಯುದ್ಧವು ಅಮೆರಿಕಾದ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಗುಲಾಮಗಿರಿ ಪದ್ಧತಿಯ ರದ್ದತಿಗಾಗಿ ನಡೆಯುತ್ತದೆ.
● ಬೋಯರ್ ಯುದ್ಧ ( 1889 - 1901 )
ಈ ಯುದ್ಧವು ಬ್ರಿಟಿಷ್ ಮತ್ತು ಡಚ್ ಪಡೆಗಳ ನಡುವೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು.
ಪ್ರಪಂಚದ ಐತಿಹಾಸಿಕ ಕದನಗಳು
● ಚೀನಾ - ಜಪಾನ್ ಯುದ್ಧ ( 1894 ರಿಂದ 1895 )
ಈ ಯುದ್ಧವು ಚೀನಾ ಮತ್ತು ಜಪಾನ್ ಗಳ ನಡುವೆ ನಡೆದು, ಚೀನಾಕ್ಕೆ ಸೋಲಾಗುತ್ತದೆ. ಜಪಾನ್ ದೇಶವು ಫಾರ್ಮೊಸ್ ಮತ್ತು ಕೊರಿಯಾವನ್ನು ಆಕ್ರಮಿಸಿಕೊಂಡಿತು.
● ಸ್ಪೇನ್ - ಅಮೇರಿಕಾ ಯುದ್ಧ ( 1898 )
ಈ ಯುದ್ಧದಲ್ಲಿ ಸ್ಪೇನ್ ಪರಾಭವಗೊಂಡಿತು
● ರಷ್ಯಾ - ಜಪಾನ್ ಯುದ್ಧ ( 1904 - 1905 )
ಈ ಯುದ್ಧವನ್ನು ಜಪಾನ್ ಸಮುದ್ರ ಯುದ್ಧ ಎಂದೂ ಕರೆಯುತ್ತಾರೆ. ಇದರಲ್ಲಿ ರಷ್ಯಾ ನೌಕಾಪಡೆಗೆ ಜಪಾನ್ ನೌಕಪಡೆಯಿಂದ ಸೋಲಾಗುತ್ತದೆ.
● ಆಟ್ಲಾಂಡ್ ಕದನ ( 1916 )
ಮೊದಲ ಜಾಗತಿಕ ಸಮರದ ಸಮಯದಲ್ಲಿ ಜರ್ಮನಿ ಮತ್ತು ಇಂಗ್ಲೆಂಡ್ ಗಳ ನಡುವೆ ನಡೆದ ಈ ನೌಕಾಯುದ್ಧದಲ್ಲಿ ಜರ್ಮನಿ ಸೋಲುತ್ತದೆ.
Important wars in the world
● ಕೊರಿಯಾ ಯುದ್ಧ ( 1950 ರಿಂದ 1953 )
ಈ ಯುದ್ಧವು ದಕ್ಷಿಣ ಮತ್ತು ಉತ್ತರ ಕೊರಿಯಾ ಗಳೊಡನೆ ನಡೆದು, ವಿಶ್ವ ಸಂಸ್ಥೆಯ ಮಧ್ಯ ಪ್ರವೇಶದಿಂದ ನಿಯಂತ್ರಣಕ್ಕೆ ಬಂದಿತು.
ಪ್ರಪಂಚದ ಐತಿಹಾಸಿಕ ಕದನಗಳು
● ಅರಬ್ - ಇಸ್ರೇಲ್ ಯುದ್ಧ ( 1967 )
ಆರು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ನ ಏಕೀಕೃತ ಪಡೆಯನ್ನು ಇಸ್ರೇಲ್ ಸೋಲಿಸುತ್ತದೆ.
● ಇರಾನ್ - ಇರಾಕ್ ಯುದ್ಧ ( 1980 ರಿಂದ 1988 0
ಇರಾನ್ ಮತ್ತು ಇರಾಕ್ ನಡುವೆ 1980 ರಿಂದ 1988 ರ ಅವಧಿಯನ್ನಿ ನಡೆದ ಈ ಯುದ್ಧವು ವಿಶ್ವ ಸಂಸ್ಥೆಯ ಸತತ ಪ್ರಯತ್ನ ದಿಂದ ನಿಲ್ಲುತ್ತದೆ.
● ಗಲ್ಫ್ ಯುದ್ಧ ( 1991 )
ಇರಾಕ್ ದೇಶವು ಕುವೈತ್ ದೇಶವನ್ನು ಆಕ್ರಮಿಸಿಕೊಳ್ಳುತ್ತವೆ. ಇರಾಕ್ ಕುವೈತ್ ನಿಂದ ಹಿಂದೆ ಸರಿಯಲು ಒಪ್ಪದ ಕಾರಣ ಅಮೆರಿಕಾದ ನಾಯಕತ್ವದಲ್ಲಿ ಬಹುರಾಷ್ಟ್ರೀಯ ಪಡೆಗಳು ಇರಾಕ್ ಮೇಲೆ ದಾಳಿ ಮಾಡುತ್ತವೆ. ಇರಾಕ್ ಗೆ ತೀವ್ರ ನಷ್ಟವಾಗುತ್ತದೆ.


ಧನ್ಯವಾದಗಳು