Type Here to Get Search Results !

ಭಾರತದ ವೈಸರಾಯಗಳು | All Viceroy List with order wise

 ಭಾರತದ ವೈಸರಾಯರ ಪಟ್ಟಿ [ ಕಾಲಾನುಕ್ರಮವಾಗಿ ನೀಡಲಾಗಿದೆ ]


■ ಲಾರ್ಡ್ ಕ್ಯಾನಿಂಗ

    ● ಲಾರ್ಡ್ ಕ್ಯಾನಿಂಗ ಅಧಿಕಾರವಧಿ:-  1858 ರಿಂದ 1862 ವರೆಗೆ [ಭಾರತದ ವೈಸರಾಯಗಳು]

   ● ಬ್ರಿಟಿಷ್ ಭಾರತದ ಮೊದಲ ವೈಸರಾಯ 

   ● ಕ್ರಿ. ಶ 1857 ರಲ್ಲಿ ಕೊಲ್ಕತ್ತ, ಮದ್ರಾಸ್ ಮತ್ತು ಬಾಂಬೆ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದನು 

   ● 1857 ರ ರಾಣಿಯ ಘೋಷಣೆ 

   ● 1858ರಲ್ಲಿ ಲಾರ್ಡ್ ಮೆಕಾಲೆಯಿಂದ ರೂಪಿತವಾಗಿದ್ದ "ಇಂಡಿಯನ್ ಪಿನಲ್ ಕೋಡ್" ಕಾನೂನಾಯಿತು.    

   ● 1861ರ ಇಂಡಿಯಾ ಕೌನ್ಸಿಲ್ ಕಾಯ್ದೆ ಜಾರಿಗೆ. 





■ ಲಾರ್ಡ್ ಎಲ್ಗಿನ್  1862 ರಿಂದ 1863 ರ ವರೆಗೆ 

    ● ವಾಯುವ್ಯ ಭಾರತದಲ್ಲಿನ ಮಹಾಬಿಗಳೆಂಬ ಮುಸ್ಲಿಂ ಪಂಥದ ದಗೆಯನ್ನು ದಮನ ಮಾಡಲಾಯಿತು. 


■ ಲಾರ್ಡ್ ಲಾರೆನ್ಸ್

   ● ಲಾರ್ಡ್ ಲಾರೆನ್ಸ್ ರವರ ಅಧಿಕಾರವಧಿ:- 1864 ರಿಂದ 1869 ರ ವರೆಗೆ

   ● 1865 ರಲ್ಲಿ ಭೂತಾನ್ದೊಂದಿಗೆ ಯುದ್ಧ 

   ● 1865 ರಲ್ಲಿ ಕೊಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್ ಸ್ಥಾಪನೆ 

    ● 1866 ರ ಒಡಿಶಾ ಕ್ಷಾಮ 




■ ಲಾರ್ಡ್ ಮೆಯೊ 


   ● ಲಾರ್ಡ್ ಮೆಯೆ ಅಧಿಕಾರವಧಿ:- 1869 ರಿಂದ 1875 ರ ವರೆಗೆ

   ● 1870 ರಲ್ಲಿ " ರೆಡ್ ಸೀ ಕೇಬಲ್ ಸ್ಥಾಪನೆ 

   ● 1871ರಲ್ಲಿ ಮೊದಲ ಜನಗಣತಿ ನಡೆಯಿತು 

   ● 1872ರಲ್ಲಿ ಅಂಡಮಾನಕ್ಕೆ ಬೇಟಿಯಿತ್ತಾಗ ಒಬ್ಬ ಪಠಾಣನಿಂದ ಕೊಲೆಯಾದನು. 




■ ಲಾರ್ಡ್ ನಾರ್ಥ್ ಬ್ರೂಕ್ 

   ● ಲಾರ್ಡ್ ನಾರ್ಥ್ ಬ್ರೂಕ್ ರವರ ಅಧಿಕಾರವಧಿ :- 1872 ರಿಂದ 76 ರ ವರೆಗೆ 

   ● ಕ್ರಿ.ಶ 1875 ರಲ್ಲಿ ಗಾಯಕವಾಡ ಪದಚ್ಯುತಿ 

   ● ಪ್ರೀನ್ಸ್ ಆಫ್ ವೇಲ್ಸ್ ನ ಭೇಟಿ 

   ● ಪಂಜಾಬಿನ ಕೂಕಾ ಚಳುವಳಿಯನ್ನು ಅಡಗಿಸಲಾಯಿತು 

   ● ಆದಾಯ ತೆರಿಗೆ ರದ್ಧತಿ 



ಭಾರತದ ವೈಸರಾಯಗಳು | All Viceroy List with order wise

■ ಲಾರ್ಡ್ ಲಿಟ್ಟನ್ 

   ● ಲಾರ್ಡ್ ರಿಟ್ಟನ್ ರವರ ಅಧಿಕಾರವಧಿ :- 1870 ರಿಂದ 1880 ರವರೆಗೆ 

   ● ಕ್ರಿ.ಶ 1877 ರ ಕಾಯ್ದೆಯ ಪ್ರಕಾರ ವಿಕ್ಟೋರಿಯ ರಾಣಿ ಭಾರತದ ಸಾಮ್ರಾಜ್ಞೆಯಯಾದಳು 

   ● ಕ್ರಿ. ಶ 1878 ರಲ್ಲಿ ದೇಶ ಭಾಷಾ ಪತ್ರಿಕೆ ನಿಬಂಧನೆಯ ಕಾನೂನುನ್ನು ಜಾರಿಗೆ ತಂದನು. ಇದರಿಂದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕೆಟ್ಟ ಪರಿಣಾಮವಾಯಿತು. 

   ● ಆಲಿಘರ್ ನಲ್ಲಿ ಮಹಮದನ್ ಆಂಗ್ಲೊ-ಓರಿಯಂಟಲ್ ಕಾಲೇಜ್ ನ್ನು ಸ್ಥಾಪಿಸಲಾಯಿತು.

   ● ಕೊನೆಯ ಗವರ್ನರ್ ಜನರಲ್ :- ಲಾರ್ಡ್ ಲಿಟ್ಟನ್

   ● 1877 ರಲ್ಲಿ ಎರಡನೇ ಆಂಗ್ಲೊ-ಅಪ್ಫನ್ ಯುದ್ಧ I.C.S ಪರೀಕ್ಷೆಗಳಿಗೆ ಕೂರುವ ಸ್ಪರ್ಥಿಗಳ ಗರಿಷ್ಟ ವಯೋಮಾನವನ್ನು 19 ಕ್ಕೆ ಇಳಿಸಲಾಯಿತು. 

ಭಾರತದ ವೈಸರಾಯಗಳು | All Viceroy List with order wise


■ ಲಾರ್ಡ್ ರಿಪ್ಪನ್ 

 

   ● ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಪಿತಾಮಹ. ಆಡಳಿತದ ವಿಕೇಂದ್ರೀಕರಣ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಯಿತು.   

   ● 1881ರಲ್ಲಿ ಮೊದಲ ಗಿರಣಿ ಕಾಯಿದೆಯನ್ನು ಜಾರಿಗೆ ತಂದನು. ಕಾರ್ಮಿಕ ಸುಧಾರಣೆಗೆ ಪ್ರೋತ್ಸಾಹ ಬಾಲಕಾರ್ಮಿಕ ಪದ್ಧತಿ ನಿಷೇಧ 

   ● 1881 ರಲ್ಲಿ ಮೈಸೂರು ರಾಜ್ಯವನ್ನು ಒಡೆಯರಿಗೆ ವಹಿಸಲಾಯಿತು 

   ● 1882 ರಲ್ಲಿ ಹಂಟರನ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಮಿತಿಯನ್ನು ನೇಮಕ ಮಾಡಲಾಯಿತು. 

   ● ಇಲ್ಬರ್ಟ್ ಮಸೂದೆಯ ವಿವಾದ 


■ ಲಾರ್ಡ್ ಡಫರಲ್ 

   ● ಲಾರ್ಡ್ ಡಫರಲ್ ರವರ ಅಧಿಕಾರವಧಿ :- 1884 ರಿಂದ 88 ವರೆಗೆ 

   ● ಮೂರನೇ ಬರ್ಮಾ ಯುದ್ಧ ( 1885 ರಿಂದ 86 ) ಬರ್ಮಾದ ಆಕ್ರಮಣ 

   ● 1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ 

 ಭಾರತದ ವೈಸರಾಯಗಳು | All Viceroy List with order wise

■ ಲಾರ್ಡ್ ಲಾನ್ಸ್ ಸೌನ್ 

   ● ಲಾರ್ಡ್ ಲಾನ್ಸ್  ಸೌನ್ ರವರ ಅಧಿಕಾರವಧಿ :- 1888 ರಿಂದ 1894 ರವರೆಗೆ 

   ● 1892 ರಲ್ಲಿ ಇಂಡಿಯಾ ಕೌನ್ಸಿಲ್ ಕಾಯ್ದೆ ಜಾರಿಗೆ 

   ● ಭಾರತ-ಅಪ್ಫನ್ ಗಡಿ ( ಡ್ಯುರಾಂಡ್ ) ರೇಖೆಯನ್ನು ನಿಗದಿ ಪಡಿಸುವಿಕೆ 


■ ಲಾರ್ಡ್ ಎಲ್ಗಿನ್ ( 1894-99 )

   ●  ಈತ ಒಂದನೇ ಎಲ್ಗನ್ ಮಗ 

   ●  1896 ರಲ್ಲಿ ಮುಂಬೈನಲ್ಲಿ ಭೀಕರ ಪ್ಲೇಗ್ ದುರಂತ 

   ●  1896-1897 ರಲ್ಲಿ ಹಿಸ್ಸಾರ್ ಜಿಲ್ಲೆಗಳಲ್ಲಿ ಭೀಕರ ಬರ 

   ●  ಚಾಪೇಕರ್ ನ ಸಹೋದರರಿಂದ ಇಬ್ಬರು ಬ್ರಿಟಿಷ್ ಅಧಿಕಾರಗಳ ಕೊಲೆ ( 1897 ರಲ್ಲಿ) 


■ ಲಾರ್ಡ್ ಕರ್ಜನ್ 

   ●  ಲಾರ್ಡ್ ಕರ್ಜನ್ ರವರ ಅಧಿಕಾರವಧಿ :- 1899 ರಿಂದ 1905 ರ ವರೆಗೆ 

   ●  ಭಾರತದ ಅತ್ಯಂತ ಸಮರ್ಥ ವೈಸರಾಯಗಳಲ್ಲಿ ಇಬ್ಬರು 

   ●  1897 ರಿಂದ 98 ರಲ್ಲಿ ವಾಯುವ್ಯ ಗಡಿ ಪ್ರಾಂತ್ಯದ ರಚನೆ 

   ●  ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಸ್ಥಾಪನೆ ಅನೇಕ ನೀರಾವರಿ ಕಾಲುವೆಗಳ ನಿರ್ಮಾಣ. 

   ●  1904 ರಲ್ಲಿ ಪುರಾತನ ಸ್ಮಾರಕಗಳ ರಚನೆಗಾಗಿ ಸಂರಕ್ಷಣಾ ಕಾಯ್ದೆ ಜಾರಿಗೆ ಮತ್ತು ಭಾರತೀಯ ಪುರಾತತ್ವ ಇಲಾಖೆ ವಿಶ್ವವಿದ್ಯಾಲಯ ಕಾಯಿದೆ ಜಾರಿಗೆ 

   ● 1905 ರ ಬಂಗಾಳ ವಿಭಜನೆ 

ಭಾರತದ ವೈಸರಾಯಗಳು | All Viceroy List with order wise

■ ಎರಡನೇ ಲಾರ್ಡ್ ಮಿಂಟೋ 

   ●  ಎರಡನೇ ಲಾರ್ಡ್ ಮಿಂಟೋ ರವರ ಅಧಿಕಾರವಧಿ :- 1905 ರಿಂದ 1910 

   ●  ಬಂಗಾಳ ವಿಭಜನಾ ವಿರೋಧಿ ಚಳಿವಳಿ 

   ●  1907 ರ ಸೂರತ್ ಕಾಂಗ್ರೆಸ್ ಅಧಿವೇಶನ ಮತ್ತು ಕಾಂಗ್ರೆಸ್ ಇಬ್ಬಾಗ 

   ●  1906 ರಲ್ಲಿ ಆಗಾಖಾನರಿಂದ ಮುಸ್ಲಿಂ ಲೀಗ್ ಸ್ಥಾಪನೆ 

   ●  1909 ರ ಮಾರ್ಲೆ ಮಿಂಟೋ ಕಾಯ್ದೆ ಜಾರಿಗೆ ಬಂದಿತು 


■ 2 ನೆಯ ಲಾರ್ಡ್ ಹಾರ್ಡಿಂಜ್ ( 1910 ರಿಂದ 1916 ) 

   ●  1911 ರಲ್ಲಿ ಬಂಗಾಳದ ವಿಭಜನೆ ರದ್ಧತಿ 

   ●  1911 ರಲ್ಲಿ ಭಾರತದ ರಾಜಧಾನಿಯನ್ನು ಕೊಲ್ಕತಾ ದಿಂದ ದೆಹಲಿಗೆ ವರ್ಗಾಯಿಸಲಾಯಿತು 

   ●  1915 ರಲ್ಲಿ ಮದನ್ ಮೋಹನ ಮಾಳವಿಯ ಮತ್ತು ಇತರರಿಂದ ಹಿಂದೂ ಮಹಾಸಭಾದ ಸ್ಥಾಪನೆ 

   ● 1916 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ 

ಭಾರತದ ವೈಸರಾಯಗಳು | All Viceroy List with order wise

■ ಲಾರ್ಡ್ ಚೆಲ್ಮ್ಸ್ ಫೋರ್ಡ್ ( 1916 ರಿಂದ 21 )

   ● 1916 ರಲ್ಲಿ ಬಾಲ ಗಂಗಾಧರ ತಿಲಕ್ ಮತ್ತು ಅನಿಬೆಸೆಂಟ್ ರಿಂದ ಪ್ರತ್ಯೇಕ ಹೋಂ ರೂಲ್ ಚಳುವಳಿ 

   ● 1916 ರ ಲಾಖ್ನೋ ಒಪ್ಪಂದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಗಳು ಪರಸ್ಪರ ಸಹಕರಿಸಲು ಒಪ್ಪಿಗೆ 

   ● 1916 ರಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮ ಸ್ಥಾಪನೆ 

   ● 1917 ರಲ್ಲಿ ಚಂಪಾರಣ್ಯ ಚಳುವಳಿ ಗಾಂಧೀಜಿಯವರ ಪಾಲ್ಗೊಳ್ಳುವಿಕೆ 

   ● 1918 ರಲ್ಲಿ ಗಾಂಧೀಜಿಯವರು ಅಹಮದಾಬಾದ್ ಮತ್ತು ಖೇಡಾಗಳಲ್ಲಿ ಸತ್ಯಾಗ್ರಹ ನಡೆಸಿದರು 

   ● 1918 ರಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು " ಇಂಡಿಯನ್ ಲಿಬರಲ್ ಫೆಡರೇಶನ್" ಸ್ಥಾಪಿಸಿದರು 


■ ಲಾರ್ಡ್ ರೀಡಿಂಗ್ ( 1921 ರಿಂದ 26 ) 

   ● 1922 ರಲ್ಲಿ ಚೌರಿಚೌರಾ ಘಟನೆ ಮತ್ತು ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು 

   ● 1922 ರಲ್ಲಿ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು " ಸ್ವರಾಜ್ಯ ಪಕ್ಷ" ವನ್ನು ಸ್ಥಾಪಿಸಿದರು 

   ● 1925 ರಲ್ಲಿ ಕೆ.ಬಿ ಹೆಗ್ಡೆವಾರ್ ನಿಂದ " ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆ "

   ● 1925 ರಲ್ಲಿ ಭಾರತದಲ್ಲಿ ಕಮ್ಯೂನಿಷ್ಟ್  ಪಕ್ಷದ ಸ್ಥಾಪನೆ 


■ ಲಾರ್ಡ್ ಇರ್ವಿನ್ ( 1926 ರಿಂದ 1931 )

   ● 1927 ರ ಸೈಮನ್ ಆಯೋಗವನ್ನು ನೇಮಿಸಲಾಯಿತು 

   ● 1927 ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧಿವೇಶನ ನಡೆಯಿತು 

   ● 1929ರ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆ 

   ● ಮೊದಲ ದುಂಡು ಮೇನಿನ ಸಮ್ಮೇಳನ ( 1030) 

   ● 1931 ರ ಗಾಂಧಿ - ಇರ್ವಿನ್ ಒಪ್ಪಂದ 

ಭಾರತದ ವೈಸರಾಯಗಳು 

■ ಲಾರ್ಡ್ ವೆಲ್ಲಿಂಗ್ ಟನ್ ( 1931 ರಿಂದ 1936 )

   ● 2 ನೇ ದುಂಡು ಮೇಜಿನ ಸಮ್ಮೇಳನ ( 1931 )ದಲ್ಲಿ ಗಾಂಧೀಜಿಯವರ ಭಾಗವಹಿಸುವಿಕೆ 

   ● 1932 ರ ಮತೀಯ ತೀರ್ಪು ಪ್ರಕಟ 

   ● 1932 ರಲ್ಲಿ ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಪುನಾ  ಒಪ್ಪಂದ 

   ● 1934ರಲ್ಲಿ ಆಚಾರ್ಯ ನರೇಂದ್ರದೇವ್ ಹಾಗೂ ಜಯಪ್ರಕಾಶ ನಾರಾಯಣ ರವರು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು 

   ● 1935 ರಲ್ಲಿ ಭಾರತದಿಂದ ಬರ್ಮಾವನ್ನು ಬೇರ್ಪಡಿಸಲಾಯಿತು 

   ● 1935ರ ಭಾರರ ಸರ್ಕಾರ ಕಾಯ್ದೆ 

   ● 1936 ರಲ್ಲಿ " ಅಖಿಲ ಭಾರತ ಕಿಸಾನ್ ಸಭಾ " ಸ್ಥಾಪನೆಯಾಯಿತು 


■ ಲಾರ್ಡ್ ಲಿನ್ ಲಿತ್ ಗೊ ( 1936 ರಿಂದ 1943 )

   ● 1937 ರಿಂದ 1939 ಕಾಂಗ್ರೆಸ್ ಮಂತ್ರಿ ಮಂಡಲಗಳ ರಚನೆ 

   ● 1939 ರಲ್ಲಿ ಸುಭಾಷ್ ಚಂದ್ರಬೋಸ್ ಮತ್ತು ಅವರ ಅನುಯಾಯಿಗಳು " ಫಾರ್ವರ್ಡ್ ಬ್ಲಾಕ್ " ಪಕ್ಷವನ್ನು ಕಟ್ಟಿದರು 

   ● 1940 ಲಾಹೋರ್ ಘೋಷಣೆಯಲ್ಲಿ ಮುಸ್ಲಿಂ ಲೀಗ್ ದ್ವಿರಾಷ್ಟ್ರ ಘೋಷಿಸಿದರು 

   ● 1942 ರಲ್ಲಿ ಭಾರತಕ್ಕೆ ಕ್ರಿಪ್ಸ್ ನಿಯೋಗ 

   ● 1942 ರ ಬಾಂಬೆ ಕಾಂಗ್ರೆಸ್ ಅಧಿವೇಶನದಲ್ಲಿ " ಕ್ವಿಟ್ ಇಂಡಿಯಾ " ಚಳುವಳಿಯ ಘೋಷಣೆ 

Viceroy List 

  ■ ಲಾರ್ಡ್ ವೇವಲ್ ( 1943 ರಿಂದ 1946 ) 

   ● 1943 ರಲ್ಲಿ Indian National Army ರಚನೆ 
   ● ಸುಭಾಷ್ ಚಂದ್ರ ಬೋಸ್ ರಿಂದ ಶಿಮ್ಲಾ ಸಮ್ಮೇಳನ 
   ● 1946ರಲ್ಲಿ ನೌಕಪಡೆಯ ದಂಗೆ 
   ● ಮುಸ್ಲಿಂ ಲೀಗ್ ನಿಂದ ಪಾಕಿಸ್ತಾನ ರಚನೆಗೆ ಒತ್ತಾಯಿಸಿ ನೇರ ಕಾರ್ಯಚರಣೆ ದಿನ ( 1946 ಆಗಸ್ಟ್ 16 )
   ● ಬ್ರಿಟನ್ನಿನ ಪ್ರಧಾನಮಂತ್ರಿ ಕ್ಲೆಮೆಂಟ್ ಅಟ್ಲಿ ಯು 1946ರ ಫೆಬ್ರವರಿ 20 ರಂದು 1948 ಜೂನ್ ಒಳಗೆ ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲಾಗುವುದೆಂದು ಘೋಷಸಿದರು 

■ ಲಾರ್ಡ್ ಮೌಂಟ್ ಬ್ಯಾಟನ ( 1946 ರಿಂದ 1947 )

   ● ಭಾರತದ ಕೊನೆಯ ವೈಸರಾಯ್ 
   ● ಜೂನ್ 3 1947 ರಲ್ಲಿ ಭಾರತ ಸ್ವಾತಂತ್ರ್ಯ ಕಾಯ್ದೆ ಅಂಗೀಕಾರ 
   ● ಮೌಂಟ್ ಬ್ಯಾಟನ್ ಯೋಜನೆ ಮತ್ತು ಭಾರತ ವಿಭಜನೆ ಆಗಸ್ಟ್ 14 1947 ರಲ್ಲಿ ಪಾಕಿಸ್ತಾನ ರಚನೆ 
   ● 14-15-1947 ರ ಮಧ್ಯರಾತ್ರಿಯಲ್ಲಿ ಭಾರತ ಸ್ವಾತಂತ್ರ್ಯ ಘೋಷಣೆ 





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad