Type Here to Get Search Results !

ತಲಕಾಡಿನ ಗಂಗರು : Talakaadina gangaru

 ತಲಕಾಡಿನ ಗಂಗರು ಪ್ರಮುಖ ಪ್ರಶ್ನೆಗಳು ಮತ್ತು ಇತರೆ ವಿವರಗಳು 

ತಲಕಾಡಿನ ಗಂಗರ ಮೂಲ ಪುರುಷ ಯಾರು?

ದಡಿಗ ಅಥವಾ ಕೊಂಗಣಿವರ್ಮ 

ತಲಕಾಡಿನ ಗಂಗರ ರಾಜಧಾನಿ ಯರು ?

ಕುವಲಾಲ, ತಲಕಾಡು ಮತ್ತು ಮಾಕುಂದ 

ತಲಕಾಡಿನ ಗಂಗರ ನಾಣ್ಯಗಳು ?

ಗದ್ಯಾಣ, ಸುವರ್ಣ ಮತ್ತು ನಿಷ್ಠ 

ತಲಕಾಡಿನ ಗಂಗರ ಧರ್ಮ ? 

ವೈದಿಕ ಮತ್ತು ಜೈನ 

ತಲಕಾಡಿನ ಗಂಗರ ರಾಜ್ಯ ಲಾಂಛನ ?

ಮದಗಜ 

ತಲಕಾಡಿನ ಗಂಗರ ಆಡಳಿತ ಭಾಷೆ ?

ಸಂಸ್ಕೃತ ಮತ್ತು ಕನ್ನಡ 

ತಲಕಾಡಿನ ಗಂಗರ ಶಾಸನ / ದಾಖಲೆಗಳು 

ಹಳ್ಳಿಗೇರಿ, ಜಾವಳಿ, ದೇವರಹಳ್ಳಿ, ಮಣ್ಣಿ ಮುಂತಾದವುಗಳು. 

ತಲಕಾಡಿನ ಗಂಗರ ಪ್ರಮುಖ ಕೇಂದ್ರಗಳು 

ಕೋಲಾರ, ಮುನ್ನೆ, ತಲಕಾಡು, ಶ್ರಾವಣಬೆಳಗೊಳ, ಬೇಲೂರು, ಗಂಗವಾಡಿ. 



ತಲಕಾಡಿನ ಗಂಗರ ಪ್ರಮುಖ ಅರಸರು 


● ಒಂದನೇ ಮಾಧವ   ಕ್ರಿ. ಶ 400 - 440
● ಹರಿವರ್ಮ   ಕ್ರಿ. ಶ 440 - 465
● ದುರ್ವಿನೀತ ಕ್ರಿ. ಶ 540 - 600
● ಒಂದನೇಯ ಶಿವಮಾರ   ಕ್ರಿ. ಶ 679 - 726
● ಶ್ರೀಪುರುಷ ಕ್ರಿ. ಶ 726 - 788

ದುವಿರ್ನೀತ

ಗಂಗರಲ್ಲಿ ಅಪ್ರತಿಮ ವೀರ, ವಿದ್ವಾಂಸ, ಕಲಾಭಿಜ್ಞ, ದುವಿರ್ನೀತ ತನ್ನ ಮಗಳನ್ನು ಚಾಲುಕ್ಯರ ವಿನಯಾದಿತ್ಯನಿ ಗೆ ಕೊಟ್ಟು ವಿವಾಹ ಮಾಡಿ ತನ್ನ ಸಮಾರ್ಥ್ಯ ಹೆಚ್ಚಿಸಿಕೊಂಡನು. ಪಲ್ಲವರನ್ನು ಸೋಲಿಸಿ ಕೊಯಮುತ್ತುರು, ಸೇಲಂ, ಚೆಂಗಲ್ ಪೇಟೆಗಳನ್ನು ವಶ್ಯಪಡಿಸಿಕೊಂಡನು. ದುವಿರ್ನೀತನು ಸಂಸ್ಕೃತ ಮತ್ತು ಕನ್ನಡ ಭಾಷೆಯ ಘನವಿದ್ವಾಂಸ " ಕಿರುತಾರ್ಜನೀಯ " ಬರೆದ " ಭಾರವಿ"ಯ ಈಯವನ ಆಶ್ರಯದಲ್ಲಿದ್ದನು . 

ಒಂದನೇ ಶಿವಮಾರ 

 46 ವರ್ಷಗಳ ಯಶಸ್ವಿ ಆಲಿಕೆ ನಡೆಸಿದ ಪಲ್ಲವರ ಆಕ್ರಮಣ ತಡೆಕಟ್ಟಿದ. ಅವನಿ ಮಹೇಂದ್ರ ಬಿರುದನ್ನು ಹೊಂದಿದ್ದನು. 

ಶ್ರೀ ಪುರುಷ 

ಒಂದನೇ ಶಿವಮಾರನ ಮೊಮ್ಮಗ, ಗಂಗಾ ವಂಶದ ಅತ್ಯುತ್ತಮ ಅರಸರಲ್ಲಿ ಒಬ್ಬನು 63 ವರ್ಷಗಳ ಆಡಲಿತಲ್ಲಿ ಗಂಗ ರಾಜ್ಯ ಉತ್ಕ್ರುಷ್ಟ ಸ್ಥಿತಿಗೇರಿತು, ಪಲ್ಲವರನ್ನು, ರಾಷ್ಟ್ರಕೊಟರನ್ನು, ನೊಳಂಬರನ್ನು ಸೋಲಿಸಿದ, ಗಂಗವಂಶದ ರಾಜಕುಮಾರಿಯನ್ನು ಅಪಹರಿಸಿದ ಪಾಂಡ್ಯರನ್ನು ಸೋಲಿಸಿದ. ಗಜಶಾಸ್ತ್ರ ಪುಸ್ತಕ ಬರೆದಿದ್ದಾನೆ.  

ಎರಡನೇ ಶಿವಮಾರ 

  ರಾಷ್ಟ್ರಕೂಟರ ಧ್ರುವನಿಂದ ಸೋತನು. ಸೌಮ್ಯ ಸ್ವಭಾವದ ಸಂಸ್ಕೃತಿ ಕ್ಷೇತ್ರದಲ್ಲಿ ಗಮನಾರ್ಹನಾಗಿದ್ದಾನೆ. ಶ್ರವಣಬೆಳಗೊಳದ ಜೈನ ಬಸದಿ ನಿರ್ಮಿಸಿದ. ಶಿವಮಾರ ತರ್ಕ, ವೇದಾಂತ, ವ್ಯಾಕರಣಗಳಲ್ಲಿ ಪಂಡಿತನಾಗಿದ್ದ. 

ಮಂತ್ರಿ ಚಾವುಂಡರಾಯ 

ಎರಡನೇ ಮಾರಸಿಂಹನ ( 963 - 75 ) ಕಾಲದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿ ನಿಯುಕ್ತನಾದ ಇವನು ನಾಲ್ಕನೇ ರಾಜಮಲ್ಲನ ಆಳ್ವಿಕೆಯಲ್ಲೂ ಮುಂಡುವರೆದನು. 
                              981 ರಿಂದ 82ರಲ್ಲಿ ಶ್ರವಣಬೆಳಗೊಳದಲ್ಲಿ ದೊಡ್ಡ ಬೆಟ್ಟದ ಮೇಲೆ 57.8( 58 ) ಅಡಿ ಗೊಮ್ಮಟೇಶ್ವರ ವಿಗ್ರಹ ನಿರ್ಮಿಸಿ ಅಮರನಾದ. 

ತಲಕಾಡಿನ ಗಂಗರ ಆಡಳಿತ 

  ರಾಜನು ಕೇಂದ್ರೀಕೃತ ಸರ್ಕಾರದ ಮುಖ್ಯಸ್ಥನಾಗಿದ್ದನು. ಆಡಳಿತದ ಅನುಕೂಲಕ್ಕೆಂದು ರಾಜ್ಯವನ್ನು ಅನೇಕ ಮಂಡಳ ಅಥವಾ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರಾಂತ್ಯಗಳಲ್ಲಿ ನಾಡುಗಳು, ವಿಷಯಗಳು, ವೆಂತ್ಯ ಮತ್ತು ಕಂಪಣಗಳೆಂಬ ವಿಭಾಗಗಳನ್ನು ಮಾಡಲಾಗಿತ್ತು. 

ತಲಕಾಡಿನ ಗಂಗರ ಸಾಹಿತ್ಯ ಮತ್ತು ಸಂಸ್ಕೃತಿ 

 ಹಲವಾರು ಅರಸರು ಸ್ವಂತ ಕವಿಗಳಾಗಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿತ್ತು. ಗುರುಕುಲ ಪದ್ಧತಿ ರೂಢಿಯಲ್ಲಿತ್ತು. ಘಟ್ಟಕಗಳು, ವಿದ್ಯಾಪೀಠಗಳು, ಮಠಗಳು, ಅಗ್ರಹಾರಗಳು, ಬ್ರಹ್ಮಪುರಿಗಳು ಉಚ್ಚ ಶಿಕ್ಷಣ ಕೇಂದ್ರಗಳಾಗಿದ್ದವು. ಈ ಕಾಲದ ಪ್ರಮುಖ ಕವಿಗಳೆಂದರೆ :
ಶ್ರೀ ಪುರುಷ   -  ಗಜಶಾಸ್ತ್ರ 
ನಾಗವರ್ಮ   -  ಚಂದೋಂಬುಧ 
ಚಾವುಂಡರಾಯ   - ಚಾವುಂಡರಾಯನ ಪುರಾಣ 
ಎರಡನೆಯ ಶಿವಮಾರ   - ಸೇತುಬಂಧ 
ದುರ್ವಿನೀತ   -  ಬೃಹತ್ಕಥ 
ಹೇಮಸೇನ   -  ರಾಘವ ಪಾಂಡವೀಯ 



ತಲಕಾಡಿನ ಗಂಗರು : Talakaadina gangaru
ತಲಕಾಡಿನ ಗಂಗರು


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad