ಪರಮಾಣು ಸಿದ್ಧಾಂತಗಳು ( Atomic Theories )
ಪ್ರಮಾನುವಿನ ರಚನೆ ಬಗ್ಗೆ ವಿವಿಧ ರಸಾಯನ ಶಾಸ್ತ್ರಜ್ಞರು ವಿಭಿನ್ನವಾದ ಸಿದ್ಧಾಂತವನ್ನು ಮಂಡಿಸಿದ್ದಾರೆ. ಅಂತಹ ಸಿದ್ಧಾಂತಗಳು ಪರಮಾನುವಿನ ರಚನೆ (Atomic Theory) ಬಗ್ಗೆ ತಿಳಿಸಲು ಸಹಕಾರಿಯಾಗುತ್ತದೆ. ಅಂತಹ ಸಿದ್ಧಾಂತಗಳಲ್ಲಿ ಪ್ರಮುಖವಾದ ಸಿದ್ಧಾಂತಗಳೆಂದರೆ ಜಾನ್
1. ಡಾಲ್ಟನ್ ಅವರ - ಪರಮಾಣು ಸಿದ್ಧಾಂತ
2. ನೀಲ್ ಬೋರ್ ಅವರ - ಪರಮಾಣು ಮಾದರಿ ಸಿದ್ಧಾಂತ
3. ರುದರ್ ಫೋರ್ಟ್ ಅವರ - ಪರಮಾಣು ಸಿದ್ಧಾಂತ ಮತ್ತು ಆಧುನಿಕ ಪರಮಾಣು ಸಿದ್ಧಾಂತಗಳು ಪ್ರಮುಖವಾಗಿದೆ
1. ಡಾಲ್ಟನ್ ಅವರ - ಪರಮಾಣು ಸಿದ್ಧಾಂತ ( Dalton's Atomic Theory )
ಪರಮಾಣು ಸಿದ್ಧಾಂತ ಪರಿಚಯ
ಬ್ರಿಟಿಷ್ ರಾಸಾಯನಶಾಸ್ತ್ರಜ್ಞ ಜಾನ್ ಡಾಲ್ಟನ್ ಅವರು "ಪರಮಾಣು ಸಿದ್ಧಾಂತ"ವನ್ನು 1803 ರಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ಪ್ರಯೋಗ ಅರ್ಥೈಸುವ ಸಲುವಾಗಿ ಪರಮಾಣು ಸಿದ್ಧಾಂತವನ್ನು ವಿವರಿಸಿದರು. ಅವರು ಸಿದ್ಧಾಂತದ ಮುಖ್ಯ ಆಧಾರ ಊಹೆಗಳು ( Postluates ) ಈ ಕೆಲಗಿನಂತಿದೆ.
![]() |
| Atomic Theory Explained in Kannada |
ಡಾಲ್ಟನ್ ಪರಮಾಣು ಸಿದ್ಧಾಂತದ ತತ್ವಗಳು
ಎಲ್ಲಾ ವಸ್ತುಗಳು ಪರಮಾಣು ಎನ್ನುವ ಸಣ್ಣ ಅವಿಭಾಜ್ಯ ಕಣಗಳಿಂದ ಆಗಿವೆ. ಎಷ್ಟು ವಿಧದ ಧಾತುಗಳಿವೆಯೋ ಅಷ್ಟೇ ವಿಧದ ಪರಮಾನುಗಳಿವೆ. ಪರಮಾನುಗಳನ್ನು ಸ್ರುಷ್ಠಿಸುವುದಾಗಲೀ, ನಾಶಗೊಳಿಸುವುದಾಗಲೀ ಸಾಧ್ಯವಿಲ್ಲ.
▶ ನಿರ್ದಿಷ್ಟ ಧಾತುವಿನ ಎಲ್ಲಾ ಪರಮಾನುಗಳು ಒಂದೇ ಆಕಾರ, ದ್ರವ್ಯರಾಶಿ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಬೇರೆ ಧಾತುವಿನ ಪರಮಾನುವಿಗಿಂತ ಭಿನ್ನವಾಗಿರುತ್ತವೆ.
▶ ಒಂದು ಧಾತುವಿನ ಪರಮಾನುಗಳನ್ನು ಇನ್ನೊಂದು ಧಾತುವಿನ ಪರಮಾನುಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬೇರೆ ಬೇರೆ ಧಾತುಗಳ ಪರಮಾನುಗಳು ಪೂರ್ಣಾಂಕ ಸಂಖ್ಯೆಯ ಅನುಪಾತದಲ್ಲಿ ಸಂಯೋಗ ಹೊಂದಿ ಸಂಯುಕ್ತ ವಸ್ತುಗಳಾಗುತ್ತವೆ.
▶ ದತ್ತ ಧಾತುವಿನ ಪರಮಾನುಗಳ ದ್ರವ್ಯರಾಶಿಯು ಒಂದೇ ಆಗಿದ್ದು, ರಾಸಾಯನಿಕ ಗುಣಗಳೂ ಒಂದೇ ಆಗಿರುತ್ತವೆ. ಧಾತುವಿನಲ್ಲಿರುವ ಪರಮಾಣುವು ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ.
▶ ಡಾಲ್ಟನ್ ನ ಪರಮಾಣು ಸಿದ್ಧಾಂತ ಮತ್ತು ಪರಮಾನುವಿನ ಅವಿಭಾಜ್ಯತೆಯ ಕಲ್ಪನೆಯನ್ನು ಬಹಳ ವರ್ಷಗಳವರೆಗೆ ಒಪ್ಪಲಾಗಿತ್ತು. ನಂತರ ವಿಲಿಯಂ ಕ್ರೂಕ್ಸ್ (1878 ), ಜೆ. ಜೆ ಥಾಮ್ಸನ್ ( 1879 ) ಮತ್ತು ಗೋಲ್ಡ್ ಸ್ಟೀನ್ ( 1889 ) ರಂತಹ ವಿಜ್ಞಾನಿಗಳು ಡಾಲ್ಟನ್ ನ ಸಿದ್ಧಾಂತಕ್ಕೆ ವಿರುದ್ಧವಾಗಿ ಸಿದ್ಧಾಂತಗಳನ್ನು ಪ್ರತಿಪಾದಿಸಿದರು.
▶ ಪರಮಾನುವಿನ ಬಗೆಗಿನ ಡಾಲ್ಟನ್ ನ ಕೆಲವು ಊಹೆಗಳು ನಿಖರವಾಗಿರಲಿಲ್ಲ. ಇದು ಸ್ವಲ್ಪ ಬದಲಾವಣೆ ಹೊಂದಿದ್ದು, ಇಂದು ಇದನ್ನು ಆಧುನಿಕ ಪರಮಾಣು ಸಿದ್ಧಾಂತ ( Modern Atomic Theory ) ಎನ್ನುವರು.
ಪರಮಾಣು ದ್ರವ್ಯರಾಶಿ ಮಾನ :-
ಪರಮಾಣು ದ್ರವ್ಯರಾಶಿಯು ಪರಮಾನುವಿನ ದ್ರವ್ಯರಾಶಿಯಾಗಿದ್ದು, ಇದನ್ನು ಪರಮಾಣು ದ್ರವ್ಯರಾಶಿ ಮಾನ ( Atomic Mass Unit - amu )ದಲ್ಲಿ ಅಲೆಯುತ್ತಾರೆ. 1 amu ಅನ್ನು ಡಾಲ್ಟನ್ ಎಂದು ಕರೆಯುತ್ತಾರೆ. ಇದು ಕಾರ್ಬನ್ 12 ರ ಪರಮಾನುವಿನ ತೂಕದ 1/12 ರಷ್ಟು ಆಗಿರುತ್ತದೆ.
ನೀಲ್ಸ್ ಬೋರ್ ಪರಮಾಣು ಮಾದರಿ ( Niels Bohru's Model )
ಬೋರ್ ಪರಮಾಣು ಮಾದರಿ ಪರಿಚಯ
◆ 1913 ರಲ್ಲಿ ಡೇನಿಷ್ ದೇಶದ ಭೌತ ವಿಜ್ಞಾನಿ ನೀಲ್ಸ್ ಬೋರ್ ರವರಿಂದ ಪ್ರಸ್ತುತ ಪಡಿಸಲ್ಪಟ್ಟ ಪರಮಾಣು ಮಾದರಿಯನ್ನು " ಬೋರ್ ಪರಮಾಣು ಮಾದರಿ " ಎನ್ನುವರು.
◆ ಬೋರ್ ಪರಮಾಣು ಮಾದರಿ ಸ್ಪಷ್ಟವಾಗಿ ಎಲಕ್ಟ್ರಾನ್ ಚಲನೆ ತಿಳಿಸುತ್ತದೆ.
◆ ಬೋರ್ ಪರಮಾಣು ಮಾದರಿ ಪ್ರಕಾರ ಎಲಕ್ಟ್ರಾನ್ ಗಳು ವೃತ್ತಾಕಾರದಲ್ಲಿ ಕಕ್ಷೆಯಲ್ಲಿ ಸುತ್ತುತ್ತವೆ. ಇವುಗಳು ಸೂರ್ಯನ ಸುತ್ತ ಸುತ್ತುವ ಗ್ರಹಗಳಂತೆ ಸುತ್ತುತ್ತಿರುತ್ತದೆ.
◆ ನೀಲ್ಸ್ ಬೋರ್ ಅವರು ರುದರ್ ಫೋರ್ಡ್ ನ ಪರಮಾಣು ಮಾದರಿಯನ್ನು ನವಿಕರಿಸಿದನು. ನಂತರ ಈ ಕೆಳಕಂಡ ಅನ್ವಯಗಳನ್ನು ಒಪ್ಪಿಕೊಳ್ಳಲಾಯಿತು.
![]() |
| Atomic Theory Explained in Kannada |
ನೀಲ್ಸ್ ಬೋರ್ ಪರಮಾಣು ಮಾದರಿ ತತ್ವಗಳು
▶ ಪರಮಾನುಗಳಲ್ಲಿ ಎಲಕ್ಟ್ರಾನುಗಳು ಪರಮಾಣು ಕೇಂದ್ರದ ಸುತ್ತಲೂ ಹೊರಗೊಡಿನಲ್ಲಿ ವೃತ್ತಾಕಾರದಲ್ಲಿ ಸುತ್ತುತ್ತಿರುತ್ತವೆ. ಈ ಪಥಗಳನ್ನು ಕಕ್ಷೆ ಮತ್ತು ಶಕ್ತಿ ಮಟ್ಟಗಳು ಎನ್ನುವರು.
▶ ಕಕ್ಷೆಗಳ ಗಾತ್ರವು ಚಿಕ್ಕದಾಗಿದ್ದರೆ ಅವುಗಳ ಶಕ್ತಿ ಮಟ್ಟಗಳು ಚಿಕ್ಕದಾಗಿಸುತ್ತವೆ. ಕಕ್ಷೆಯಲ್ಲಿರುವ ಶಕ್ತಿ ಮಟ್ಟವು ಪರಮಾಣು ಕೇಂದ್ರದಿಂದ ದೂರವಾದವು. ಇವುಗಳ ಮಟ್ಟವು ಹೆಚ್ಚುತ್ತಲೇ ಇರುವುದು.
▶ ಶಕ್ತಿ ಮಟ್ಟವನ್ನೇ ಹಿಡಿದಿಟ್ಟುಕೊಳ್ಳುವ ಎಲಕ್ಟ್ರಾನುಗಳು, ಕಡಿಮೆ ಶಕ್ತಿ ಮಟ್ಟದಿಂದ ಅಧಿಕ ಶಕ್ತಿ ಮಟ್ಟಕ್ಕೆ ಧುಮುಕುತ್ತವೆ.
▶ ಅಧಿಕ ಶಕ್ತಿ ಮಟ್ಟದಿಂದ ಕಡಿಮೆ ಶಕ್ತಿ ಮಟ್ಟಕ್ಕೆ ಹಿಂದಿರುಗುವ ಎಲಕ್ಟ್ರಾನುಗಳು ಅನುಕೂಲಕರ ಸ್ಥಿತಿಯನ್ನು ಉಂಟು ಮಾಡುತ್ತವೆ.
▶ ಬಹಳ ಕಾಲದಿಂದಲೂ ಒಂದೇ ತ್ರಿಜ್ಯವನ್ನು ಸುತ್ತುತ್ತಿರುವ ಎಲಕ್ಟ್ರಾನುಗಳು ಶಕ್ತಿಯನ್ನು ಪಡೆದುಕೊಳ್ಳಲು ಕಳೆದುಕೊಳ್ಳಲು ಸಾಧ್ಯವಿಲ್ಲ. ಬೀಜಕೇಂದ್ರದ ಅತ್ಯಂತ ಸಮೀಪದಲ್ಲಿರುವ ಪ್ರಥಮ ಕಕ್ಷೆ "K" ಆಗಿದೆ. ನಂತರದ ಕಕ್ಷೆಗಳನ್ನು ಕ್ರಮವಾಗಿ L,M,N,O.. ಎಂದು ಹೆಸರಿಸಲಾಗಿದೆ.
▶ ಹೊರ ಕಕ್ಷೆಯಲ್ಲಿ ಸುತ್ತುತ್ತಿರುವ ಎಲಕ್ಟ್ರಾನುಗಳ ಸಂಖ್ಯೆಗಳು ಕ್ರಮವಾಗಿ 1, 2, 3, 4 ಅವುಗಳನ್ನು K, L, M, N ಶಕ್ತಿ ಮಟ್ಟಗಳು ಎಂದು ಈ ರೀತಿಯ ಸಂಖ್ಯೆಗಳನ್ನು ಸಾಮಾನ್ಯವಾಗಿ ಮುಖ್ಯ ಪರಿಮಾಣ ಎನ್ನುತ್ತೇವೆ.
▶ ಒಂದು ಶಕ್ತಿ ಮಟ್ಟದಲ್ಲಿ ಹಿಡಿದುಕೊಳ್ಳುವ ಎಲಕ್ಟ್ರಾನ್ ಗಳ ಸಂಖ್ಯೆ 2n² ಆಗುತ್ತದೆ.
▶ ಪ್ರತಿಯೊಂದು ಕಕ್ಷೆಯಲ್ಲಿರುವ ಎಲಕ್ಟ್ರಾನ್ ಒಂದು ನಿರ್ದಿಷ್ಟ ಪರಿಮಾಣದ ಶಕ್ತಿಯನ್ನು ಹೊಂದಿರುತ್ತದೆ. ಹೆಚ್ಚಿನ ಶಕ್ತಿಮಟ್ಟದ ಕಕ್ಷೆಯಲ್ಲಿರುವ ಎಲಕ್ಟ್ರಾನ್, ನ್ಯೂಕ್ಲಿಯಸ್ ನ ಸಮೀಪದಲ್ಲಿರುವುದಕ್ಕಿಂತ ಹೆಚ್ಚು ಶಕ್ತಿಯನ್ನು ಹೊಂದಿರುತ್ತದೆ.
▶ ಎಲಕ್ಟ್ರಾನ್ ತನ್ನ ಕಕ್ಷೆಯಲ್ಲಿ ಸುತ್ತುತ್ತಿರುವ ವರೆಗೆ ಎಲಕ್ಟ್ರಾನ್ ಶಕ್ತಿ ಸ್ಥಿರವಾಗಿರುತ್ತದೆ. ಅದ್ದುದರಿಂದ ಕಕ್ಷೆಗಳನ್ನು "ಸ್ಥಿರಶಕ್ತಿ ಮಟ್ಟ" ( ಚೈತನ್ಯ ಮಟ್ಟ ) ಎಂದು ಸಹ ಕರೆಯುವರು. ಪ್ರತಿಯೊಂದು ಕಕ್ಷೆಯು ಗರಿಷ್ಟ
"2n²" ಎಲಕ್ಟ್ರಾನ್ ಗಳನ್ನು ಹೊಂದಿರುತ್ತದೆ ಎಂದು ನೀಲ್ಸ್ ಬೋರ್ ಸೂಚಿಸಿದರು. ಇಲ್ಲಿ "n" ಎಂದರೆ ಕಕ್ಷೆಗಳ ಸಂಖ್ಯೆ.
ಉದಾಹರಣೆಗೆ ಮೂರನೇ ಕಕ್ಷೆ ಅಂದರೆ, n = 3. ಈ ಕಕ್ಷೆಯಲ್ಲಿ ಹೆಚ್ಚೆಂದರೆ 2ⅹ3² = 18 ಎಲಕ್ಟ್ರಾನ್ ಗಲಿರುತ್ತದೆ. ಇದರ ಅರ್ಥ M ಕಕ್ಷೆಯಲ್ಲಿ 18 ಕ್ಕಿಂದ ಹೆಚ್ಚು ಎಲಕ್ಟ್ರಾನ್ಗಲಿರುವುದಿಲ್ಲ.
▶ ನೀಲ್ಸ್ ಬೋರ್ ಮಾದರಿಯ ಪ್ರಕಾರ, ತಟಸ್ಥ ಕ್ಲೋರಿನ್ ಪರಮಾಣುವಿನಲ್ಲಿ 17 ಎಲಕ್ಟ್ರಾನ್ ಗಳಿವೆ Kಕಕ್ಷೆಯು 2 ಎಲಕ್ಟ್ರಾನ್ ಗಳನ್ನು ಹೊಂದಿರುತ್ತದೆ. Lಕಕ್ಷೆಯು 8 ಎಲಕ್ಟ್ರಾನ್ ಗಳನ್ನು ಹೊಂದಿರುತ್ತದೆ. ಉಳಿದ 7 ಎಲಕ್ಟ್ರಾನ್ ಗಳು ನಂತರದ ಕಕ್ಷೆಯಾದ Mಕಕ್ಷೆಯಲ್ಲಿರುತ್ತದೆ.
ರುದರ್ ಫೋರ್ಟ್ ಪರಮಾಣು ಮಾದರಿ ( Ruther Ford's Atomic Model )
![]() |
| Atomic Theory Explained in Kannada |
▶ ನ್ಯೂಜಿಲೆಂಡ್ ಮೂಲದ ಭೌತಶಾಸ್ತ್ರಜ್ಞ ರುದರ್ ಫೋರ್ಡ್ ಅವರು 1911 ರಲ್ಲಿ " ಪರಮಾಣು ಮಾದರಿ"ಯನ್ನು ಪ್ರತಿಪಾಡಿಸಿದ್ದಾರೆ. ರುದರ್ ಫೋರ್ಡ್ ಅವರ ಪರಮಾಣು ಮಾದರಿಯ ಪ್ರಮುಖ ಅಂಶಗಳು ಈ ಕೆಲಕಂಡತಿವೆ.
▶ ಪರಮಾಣುವಿನ ಧನಾವೇಶ ಕಣಗಳು, ಪರಮಾಣುವಿನ ಕೇಂದ್ರಾಭಾಗದಲ್ಲಿ ಬಂದಿಸಲ್ಪಟ್ಟಿವೆ. ಇದನ್ನು ನ್ಯೂಕ್ಲಿಯಸ್ ಅಥವಾ ಬೀಜಕೇಂದ್ರ ಎಂದು ಕರೆಯುವರು. ಈ ಕೇಂದ್ರವು ಎಲಕ್ಟ್ರಾನ್ ಗಳಿಂದ ಸುತ್ತುವರಿಯಲ್ಪಟ್ಟಿದೆ.
▶ ಪರಮಾಣುವಿನ ಗಾತ್ರಕ್ಕೆ ಹೋಲಿಸಿದರೆ ಬೀಜಕೇಂದ್ರದ ಗಾತ್ರವೂ ತುಂಬಾ ಚಿಕ್ಕದು. ಪರಮಾಣುವಿನ ಹೆಚ್ಚಿನ ದ್ರವ್ಯರಾಶಿಯು ಬೀಜಕೇಂದ್ರದಲ್ಲಿ ಕೇಂದ್ರೀಕೃತವಾಗಿದೆ.
▶ ನ್ಯೂಕ್ಲಿಯಸ್ ಅಥವಾ ಬೀಜಕೇಂದ್ರ ಧನ ವಿದ್ಯುದಾಯವೇಶವನ್ನು ಹೊಂದಿದ್ದು, ಅವುಗಳ ಪರಿಮಾನವು ಬೇರೆ ಬೇರೆ ಧಾತುಗಳಿಗೆ ಬೇರೆ ಬೇರೆಯಾಗಿದೆ.
▶ ವಿದ್ಯುತ್ ತಟಸ್ಥ ಪರಮಾಣುವಿನ ಬೀಜಕೇಂದ್ರದ ಹೊರಗಿನ ಎಲಕ್ಟ್ರಾನ್ ಗಳ ಸಂಖ್ಯೆಯು ಬೀಜಕೇಂದ್ರದ ಒಳಗಿನ ಧನ ವಿದ್ಯುದಂಶದ ಕಣಗಳಿಗೆ ಸಮನಾಗಿರುತ್ತದೆ. ಕೇವಲ ಎಲಕ್ಟ್ರಾನ್ ಮತ್ತು ಪ್ರೋಟಾನ್ ಗಳ ಇರುವಿಕೆಯಿಂದ ಬೇರೆ ಬೇರೆ ಪರಮಾನುಗಳ ದ್ರವ್ಯರಾಶಿಯನ್ನು ಲೆಕ್ಕಾಚಾರ ಮಾಡಲು ಅಸಾಧ್ಯಯವೆಂಬುದನ್ನು ರುದರ್ ಫೋರ್ಡ್ ಗಮಣಿಸಿದರು .
▶ ಪರಮಾಣುವಿನಲ್ಲಿ ನ್ಯೂಕ್ಲಿಯಸ್ ನ ರಾಶಿಯು ಪ್ರೋಟಾನ್ ಗಳ ಒಟ್ಟು ರಾಶಿಗಿಂತ ಹೆಚ್ಚಿರುವುದನ್ನು ಗಮನಿಸಲಾಯಿತು. ಆದ್ದರಿಂದ ಪರಮಾನುಗಳಲ್ಲಿ ಪ್ರೋಟಾನ್ ಗಳ ದ್ರವ್ಯರಾಶಿಗೆ ಸಮನಾದ ಬೇರೆ ತಟಸ್ಥ ಕಣಗಲ ಇರುವಿಕೆಯನ್ನು ರುದರ್ ಫೋರ್ಡ್ ಮುನ್ಸೂಚಿಸಿದರು.
▶ ಬೀಜಕೇಂದ್ರದಲ್ಲಿರುವ ಹೆಚ್ಚಿನ ದ್ರವ್ಯರಾಶಿಗೆ ಕಾರಣವಾಗಿರುವುದು ಬೀಜಕೇಂದ್ರದಲ್ಲಿರುವ ಮತ್ತೊಂದು ಕಣವಾಗಿದೆ. 1932ರಲ್ಲಿ ಜೇಮ್ಸ್ ಛಾಡ್ ವಿಕ್ ಎಂಬ ವಿಜ್ಞಾನಿಯು ಈ ಕಣಗಲ ಇರುವಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿದ್ದಲ್ಲದೇ, ಅವುಗಳನ್ನು ನ್ಯೂಟ್ರಾನ್ ಗಳೆಂದು ಕರೆದರು. ಬೀಜಕೇಂದ್ರದ ಒಳಗಿರುವ ಈ ಕಣವು ಪ್ರೋಟಾನ್ಗೆ ಸಮನಾದ ದ್ರವ್ಯರಾಶಿಯಉಳ್ಳದ್ದು.
ಆಧುನಿಕ ಪರಮಾಣು ಸಿದ್ಧಾಂತ ( Modern Atomic Theory )
![]() |
| Atomic Theory Explained in Kannada |
▶ ಆಧುನಿಕ ಪರಮಾಣು ಸಿದ್ದಾಂತವನ್ನು ಪರಮಾಣು ವಿಭಾಜ್ಯ ಕಣಾ ಎಂಬುದಾಗಿ ಪರಿಗಣಿಸಲಾಗುವುದು. ಒಂದೇ ಮೂಲವಸ್ತುವಿನ ಪರಮಾಣುಗಳೆಲ್ಲವೂ ಎಲ್ಲಾ ವಿಧದಲ್ಲೂ ಒಂದೇ ಸಮನಾಗಿರುವುದಿಲ್ಲ.
ಉದಾ|| ಐಸೋಟೋಪ್ (Isotope)ಗಳು ( ₁₇CI³⁵, ₁₇CI³⁷ )
▶ ಬೇರೆ ಬೇರೆ ಮೂಲವಸ್ತುಗಳ ಬಗ್ಗೆ ಪರಮಾಣುಗಳೆಲ್ಲವೂ ಕೆಲವು ಸಂಬಂಧದಲ್ಲಿ ಒಂದೇ ರೀತಿಯಾಗಿರಬಹುದು.
ಉದಾ|| ಐಸೊಬಾರ್ (Isobars)ಗಳು (₁₈Ar⁴⁰,₂₀Ca⁴⁰ )
▶ ಪರಮಾಣು ಅತ್ಯಂತ ಚಿಕ್ಕ ಕಣಾ. ಇದು ರಾಸಾಯನಿಕ ಪರಿವರ್ತನೆಗಳಲ್ಲಿ ಪಾಲ್ಗೊಳ್ಳುವುದು. ಒಂದು ಅಣುವಿನಲ್ಲಿರುವ ಪರಮಾನುಗಳ ಪ್ರಮಾಣವು ನೆಲೆಗೊಂಡು ಸಮಗ್ರವಾಗಿರಬಹುದು, ಆದರೆ ಸರಳವಾಗಿರುವುದಿಲ್ಲ.
ಉದಾ|| C₁₂H₂₂O₁₁ ಇದು ಸಾಧಾರಣ ನಿಷ್ಪತ್ತಿಯಲ್ಲಿ. ಪರಿವರ್ತನೆಯ ವಿಧಾನದಲ್ಲಿ ಒಂದು ಮೂಲವಸ್ತುವಿನ ಪರಮಾನುಗಳು ಬೇರೆ ಮೂಲವಸ್ತುಗಳ ಪರಮಾನುಗಲಾಗಿ ಬದಲಾಯಿಸಲ್ಪಡುವುದು. ಒಂದು ಮೂಲವಸ್ತುವಿನ ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತಿಸಲ್ಪಡುವುದು. ಇದು ಐನ್ ಸ್ಟೀನ್ ಅವರ ಸಮೀಕರಣ ( E=mc² )ಕ್ಕೆ ಅನುಗುಣವಾಗಿರುವುದು.





ಧನ್ಯವಾದಗಳು