ಅರಣ್ಯದ ಉಪಯೋಗಗಳು
ಅರಣ್ಯ ಎಂದರೆ ನಮ್ಮ ಸುತ್ತಮುತ್ತಲಿನ ಮರಗಳು, ಬಳ್ಳಿಗಳು, ಗಿಡಗಳು, ಹಳ್ಳಗಳು, ಬೆಟ್ಟ ಗುಡ್ಡಗಳು, ಪ್ರಾಣಿಗಳು ,ಮತ್ತು ಪಕ್ಷಿಗಳನ್ನು ಒಳಗೊಂಡ ಒಂದು ಭೂ ಪ್ರದೇಶವನ್ನು ಅರಣ್ಯ ಎಂದು ಕರೆಯುತ್ತೇವೆ. ಅರಣ್ಯಗಳನ್ನು ಎರಡು ವಿಧವಾಗು ವಿಂಗಡಿಸಬಹುದು; ಒಂದು ಸಾಧಾರಣ ಅರಣ್ಯ ಪ್ರದೇಶ, ಇದರಲ್ಲಿ ಅಷ್ಟೇನು ಮರಗಳು, ಪೊದೆಗಳು ಮತ್ತು ಹಳ್ಳಗಳು ಇರುವುದಿಲ್ಲ. ಎರಡೇನೆಯದು ದಟ್ಟ ಅರಣ್ಯ ಪ್ರದೇಶ, ಈ ಕಾಡಲ್ಲಿ ದಪ್ಪ ದಪ್ಪ ಮರಗಳು, ಗಿಡಗಳು, ಬಳ್ಳಿಗಳು, ದೊಡ್ಡ ಹಳ್ಳಗಳು ಮತ್ತು ತಂಪಾದ ಪ್ರದೇಶವಾಗಿರುತ್ತದೆ, ಈ ತರದ ದಟ್ಟ ಅರಣ್ಯ ಪ್ರದೇಶಗಳಲ್ಲಿಯೇ ಹುಲಿ, ಚಿರತೆ, ಕರಡಿ, ಹೆಬ್ಬಾವು, ಮುಂತಾದ.. ಅಪಾಯಕಾರಿ ಪ್ರಾಣಿಗಳ ವಾಸಸ್ಥಳವಾಗಿರುತ್ತದೆ. “ಜೇನು ನೊಣಗಳು ನಾಶವಾದಲ್ಲಿ ಅರಣ್ಯಗಳು ಸಹ ನಾಶವಾಗುತ್ತದೆ” ಎಂಬುವುದು ಒಂದು ಸತ್ಯವಾಗಿದೆ.
ಅರಣ್ಯಗಳ ಉಪಯೋಗಗಳು :
1. ಅರಣ್ಯದಿಂದ ವಾಯುಮಾಲನ್ಯವನ್ನು ನಿಯಂತ್ರಿಸುತ್ತದೆ.
2.
ಶುದ್ಧವಾದ ಆಕ್ಸಿಜನ್ ಸಿಗುತ್ತದೆ ( ಶುದ್ದವಾದ ಗಾಳಿ ನೀಡುತ್ತದೆ )
3.
ಅರಣ್ಯಗಳಲ್ಲಿ ಕೆಲವು ಬದಲಾವಣೆಯ ಕಾರಣದಿಂದ ಅತಿಯುತ್ತಮ ಮಳೆಯಾಗುತ್ತದೆ.
4.
ಹಳ್ಳಗಳ ಉಗಮ ಸ್ಥಲವಾಗಿರುತ್ತದೆ, ಎಲ್ಲ ಹಳ್ಳಗಳು ಸೇರುವುದರಿಂದ ನದಿಗಳು ಉಗಮವಾಗುತ್ತದೆ.
5.
ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಟ್ಟಿರುತ್ತದೆ.
6.
ಅನೇಕ ಕೀಟಗಳಿಗೆ, ಪ್ರಾಣಿಗಳಿಗೆ, ಹುಳಗಳ ತವರಾಗಿರುತ್ತದೆ.
7.
ನೆರಳು ಸಿಗುತ್ತದೆ.
8.
ಮಣ್ಣಿನ ಸವೆತವನ್ನು ತಡೆಯುತ್ತದೆ.
9.
ಅನೇಕ ಭೂಡಕಟ್ಟು ಜನರಿಗೆ ಜೀವನ ಆಧಾರವಾಗಿದೆ. ( ಬಿದುರುನಲ್ಲಿ ಬುಟ್ಟಿ ಹೆಣೆಯುವುದು; ಅದನ್ನು ಮಾರುವುದು, ಜೀನು ಮಾರುವುದು. ಇದು ಭೂಡಕಟ್ಟೂ ಜನರ ಮೂಲ ಕಸಬು
ಆಗಿರುವುದರಿಂದ ಇವರ ಮೇಲೆ ಅರಣ್ಯ ಇಲಾಖೆ ಯಾವದೇ ತರಹದ ಕ್ರಮ ಕೈಕೊಳ್ಳುವುದುಕೆ ಅಧಿಕಾರ ಇರುವುದಿಲ್ಲ)
10.
ಶುದ್ದವಾದ ಕುಡಿಯುವ ನೀರು ಪೂರೈಕೆ
ಮಾಡುತ್ತದೆ.
ಅರಣ್ಯ ನಾಶಕ್ಕೆ ಕಾರಣಗಳು
1.
ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಹೆಚ್ಚಾಗುವುದರಿಂದ.
2.
ವಾಯುಮಾಲನ್ಯ, ಮಣ್ಣಿನ ಮಾಲಿನ್ಯಗಳಿಂದ. ( ಉದಾಹಣೆಗೆ :- ಮೋಟಾರ್ ವಾಹನಗಳಿಂದ ಹೊರಬರುವ ಹೋಗೆಗಳು ಮತ್ತು ಅತಿಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುವುದು, ಅದನ್ನು ಅರಣ್ಯದಲ್ಲಿ ಬೀಸುವುದು. )
3.
ಕಾಡಿಗೆ ಬೆಂಕಿ ಹಾಕುವುದು ( ಅನೇಕ ದನ ಕರು ಮೆಯಿಸುವರು ಬೇಸಿಗೆ ಸಮಯದಲ್ಲಿ ಮುಂದಿನ ಮಳೆಗಾಲಕ್ಕೆ ಒಳ್ಳೆಯ ಹುಲ್ಲು ಬೆಳೆಯಬೇಕು ಎಂಬ ಕಾರಣಕ್ಕೆ ಬೆಂಕಿ ಹಾಕುವುದು )
4.
ಅರಣ್ಯ ಪ್ರದೇಶಗಳ ಪಕ್ಕದಲ್ಲಿ ಕಾರ್ಖಾನೆ ಸ್ಥಾಪನೆ ಮಾಡುವುದು.
5.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಳಕೆಗೆ ಮರಗಳನ್ನು ಕತ್ತರಿಸುವುದು. ( ಚಪ್ಪರ ಹಾಕಲು, ಗುಡಿಸಲು ನಿರ್ಮಾಣಕ್ಕೆ, ಆಡು, ದನಕರುಗಳಿಗೆ ಮೇವು ಗಳನ್ನು ಕತ್ತರಿಸುವುದು. )
6.
ಒತ್ತುವರಿ ಮಾಡಿಕೊಳ್ಳುವುದು ಅಥವಾ ವಿಸ್ತಾರ ಮಾಡುವುದು.
7.
ಕೆಲವೊಂದು ಅಳಿವಿನಂಚಿನಲ್ಲಿ ಇರುವ ಪ್ರಾಣಿಗಳನ್ನು ಬೇಟೆಯಾಡುವುದು.
8.
ಗಣಿಗಾರಿಕೆ ಮಾಡುವುದರಿಂದ ಅರಣ್ಯ ನಾಶವಾಗುತ್ತದೆ.
9.
ಬೆಲೆಬಾಳುವ ಮರಗಳು( ಗಂಧ ಮರ, ತೇಗು, ಬೀಡೆ, ರಕ್ತಚಂಧನ, ಮುಂತಾದ, ಗೆಣಸುಗಳನ್ನು( ಮಾಗಳಿ ) ಮುಂತಾದ ವಸ್ತುಗಳ ಕಳ್ಳಸಾಗಾಣಿಕೆ.
10.
ಅತಿಯಾದ ಪ್ರಾಣಿಗಳ ಬೇಟೆ.
11.
ಅಪಾಯಕಾರಿ ಗಿಡಗಳ plantation. ( ಬಳ್ಳಾರಿಜಾಳಿ – ತೇವಾಂಶವನ್ನು ಬೇಗನೆ ಹೀರಿಕೊಳ್ಳುವ ಶಕ್ತಿ ಹೊಂದಿದೆ )
ಈ ತರಹದ ಪರಿಸರದಲ್ಲಿ ಮಾಡುವ ಅನೇಕ ತಪ್ಪು ಕೆಲಸದಿಂದ ಅರಣ್ಯಕ್ಕೆ ಆಗುವ ಅನಾವುತಗಳ ಬಗ್ಗೆ ಗೊತ್ತಿದ್ದರ. ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.
ಅರಣ್ಯ ನಾಶ ನಿಯಂತ್ರಿಸುವ ವಿಧಾನಗಳು
1.
ಮರವಾಗುವ ಗಿಡಗಳನ್ನು ನೆಡುವುದು , ಅದನ್ನು ಸಂರಕ್ಷಿಸುವುದು. ( ಮರಗಳನ್ನು ನೆಡುವುದು )
2.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಅಥವಾ ಮಾಡದಿರುವುದು.
3.
ಜನರಲ್ಲಿ ಜಾಗೃತಿ ಮೂಡಿಸುವುದು.
4.
ಕಳ್ಳ ಬೇಟೆ ಮತ್ತು ಕಳ್ಳ ಸಾಗಾಣಿಕೆ ಮಾಡುವವರ ಮೇಲೆ ಕಠಿಣ ಕ್ರಮ
ಕೈಗೊಳ್ಳುವುದು.
5.
ಅನವಶ್ಯಕವಾಗಿ
ಧನ್ಯವಾದಗಳು