Type Here to Get Search Results !

ಪಂಚವಾರ್ಷಿಕ ಯೋಜನೆಗಳು | Five year Plans in kannada

 ಪಂಚವಾರ್ಷಿಕ ಯೋಜನೆಗಳು  


ಏಪ್ರಿಲ್ 1 1951 ರಲ್ಲಿ ಮೊಟ್ಟಮೊದಲಿಗೆ ಭಾರತದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದರು. ಇಲ್ಲಿಯವರೆಗೆ ಒಟ್ಟು 11 ಪಂಚವಾರ್ಷಿಕ ಯೋಜನೆಗಳು ಮುಕ್ತಾಯಕೊಂಡಿದೆ. ಸದ್ಯದಲ್ಲಿ ಏಪ್ರಿಲ್ 1 2012ರಲ್ಲಿ 12ನೇ ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಿದ್ದು ಅದು 2017 ಮಾರ್ಚ್ 31ರಂದು ಮುಕ್ತಾಯ ಕೊಂಡಿದೆ. ಪ್ರತಿ ಯೋಜನೆಯ ಅವಧಿಯಲ್ಲೂ ಅದರ ಹಿಂದಿನ ಯೋಜನೆಗಿಂತ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ.  


ಭಾರತದಲ್ಲಿ ಯೋಜನೆಗಳು  

ಯೋಜನೆಗಳು  

ಯೋಜನಾ ಅವಧಿ  

ಸಾರ್ವಜನಿಕ ವಲಯದ ವೆಚ್ಚ ( ಕೋಟಿ ರೂ ಗಳಲ್ಲಿ ) 

1ನೇ ಪಂಚವಾರ್ಷಿಕ ಯೋಜನೆ  

1951 ರಿಂದ 1956  

1,960 

ಎರಡನೇಯ ಪಂಚವಾರ್ಷಿಕ ಯೋಜನೆ  

1956 ರಿಂದ 1961 

4,672 

ಮೂರನೇ ಪಂಚವಾರ್ಷಿಕ ಯೋಜನೆ  

1961 ರಿಂದ 1966 

8,577 

ವಾರ್ಷಿಕ ಯೋಜನೆ  

1966 ರಿಂದ 1969 

6,251 

4ನೇ ಪಂಚವಾರ್ಷಿಕ ಯೋಜನೆ  

1969 ರಿಂದ 1974 

6,160 

5ನೇ ಪಂಚವಾರ್ಷಿಕ ಯೋಜನೆ  

1974 ರಿಂದ 1978 

42,300 

6ನೇ ಪಂಚವಾರ್ಷಿಕ ಯೋಜನೆ  

1980 ರಿಂದ 1985 

1,09,953 

7ನೇ ಪಂಚವಾರ್ಷಿಕ ಯೋಜನೆ  

1985 ರಿಂದ 1990 

2,22,169 

ವಾರ್ಷಿಕ ಯೋಜನೆ  

1990 ರಿಂದ 1992 

------- 

8ನೇ ಪಂಚವಾರ್ಷಿಕ ಯೋಜನೆ  

1992 ರಿಂದ 1997 

4,34,100 

9ನೇ ಪಂಚವಾರ್ಷಿಕ ಯೋಜನೆ  

1997 ರಿಂದ 2002 

9,41,041 

10ನೇ ಪಂಚವಾರ್ಷಿಕ ಯೋಜನೆ  

2002 ರಿಂದ 2007 

15,25,639 

11ನೇ ಪಂಚವಾರ್ಷಿಕ ಯೋಜನೆ  

2007 ರಿಂದ 2012 

36,44,718 

12ನೇ ಪಂಚವಾರ್ಷಿಕ ಯೋಜನೆ  

2012 ರಿಂದ 2017 

76,69,807 

       

ಸರ್ಕಾರವು ಕೆಲವು ನಿರ್ಧಿಷ್ಟ ಧ್ಯೇಯೋದ್ದೇಶಗಳೊಂದಿದೆ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಉದ್ದೇಶಗಳು ಯೋಜನೆಗಳ ಮಾರ್ಗಸೂಚಿಗಳಾಗಿವೆ. ಆಗ ಭಾರತದಲ್ಲಿ ಮೂಲ ಸಮಸೆ ಬಡತನ ವಾಗಿತ್ತು. ಅದನ್ನು ಆದಷ್ಟು ಗರಿಷ್ಠ ಮಟ್ಟಕ್ಕೆ ನಿರ್ಮೂಲನೆಗಾಗಿ ಪಂಚವಾರ್ಷಿಕ ಯೋಜನೆಗಳು ಜಾರಿಗೆ ತಂದರು.  

ಈ ಉದ್ದೇಶದ ಸಾಧನೆಗೆ ಪೂರಕವಾಗಿ ಕೆಲವು ಉದ್ದೇಶಗಳನ್ನು ಸಾಧಿಸಬೇಕಾಗಿತ್ತು. ಅವುಗಳೆಂದರೆ :-  

1. ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು.  

2. ಆರ್ಥಿಕ ಸ್ಥಿತಿಯನ್ನು ಕಾಯ್ದುಕೊಳ್ಳುವುದು.  

3. ಉದ್ಯೋಗವಕಾಶಗಳನ್ನು ಹೆಚ್ಚಿಸುವುದು.  

4. ಆರ್ಥಿಕ ಸಮಾನತೆಯನ್ನು ಕಡಿಮೆ ಮಾಡುವುದು.  

5. ಅರ್ಥವ್ಯವಸ್ಥೆಯನ್ನು ಆಧುನೀಕರಣ ಕಲಿಸುವುದು… ಇತ್ಯಾದಿ. 

 


1) ಪಂಚವಾರ್ಷಿಕ ಯೋಜನೆಯ ಸಾಧನೆಗಳು. 

ಪಂಚವಾರ್ಷಿಕ ಯೋಜನೆ ಪ್ರಾರಂಭವಾಗಿ ಒಟ್ಟು 72ವರ್ಷ ಆಗಿದೆ. ಹನ್ನೆರಡು ಯೋಜನೆಗಳು ಮುಗಿದಿದೆ. ಈ ಅವಧಿಯಲ್ಲಿ ಯಾವ ಮಟ್ಟದ ಸಾಧನೆಯಾಗಿದೆ? ಅದರ ವಿಫಲತೆಗಳೇನು? ಮುಂದೆ ವಿವರಿಸಿದ್ದೇನೆ. 

1. ರಾಷ್ಟ್ರೀಯ ಆದಾಯ ಹೆಚ್ಚಳ –  

ಯೋಜನೆಯ ಪ್ರಾರಂಭ ದ 20ವರ್ಷಗಳ ಅವಧಿಯಲ್ಲಿ ತಮ್ಮ ರಾಷ್ಟ್ರೀಯ ಆದಾಯವು ಸರಾಸರಿ ವಾರ್ಷಿಕ ಶೇ 3.5ರ ದರದಲ್ಲಿ ಹೆಚ್ಚಲಾವಾದರೆ, ನಂತರ 20ವರ್ಷಗಳ ಅವಧಿಯಲ್ಲಿ ಅದು ಶೇ 5 ದರದಲ್ಲಿ ಹೆಚ್ಚಲಾವಾಗಿತ್ತು. 1991 ರಿಂದ 2000ರ ಅವಧಿಯಲ್ಲಿ ಸರಾಸರಿ ವಾರ್ಷಿಕ ಶೇ 5.6 ದರದಲ್ಲಿ ಹೆಚ್ಚಿದರೆ, 2001ರಿಂದ 2010ರ ಅವಧಿಗೆ ಶೇ 7.3 ರ ದರದಲ್ಲಿ ಹೆಚ್ಚಳವಾಗಿದೆ. ಅಂದರೆ ವರ್ಷಗಳು ಕಳೆದಂತೆ ರಾಷ್ಟ್ರೀಯ ಆದಾಯದ ಬೆಳವಣಿಗೆಯ ವೇಗ ಕ್ರಮೇಣ ಹೆಚ್ಚಿದೆ. ಅದಕ್ಕೆ ತಕ್ಕಂತೆ ತಲಾ ಆದಾಯದ ಬೆಳವಣಿಗೆಯೂ ಹೆಚ್ಚಿದೆ.  


2. ಕೃಷಿ ಅಥವಾ ಆಹಾರ ಧಾನ್ಯ –  

ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ. ಯೋಜನೆಗಳ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು ಸುಮಾರು 5ಪಟ್ಟು ಹೆಚ್ಚಿಸಿತ್ತು.  2011-2012 ರಲ್ಲಿ 257.4 ದಶಲಕ್ಷ  ಟನ್ನುಗಳಿಗೆ  ಹೆಚ್ಚಿದೆ.  

ಪಂಚವಾರ್ಷಿಕ ಯೋಜನೆಗಳು


3. ಕೈಗಾರಿಕೆ ಮತ್ತು ಸೇವಾ ವಲಯ –  

ಕೈಗಾರಿಕೆ ಮತ್ತು ಸೇವಾ ವಲಯದ ವಿಸ್ತರಣೆಯಿಂದ ಉದ್ಯೋಗವಕಾಶ ಹೆಚ್ಚಿದೆ. ಬಡತನ ನಿರ್ಮೂಲನೆ ಹಾಗೂ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಬಡಜನರಿಗೆ ಉದ್ಯೋಗವಕಾಶ ಒದಗಿಸಿಕೊಡಲು ಪ್ರಯತ್ನಿಸಲಾಗಿದೆ.  


4. ವಿಜ್ಞಾನ ಮತ್ತು ತಂತ್ರಜ್ಞಾನ –  

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಕಂಡುಬಂದಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ನಮ್ಮ ತಂತ್ರಜ್ಞಾನ ಸೇವೆಯನ್ನು ಹೋರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದ ರಫ್ತು ಕ್ಷೇತ್ರದಲ್ಲಿ ತಯಾರಿಕೆ ಮತ್ತು ಇಂಜಿನಿರಿಂಗ್ ಸರಕುಗಳ ರಫ್ತು ಪ್ರಮಾಣ ಅಗಾಧವಾಗಿ ಹೆಚ್ಚಿದೆ.  


5. ಭಾರತದ ಅರ್ಥವಯವಸ್ಥೆ –  

ಭಾರತದ ಅರ್ಥವಯವಸ್ಥೆಯಲ್ಲಿ ಹೆಚ್ಚಿತಿರುವ ಅಸಮಾನತೆಯನ್ನು ಕಡಿಮೆ ಮಾಡಲು, ಅಭಿವೃದ್ದಿ ಪ್ರಕ್ರಿಯೆಯಲ್ಲಿ ಎಲ್ಲ ವರ್ಗದ ಜನರನ್ನು ಸೇರಿಸಿಕೊಳ್ಳುವ ಸಲುವಾಗಿ, ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ “ ಎಲ್ಲರನ್ನು ಒಳಗೊಂಡು ಬೆಳವಣಿಗೆಗೆ “ ( inclusive growth ) ಪ್ರಾಮುಖ್ಯತೆ ನೀಡಲಾಗಿದೆ.  


6. ಇತರೆ ಅಭಿವೃದ್ಧಿಗಳು  

ಅಭಿವೃದ್ದಿಯ ಇತರೆ ಮಾನದಂಡಗಳನ್ನು ಗಮನಿಸಿದಾಗ ಬಹಳಷ್ಟು ಸುಧಾರಣೆಗಳು ಕಂಡುಬರುತ್ತಿದೆ. ಜನರ ನಿರೀಕ್ಷಿತ ಜೀವಿತಾವಧಿ ಮತ್ತು ಸಾಕ್ಷರತಾ ಪ್ರಮಾಣ ಹೆಚ್ಚುತ್ತಿದೆ. ಶಿಶು ಮರಣ ಮತ್ತು ತಾಯಿಂದಿರ ಮರಣದ ದರದಲ್ಲಿ ಕಡಿಮೆಯಾಗುತ್ತಿದೆ. ಜನನ ಮತ್ತು ಮರಣ ದರದಲ್ಲಿಯು ಸಹ ಕಡಿಮೆಯಾಗುತ್ತಿದೆ. ಇದರಿಂದ ಜನಸಂಖ್ಯೆ ಬೆಳವಣಿಗೆ ದರದಲ್ಲಿಯೂ ಕಡಿಮೆಯಾಗಿದೆ.  


2) ಪಂಚವಾರ್ಷಿಕ ಯೋಜನೆಯ ವಿಫಲತೆಗಳು  

1. ಉದ್ಯೋಗವಕಾಶ ನೀಡಿದರು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಲ್ಲ 

2. ಬಡತನ ದರ ಇಳಿಕೆಯಾದರೂ ಸಂಪೂರ್ಣ ನಿರ್ಮೂಲನೆಯಾಗಿಲ್ಲ 


 


 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad