Type Here to Get Search Results !

ಬ್ಯಾಂಕುಗಳ ಬಗ್ಗೆ | About Bank in Kannada


ಬ್ಯಾಂಕ್ ಎಂದರೇನು?  

           ಬ್ಯಾಂಕಿಂಗ್ ಸಂಸ್ಥೆಯು ಹಣಕಾಸಿನ ವ್ಯವಹಾರ ನಡೆಸುವ ಅಂದರೆ ಹಣವನ್ನು ತಮ್ಮಲ್ಲಿ ಇಡುಗಂಟಾಗಿಟ್ಟುಕೊಂಡದನ್ನು ಸಾಲಕೊಡುವ ಸಂಸ್ಥೆ ಎಂದು ಕರೆಯಬಹುದು. ಬ್ಯಾಂಕ್ ಎಂಬ ಪದವು ಇಟಾಲಿಯನ್ ನ “ಬ್ಯಾಂಕೊ”( Banko) ಅಥವಾ ಫ್ರಂಚಿನ “ಬ್ಯಾಂಕ್” ( banque ) ಎಂಬ ಶಬ್ಧಗಳಿಂದ ಬಂದಿದೆ. ಇವುಗಳ ಅರ್ಥವು “ ಬೆಂಚು “ ಅಥವಾ ಹಣವನ್ನು ವಿನಿಮಯ ಮಾಡುವ ಟೇಬಲ್ ಎಂದು ಅರ್ಥ.  

ಬ್ಯಾಂಕ್ ಗಳು ಸುಮಾರು 200ವರ್ಷಗಳ ಹಿಂದೆಯೇ ಅಭಿವೃದ್ದಿ ಹೊಂದಿದವು. ಆದರೆ ಬ್ಯಾಂಕುಗಳ ಸ್ವರೂಪವು ಕಾಲಕ್ಕನುಗುಣವಾಗಿ ಬದಲಾವಣೆ ಹೊಂದುತ ಬಂದಿದೆ.  


ಬ್ಯಾಂಕುಗಳ ಕಾರ್ಯಗಳು  

1. ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಗಳನ್ನು ಸ್ವೀಕರಿಸುವುದು.  

2. ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾಲ ನೀಡುವುದು.  

3. ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಗಿಸುವುದು.  

4. ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲಿ ಮಾಡುವುದು.  

5. ಹುಂಡಿಗಳನ್ನು ಸೋಡಿ ಮಾಡುವುದು.  

6. ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು.  

7. ವಿದೇಶಿ ವಿನಿಮಯದ ವ್ಯವಹಾರವನ್ನು ನಿರ್ವಹಿಸುವುದು.  

8. ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ಧಿಗಳಲ್ಲಿ ಭದ್ರವಾಗಿ ಇಟ್ಟಿಕೊಳ್ಳುವುದು. 

9. ಸಾಲಪತ್ರಗಳನ್ನು ಮತ್ತು ಜವಾಬ್ಧಾರಿಯನ್ನು ನೀಡುವುದು.   

10. ಸರ್ಕಾರದ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುವುದು.  

ಬ್ಯಾಂಕುಗಳ ಬಗ್ಗೆ ತಿಳಿಯ ಬೇಕಾದ ಮಾಹಿತಿ


ಬ್ಯಾಂಕುಗಳ ಗುಣಲಕ್ಷಣಗಳು  

1. ಹಣದ ವಹಿವಾಟು :-  

ಬ್ಯಾಂಕುಗಳ ಹಣಕಾಸಿನ ಸಂಸ್ಥೆಯಾಗಿದ್ದು , ಸಾರ್ವಜನಿಕರ ಹಣದ ವಹಿವಾಟನ್ನುಮಾಡುತ್ತದೆ.  

2. ಠೇವಣಿಗಳನ್ನು ಅಂಗಿಕರಿಸುತ್ತದೆ :-  

ಬ್ಯಾಂಕುಗಳ ಸಾರ್ವಜನಿಕರಿಂದ ಠೇವಣಿ ಗಳನ್ನು ಸ್ವೀಕರಿಸುತ್ತದೆ. ಆ ಠೇವಣಿಯನ್ನು ಠೇವಣಿ ದಾರರು ಬೇಡಿಕೆ ಇಟ್ಟಾಗ ಅಥವಾ ಒಂದು ನಿರ್ದಿಷ್ಟ ಅವಧಿ ಮುಗಿದ ಮೇಲೆ ಹಿಂದಿರುಗಿಸಬೇಕಾಗುತ್ತದೆ. ಈ ಠೇವಣಿಗಳಿಗೆ ಬ್ಯಾಂಕುಗಳು ಭದ್ರತೆ ಒದಗಿಸುತ್ತದೆ. ಬ್ಯಾಂಕು ಗ್ರಾಹಕರ ಠೇವಣಿಗಳಿಗೆ ಮೇಲ್ವಿಚಾರಕನಂತೆ ವರ್ತಿಸುತ್ತದೆ.  

3. ಸಾಲಗಳನ್ನು ಕೊಡುವುದು :-  

ಬ್ಯಾಂಕು ಕೈಗಾರಿಕಾ ಕ್ಷೇತ್ರ, ಕೃಷಿ ಕ್ಷೇತ್ರ, ಶಿಕ್ಷಣ, ಗೃಹ ನಿರ್ಮಾಣ, ಮೊದಲಾದ ಉದ್ದೇಶಗಳಿಗಾಗಿ ಹಣವನ್ನು ಸಾಲದ ರೂಪದಲ್ಲಿ ನೀಡುವುದು.  

4. ಪಾವತಿ ಮತ್ತು ಹಿಂದಕ್ಕೆ ತೆಗೆದುಕೊಳ್ಳುವುದು :-  

ಬ್ಯಾಂಕು ಸುಲಭ ರೀತಿಯಲ್ಲಿ ಠೇವಣಿದಾರರಿಗೆ ಚೆಕ್ಕು ಅಥವಾ ಹುಂಡಿಗಳ ಮೂಲಕ ಹಣವನ್ನು ಪಾವತಿಮಾಡುತ್ತದೆ ಅಥವಾ ಠೇವಣಿಗಳನ್ನು ಹಿಂದೆಕ್ಕೆ ಪಡೆಯಲು ಅನುವು ಮಾಡಿಕೊಡುತ್ತದೆ.  

5. ಏಜೆಂಟ್ ನಿಯೋಜನೆ ಮತ್ತು ಉಪಯುಕ್ತ ಸೇವೆಗಳು :-  

ಬ್ಯಾಂಕು ತನ್ನ ಗ್ರಾಹಕರಿಗೆ ಏಜೆಂಟರಂತೆ ಅನೇಕ ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ.  

6. ಲಾಭ ಮತ್ತು ಸೇವಾ ಭಾವನೆ:-  

ಬ್ಯಾಂಕು ಸೇವೆಯ ಮನೋಭಾವ ಹೊಂದಿದ್ದ ಲಾಭ ಪಡೆಯುವ ಒಂದು ಸಂಸ್ಥೆಯಾಗಿದೆ.  

7. ನಿರಂತರ ವಿಸ್ತರಿಸುತ್ತಾ ಹೋಗುವ ಕಾರ್ಯಗಳು :-  

ಬ್ಯಾಂಕುಗಳು ತಮ್ಮ ಕಾರ್ಯಗಳನ್ನು ನಿರಂತರವಾಗಿ ಬೇರೆ ಬೇರೆ ದಿಕ್ಕುಗಳತ್ತ ಸೇವೆಗಳನ್ನು ಮತ್ತು ಚಟುವಟಿಕೆಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ.  

8. ಸಂಬಂಧ ಕಲ್ಪಿಸುವ ಕೊಂಡಿ :-  

ಬ್ಯಾಂಕುಗಳ ಠೇವಣಿದಾರರು ಮತ್ತು ಸಾಲ ಪಡೆಯುವವರ ಮಧ್ಯೆ ಸಂಬಂಧ ಕಲ್ಪಿಸು ಒಂದು ಕೊಂಡಿಯಂತೆ ತಮ್ಮ ಕಾರ್ಯಗಳನ್ನು ನಡೆಸುತ್ತದೆ. ಗ್ರಾಹಕರ ಉಳಿಕೆ ಹಣವನ್ನು ಠೇವಣಿಗಳ ಮೂಲಕ ಸಂಗ್ರಹಿಸಿ ಇದನ್ನು ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಸಾಲದ ರೂಪದಲ್ಲಿ ನೀಡುವುದು.  

9. ಬ್ಯಾಂಕಿಂಗ್ ವ್ಯವಹಾರ :-  

ಬ್ಯಾಂಕಿನ ಮುಖ್ಯ ಚಟುವಟಿಕೆ ಹಣಕಾಸಿನಿಂದ ಕೂಡಿದ ವ್ಯವಹರವಾಗಿದ್ದು ಇತರೆ ವ್ಯವಹಾರಗಳಿಗೆ ಅಧಿನವಾಗಿರುವುದಿಲ್ಲ.  

10. ಹೆಸರಿನ ಗುರುತು :-  

ಬ್ಯಾಂಕು ಯಾವಾಗಲೂ ತನ್ನ ಹೆಸರಿನಲ್ಲಿ ಬ್ಯಾಂಕು ಎಂಬ ಪದವನ್ನು ಸೇರಿಸಬೇಕು.  

ಉದಾಹಣೆಗೆ:- State Bank of India, Axis Bank, Karnataka Bank, Canara Bank,  


 


ಬ್ಯಾಂಕರನಿಗೂ ಗ್ರಾಹಕರಿಗೂ ಇರುವ ಸಂಬಂಧಗಳು 

ಬ್ಯಾಂಕರನಿಗೂ ಗ್ರಾಹಕರನಿಗೂ ಇರುವ ಸಂಬಂಧಗಳನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು 

1. ಸಾಮಾನ್ಯ ಸಂಬಂಧಗಳು 

2. ವಿಶೇಷ ಸಂಬಂಧಗಳು 


ಸಾಮಾನ್ಯ ಸಂಬಂಧಗಳು 

1. ಪ್ರಾಥಮಿಕ ಸಂಬಂಧಗಳು. ( ಸಾಲ ಪಡೆದುಕೊಂಡವರು ಮತ್ತು ಸಾಲ ಕೊಡುವವರ ಸಂಬಂಧಗಳು )  

2. ಸಹಾಯಕ ಅಥವಾ ಉಪಕಾರಕ ಸಂಬಂಧಗಳು. ( ಧರ್ಮದರ್ಶಿ ಅಥವಾ ನಿಕ್ಷೇಪಧಾರಿ ಮತ್ತು ಪ್ರಯೋಜನಕಾರಿ ನಡುವಿನ ಸಂಬಂಧ) 

3. ಕಾರಬಾರಿ ಅಥವಾ ನಿಯೋಗಿ ಮತ್ತು ಮುಖ್ಯಸ್ಥನ ಸಂಬಂಧ. 


 ವಿಶೇಷ ಸಂಬಂಧಗಳು  

1. ಚೆಕ್ಕುಗಳನ್ನು ಮನ್ನಣೆ ಮಾಡುವುದು.  

2. ಗ್ರಾಹಕನ ಲೆಕ್ಕ ಅಥವಾ ದಾಖಲುಗಳ ಗೌಪ್ಯತೆ ಕಾಪಾಡುವುದು.  


ಬ್ಯಾಂಕುಗಳು ಸಲ್ಲಿಸುವ ಸೇವೆಗಳು  

1. ಜಮಾ ಕಾರ್ಡುಗಳನ್ನು ನೀಡುವುದು. ( Credit Card ) 

2. ಖಾಸಗಿ ಸಾಲಗಳು.  

3. ಮನೆಕಟ್ಟಲು,  ವಾಹನ ಖರೀದಿಸಲು ಸಾಲ ಕೊಡುವುದು. 

4. ಪರಸ್ಪರ ಹಣವನ್ನು ಅಥವಾ ನಿಧಿಗಳನ್ನು ನಿರ್ವಹಿಸುವುದು.  

5. ವ್ಯಾಪಾರಕ್ಕೆ ಬೇಕಾದ ಸಾಲಗಳು.  

6. ಸಹಿಗಳಿಗೆ ಜವಾಬ್ದಾರಿ ಹಾಕುವುದು.  

7. ಡೆಬಿಟ್ ಕಾರ್ಡ್.  

8. ಭರವಸೆ ಸೇವೆಗಳು.  


ಬ್ಯಾಂಕುಗಳ ವಿಧಗಳು  

ಬ್ಯಾಂಕುಗಳಲ್ಲಿ ಹಲವಾರು ವಿಧಗಳಿವೆ. ಪ್ರತಿಯೊಂದು ವಿಧದ ಬ್ಯಾಂಕು ತಮ್ಮ ಒಂದು ನಿರ್ಧಿಷ್ಟ ವಿಧದ ವ್ಯವಹಾರದಲ್ಲಿ ಪರಿಣಿತಿ ಪಡೆದಿರುತ್ತದೆ.  

ಕೆಲವು ಮುಖ್ಯ ಬ್ಯಾಂಕುಗಳ ವಿಧಗಳು :-  

1. ಕೇಂದ್ರ ಬ್ಯಾಂಕ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್  

2. ವಾಣಿಜ್ಯ ಬ್ಯಾಂಕುಗಳು 

3. ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು.  

 4. ಭೂ ಅಭಿವೃದ್ಧಿ ಅಥವಾ ವ್ಯವಸಾಯ ಬ್ಯಾಂಕುಗಳು. 

5. ಸ್ಥಳೀಯ ಬ್ಯಾಂಕುಗಳು. 

6. ಸಹಕಾರಿ ಬ್ಯಾಂಕುಗಳು  


ಬ್ಯಾಂಕುಗಳಲ್ಲಿ ತೆಗೆಯಬಹುದಾದ ವಿವಿಧ ಖಾತೆಗಳು  

1. ಉಳಿತಾಯ ಖಾತೆ ( Savings Account ) 

2. ಚಾಲ್ತಿ ಖಾತೆ ( Current Account ) 

3. ಆವರ್ತ ಠೇವಣಿ ಖಾತೆ ( Recurring Deposit Account ) 

4. ನಿಶ್ಟಿತ ಠೇವಣಿ ಖಾತೆ ( Fixed Deposit Account )  

5. ಬ್ಯಾಂಕು ಖಾತೆ ತೆಗೆಯುವುದರಿಂದ ಆಗುವ ಅನುಕೂಲಗಳು  

6. ಬ್ಯಾಂಕು ಹಣದ ಭದ್ರತೆಯನ್ನು ಕಾಪಾಡುತ್ತದೆ.  

7. ಹಣದ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ.  

8. ಹಣವನ್ನು ವಸೂಲು ಮಾಡಲು ಸಹಾಯ ಮಾಡುತ್ತದೆ. 

9. ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಾಧ್ಯಮಾಡಿ ಕೊಳ್ಳುತ್ತದೆ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad