ತಮಿಳುನಾಡಿನ ಬುಡಕಟ್ಟು ಜನಾಂಗಗಳು
Tribles meaning ( Tribles enarenu )
ತಮಿಳುನಾಡಿನಲ್ಲಿ ರುವ ಬುಡಕಟ್ಟು ಜನಾಂಗಗಳ ಬಗ್ಗೆ ಮತ್ತು ಅವರ ವಿಶೇಷತೆಯ ಬಗ್ಗೆ ತಿಳಿಯೋಣ ಬನ್ನಿ. ಈ ಮಾಹಿತಿ ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದೆ.
ತಮಿಳುನಾಡಿನಲ್ಲಿರುವ ಬುಡಕಟ್ಟು ಜನರು ಮುಖ್ಯವಾಗಿ ನೀಲಗಿರಿ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ವಿಭಿನ್ನ ಬುಡಕಟ್ಟು ಜನಾಂಗಗಳನ್ನು ಹೊಂದ್ದಿದೆ ಅವುಗಳೆಂದರೆ; ಕುರುಬರು, ಇರುಳರು, ಕೋಡಾರ್, ತೋಡರ್ ಮತ್ತು ಬಡಗರು ಎಂಬ ದೊಡ್ಡ ಗುಂಪುಗಳು ಕಂಡುಬರುತ್ತದೆ. ಇವರು ಹೆಚ್ಚಾಗಿ ದನಗಾಹಿಗಳು ಕಾಡುನಾಯಕರು ಮತ್ತು ಪಾಳ್ಯಗಾರ ಇವರು ಇನ್ನಿತರ ಗುಂಪುಗಳು.
ಬುಡಕಟ್ಟು ಜನಾಂಗ 2011ರ ಜನಗಣತಿಯ ದತ್ತಾಂಶ
2011ರ ಜನಗಣತಿಯ ಪ್ರಕಾರ ತಮಿಳುನಾಡಿನಲ್ಲಿ ಕಂಡುಬರುವ ಬುಡಕಟ್ಟು ಜನಾಂಗಗಳ ಜನಸಂಖ್ಯೆಯು 7,94,697 ಬುಡಕಟ್ಟು ಜನರು ಇದ್ದಾರೆ ಎಂದು ಹೇಳಿದೆ. ಸುಮಾರು 38 ಬುಡಕಟ್ಟು ಮತ್ತು ಉಪ ಬುಡಕಟ್ಟು ಜನಾಂಗಗಳು ಕಂಡುಬರುತ್ತದೆ ಎಂದು ವಿವರಿಸಿದೆ. ಇವರು ಸಂಪೂರ್ಣವಾಗಿ ಅರಣ್ಯ ಪ್ರದೇಶವನ್ನು ಅವಲಂಬಿಸಿದಾರೆ ಮತ್ತು ಕೃಷಿಕರಾಗಿದ್ದಾರೆ.
ಬಡಗರು ( Badagas )
ಬಡಗ ಜನಾಂಗವು ಹಿಂದುಳಿದ ವರ್ಗಕ್ಕೆ ಸೇರಿದ್ದು ಬುಡಗಟ್ಟ ಜನಾಂಗ ಎಂದು ವರ್ಗಕರಿಸಲಾಗಿರುವುದಿಲ್ಲ. ಈ ಜನಾಂಗದ ಮೂಲ ಕಸಬೂ ಕೃಷಿಯಾಗಿರುತ್ತದೆ. ಇವರ ಕೃಷಿ ಬೆಳೆಗಳೆಂದರೆ ಆಲೂಗೆಡ್ಡೆ, ಚಹ, ಮುಂತಾದ ಬೆಳೆಗಳನ್ನು ಉತ್ಪತಿ ಮಾಡುತ್ತಾರೆ. ಈ ಜನಾಂಗವು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಉತ್ತರ ಪ್ರಸ್ಥಭೂಮಿ ಯಲ್ಲಿ ಕಂಡುಬರುತ್ತಾರೆ. ಬಡಗ ಜನಾಂಗವು ತಮಿಳುನಾಡಿನಲ್ಲಿನ ಬುಡಕಟ್ಟು ಜನಾಂಗದಲ್ಲಿ ದೊಡ್ಡ ಗುಂಪು.
ತೋಡ ( Toda )
ಈ ಜನಾಂಗವು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕಂಡುಬರುತ್ತಾರೆ ಮತ್ತು ಈ ಗುಂಪಿನ ಜನಾಂಗವು ಸುಮಾರು 1000 ಜನರು ಮಾತ್ರ ಇದಾರೆ ಎಂದು 2011ರ ಜನಗಣತಿಯಲ್ಲಿ ತಿಳಿದುಬಂದಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ತೋಡ ಬುಡಕಟ್ಟು ಜನಾಂಗದ ಪುರುಷರು ಎಮ್ಮೆ ಹಿಂಡುಗಳನ್ನು ಸಾಕುವರು ಮತ್ತು ಹಾಲು ಕರೆಯುವರು. ಇದು ಇವರ ಪ್ರಮುಖ ಕಸುಬಾಗಿದೆ. ಇವರ ನಿವಾಸ ಅಥವಾ ವಾಸಸ್ಥಳವನ್ನು ‘ ಮೂಂಡ್ಸ್ ‘ ಎಂದು ಕರೆಯುತ್ತಾರೆ. ತೋಡ ಜನಾಂಗವು ದೇವರನ್ನು ಪೂಜಿಸುವುದಿಲ್ಲ.
ಕೋಟಾ ( Kota )
ಈ ಜನಾಂಗವು ಮುಖ್ಯವಾಗಿ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ತಿರಚಿಕಡಿ ಎಂಬ ಪ್ರದೇಶದಲ್ಲಿ ಅಧಿಕ ಪ್ರಮಾಣದ ಜನ ಸಂಖ್ಯೆಯಲ್ಲಿ ಇದಾರೆ. ಇವರು ಮೂಲತಃ ವಾಧ್ಯಗಾರರಾಗಿದ್ದು ಬಾಡ ಎಂಬ ಅಂತ್ಯ ಕ್ರಿಯೆಯಲ್ಲಿ ನುಡಿಸುವ ವಿಶೇಷ ವಾಧ್ಯಗಾರರಾಗಿದ್ದರೆ. ಇವರು ತಮ್ಮ ವರ್ಣ ರಂಜಿತ ಜಾನಪದ ನೃತ್ಯಗಳಿಗೆ ಪ್ರಸಿದ್ಧರಾಗಿದ್ದಾರೆ. ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಪ್ರಸಿದ್ದರು. ತಮಿಳುನಾಡಿನ ಈ ಬುಡಕಟ್ಟು ಜನಾಂಗದವರು ಕಮ್ಮಾರರು, ಕುಂಬಾರರು ಮತ್ತು ಬಡಗಿಗಳು ಸಮಾಜದಲ್ಲಿ ತಮ್ಮನ್ನು ಪ್ರತ್ಯೇಕಿಸಿ ಕೊಳ್ಳಲು ಕೋಟಾ ಜನಾಂಗವು ದೊಡ್ಡ ಪ್ರಮಾಣದಲ್ಲಿ ಆಸಕ್ತಾರಗಿದ್ದಾರೆ.
ಇರುಳರು ( Irulas )
ಇವರು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮತ್ತು ಕರ್ನಾಟಕ ಚಾಮರಾಜ ನಗರ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಇವರ ಮೂಲ ಕಸುಬು ಜೇನುತುಪ್ಪ, ಕಾಡು ಹಣ್ಣುಗಳು ( ಬೆಟ್ಟದ ನೆಲ್ಲಿಕಾಯಿ, ಕೆಹುಳಿ ಹಣ್ಣು, ಎಲಾಚಿಹಣ್ಣು ಮುಂತಾದ. ), ಗಿಡಮೂಲಿಕೆಗಳು, ಬೇರುಗಳು ( ಗೆಣಸುಗಳನ್ನು ), ಅಂಟು ಮತ್ತು ಬಣ್ಣಗಳನ್ನು ಉತ್ಪಾದಿಸುತ್ತದೆ.
ಪಾಳೆಗಾರರು ( Pallyan )
ಆಹಾರ ಸಂಗ್ರದ ಸಮುದಾಯಕ್ಕೆ ಸೇರಿದವರು. ಈ ಜನಾಂಗವು ಪಳನಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡಿಗೊಂಡಿದ್ದರೆ. ಮದುರೈ, ತಂಜಾವೂರು, ಪುದುಕೊಟೆ, ಕೊಯಮುತ್ತುರ್ ಮತ್ತು ತಿರುನಲ್ವೇಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಇದಾರೆ.
ಧನ್ಯವಾದಗಳು