Type Here to Get Search Results !

ಮಾರುಕಟ್ಟೆ ಅರ್ಥ | ವಿಧಗಳು | ಉಪಯೋಗಗಳು ಮತ್ತು ಕೆಲಸಗಳು


ಮಾರುಕಟ್ಟೆಯ ಅರ್ಥ  


ಮಾರುಕಟ್ಟೆ ಎಂಬ ಪದವು ಲ್ಯಾಟಿನ್ ಭಾಷೆಯ “ ಮಾರ್ಕಟಸ್” ( Mercatuse ) ಎಂಬ ಪದದಿಂದ ಬಂದಿದೆ. ಇದರ ಅರ್ಥ ವ್ಯಾಪಾರ ಅಥವಾ ವ್ಯಾಪಾರ ಸ್ಥಳವಾಗಿದೆ.  

ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಮಾರುವವರು ಮತ್ತು ಕೊಳ್ಳುವರ ಮಧ್ಯೆ ಪರಸ್ಪರ ಬೇಟಿಯಾಗಿ ಅವರು ಮಾರುವ ಮತ್ತು ಕೊಳ್ಳುವ ಪ್ರಕ್ರಿಯೆಯನ್ನು ಉಂಟುಮಾಡಿಕೊಳ್ಳುವ ಸ್ಥಳ ಅಥವಾ ವ್ಯವಸ್ತೆಯನ್ನು ಮಾರುಕಟ್ಟೆ ಎಂದು ಕರೆಯುತ್ತೇವೆ.  


ಮಾರುಕಟ್ಟೆ ಅರ್ಥ | ವಿಧಗಳು | ಉಪಯೋಗಗಳು ಮತ್ತು ಕೆಲಸಗಳು


ಮಾರುಕಟ್ಟೆಯ ವಿಧಗಳು  


1. ಭೌಗೋಳಿಕ ಪ್ರದೇಶಗಳ ಆಧಾರದ ಮೇಲೆ –  

a. ಸ್ಥಳೀಯ ಮಾರುಕಟ್ಟೆಗಳು  

ಸಾಮಾನ್ಯವಾಗಿ ಒಂದು ಸ್ಥಳೀಯ ಪ್ರದೇಶದಲ್ಲಿ ಮಾತ್ರ ಸರಕುಗಳು ಮತ್ತು ಸೇವೆಗಳನ್ನು ಮಾರುವ ಮತ್ತು ಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ  

b. ಪ್ರಾದೇಶಿಕ ಮಾರುಕಟ್ಟೆಗಳು  

ಈ ಮಾರುಕಟ್ಟೆಯು ಒಂದು ಸೀಮಿತ ಪ್ರದೇಶಗಳಿಗೆ ಮಾತ್ರ ಸೀಮಿತ ವಾಗಿರುತ್ತದೆ.  

c. ರಾಷ್ಟ್ರೀಯ ಮಾರುಕಟ್ಟೆಗಳು  

ಒಂದು ದೇಶದ ಒಳಗೆ ಮಾತ್ರ ಸರಕುಗಳು ಮತ್ತು ಸೇವೆಗಳನ್ನು ಮಾರುವ ಮತ್ತು ಕೊಳ್ಳುವ ಕ್ರಿಯೆಗೆ ರಾಷ್ಟ್ರೀಯ ಮಾರುಕಟ್ಟೆಗಳು ಎಂದು ಕರೆಯಬಹುದು.  

d. ಅಂತರ ರಾಷ್ಟ್ರೀಯ ಮಾರುಕಟ್ಟೆಗಳು  

ಅಲವು ದೇಶಗಳ ಮಧ್ಯೆ ಸರಕುಗಳು ಮತ್ತು ಸೇವೆಗಳನ್ನು ಮಾರುವ ಮತ್ತು ಕೊಂಡುಕೊಳ್ಳುವುದು ಅನ್ನು ಅನಂತರ ರಾಷ್ಟ್ರೀಯ ಮಾರುಕಟ್ಟೆ ಎನ್ನುವರು.  


2. ಸರಕುಗಳ ಆಧಾರದ ಮೇಲೆ –  

a. ಸರಕಿನ ಮಾರುಕಟ್ಟೆ  

ಸರಕಿನ ಮಾರುಕಟ್ಟೆಯಲ್ಲಿ ಹಲವಾರು ಸರಕುಗಳನ್ನು ಮಾರುವ ಮತ್ತು ಕೊಳ್ಳುವ ಚಟುವಟಿಕೆ ನಡೆಯುತ್ತದೆ.  

b. ಹಣಕಾಸು ಮಾರುಕಟ್ಟೆ  

ಈ ಮಾರುಕಟ್ಟೆಗಳು ವ್ಯವಹಾರ ಸಂಸ್ಥೆಗಳಿಗೆ ಬೇಕಾಗುವ ಹಣವನ್ನು  ಕೊಳ್ಳುವ ಮತ್ತು ಮಾರುವ ವಹಿವಾಟು ಮಾಡಲು ವಿಶೇಷವಾಗಿ ಸ್ಥಾಪಿಸಿರುವುದು 

Example:- Share Market  

c. ಬಂಡವಾಳ ಮಾರುಕಟ್ಟೆ  

ಇದು ಒಂದು ವಿಶಿಷ್ಟ ಮಾರುಕಟ್ಟೆಯಾಗಿದೆ, ವ್ಯವಹಾರ ಸಂಸ್ಥೆಗಳಿಗೆ ದೀರ್ಘಾವಧಿ ಸಾಲವನ್ನು ಒದಗಿಸುತ್ತದೆ. ಇವು ಸಾಮಾನ್ಯವಾಗಿ ಹಣಕಾಸಿನ ಸಂಸ್ಥೆಗಳಾಗಿರುತ್ತದೆ.  

Example:- Share Market 

ಮಾರುಕಟ್ಟೆ ಅರ್ಥ | ವಿಧಗಳು | ಉಪಯೋಗಗಳು ಮತ್ತು ಕೆಲಸಗಳು



3. ಸಂಪರ್ಕ ಸ್ಥಾನದ ಆಧಾರದ ಮೇಲೆ –  

a. ಪ್ರಾಥಮಿಕ ಮಾರುಕಟ್ಟೆಗಳು  

ಪ್ರಾಥಮಿಕ ಮಾರುಕಟ್ಟೆಯಲ್ಲಿ ಉತ್ಪಾದಕರು ತಮ್ಮ ವಸ್ತುಗಳನ್ನು ಅಥವಾ ಸರಕುಗಳನ್ನು ಸಗಟು ವ್ಯಾಪಾರಿಗಳಿಗೆ ಮಾರುತ್ತಾರೆ.  

Example:- Agriculture Products  

b. ದ್ವಿತೀಯ ಮಾರುಕಟ್ಟೆಗಳು  

ದ್ವಿತೀಯ ಮಾರುಕಟ್ಟೆಯು ಸಗಟು ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಅಥವಾ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಮಾರುವ ವಹಿವಾಟು ಆಗಿರುತ್ತದೆ.  

c. ಅಂತಿಮ ಮಾರುಕಟ್ಟೆ  

ಈ ರೀತಿಯ ಮಾರುಕಟ್ಟೆಯು ಚಿಲ್ಲರೆ ವ್ಯಾಪಾರಿಗಳು ತಮ್ಮ ಸರಕುಗಳನ್ನು ಅಂತಿಮ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.  


 

4. ಪ್ರಮಾಣದ ಆಧಾರದ ಮೇಲೆ -  

a. ಸಗಟು ಮಾರುಕಟ್ಟೆ 

ಸಗಟು ಮಾರುಕಟ್ಟೆಯಲ್ಲಿ  ಉತ್ಪಾದಕರು ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ಸಗಟು ವ್ಯಾಪಾರಿಗಳಿಗೆ ಮಾರುತ್ತಾರೆ.  

b. ಚಿಲ್ಲರೆ ಮಾರುಕಟ್ಟೆ  

ಈ ರೀತಿಯ ಮಾರುಕಟ್ಟೆಯು ಸರಕುಗಳನ್ನು ಸಣ್ಣ ಪ್ರಮಾಣದ ಬಳಕೆದಾರರಿಗೆ ಮಾರಾಟ ಮಾಡುತ್ತಾರೆ.  


 

5. ವಹಿವಾಟಿನ ಲಕ್ಷಣದ ಆಧಾರದ ಮೇಲೆ –  

a. ಸ್ಥಾನಿಕ ಮಾರುಕಟ್ಟೆ  

ಈ ಮಾರುಕಟಗಾರರು ವಸ್ತುಗಳನ್ನು ಕೊಳ್ಳುವವರು ಇರುವ ಸ್ಥಳದಲ್ಲಿಯೇ, ಇರುವ ಸ್ಥಳದಲ್ಲಿಯೇ ಮಾರಾಟ ಮಾಡುತ್ತಾರೆ . 

b. ಭವಿಷ್ಯದ ಮಾರುಕಟ್ಟೆ  

ಭವಿಷ್ಯದ ಮಾರುಕಟ್ಟೆಯಲ್ಲಿ ತಕ್ಷಣ ಮಾರಾಟದಲ್ಲಿರುವ ವಸ್ತುಗಳು ವಿತರಣೆ  ಆಗುವುದಿಲ್ಲ . ಮುಂದಿನ ಅವಧಿಕಾಗಿ ಮಾರಾಟ ಮತ್ತು ಕೊಳ್ಳಲು ಒಪ್ಪಂದಗಳು ನಡೆಯುತ್ತದೆ.  


 

6. ವಸ್ತುಗಳ ಸಹಜ ಸ್ಥಿತಿಗಳ ಆಧಾರದ ಮೇಲೆ –  

a. ಗ್ರಾಹಕ ಮಾರುಕಟ್ಟೆ  

ಗ್ರಾಹಕರ ಮಾರುಕಟ್ಟೆ ಎಂದರೆ, ಗ್ರಾಹಕರು ತಮ್ಮ ಸ್ವಂತ ಬಳಕೆಗೆ ಸರಕುಗಳು ಮತ್ತು ಸೇವೆಗಳನ್ನು ಖರೀದಿಸಿಕೊಳ್ಳುವದನ್ನೆ ಗ್ರಾಹಕರ ಮಾರುಕಟ್ಟೆ ಎನ್ನುವರು. 

b. ಉತ್ಪಾದಕರ ಮಾರುಕಟ್ಟೆ  

ಈ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಉತ್ಪಾದನಾ ಪ್ರಕ್ರಿಯೆಗಳಿಗೆ ಮಾರಾಟ ಮಾಡುತ್ತಾರೆ.  


 

7. ನಿಯಂತ್ರಣದ ಆಧಾರದ ಮೇಲೆ –  

a. ನಿಯಂತ್ರಿತ ಮಾರುಕಟ್ಟೆಗಳು  

ಇಲ್ಲಿ ಮಾರುವುದು ಮತ್ತು ಕೊಳ್ಳುವುದು ಶಾಸನ ಬದ್ಧ ನಿಯಮಗಳಿಂದ ನಡೆಯುತ್ತದೆ.  

b. ಅನಿಯಂತ್ರಿತ ಅಥವಾ ಮುಕ್ತ ಮಾರುಕಟ್ಟೆ  

ಈ ರೀತಿಯ ಮಾರುಕಟ್ಟೆಯಲ್ಲಿ ಯಾವದೇ ರೀತಿಯ ನಿಯಮಗಳು ನಿಯಂತ್ರಣಗಳು ಇರುವುದಿಲ್ಲ. ವಹಿವಾಟುಗಳು ಮುಕ್ತವಾಗಿ ನಡೆಯುತ್ತದೆ.  


 

8. ಸಾಂಪ್ರದಾಯ ಅಥವಾ ಅಸಾಂಪ್ರದಾಯಿಕ ಮಾರುಕಟ್ಟೆಗಳು –  

a. ಸಾಂಪ್ರದಾಯಕ ಮಾರುಕಟ್ಟೆ –  

ಇದು ಹಳೆಗಾಲದಿಂದಳು ರೂಢಯಲ್ಲಿರುವ  ಮಾರುಕಟ್ಟೆಗಳು ಕೆಲವು ಪರ್ವಾಧರಿತ ನಿರ್ಧಾರಗಳಿಂದ ವಸ್ತುಗಳು ಮತ್ತು ಸೇವೆಗಳು ವಿನಿಮಯ ನಡೆಯುತ್ತದೆ. ಇದು ಒಂದು ನಿರ್ಧಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತ  

 b. ಅಸಾಂಪ್ರದಾಯಿಕ ಮಾರುಕಟ್ಟೆ –  

ಈ ಮಾರುಕಟ್ಟೆಗಳು ಒಂದು ನಿರ್ಧಿಷ್ಟ ಸ್ಥಳದಲ್ಲಿ ಇರುವುದಿಲ್ಲ. ಎಲ್ಲಿಂದ ಬೇಕಾದರೂ ಮಾರಾಟ ಮತ್ತು ಕೊಳ್ಳುವಿಕೆ ನಡೆಯುತ್ತದೆ.  

ಇವುಗಳಿಗೆ ಉದಾಹಣೆ 

● ಅಂಚೆ ಮೂಲಕ ಮಾರಾಟ ಮಾಡುವ ಸಂಸ್ಥೆ ( Mail Order Houses )  


● ದೂರವಾಣಿ ಮೂಲಕ ಕೊಳ್ಳುವುದು ( Tele Shopping ) 


● ಪ್ರಾಸ್ತಾವಿಕ ಅಂಗಡಿ ( Virtual Shop )  


● ಅಂತರ್ಜಾಲ ಮಾರುಕಟ್ಟೆ ( Online Market ) 


● ವಿಷಯ ಮತ್ತು ಬೆಲೆ ಪಟ್ಟಿ ಆಧರಿಸಿ ಮಾರುಕಟ್ಟೆ ( Catalogue Market  ) 


 


ಮಾರುಕಟ್ಟೆ ವ್ಯವಸ್ಥೆ ( Marketing ) 


ಮಾರಾಟ ವ್ಯವಸ್ಥೆ ಎಂದರೆ ವಸ್ತುಗಳನ್ನು ಮತ್ತು ಸೇವೆಗಳನ್ನು ಉತ್ಪಾದಕರಿಗೆ ಗ್ರಾಹಕರವರಗೆ ನಡೆಯುವ ಎಲ್ಲಾ ಚಟುವಟಿಕೆಯನ್ನು ಹೊಂದಿರುತ್ತದೆ ಇದನ್ನೇ ಮಾರಾಟ ವ್ಯವಸ್ಥೆ ಅಥವಾ ಮಾರುಕಟ್ಟೆ ವ್ಯವಸ್ಥೆ ಅಥವಾ ಮಾರ್ಕೆಟಿಂಗ್ ಎಂದು ಕರೆಯಬಹುದು. 

ಮಾರಾಟ ವ್ಯವಸ್ಥೆಯು ಭೌತಿಕ ಸ್ಥಿತಿಯಲ್ಲಿ ವಸ್ತುಗಳನ್ನು ಮತ್ತು ಸೇವೆಗಳನ್ನು ಗ್ರಾಹಕರಿಗೆ ಹಂಚುವ ಚಟುವಟಿಕೆ ಅಲ್ಲದೆ ಗ್ರಾಹಕರಿಗೆ  ನಿರ್ದೇಶಿಸುವ ಒಂದು ಮಾರಾಟ ವ್ಯವಸ್ಥೆಯಾಗಿದೆ.  


 


ಮಾರುಕಟ್ಟೆಯ ಪ್ರಾಮುಖ್ಯತೆ  

1. ಜೀವನ ಮಟ್ಟ   

2. ಗ್ರಾಹಕರ ಬಯಕೆ ನೆರವೇರುವುದು   

3. ಉದ್ಯೋಗ ಅವಕಾಶ   

4. ಸಂಪನ್ಮೂಲಗಳ ಉಪಯುಕ್ತತೆ  

5. ಅಂತರರಾಷ್ಟ್ರೀಯ ಮಾರುಕಟ್ಟೆ   

6. ಆರ್ಥಿಕ ಪ್ರಗತಿ   


 


ಮಾರುಕಟ್ಟೆ ವ್ಯವಸ್ಥೆ ಕಾರ್ಯಗಳು  


1. ಖರೀದಿ ಮತ್ತು ಜೋಡಣೆ ( Buy and assembling )  

2. ಮಾರಾಟ ಮಾಡುವುದು ( Selling ) 

3. ಸಾಗಾಣಿಕೆ ( Transport ) 

4. ಶೇಖರಣೆ ಮತ್ತು ಉಗ್ರಾಣ ವ್ಯವಸ್ಥೆ ( Storage and Ware house ) 

5. ಮಾರುಕಟ್ಟೆ ಸಂಶೋದನೆ ( Marketing analysis or Marketing Reasearch ) 

6. ಶಿಷ್ಟಿಕರಣ ( Standardisation ) 

7. ವರ್ಗೀಕರಣ ( Grading ) 

8. ಮುದ್ರೆ ಹಾಕುವುದು ( Branding ) 

9. ನಷ್ಟಭಯ ಬರಿಸುವುದು( Insurance ) 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad