Type Here to Get Search Results !

CHARTER ACT 1793,1833,1853|kannada

  ಚಾರ್ಟರ್ ಕಾಯ್ದೆ 1793 (CHARTER ACT 1793)


              ಈ  ಕಾಯಿದೆಯು ಗವರ್ನರ್ ಜನರಲ್ನನ್ನು ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೇನಾ ಪಡೆಗಳ ಮುಖ್ಯಸ್ಧನಾಗಿ (ಕಮಾಂಡರ್ ಇನ್ ಚೀಫ್) ಮಾಡಿತು. ವಿಶೇಷ ಸಂದರ್ಬಗಳಲ್ಲಿ ಸಮಿತಿ (ಕೌನ್ಸಿಲ್)ಯ ನಿರ್ದಾರಗಳನ್ನು ತಿರಸ್ಕರಿಸಿ , ತಾನೇ ವಿವೇಚನಾಯುಕ್ತವಾಗಿ ನಿರ್ದಾರಗಳನ್ನು ತೆಗದುಕೊಳ್ಳುವ ವಿಶೇಷ ಅಧಿಕಾರವನ್ನು ಗವರ್ನರ್ ಜನರಲ್ಲನಿಗೆ ನೀಡಲಾಯತು 


ಚಾರ್ಟೆರ್ -1793  ಕಾಯ್ದೆಯ ಲಕ್ಷಣಗಳು :-

1. ಬೋರ್ಡ್ ಆಫ್ ಕಂಟ್ರೋಲ್ ನ ಸದಸ್ಯರು ಮತ್ತು ಕಂಪನಿಯ ಇತರೆ ಕಾರ್ಯ ಕಾರಣಿಗಳಿಗೆ ಭಾರತದ ಖಜಾಣೆಯಿಂದ ವೇತನ ಪಡೆಯಲು ಅವಕಾಶ ನೀಡಿತು. 
2. ಗವರ್ನರ್ ಜನರಲ್ ಮತ್ತು ಗವರ್ನರುಗಳಿಗೆ ತಮ್ಮ ಕೌನ್ಸಿಲಗಳ ನಿರ್ಧಾರವನ್ನು ತಿರಸ್ಕರಿಸುವ ಅಧಿಕಾರ ನೀಡಲಾಯಿತು. 
3.ಕಂಪನಿಯು ಇನ್ನೂ ಇಪ್ಪತ್ತು ವರ್ಷಗಳ ಕಾಲ ವ್ಯಾಪಾರದಲ್ಲಿ ಭಾರತದೊಂದಿಗೆ ಏಕಸ್ವಾಮ್ಯ ಪದಡೆಯಿತು. 
4. ಬಾಂಬೆ ಮತ್ತು ಮದ್ರಾಸ್ ಪ್ರಸಿಡೆನ್ಸಿಗಳ ಮೇಲೆ ಗವರ್ನರ್ ಜನರಲ್ ನಿಗೆ ಹೆಚ್ಚಿನ ನಿಯಂತ್ರಣ ನಿಡಲಾಯ್ತ . 
5. ಸೇನಾ ಮುಖ್ಯಸ್ಥನು ಗವರ್ನರ್ ಜನರಲ್ನ ಕೌನ್ಸಿಲನ ಸದಸ್ಯನಾಗದಂತೆ ಈ ಕಾಯ್ದೆ ನಿರ್ಬಂಧ ವಿಧಿಸಿತ್ತು.   

  ಚಾರ್ಟರ್ ಕಾಯ್ದೆ 1833 (CHARTER ACT 1833)

ಚಾರ್ಟೆರ್ -1833 ಕಾಯ್ದೆಯ ಲಕ್ಷಣಗಳು :-

1 ಈ ಕಾಯ್ದೆ ಬಂಗಾಳದ ಗವರ್ನರ್ ಜನರಲ್ಲನನ್ನು ಭಾರತದ ಗವರ್ನರ್ ಜನರಲ್ ನ್ನಾಗಿ ಮಾಡಿತು ಹಾಗೂ ಎಲ್ಲ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳನ್ನು ಅವನಿಗೆ ನೀಡಿತು. ಈಗ ಈ ಕಾಯ್ದೆಯ ಮೂಲಕ ಪ್ರಧಮ ಬಾರಿಗೆ ಬ್ರಿಟಿಷ್ ಸ್ವಾಮ್ಯದ ಭಾರತದ ಎಲ್ಲ ಭೂ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿದ ಭಾರತ ಸರ್ಕಾರವನ್ನು ಸ್ರುಸ್ಟಿಸಿತು. ಲಾರ್ಡ್ ವಿಲಿಯಂ ಬೆನ್ಟಿಂಗ್  ರವರನ್ನು ಭಾರತದ ಪ್ರಧಮ ಗವರ್ನರ್ ಜನರಲ್ಲನಗಿ ಮದಲಯಿತು . 
2.ಈ ಕಾಯ್ದೆಯ ಮೂಲಕ ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳ ಗವರ್ನರ್ಗಳ ಶಾಸನಿಯ ಅಧಿಕಾರಗಳನ್ನು ಹಿಂಡಕೆ ತೆಗದುಕೊಳ್ಳಲಾಯಿತು. ಇಡೀ ಬ್ರಿಟಿಷ್ ಇಂಡಿಯಾಕ್ಕೆ ಸಂಬಂಧಿಸಿದ ಶಾಸನಿಯ ಅಧಿಕಾರಗಳನ್ನು ಭಾರತದ ಗವರ್ನರ್ ಜನರಲ್ ನಿಗೆ ನೀಡಲಾಯಿತು. ಈ ಹಿಂದಿನ ಕಾಯ್ದೆಗಳ ಅಡಿಯಲ್ಲಿ ರೂಪಿಸಲ್ಪಟ್ಟ ಕಾನೂನುಗಳನ್ನು ನಿಯಮಗಳೆಂದು ಹಾಗೂ ಚಾರಟರ್ ಕಾಯ್ದೆ 1833ರ ಅಡಿಯಲ್ಲಿ ರೂಪಿಸಲ್ಪಟ್ಟ ಕಾನೂನುಗಳನ್ನು ಕಾಯ್ದೆ ಗಳೆಂದು ಕರೆಯಲಾಯ್ತ . 
3.ಈ ಕಾಯ್ದೆಯು ಈಸ್ಟ್ ಇಂಡಿಯಾ ಕಂಪನಿಯ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಅಂತ್ಯಕೋಳಿಸಿತು. ಈ ಮೂಲಕ ಈಸ್ಟ್ ಇಂಡಿಯಾ ಕಂಪನಿಯು ತನ್ನ ವಾಣಿಜ್ಯ ಚಟುವಟ್ಟಿಕೆಗಳನ್ನು ಕೈ ಬಿಟ್ಟು ಪೂರ್ಣ ಪ್ರಮಾಣದ ಆಡಳಿತಾತ್ಮಕ ಸಂಸ್ಥೆಯಾಗಿ ಮಾರ್ಪಟ್ಟಿತು. 
4. ಈ ಕಾಯ್ದೆಯು ನಾಗರಿಕ ಸೇವಾ ವರ್ಗದ ಸದಸ್ಯರ ಆಯ್ಕೆ ಸ್ಪರ್ದತ್ಮಕ ವ್ಯವಸ್ತೆಯನ್ನು ಜಾರಿಗೆ ತರಲು ಪ್ರಾಯತ್ನಿಸಿತು. ಈ ಕಾಯ್ದೆಯು, ಯಾವುದೇ ಹುದ್ದೆಯನ್ನು, ಸ್ಥಾನ ವನ್ನು, ಉದ್ಯೋಗವನ್ನು ಹೊಂದದಂತೆ ಭಾರತೀಯರನ್ನು ನಿರ್ಬಂಧಿಸುವಂತಿಲ್ಲ ಎಂಬ ನಿಯಮಾವನ್ನು ಒಳಕೋಂಡಿತು. ಆದರೆ ಕೋರ್ಟ್ ಆಫ್ ಡೈರೆಕ್ಟರ್ಗಳ ವಿರೋಧದಿಂದಾಗಿ ಈ ಅಂಶವನ್ನು ನಿರಕರಿಸಲಾಯಿತು. 
5. ಲಾರ್ಡ್ ಮೆಕಾಲೆ ಯವರ ಅಧ್ಯಕ್ಷತೆಯಲ್ಲಿ ಒಂದು ಕಾನೂನು ಆಯೋಗವನ್ನು ನೇಮಿಸಲಾಯಿತು. 
6.4 ನೇ ಸದಸ್ಯನ ಸೇರ್ಪಡೆ ಯೊಂದಿಗೆ ಗವರ್ನರ್ ಜನರಲ್ ನ ಕಾರ್ಯಕಾರಿ ಮಂಡಳಿಯನ್ನು ವಿಸ್ತರಿಸಲಾಯಿತು. 



ಚಾರ್ಟರ್ ಕಾಯ್ದೆ -1853 (CHARTER ACT 1853)

ಚಾರ್ಟರ್ ಕಾಯ್ದೆ 1853 ಪ್ರಮುಕ ಲಕ್ಷಣಗಳು:-

1. ಈ ಕಾಯ್ದೆ ಯ ಮೂಲಕ ಪ್ರಧಮ ಬಾರಿಗೆ ಗವರ್ನರ್ ಜನರಲ್ ನ ಕೌನ್ಸಿಲನ ಶಾಸನಿಯ ಹಾಗೂ ಕಾರ್ಯಾಂಗೀಯ ಕಾರ್ಯಗಳನ್ನಿ ಪರಸ್ಪರ ಪ್ರತ್ಯೇಕಿಸಲಾಯಿತು. ಈ ಕಾಯ್ದೆಯು ಲೆಜೇಸ್ಲೇಟಿವ್ ಕೌನ್ಸಿಲರ್ಸ್ ಎಂಬ 6 ಮಂದಿ ಹೊಸ ಸದಸ್ಯರನ್ನು ಗವರ್ನರ್ ಜನರಲ್ ನ ಕೌನ್ಸಿಲ್ಲಿಗೆ ಸೇರ್ಪಡೆ ಮಾಡಲು ಅವಕಾಶ ನೀಡಿತು ಹೀಗೆ ಪ್ರತ್ಯೇಕವಾಗಿ ಗವರ್ನರ್ ಜನರಲ್ನ ಲೆಜೇಸ್ಲೇಟಿವ್ಕೌನ್ಸಿಲನ್ನು ಸ್ಥಾಪಿಸಿತು. ಇದನ್ನು ಭಾರತೀಯರು ಲೆಜೇಸ್ಲೇಟಿವ್ ಕೌನ್ಸಿಲ್ ಎಂದು ಕರೆಯಲಾಯಿತು. ಕೌನ್ಸಿಲ್ಲಿನ ಶಾಸಕಾಂಗ ಬ್ರಿಟಿಷ್ ಸಂಸತ್ತಿನಿಯಮಾವಳಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಮಿನಿ ಸಂಸತ್ತಿನಂತೆ ಕಾರ್ಯ ನಿರ್ವಹಿಸುತೆ. ಹೀಗೆ ಶಾಸನೀಯ ಕಾರ್ಯವನ್ನು ಪ್ರಧಮ ಬಾರಿಗೆ ಸರ್ಕಾರದ ವಿಶೇಷ ಕಾರ್ಯ ಎಂದು ಪರಿಕಾಣಿಸಲಾಯಿತು. 
2. ಈ ಕಾಯ್ದೆ ಮುಕ್ತ ಸ್ಪರ್ಧಾತ್ಮಕ  ಪರೀಕ್ಷೆಗಳ ಮೂಲಕ ಸರ್ಕಾರಿ ಸೇವೆಗಳಿಗೆ ಅಭ್ಯರ್ಧಿ ಗಳನ್ನು ಆಯ್ಕೆ ಮಾಡುವ ಮತ್ತು ನೇಮಕ ಮಾಡುವ ಪದ್ದತಿ ಅವಕಾಶ ನೀಡಿತು. ಇದರಿಂದ ಉನ್ನತ ನಾಗರಿಕ ಸೇವೆಗಳಿಗೆ ನೇಮಕಯಕೊಳ್ಳುವ ಅವಕಾಶ ಭಾರತೀಯರಿಗೆ ಸಿಕ್ಕಿತು. ಅದರಂತೆ ಮೇಕಲೆ ಸಮಿತಿ(ಭಾರತೀಯ ನಾಗರಿಕ ಸೇವೆಗಳ ಸಮಿತಿ)ಯನ್ನು 1854 ರಲ್ಲಿ ನೇಮಿಸಲಾಯಿತು. 
3. ಈ ಕಾಯ್ದೆ ಪ್ರಧಮ ಬಾರಿಗೆ ಭಾರತೀಯ ಲೇಜಿಸ್ಲೆಟಿವ್ ಕೌನ್ಸಿಲ್ ನಲ್ಲಿ ಸ್ಥಳೀಯ ಪ್ರಾತಿನಿಧ್ಯತೆ ನೀಡಿತು. ಗವರ್ನರ್ ಜನರಲ್ಲನ ಕೌನ್ಸಿಲನ 6 ಮಂದಿ ಹೊಸ ಶಾಸನಿಯ ಸದಸ್ಯರ ಪೈಕಿ 4 ಮಂದಿ ಸದಸ್ಯರನ್ನು ಮದ್ರಾಸ್,ಬಾಂಬೆ,ಬಂಗಾಳ ಮತ್ತು ಆಗ್ರಾಗಳ ಸ್ಥಳೀಯ ಸರ್ಕಾರಗಳಿಂದ ನೇಮಿಸಲಾಯಿತು. 
4. ಬೋರ್ಡ್ ಆಫ್ ಕಂಟ್ರೋಲೀನ ಸದಸ್ಯರ, ಕಾರ್ಯದರ್ಶಿ ಮತ್ತು ಇತರೆ ಅಧಿಯಕರಿಗಳ ವೇತನಗಳನ್ನು ಬ್ರಿಟಿಷ್ ಸರಕಾರವೇ ನಿರ್ಧರಿಸಬೇಕು ಮತ್ತು ಅ ವೇತನವನ್ನು ಕಂಪನಿಯ ಆದಾಯದಿಂದ ನೀಡಬೇಕು ಎಂದು ಈ ಕಾಯ್ದೆ ತಿಳಿಸಿತು. 
5. ಕೋರ್ಟ್ ಆಫ್ ಡೈರೆಕ್ಟರು ಗಳ ಸದಸ್ಯರ ಸಂಖ್ಯೆಯನ್ನು 24 ರಿಂದ 18 ಕ್ಕೆ ಇಳಿಸಲಾಯಿತು. ಈ 18 ಮಂದಿ ಸದಸ್ಯರ ಪೈಕಿ 6 ಮಂದಿ ಬ್ರಿಟಿಷ್ ಸಾಮ್ರಾಜ್ಯ ದಿಂದ ನೇಮಕ ಗೊಳ್ಳಬೇಕು ಎಂದು ಈ ಕಾಯ್ದೆ ತಿಳಿಸಿತು. 
6. ಹೊಸ ಪ್ರಸಿದೆನಸಿಗಳು ರಚಿಸುವ ಹಾಗೂ ಹೊಸದಾಕಿ ವಶಪಡಿಸಿಕೊಂಡ ಪ್ರದೇಶವನ್ನು ಸೇರಿಸಿಕೊಳ್ಳಲು ಅನುಕೊಲವಾಗುವಂತೆ ಆಸ್ತಿತ್ವದಲ್ಲಿರುವ ಪ್ರೆಸಿಡೆನ್ಸಿಗಳ ಎಲ್ಲೆಗಳನ್ನು ಮಾರ್ಪಾಡು ಮಾಡುವ ಅಧಿಕಾರವನ್ನು ಕೋರ್ಟ್ ಆಫ್ ಡೈರೆಕ್ಟರ್ ಗಳಿಗೆ ನೀಡಲಾಯಿತು. 
7. ಗವರ್ನರ್ ಜನರಲ್ ನ ಬಂಗಾಳ ಪ್ರಾಂತ್ಯದ ಆಡಳಿತ ನಿರ್ವಹಣೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಯಿತು. ಬಂಗಾಳ ಪ್ರಾಂತ್ಯಕ್ಕೆ ಒಬ್ಬ ಪ್ರತ್ಯೇಕ ಗವರ್ನರನ್ನು ನೇಮಿಸಲಾಯಿತು.  




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad