ಭಾರತ ಸರ್ಕಾರ ಕಾಯ್ದೆ 1858
1857 ರ ಪ್ರಧಮ ಸ್ವಾತಂತ್ರ್ಯ ಸಂಗ್ರಾಮ ಅಧವಾ ಸಿಪಾಯಿ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಸಂಸತ್ತು ಭಾರತ ಸರ್ಕಾರ ಕಾಯಿದೆ 1858 ರಲ್ಲಿ ಹೊರದಿಸಿತು. ಈ ಕಾಯಿದೆ ಯನ್ನು ರಾಣಿಯ ಘೋಷಣೆ ಪತ್ರ ಎಂದು ಕರೆಯುತರೆ.
ಈ ಕಾಯಿದೆ ಯ ಮೂಲಕ ಮಹಾರಾಣಿ ವಿಕ್ಟೋರಿಯಾ ಭಾರತ ಆಡಳಿತದ ಹೊಣೆಯನ್ನು ಈಸ್ಟ್ ಇಂಡಿಯಾ ಕಂಪನಿಯಿಂದ ತನ್ನ ನೇರ ಅಡಲಿತಕೆ ವಹಿಸಿಕೊಂಡರು. ಅಂದರೆ ಈ ಕಾಯಿದೆ ಮೂಲಕ ಈಸ್ಟ್ ಇಂಡಿಯಾ ಕಂಪನಿಯನ್ನು ರದ್ದುಗೊಳಿಸಿ ಭಾರತದ ಆಡಳಿತವನ್ನು ನೇರವಾಗಿ ಬ್ರಿಟಿಷ್ ಸಾಮ್ರಾಜಯಕೆ ವರ್ಗಾಯ್ಸಲಾಯ್ತು . ಆದ್ದರಿಂದ ಈ ಕಾಯಿದೆ ಅತ್ಯಂತ ಮಹತ್ವ ಪೊರ್ಣ ಕಾಯಿದೆ ಎಂದು ಹೇಳ ಬಹುದು.
![]() |
| govt of India act 1858 |
ಭಾರತ ಸರ್ಕಾರ ಕಾಯ್ದೆ 1858 ರ ಲಕ್ಷಣಗಳು
1)ಭಾರತದ ಆಡಳಿತ ನಿರ್ವಹಣೆಯ ಹೊಣೆ (ಭಾರತ ಸರ್ಕಾರದ ಹೊಣೆ)ಯನ್ನು ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸಾಮ್ರಾಜಯಕೆ ವರ್ಗಾಯಿಸಲಾಯಿತು. ಅದನ್ನು ಅಧಿಕಾರ ಹಸ್ತಾಂತರ ಎಂದು ಕರೆಯುತರೆ.
2)ಭಾರತದ ಗವರ್ನರ್ ಜನರಲ್ ಎಂಬ ಪದ ನಾಮವನ್ನು ಭಾರತದ ವೈಸ್ ರಾಯ್ ಎಂದು ಬದಲಾಯಿಸಲಾಯಿತು. ವೈಸ್ ರಾಯ್ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ನೇರ ಪ್ರತಿನಿಧಿಯಾಗಿದ್ದನು. ಲಾರ್ಡ್ ಕ್ಯಾನಿಂಗ ಭಾರತದ ಪ್ರಧಮ ವೈಸ್ ರಾಯ್ ಆಗಿ ನೇಮಕಗೊಂಡನು.
3)ಕಂಪನಿಯ ಆಡಳಿತ ಮಂಡಲಿಗಳಾದ ನಿಯಂತ್ರಣ ಮಂಡಳಿ ಮತ್ತು ನಿರ್ದೇಶಕರುಗಳ ಮಂಡಲಿಗಳನ್ನು ರದ್ದುಪಡಿಸುವ ಮೂಲಕ ದ್ವಿ-ಸರ್ಕಾರ ಪಡ್ಡತಿಯನ್ನು ಅಂತ್ಯಕೊಳಿಸಲಾಯಿತು.
4)ಭಾರತ ರಾಜ್ಯ ಕಾರ್ಯದರ್ಶಿ ಎಂಬ ಹೊಸ ಹುದ್ದೆಯನ್ನು ಸ್ರುಸ್ಟಿಸಲಾಯಿತು . ಭಾರತ ಆಡಳಿತದ ಎಲ್ಲ ಅಧಿಕಾರಿಗಳನ್ನು ಹಾಗೂ ಆಡಳಿತ ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಭಾರತ ರಾಜ್ಯ ಕಾರ್ಯದರಶಿಗೆ ನೀಡಲಾಯಿತು. ಇವನು ಬ್ರಿಟಿಷ್ ಸಚಿವ ಸಂಪುಟದ ಸದಸ್ಯನಾಗಿದ್ದು, ಬ್ರಿಟಿಷ್ ಸಂಸತ್ಗೆ ಅಂತಿಮವಾಗಿ ಹೊಣೆಯಾಗಿದ್ದನು. ಎಲ್ಲ ಹೊಣೆಕರಿಕೆ, ನಿರ್ದೇಶನ, ಮೇಲ್ವಿಚಾರಣೆ ಮತ್ತು ನಿಯಂತ್ರಣಗಳು ರಾಜ್ಯ ಕಾರ್ಯದರ್ಶಿಯ ವಶಕೆ ಬಂದವು.
5)ಭಾರತ ರಾಜ್ಯ ಕಾರ್ಯ ದರ್ಶಿಗೆ ಆಡಳಿತದಲ್ಲಿ ನೆರವಾಗಲು 15 ಮಂದಿ ಸದಸ್ಯರ ಭಾರತದ ಮಂಡಳಿಯನ್ನು ಸ್ಥಾಪಿಸಲಾಯಿತು. ಈ ಮಂಡಳಿ ಸಲಹಾ ಸಂಸ್ಥೆಯಾಗಿತ್ತು. ಭಾರತ ರಾಜ್ಯ ಕಾರ್ಯದರ್ಶಿಯು, ಮಂಡಳಿಯ ತೀರ್ಮಾನಗಳನ್ನು ಬದಿಗೊತ್ತಿ ತಾನೇ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿದನು. ಭಾರತ ರಾಜ್ಯ ಕಾರ್ಯದರ್ಶಿಯನ್ನು ಮಂಡಳಿಯ ಅಧ್ಯಕ್ಷನನ್ನಾಗಿ ಮಾಡಲಾಯಿತು.
6)ಭಾರತದ ಕೌನ್ಸಿಲ್ ನ್ನು ಒಳಗೊಂಡ ಭಾರತ ರಾಜ್ಯ ಕಾರ್ಯದರ್ಶಿಯನ್ನು ಒಂದು ನಿಗಮಿತ ಮಂಡಳಿ ಎಂದು ಘೋಷಿಸಲಾಯಿತು.
7)ಭಾರತ ಕೌನ್ಸಿಲ್, ಭಾರತ ರಾಜ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ವಾರಕ್ಕೆ ಒಂದು ಬಾರಿಯಾದರೂ ಸಭೆ ಸೇರಬೇಕಿತ್ತು. ಶಾಂತಿ, ಸಂಧಾನ ಮತ್ತು ಯುದ್ದಕೆ ಸಂಬಂಧಿಸಿದಂತೆ ಭಾರತದ ಮಂಡಳಿಯ ಸಲಹೆಯನ್ನು ಕೇಳದೆ ಆದೇಶ ನೀಡುವ ಅಧಿಕಾರವನ್ನು ಇವನು ಹೊಂದಿದನು.
8) ಕೇಂದ್ರೀಕೃತ ಪಡ್ಡತಿಯನ್ನು ಜಾರಿಗೆ ಬಂದಿತು. ಸಿವಿಲ್, ಮಿಲಿಟರಿ, ಕಾರ್ಯ ನಿರ್ವಾಹಕ ಮತ್ತು ಶಾಸನೀಯ ಅಧಿಕಾರಗಳೆಲ್ಲವೂ ಸಮಿತಿಯನ್ನು ಒಳಗೊಂಡ ಗವರ್ನರ್ ನಲ್ಲಿ ಕೇಂದ್ರೀಕೃತವಾಗಿದ್ದವು. ಇವನು ಭಾರತ ಕಾರ್ಯದರಶಿಗೆ ಹೊಣೆಯಾಗಿದ್ದನು.
9)ಭಾರತದಿಂದ ಬರುವ ಎಲ್ಲ ಆದಾಯ ಇಂಗ್ಲೆoಡ್ನ ರನಿಯ ಹೆಸರಿಗೆ ಸಂದಾಯವಾಗಬೇಕಿತ್ತು. ಆದರೆ ಭಾರತದಲ್ಲಿ ಆಗಬೇಕಾದ ಖರ್ಚಿನ ಬಾಬ್ತುಗಳು ರಾಜ್ಯ ಕಾರ್ಯದರ್ಶಿಯ ಮುಖೇನ ನಡೆಯಬೇಕಿತ್ತು.
10) ಭಾರತ ಮಂಡಳಿಯ ಸದಸ್ಯರ ಆಡಳಿತ ವೆಚ್ಚ ಮತ್ತು ವೇತನವನ್ನು ಭಾರತ ಅದಯದಿಂದ ನೀಡಬೇಕಾಗಿತ್ತು. ಈ ಮಂಡಳಿಯ ಕಾರ್ಯದರ್ಶಿ ಭಾರತದ ಹಣಕಾಸಿನ ಮತ್ತು ಅಲ್ಲಿನ ಅಭಿವೃದ್ದಿಯ ಬಗೆಗೆ ವಾರ್ಷಿಕ ವರದಿಯನ್ನು ಬ್ರಿಟನ್ನಿನ ಸಂಸತ್ತಿಗೆ ಕಳುಹಿಸಿತಿರಬೇಕು.
11)ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಾಗರೀಕ ಸೇವಾ ಸಿಬ್ಬಂದಿಯ ನೇಮಕಾತಿ ನಿಯಮವನ್ನು ರಚಿಸುವ ಅಧಿಕಾರ ಭಾರತ ಕಾರ್ಯದರ್ಶಿಯ ಮಂಡಳಿಗೆ ಸೇರಿದ ವಿಷಯವಾಗಿತ್ತು.
---------------ಭಾರತ ಸರ್ಕಾರ ಕಾಯ್ದೆ ------------------


ಧನ್ಯವಾದಗಳು