ಕ್ಯಾಬಿನೆಟ್ ಮಿಷನ್
ಅಂದಿನ ಬ್ರಿಟನ್ನಿನ ಪ್ರದಾನಿ ಕ್ಲೆಮೆಂಟ್ ಅಟ್ಲೆ ಭಾರತಕ್ಕೆ ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರ ನಿಯೋಗವನ್ನು ಕಳುಹಿಸಿದನು. ಅದನ್ನು ಕ್ಯಾಬಿನೆಟ್ ಮಿಷನ್ ಅಧವಾ ಕ್ಯಾಬಿನೆಟ್ ನಿಯೋಗ ಎಂದು ಕರೆಯುತರೆ. ಲಾರ್ಡ್ ಪೆಧಿಕ್ ಲಾರೆನ್ಸ್, ಸಾರ್ ಸ್ಯಾಪರ್ಡ್ ಕ್ರಿಪ್ಸ್ ಮತ್ತು ಎ.ವಿ ಅಲೆಕ್ಸಾಂಡರ್ ಈ ಮೂವರು ಮಂದಿ ಮಂತ್ರಿ ಮಂಡಲದ ಸದಸ್ಯರು ಈ ನಿಯೋಗದಲ್ಲಿದ್ದರು. ಈ ನಿಯೋಗವು ಮಾರ್ಚ್ 24, 1946ರಂದು ಭಾರತಕ್ಕೆ ಆಗಮಿಸಿತು. ಕ್ಯಾಬಿನೆಟ್ ನಿಯೋಗವು ಮೇ 16, 1946ರಂದು ತನ್ನ ಯೋಜನೆಯನ್ನು ಪ್ರಕಟಿಸಿತು. ಕ್ಯಾಬಿನೆಟ್ ನಿಯೋಗವು ಈ ಕೆಳಗಿನ ಶಿಪರಸುಗಳನ್ನು ಮಾಡಿತು.
ಕ್ಯಾಬಿನೆಟ್ ಮಿಷನ್ನ ಶಿಪರಸುಗಳು:-
1. ಬ್ರಿಟಿಷ್ ಭಾರತ ಮತ್ತು ದೇಶೀಯ ಸಂಸ್ಥಾನಗಳಿಂದ ಕೊಡಿದ ಭಾರತ ಒಕ್ಕೊಟವನ್ನು ರಚಿಸತಕ್ಕದು. ಈ ಒಕ್ಕೊಟಕ್ಕೆ ವಿದೇಶಾಂಗ ವ್ಯವಹಾರಗಳು, ರಕ್ಷಣೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ನೋಡಿಕೊಳ್ಳುವ ಅಧಿಕಾರ ನೀಡಬೇಕು. ಈ ವಿಷಯಗಳನ್ನು ನಿರ್ವಹಿಸಲು ಬೇಕಾಗುವ ಹಣಕಸನ್ನು ಸಂಗ್ರಹಿಸುವ ಅಧಿಕಾರವನ್ನು ಒಕ್ಕೂಟ ಹೊಂದಿರಬೇಕು.
2. ಕ್ಯಾಬಿನೆಟ್ ಆಯೋಗ ಸ್ವತಂತ್ರ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿತು.
3. ಭಾರತದ ರಾಜ್ಯಗಳ ಮೇಲಿನ ಬ್ರಿಟಿಷ್ ಸಾರ್ವಭೌಮತ್ವ ಅಂತ್ಯಕೊಳ್ಳಬೇಕು.
4. ಒಕ್ಕೂಟವು ಬ್ರಿಟಿಷ್ ಭಾರತ ಮತ್ತು ಭಾರತೀಯ ರಾಜ್ಯಗಳ ಪ್ರತಿನಿಧಿಗಳಿಂದ ಕೊಡಿದ ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಹೊಂದಿರಬೇಕು.
5. ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳನ್ನು ಬಿಟ್ಟು ಉಳಿಕ ವಿಷಯಗಳು ಪ್ರಾಂತ್ಯಗಳ ವಶದಲ್ಲಿರಬೇಕು.
6. ದೇಶದ ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಬೇಕು. ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಪ್ರಾಂತ್ಯಗಳ ವಿಧಾನ ಸಭೆಕಳಿಂದ ಒಂದು ಮಿಲಿಯನ್ ಜನಸಂಖ್ಯೆಗೆ ಒಬ್ಬ ಪ್ರತಿನಿಧಿಯಂತೆ ಚುನಾಯಿಸಬೇಕು. ಸಿಖ್ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ತಮ್ಮ ಸಮುದಾಯದ ಪಾಲನ್ನು ಜನಸಂಖ್ಯೆಯ ಆಧರದ ಮೇಲೆ ಚುನಾಯಿಸಬೇಕು. ಇತರರು ಉಳಿದ ಜನಸಂಖ್ಯೆಯಿಂದ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಬೇಕು.
7. ಸಂವಿಧಾನ ರಚನಾ ಸಭೆಯನ್ನು ಪರೋಕ್ಷ ಚುನಾವಣೆಯ ಮೂಲಕ ರಚಿಸತಕ್ಕದು.
8. ಪ್ರಾಂತ್ಯಗಳ ಪ್ರತಿನಿಧಿಗಳನ್ನು ಎ. ಬಿ. ಸಿ. ಎಂಬ ಮೂರು ವಿಭಾಗಗಳಾಗಿ ವಿಭಿಸಲು ಶಿಪಾರಸು ಮಾಡಲಾಯಿತು. ಪಂಜಾಬ್, ಸಿಂದ್, ಮತ್ತು ವಾಯುವ್ಯ ಗಡಿ ಪ್ರಾಂತ್ಯಗಳು "ಬಿ" ವಿಭಾಗಕ್ಕೆ ಸೇರಿಸುತ್ತವೆ. ಬಂಗಾಳ ಮತ್ತು ಅಸ್ಸಾಮಿನ ಪ್ರತಿನಿಧಿಗಳು "ಸಿ" ವಿಭಾಗಕ್ಕೆ ಸೇರುತ್ತಾರೆ. ಭಾರತದ ಉಳಿದ ಭಾಗಗಳು "ಎ" ವಿಭಾಗಕ್ಕೆ ಸೇರುತ್ತವೆ.
9. ಹೊಸ ಸಂವಿಧಾನ ರಚನೆಯಾಗುವವರೆಗೆ ಆಡಳಿತ ನೋಡಿಕೊಳ್ಳಲು ಒಂದು ಮದ್ಯಾಂತರ ಸರ್ಕಾರವನ್ನು / ತಾತ್ಕಾಲಿಕ ಸರ್ಕಾರವನ್ನು ರಚಿಸಬೇಕು. ಈ ಸರ್ಕಾರದಲ್ಲಿ ಐವರು ಮುಸ್ಲಿಂ ಲೀಗ್ ಸದಸ್ಯರು, ಆರು ಮಂದಿ ಕಾಂಗ್ರೆಸ್ ಸದಸ್ಯರು, ಒಬ್ಬ ಸಿಖ್, ಒಬ್ಬ ಪಾರ್ಸಿ ಮತ್ತು ಒಬ್ಬ ಭಾರತೀಯ ಕ್ರಿಶ್ಚಿಯನ್ ಹೀಗೆ ಒಟ್ಟು 14 ಮಂದಿ ಸದಸ್ಯರು ಇರಬೇಕು. ಎಲ್ಲ ಖಾತೆಗಳ ಭಾರತೀಯರ ನಿಯಂತ್ರಣದಲ್ಲಿದ್ದು, ಬ್ರಿಟಿಷ್ ಸರ್ಕಾರ ಮಧ್ಯಂತರ ಸರ್ಕಾರದ ಎಲ್ಲ ಕಾರ್ಯಗಳಲ್ಲಿ ಸಂಪೂರ್ಣ ಸಹಕಾರ ನೀಡಬೇಕು.
![]() |
| ಕ್ಯಾಬಿನೆಟ್ ಮಿಷನ್ |
ಕ್ಯಾಬಿನೆಟ್ ಮಿಷನ್ ಶಿಪರಸನ್ನು ಆರಂಭದಲ್ಲಿ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಗಳನ್ನು ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಂಡವು. ಆದರೆ ಪ್ರಾಂತ್ಯಗಳನ್ನು ವಿಭಾಗಿಸುವ ಅಂಶವನ್ನು ಮುಂದಿಟ್ಟುಕೊಂಡು ಈ ಶಿಪರಸನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ ಮುಸ್ಲಿಂ ಲೀಗ್ ಕ್ಯಾಬಿನೆಟ್ ಆಯೋಗದ ಶಿಪಾರಸುಗಳನ್ನೂ ತಿರಸ್ಕರಿಸಿ ನೇರಕ್ರಮಕ್ಕೆ ಮುಂದಾಯಿತು. ಪಂಜಾಬ್, ಪೂರ್ವ ಬಂಗಾಳ ಮತ್ತು ಕಲ್ಕತಾ ನಗರಗಳು ತೀವ್ರ ಕೋಮುಗಲಭೆಗೆ ಗುರಿಯಾದವು. ಗವರ್ನರ್ ಜನರಲ್ಲನ ಆಹ್ವಾನದ ಮೇರೆಗೆ ಕಾಂಗ್ರೆಸ್ ರಾಷ್ಟ್ರೀಯ ಸರ್ಕಾರವನ್ನು ರಚಿಸಿತು. ಸಂವಿಧಾನ ರಚನಾ ಸಭೆಯನ್ನು ರೋಪಿಸುವಗ ಅನುಸರಿಸಬೇಕಾದ ಕ್ರಮ ಮತ್ತು ಮೂಲಭೂತ ಚೌಕಟ್ಟನ್ನು ರೂಪಿಸಿದ್ದು ಕ್ಯಾಬಿನೆಟ್ ಆಯೋಗದ ಮಹತ್ವದ ಕೊಡುಗೆ ಎಂದು ಒಟ್ಟಾರೆಯಾಗಿ ಹೇಳಬಹುದು.


ಧನ್ಯವಾದಗಳು