ಸಿಂಧೂ ನದಿ( Indus River )
![]() |
Indus River |
ಸಿಂಧೂ ನದಿಯು " ನದಿಗಳ ತಂದೆ" (Father of River) ಎಂದು ಖ್ಯಾತವಾಗಿದೆ. ಸಿಂಧೂ ನದಿಯನ್ನು ಇಂಡಸ್ ಎಂದು ಕರೆಯುತರೆ. ಭಾರತ ದೇಶಕ್ಕೆ ಇಂಡಿಯಾ ಎಂದು ಹೆಸರು ಬರಲು ಈ ನದಿ ಕಾರಣವಾಗಿದೆ. ಸಿಂಧೂ ನದಿಯು ಹಿಮಾಲಯ ಪರ್ವತದ ತಿಬೆಟ್ ನ ಹಿಮಾಲಯದ 6,714 ಮೀ ಎತ್ತರದ "ಕೈಲಾಸ ಪರ್ವತ" ಪ್ರದೇಶದ ಸಿಗ್ಗೆಜಾಂಗ್ಬೋ ಬಳಿಯ ಮಾನಸ ಸರೋವರದಿಂದ ಹುಟ್ಟಿ ಟಿಬೆಟ್ ನಿಂದ ವಾಯುವ್ಯಯ ಅಭಿಮುಖವಾಗಿ ಭಾರತಕ್ಕೆ ಹರಿದು ನಂತರ ಭಾರತದಿಂದ ನೈರುತ್ಯ ಅಭಿಮುಖವಾಗಿ ಪಾಕಿಸ್ತಾನದ ಮೂಲಕ 2,897 ಕಿ, ಮೀ ಉದ್ದ ಹರಿದು ಪಾಕಿಸ್ತಾನದ ಕರಾಚಿ ಬಳಿ ಅರಬ್ಬೀ ಸಮುದ್ರವನ್ನು ಸೇರುತದೆ.
* ಸಿಂಧೂ ಮುಖ್ಯ ನದಿಯು ಭಾರತದಲ್ಲಿ 709 ಕಿ. ಮೀ ಉದ್ದ ಹರಿಯುತ್ತದೆ. ಈ ನದಿಯು ಭಾರತದಲ್ಲಿ ಲಡಾಕ್ ಮತ್ತು ಜಾಸ್ಕರ ಶ್ರೇಣಿಗಳ ಮಧ್ಯದಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಗಂಗಾ ಪರ್ವತದ ಬಳಿ ನೈರುತ್ಯ ದಿಕ್ಕಿನಕಡೆ ತಿರುಗಿ ಪಾಕಿಸ್ತಾನವನ್ನು ಪ್ರವೇಶಿಸುತ್ತದೆ.
* ಈ ನದಿಯು ಪಾಕಿಸ್ತಾನದ ರಾಷ್ಟ್ರೀಯ ನದಿಯಾಗಿದೆ. ಅಲ್ಲವೇ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಉದ್ದವಾಗಿ ಹರಿಯುವ ನದಿಯಾಗಿದ್ದು, ಪಾಕಿಸ್ತಾನದಲ್ಲಿ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸಿ ಪಾಕಿಸ್ತಾನದ ಜೀವನದಿ ಎನಿಸಿದೆ.
* ಸಿಂಧೂ ನದಿ ಮತ್ತು ಅದರ ಉಪನದಿಗಳ ದಡದ ಮೇಲೆ ಭಾರತದ ಪ್ರಾಚೀನ ನಾಗರಿಕತೆ ಕಂಡು ಬಂದಿದ್ದು, ಅದನ್ನು "ಸಿಂಧೂ ಬಯಲಿನ ನಾಗರಿಕತೆ" ಎನ್ನುವರು.
* ಭಾರತದಲ್ಲಿ ಇದರ ಜಲಾಯನ ಕ್ಷೇತ್ರ 1.17 ಲಕ್ಷ ಚ. ಕಿ. ಮೀ ಆಗಿದೆ. ಈ ನದಿಯಿಂದ ಹಿಮಾಚಲ ಪ್ರದೇಶ ಮತ್ತು ವಾಯುವ್ಯ ರಾಜ್ಯಗಳಾದ ಪಂಜಾಬ್, ಹರಿಯಾಣಗಳು ನೀರಾವರಿ ಸೌಲಭ್ಯವನ್ನು ಪಡೆದಿದೆ. ಇದರ ಉಪನದಿಗಳಾದ ಜೀಲಂ, ಚೀನಾಬ್, ಬಿಯಾಸ್, ರಾವಿ ಮತ್ತು ಸಟ್ಲೇಜ್ ಈ 5 ನದಿಗಳು ಪಂಜಾಬ್ ನಲ್ಲಿ ಹರಿಯುವುದರಿಂದ ಪಂಜಾಬ್ ನ್ನು ಪಂಚನದಿಗಳ ಬೀಡು ಎನ್ನುವರು ಪಂಚ ನದಿಗಳು ಪಂಜಾಬ್ ನಲ್ಲಿ ಹರಿಯುದರಿಂದ ನೀರಾವರಿ ಹೆಚ್ಚಾಗಿದ್ದು "ಗೋಧಿಯ ಕಣಜ"ವಾಗಿದೆ.
ಸಿಂಧೂ ನದಿಯ ಉಪನದಿಗಳು (Indus River)
ಸಿಂಧೂ ನದಿಯ ಉಪನದಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ --
1) ಬಲದಂಡೆಯ ಉಪನದಿಗಳು :-
ಶಿಯೋಕ್ (Shyok), ಹುಂಜಾ (Hunza), ಗಿಲ್ಗಿಟ್ ನದಿ (Gilgit), ಸ್ವತ್ ನದಿ(Swat), ಕಾಬೂಲ್ ನದಿ(Kabul), ಕರ್ರಮ್ ನದಿ(Kurram), ಗೋಮಲ್ ನದಿ(Gonal).
2) ಎಡದಂಡೆಯ ಉಪನದಿಗಳು :-
ಝೇಲಂ, ಚೀನಾಬ್, ಬಿಯಾಸ್, ರಾವಿ ಮತ್ತು ಸಟ್ಲೇಜ್.
1) ಝೇಲಂ ನದಿ :-
ಈ ನದಿ ಕಾಶ್ಮೀರದ ಪೀರ್ ಪಂಜಾಬ್ ಶ್ರೇಣಿಯಲ್ಲಿರುವ ಶೇಷನಾಗ್ ಎಂಬಲ್ಲಿ ಉಗಮ ಹೊಂದಿ ಕಾಶ್ಮೀರ ಕಣಿವೆ ಹಾಗೂ ಉಲ್ಲಾರ್ ಸರೋವರದ ಮೂಲಕ ಹರಿಯುವುದು. ಉಲ್ಲಾರ್ ಸರೋವರವು ಭಾರತದ ಅತಿದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಝೇಲಂ ನದಿಯನ್ನು ಸಂಸ್ಕೃತದಲ್ಲಿ ವಿತಾಷ್ಟ ಎಂದು ಕರೆಯುತ್ತಾರೆ.
* ಇದೊಂದು ಐತಿಹಾಸಿಕವಾದ ನದಿಯಾಗಿದ್ದು, ಚೀನಾಬ್ ನದಿಯ ಉಪನದಿಯಾಗಿದೆ.
* ಈ ನದಿಯ ದಡದಲ್ಲಿ ಭಾರತದ ಪುರುವಿನ ದೊರೆ ಪೌರಸ್ ಮತ್ತು ಅಲೆಗ್ಸಾನ್ ಡರ್ ನಡುವೆ ಕ್ರಿ. ಪೂ. 326 ರಲ್ಲಿ ಯುದ್ದ ಜರುಗಿತ್ತು.
* ಈ ಐತಿಹಾಸಿಕ ಯುದ್ದವನ್ನು ಐಡಸ್ಪಸ್ ಕದನ ಎಂದು ಕರೆಯುತ್ತಾರೆ. ಝೇಲಂ ನದಿಯನ್ನು ಐಡಸ್ಪಸ್ ನದಿ ಎನ್ನುವರು.
2) ಚೀನಾಬ್ ನದಿ :-
ಚೀನಾಬ್ ನದಿಯು ಚಂದ್ರ ಮತ್ತು ಭಾಗ ಎಂಬ 2 ಜಲ ಮೂಲಗಳನ್ನು ಒಳಕೋಂಡಿದ್ದು, ಇವು ಹಿಮಾಚಲ ಪ್ರದೇಶದ ಬಳಿ ಲಾವುಲಾ ಸ್ಪಿತಿ ಕಣಿವೆಯಲ್ಲಿ ಉಗಮವಾಗಿ ಕಾಶ್ಮೀರದ ಮೂಲಕ ಪಾಕಿಸ್ತಾನದಲ್ಲಿ ಹರಿದು ಸಟ್ಲೇಜ್ ನದಿಯನ್ನು ಸೇರುತದೆ. ಝೇಲಂ ನದಿಯು ಟ್ರಿಮ್ಮು ಎಂಬಲ್ಲಿ ಚೀನಾಬ್ ನದಿಯನ್ನು ಸೇರುತ್ತದೆ.
3) ರಾವಿ :-
ಹಿಮಾಚಲ ಪ್ರದೇಶದ ಕುಲು ಬೆಟ್ಟಗಳಲ್ಲಿ ಉಗಮವಾಗುತ್ತದೆ. ಈ ನದಿಯ ದಡದ ಮೇಲೆ ಪಾಕಿಸ್ತಾನದಲ್ಲಿ ಹರಪ್ಪ ನಗರ ಕಂಡು ಬಂದಿದ್ದು, ಇದನ್ನು 1921ರಲ್ಲಿ ದಾಯರಂ ಸಹಾನಿ ಅವರು ಶೋಧಿಸಿದರು. ಈ ನದಿಯನ್ನು ಪುರುಷಣಿ & ಇರಾವತಿ ನದಿಗೆ ಅಡ್ಡಲಾಗಿ ಪಂಜಾಬ್ ನಲ್ಲಿ ರಣಚಿತ್ ಡ್ಯಾಮ್ ನಿರ್ಮಿಸಲಾಗಿದೆ.
4) ಬಿಯಾಸ್ :-
ಹಿಮಾಚಲ ಪ್ರದೇಶದ ಕುಲು ಬೆಟ್ಟಗಳ ಕಣಿವೆಯ ಬಿಯಾಸ್ ಕುಂಡ್ ಬಳಿ ಉಗಮವಾಗಿ ರೋಹ್ಟಾಂಗ್ ಕಣಿವೆಯ ಮೂಲಕ ಹರಿಯುತ್ತದೆ. ಇದು ಪಂಜಾಬ್ನಲ್ಲಿ ಸಟ್ಲೇಜ್ ನದಿಗೆ ಸೇರುತ್ತದೆ. ಭಾರತದೊಳಗೆ ಹುಟ್ಟಿ ಭಾರತದ ಒಳಗೆ ಅಂತ್ಯವಾಗುವ ಸಿಂಧೂ ನದಿಯ ಏಕೈಕ ಉಪನದಿಯಾಗಿದೆ.
5) ಸಟ್ಲೇಜ್ ನದಿ :-
ನದಿಯು ತಿಬೆಟನ ಕೈಲಾಸ ಪರ್ವತ ರಾಕಸ್ ಸರೋವರದ ಬಳಿ ಉಗಮವಾಗುತ್ತದೆ. ಭಾರತದ ಗಡಿಯಾಚೆಯಲ್ಲಿ ಉಗಮ ಹೊಂದಿ ಭಾರತದಲ್ಲಿ ಹರಿಯುವ ಸಿಂಧೂ ನದಿಯ ಏಕೈಕ ಉಪನದಿಯಾಗಿದೆ. ಈ ನದಿಯು ಟಿಬೆಟ್ ನಿಂದ ಶೀಷ್ಕಿಲ್ಲಾ ಕಣಿವೆಯ ಮೂಲಕ ಹಿಮಾಚಲ ಪ್ರದೇಶವನ್ನು ಪ್ರವೇಶಿಸುತ್ತದೆ. ನಂತರ ಪಂಜಾಬ್ ಮೂಲಕ ಹರಿದು ಪಾಕಿಸ್ತಾನದಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. ಇದು ಸಿಂಧೂ ನದಿಯ ಅತಿ ದೊಡ್ಡ ಉಪನದಿಯಾಗಿದೆ. ಈ ನದಿಗೆ ಹಿಮಾಚಲ ಪ್ರದೇಶದಲ್ಲಿ ಭಾಕ್ರಾ ನಂಗಲ್ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
ಧನ್ಯವಾದಗಳು