ಗಂಗಾ ನದಿ
ಭಾರತದ ರಾಷ್ಟ್ರೀಯ ನದಿ ಮತ್ತು ಉದ್ದವಾದ ನದಿಯಾಗಿದ್ದು, ಉತ್ತರ ಭಾರತದ ಮೈದಾನದಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶ ಸೇರಿ ನಂತರ ಬಂಗಾಳ ಕೊಲ್ಲಿ ಸೇರುತ್ತದೆ.
ಭಾರತದ ಪವಿತ್ರ ನದಿಯಾದ ಗಂಗಾನದಿಯು ಮೊದಲಿಗೆ ಗಂಗೋತ್ರಿ ಎಂಬಲ್ಲಿ ಭಗೀರಧಿ ಮತ್ತು ಗೋಮುಖ್ ಎಂಬಲ್ಲಿ ಅಲಕಾನಂದ ಎಂಬ ಪ್ರತ್ಯೇಕ ನದಿಗಳಾಗಿ ಹುಟ್ಟಿ ದೇವಪ್ರಯಾಗ್( ಉತ್ತರಖಂಡ ) ಎಂಬಲ್ಲಿ ಸಂಗಮ ಹೊಂದಿ ಗಂಗಾನದಿಯಾಗಿ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನ ಹಿಮಾಲಯ ಪರ್ವತಗಳ ಇಕ್ಕಟ್ಟಾದ ಕಣಿವೆಗಳಲ್ಲಿ ಹರಿಯುತ್ತಾ ಋಷಿಕೇಶದ ನಂತರ ಹಿಮಲಯವನ್ನು ಬಿಟ್ಟು ಹರಿದ್ವಾರದ ಬಳಿ ಮೈದಾನವನ್ನು ಪ್ರವೇಶಿಸುತ್ತದೆ.
![]() |
Ganga River |
ಉತ್ತರ ಪ್ರದೇಶದ ಅಲಹಾಬಾದ್ ( ಪ್ರಯಾಗ್ ರಾಜ್ ) ಬಳಿ ಯಮುನಾ ನದಿಯು ಗಂಗಾ ನದಿಯನ್ನು ಸೇರುತ್ತದೆ.
* ಗಂಗಾ ನದಿಯು 2,525 ಕಿ. ಮೀ ಉದ್ದ ಹರಿಯುತ್ತದೆ.
* ದಡದಲ್ಲಿನ ನಗರಗಳು -- ಹರಿದ್ವಾರ, ಕಾನ್ಪುರ, ಅಲಹಾಬಾದ್, ವಾರಣಾಸಿ, ಘಾಜಿಪುರ, ಪಾಟ್ನಾ.
* ಸಂಬಂಧಿಸಿದ ದೇಶಗಳು -- ಭಾರತ & ಬಾಂಗ್ಲಾದೇಶ.
* ಹರಿಯುವ ರಾಜ್ಯಗಳು -- ಉತ್ತರ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಪಶ್ಚಿಮ ಬಂಗಾಳ.
* ಅಣೆಕಟ್ಟೆಗಳು -- ಫಾರಕ್ಕ ಅಣೆಕಟ್ಟೆ ( ಪಶ್ಚಿಮ ಬಂಗಾಳದ ಬಳಿ ) ಮತ್ತು ಉತ್ತರಖಂಡದಲ್ಲಿ ತೇಹರಿ ಅಣೆಕಟ್ಟೆ.
ಗಂಗಾ ನದಿಯ ಮೂಲ ನದಿಗಳು :-
ಭಗೀರಧಿ ನದಿ ಮತ್ತು ಅಳಕಾನಂದ ನದಿ
ಎಡ ದಂಡೆಯ ಉಪನದಿಗಳು :-
ರಾಮ್ ಗಂಗಾ, ಗೋಮತಿ, ಕರ್ನಾಲಿ( ಘಗ್ರ ), ಗಂಡಕಿ, ಮಹಾಕಾಳಿ, ಕೋಸಿ.
ಬಲ ದಂಡೆಯ ಉಪನದಿಗಳು :-
ಯಮುನಾ ಮತ್ತು ಸೋನಾ.
ಗಂಗಾ ನದಿಯ ಮೂಲ ನದಿಗಳು:-
1) ಭಾಗೀರಧಿ ನದಿ :-
ಉತ್ತರಖಂಡ ರಾಜ್ಯದಲ್ಲಿನ ಹಿಮಾಲಯದ ಗಂಗೋತ್ರಿ ಎಂಬಲ್ಲಿ ಉಗಾಮಿಸಿ ಗಂಗಾ ನದಿಯ ಮೂಲಗಳಲ್ಲಿ ಒಂದಾಗಿದೆ. ಈ ನದಿಗೆ ಉತ್ತರಖಂಡದಲ್ಲಿ ತೇಹರಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಇದು 260.5 ಮೀಟರ್ ಎತ್ತರವಿದ್ದು , ಭಾರತದ ಅತಿ ಎತ್ತರವಾದ ಅಣೆಕಟ್ಟೆಯಾಗಿದೆ.
2) ಅಳಕಾನಂದ :-
ಈ ನದಿಯು ಉತ್ತರ ಖಂಡ ರಾಜ್ಯದಲ್ಲಿನ ಹಿಮಾಲಯದ ಗೋಮುಖ್ ಎಂಬಲ್ಲಿ ಉಗಮಿಸಿ ಗಂಗಾ ನದಿಯ ಮೂಲಗಳಲ್ಲಿ ಒಂದಾಗಿದೆ. ಮಂದಾಕಿನಿ ಎಂಬ ನದಿಯು ಉತ್ತರಖಂಡದ ಕೇದಾರನಾಧದ ಬಳಿ ಚೋರಬರಿ ಎಂಬ ಹಿಮ ನದಿಯಿಂದ ಹುಟ್ಟಿ ರುದ್ರ ಪ್ರಯಾಗದಲ್ಲಿ ಭಗೀರಾಧಿ ನದಿಯನ್ನು ಸೇರುತ್ತದೆ.
*ಎಡ ದಂಡೆಯ ಉಪನದಿಗಳು :-
1) ರಾಮ್ ಗಂಗಾ ನದಿ :-
ಉತ್ತರ ಖಂಡ ಮತ್ತು ಉತ್ತರ ಪ್ರದೇಶದಲ್ಲಿ ಹರಿಯುವ ಗಂಗಾ ನದಿಯ ಉಪನದಿಯಾಗಿದ್ದು. ಇದರ ಒಟ್ಟು ಉದ್ದ 596 ಕಿ. ಮೀ. ಇದರ ದಡದಲ್ಲಿ ಬರೇಲಿ ಕಂಡುಬರುತ್ತದೆ. ಈ ನದಿಗೆ ಉತ್ತರಖಂಡದ ಗರ್ವಾಲ್ ಜಿಲ್ಲೆಯ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಬಳಿ ಕಲಗರ್ಹ( Kalagarh ) ಎಂಬ ಸ್ಥಳದಲ್ಲಿ ಅಣೆಕಟ್ಟೆಯನ್ನು ನಿರ್ಮಿಸಿದ್ದು, ಇದನ್ನು ರಾಮ್ ಗಂಗಾ ಅಣೆಕಟ್ಟೆ ಎನ್ನುತ್ತಾರೆ.
2) ಗೋಮತಿ :-
ಗೋಮತಿ ನದಿಯು ಗಂಗಾ ನದಿಯ ಎಡ ದಂಡೆಯ ಉಪನದಿಯಾಗಿದ್ದು, ನೇಪಾಳದ ಗೋಮತ್ತಾಲ್ ಎಂಬ ಪ್ರದೇಶದಲ್ಲಿ ಉಗಮಿಸಿ 900 ಕಿ. ಮೀ ಉದ್ದ ಹರಿದು. ಉತ್ತರ ಪ್ರದೇಶದ ವಾರಣಾಸಿ ಬಳಿ ಗಂಗಾ ನದಿಯನ್ನು ಸೇರುತ್ತದೆ. ಈ ನದಿಯ ದಡದ ಮೇಲೆ ಉತ್ತರ ಪ್ರದೇಶದ ರಾಜಧಾನಿ ಲಾಕ್ನೋ, ಸುಲ್ತಾನಪುರ ಮತ್ತು ಚೌನ್ನಾಪುರ ನಗರ ಕಂಡು ಬರುತ್ತದೆ.
3) ಕರ್ನಾಲಿ :-
ಚೀನಾದ ಟಿಬೆಟ್ ಭಾಗದಲ್ಲಿ ಉಗಮಿಸುವ ಈ ನದಿಯನ್ನು ನೇಪಾಲದಲ್ಲಿ ಕರ್ನಾಲಿ ನದಿ ಎನ್ನುವರು. ಇದು ಒಟ್ಟು 1,080 ಕಿ. ಮೀ ಉದ್ದವಿದ್ದು, ನೇಪಾಲದಲ್ಲಿನ ಅತಿ ಉದ್ದವಾದ ನದಿಯಾಗಿದೆ. ಗಂಗಾ ನದಿಯ ಎಡ ದಂಡೆಯ ಅತಿ ದೊಡ್ಡ ಉಪನದಿಯಾಗಿರುವ ಘಾಗ್ರ ನದಿ ಯಮುನಾ ನದಿಯ ನಂತರ ಗಂಗಾ ನದಿಯ ದೊಡ್ಡ ಉಪ ನದಿಯಾಗಿದೆ.
ಈ ನದಿಯ ದಡದ ಮೇಲೆ ಫೈಜಾಬಾದ್ ( ಆಯೋದ್ಯೆ ) ನಗರ ಕಂಡು ಬಂದಿದ್ದು, ಇದು ಬಿಹಾರದಲ್ಲಿ ಗಂಗಾ ನದಿಯನ್ನು ಸೇರುತ್ತದೆ. ರಫ್ತಿ ಎಂಬುದು ಈ ನದಿಯ ಎಡ ದಂಡೆಯ ಉಪ ನದಿಯಾಗಿದ್ದು. ರಫ್ತಿ ನದಿಯ ದಡದ ಮೇಲೆ ಭಾರತದ ಜಾವ ಎನಿಸಿದ ಗೋರಕ್ಪುರ ನಗರ ಕಂಡು ಬರುತ್ತದೆ.
4) ಮಹಾಕಾಳಿ ನದಿ :-
ಈ ನದಿಯು ಉತ್ತರ ಖಂಡದ ಕಲಪಾಣಿ ಎಂಬಲ್ಲಿ ಉಗಾಮಿಸಿ ನೇಪಾಳ ಮತ್ತು ಭಾರತದ ಮಧ್ಯ ಗಡಿಯಾಗಿ ಹರಿದು ಉತ್ತರ ಪ್ರದೇಶದಲ್ಲಿ ಘಾಗ್ರಾ ನದಿಯ ಬಳದಂಡೆಗೆ ಸೇರುತ್ತದೆ. ಈ ನದಿಯನ್ನು ಭಾರತದಲ್ಲಿ ಶಾರದ ನದಿ ಎಂದು, ನೇಪಾಳದಲ್ಲಿ ಮಹಾಕಾಳಿ ನದಿ ಎಂತಲೂ ಉತ್ತರ ಖಂಡದಲ್ಲಿ ಕಾಲಿಗಂಗಾ ಎಂತಲೂ ಕರೆಯುವರು.
5) ಕೋಸಿ ನದಿ :-
ಕೋಸಿ ನದಿಯನ್ನು "ಬಿಹಾರದ ಕಣ್ಣೀರಿನ ನದಿ" ಎಂದು ಕರೆಯುತ್ತಾರೆ. ಕೋಸಿ ನದಿಯು ಗಂಗಾ ನದಿಯ ಉಪನದಿಯಾಗಿದೆ. ಹಿಮಾಲಯ ಪರ್ವತದ ನೇಪಾಳ ಬಳಿಯ ಶೀಷ ಪಂಗ್ಮಾ ಶಿಖರವು ಕೋಸಿ ನದಿಯ ಮೂಲವಾಗಿದೆ. ಕೋಸಿ ನದಿಯು 729 ಕಿ. ಮೀ ಹರಿಯುತ್ತಿದ್ದು, ನೇಪಾಳದಲ್ಲಿ " ಅರುಣಾ ನದಿ " ಎನ್ನುವರು. ಈ ನದಿಗೆ ನೇಪಾಳ ಮತ್ತು ಭಾರತದ ಸಹಯೋಗದಲ್ಲಿ ಕೋಸಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
ಬಲ ದಂಡೆಯ ಉಪನದಿಗಳು :-
1) ಯಮುನಾ ನದಿ :-
ಯಮುನಾ ನದಿ ಗಂಗಾ ನದಿಯ ಅತಿ ದೊಡ್ಡ ಉಪನದಿ. ಯಮುನಾ ನದಿಯ ಹಿಮಾಲಯ ಪರ್ವತದ ಬಳಿಯ ಉತ್ತರಖಂಡದ ತೇಹರಿ ಗಡವಾಲ ಜಿಲ್ಲೆಯ ಯಮುನೋತ್ರಿಯಲ್ಲಿ ಉಗಮವಾಗುತ್ತದೆ. ಇದು ಹರಿಯಾಣ, ದೆಹಲಿ, ಮತ್ತು ಉತ್ತರ ಪ್ರದೇಶದ ಮಧುರ ಮತ್ತು ಆಗ್ರಾದ ಮೂಲಕ ಹರಿದು ಅಲಹಾಬಾದ್ ( ಪ್ರಯಾಗ್ ರಾಜ್ )ನಲ್ಲಿ ಗಂಗಾನದಿಯನ್ನು ಸೇರಿ ಬಂಗಾಳ ಕೊಲ್ಲಿ ಸೇರುತ್ತದೆ. ಇದನ್ನು ಜಮುನಾ ನದಿ ಎಂತಲೂ ಕರೆಯುತ್ತಾರೆ.
ಯಮುನಾ ನದಿಯ ಉದ್ದ 1,376 ಕಿ. ಮೀ ಗಂಗಾ ಮತ್ತು ಯಮುನಾ ನದಿಯು 3.71 ಲಕ್ಷ ಚ. ಕಿ. ಮೀ ವಿಸ್ತಾರವಾದ ಜಲಾನಯನ ಪ್ರದೇಶ ಹೊಂದಿದೆ. ಗಂಗಾ ನದಿಗೆ ಸಮಾಂತರವಾಗಿ ಹರಿದು ಅಲಹಾಬಾದ್ನಲ್ಲಿ ಸೇರುವುದರಿಂದ ಯಮುನಾ ನದಿಯನ್ನು ಗಂಗಾ ನದಿಯ ಸೋದರಿ ಎನ್ನುವರು. ಭಾರತದಲ್ಲಿ ಗಂಗಾ ಯಮುನಾ ಮೈದಾನವು ಅತಿ ಫಲವತ್ತಾದ ಮೈದಾನವಾಗಿದೆ.
ಹಾತ್ನಿ ಬ್ಯಾರೇಜ್ :-
ಹರಿಯನ ರಾಜ್ಯದ ಯಮುನಾ ನಗರ ಜಿಲ್ಲೆಯಲ್ಲಿ ಯಮುನಾ ನದಿಗೆ ನಿರ್ಮಿಸಿರುವ ಅಣೆಕಟ್ಟೆ ಯಾಗಿದೆ. ಇದನ್ನು 1996 ರಿಂದ 1999 ರ ನಡುವಿನ ಅವಧಿಯಲ್ಲಿ ನಿರ್ಮಿಸಲಾಯಿತು. ಈ ಅಣೆಕಟ್ಟೆನಿಂದ ಪೂರ್ವ ಮತ್ತು ಪಶ್ಚಿಮಕ್ಕೆ ಎರಡು ಕಾಲುವೆಗಳನ್ನು ನಿರ್ಮಿಸಿದ್ದು, ಪೂರ್ವದ ಕಾಲುವೆ ಉತ್ತರ ಪ್ರದೇಶಕ್ಕೆ ಮತ್ತು ಪಶ್ಚಿಮ ಕಾಲುವ ಹರಿಯಾಣಕ್ಕೆ ನೀರುಣಿಸುತ್ತದೆ.
ಯಮುನ ನದಿಯ ಎಡ ದಂಡೆಯ ಉಪನದಿಗಳು :-
ಹಿಂಡೋನ್, ಟೋನ್ಸ್ , ಗಿರಿ, ರಿಷಿಗಂಗಾ, ಹನುಮಾನ್ ಗಂಗಾ & ಕದೇರಿ
ಯಮುನಾ ನದಿಯ ಬಲ ದಂಡೆಯ ಉಪನದಿಗಳು :-
ಚಂಬಲ್, ಬೆಟ್ವಾ, ಮತ್ತು ಕೆನ್.
ಧನ್ಯವಾದಗಳು