ತಾಮ್ರ :- ದೊರೆಯುವಿಕೆ, ಉದ್ಧರಣ, ಭೌತಗುಣಗಳು, ಮತ್ತು ಉಪಯೋಗಗಳು [ ತಾಮ್ರ - Copper ]
▶ ಮಾನವನು ಮೊಟ್ಟ ಮೊದಲು ಬಳಸಿದ ಲೋಹವೇ "ತಾಮ್ರ"
▶ ಮಾನವನು ತಾಮ್ರವನ್ನು ಬಳಸಲು ಹತ್ತು ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭಿಸಿದನು.
▶ ಕ್ರಿ. ಪೂ 3900 ರಲ್ಲಿ ಈಜಿಪ್ಟ್ ನಲ್ಲಿ ಹಾಗೂ ಕ್ರಿ. ಪೂ 3000 ರಲ್ಲಿ ಭಾರತದಲ್ಲಿ ತಾಮ್ರದ ಬಳಕೆ ರೂಢಿಯಲ್ಲಿತ್ತು.
▶ ಭಾರತದಲ್ಲಿ ಮೊದಲ ತಾಮ್ರದ ನಿಕ್ಷೇಪವನ್ನು ಜಾರ್ಖಂಡ ನಲ್ಲಿನ ಲಾವೆಂಟೈನ್ ಬಾಲ್ ಥಾಮಸ್ ಹಾಲೆಂಡ್ ಎಂಬುವರು 1903 ರಲ್ಲಿ ತಾಮ್ರದ ನಿಕ್ಷೇಪವಿರುವ ಪ್ರದೇಶಗಳ ಸಮೀಕ್ಷೆ ಮಾಡಿದರು.
▶ ತಾಮ್ರದ ಪರಮಾಣು ಸಂಖ್ಯೆ - 29
▶ ಸರ್ ಥಾಮಸ್ ಹಾಲೆಂಡ್ ರವರ ವರದಿಯನ್ನು ಆಧರಿಸಿ ಭೂಗರ್ಭ ಸರ್ವೇಕ್ಷಣಾ ಇಲಾಖೆ ( ಜೆ. ಎಸ್. ಐ) ತಾಮ್ರದ ಆದಿರನ್ನು ಕುರಿತು ವ್ಯಾಪಕವಾದ ಸಮೀಕ್ಷೆ ನಡೆಸಿದೆ.
▶ ಮಾನವನು ತಾಮ್ರವನ್ನು ಬಳಸುತ್ತಿದ್ದ ಯುಗವನ್ನು "ತಾಮ್ರದ ಯುದ" or " ಚಾಲ್ಕೋಲಿಥಿಕ್ ಯುಗ" ಎನ್ನುವರು.
▶ ಪ್ರಾಚೀನ ಕಾಲದಲ್ಲಿ ತಾಮರವು ಮೆಡಿಟರೇನಿಯನ್ ಸಮುದ್ರದ ದ್ವಿಪವಾದ ಸೈಪ್ರಸ್ನದಲ್ಲಿ ಪ್ರಮುಖವಾಗಿ ದೊರೆಯುವುದರಿಂದ ಇದಕ್ಕೆ ಸಿಪ್ರಯನ್ ಲೋಹ ಎನ್ನುವರು. ಇದರ ರಾಸಾಯನಿಕ ಸಂಕೇತ "Cu" ಹಾಗೂ ಕಾಫರ್ ಸಿಪ್ರಯನ್ ( Copper cyprien ) .
▶ ಚರಿತ್ರೆ ಪೂರ್ವ ಮಾನವನು ಉಪಯೋಗಿಸುತ್ತಿದ್ದ ಕೊಡಲಿ ಮತ್ತು ಕತ್ತರಿಸುವ ಅಲಗುಗಳು ತಾಮ್ರದ ಉಪಕರಣಗಳಗಿದ್ದವು ಅವುಗಳನ್ನು ಶಿಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದೊರೆತ ತಾಮ್ರವನ್ನು ಬಡಿದು ತಯಾರಿಸಲಾಗುತ್ತಿತ್ತು.
▶ ಚರಿತ್ರಾಪೂರ್ವ ಮಾನವನು ತಾಮರಕ್ಕೆ ತವರನ್ನು ಕೊಡಿಸಿ ಕಂಚು ಎಂಬ ಹೆಚ್ಚು ಗಡುಸಾದ ಮಿಶ್ರ ಲೋಹವನ್ನು ತಯಾರಿಸುವ ಕಲೆಯನ್ನು ಕಲಿತ. ಅಂದಿನಿಂದ ಕಂಚಿನ ಯುಗ ಪ್ರಾರಂಭವಾಯಿತು.
ತಾಮ್ರ
ತಾಮ್ರ |
ತಾಮ್ರದ ದೊರೆಯುವಿಕೆ
▶ ತಾಮ್ರವು ಭೂಮಿಯ ಹೊರ ಪದರದಲ್ಲಿ ಅತಿ ಹೇರಳವಾಗಿ ದೊರೆಯುವ ಖನಿಜಗಳಲ್ಲಿ ಒಂದು. ಇದು ಶುದ್ಧ ರೂಪದಲ್ಲಿ or ಸಂಯುಕ್ತ ರೂಪದಲ್ಲಿ ದೊರೆಯುತ್ತದೆ.
▶ ತಾಮ್ರವು ಭೂಮಿಯಲ್ಲಿ ನೈಸರ್ಗಿಕವಾಗಿ ಕಬ್ಬಿಣ, ಗಂಧಕ, ಮುಂತಾದ ವಸ್ತುಗಳೊಂದಿಗೆ ದೊರೆಯುತ್ತದೆ.
ತಾಮ್ರದ ಉದ್ಧರಣ :-
ಸಂಯೋಗ ಸ್ಥಿತಿಯಲ್ಲಿರುವ ತಾಮ್ರವನ್ನು ಸಾಮಾನ್ಯವಾಗಿ ತಾಮ್ರದ ಪೈರೇಟ್ ನಿಂದ ಉದ್ಧರಿಸಲಾಗುವುದು, ಈ ಆದಿರನ್ನು ಬುಗುರು ಪ್ಲವನ ( Froth Floation ) ವಿಧಾನದಿಂದ ಸಾರವರ್ಧಿಸುತ್ತಾರೆ.
▶ ಶುದ್ದ ತಾಮ್ರವನ್ನು ಪಡೆಯಲು ಎಲೆಕ್ಟ್ರೋಲೆಸಿಸ್ ವಿಧಾನವನ್ನು ಅನುಸಾರಿಸುತ್ತಾರೆ.
ತಾಮ್ರದ ಭೌತಗುಣಗಳು
▶ ತಾಮ್ರ ಮೃದುವಾಗಿದೆ. ಯಾವುದೇ ಆಕಾರವನ್ನು ಹೊಂದುತ್ತದೆ. ಅದುದ್ದರಿಂದ ಕೈಗಾರಿಕೆಗಳ ಮೂಲ ಕಚ್ಚವಸ್ತುವಾಗಿದೆ.
▶ ತಾಮ್ರ ಕಂದು ಬಣ್ಣವನ್ನು ಹೊಂದಿದೆ.
▶ ಇದರ ಕುದಿಯುವ ಬಿಂದು 2563 ಡಿಗ್ರಿ ಸೆಂ.
▶ ಇದರ ಕರಗುವ ಬಿಂದು 1085 ಡಿಗ್ರಿ ಸೆಂ.
ತಾಮ್ರದ ಮಿಶ್ರ ಲೋಹಗಳು
▶ ತಾಮ್ರದ ಜೊತೆ ತವರ ಸೇರಿಸಿದಾಗ ಕಂಚು ಬರುತ್ತದೆ.
▶ ತಾಮ್ರದ ಜೊತೆಗೆ ಸತು ಸೇರಿಸಿದಾಗ ಹಿತ್ತಾಳೆ ಬರುತ್ತದೆ.
▶ ತಾಮ್ರದ ಜೊತೆಗೆ ನಿಕ್ಕಲ್ ಮತ್ತು ಸತುವನ್ನು ಸೇರಿದಾಗ ಜರ್ಮನ್ ಸಿಲ್ವರ್ ಬರುತ್ತದೆ.
ತಾಮ್ರದ ಉಪಯೋಗಗಳು
▶ ಬೆಳ್ಳಿಯ ನಂತರ ತಾಮ್ರವು ಅತ್ಯಂತ ಉತ್ತಮವಾದ ವಿದ್ಯುತ್ ವಾಹಕವಾಗಿದೆ. ಆದುದ್ದರಿಂದ ಅದನ್ನು ವಿದ್ಯುತ್ ತಂತಿ, ವಿದ್ಯುತ್ ಜನಕ, ವಿದ್ಯುತ್ ಮೋಟರ್, ವಿದ್ಯುತ್ ಸ್ವಿಚ್ ಗಳು, ವಿದ್ಯುತ್ ಯಂತ್ರ, ವಿದ್ಯುತ್ ಉಪಕರಣಗಳಲ್ಲಿ ಅಧಿಕವಾಗಿ ಬಳಸುತ್ತಾರೆ.
▶ ಕಬ್ಬಿಣದ ನಂತರ ಲೋಹ ಕೈಗಾರಿಕೆಗಳಲ್ಲಿ ಬಳಸಲ್ಪಡುವ 2 ನೇ ಮಹತ್ವವಾದ ಲೋಹವಾಗಿದೆ.
▶ ತಾಮ್ರವು ಅಧಿಕ ತುಕ್ಕು ನಿರೋಧಕತೆ, ತಂತು ಶೀಲತ್ವ, ಪ್ರಾಬಲ್ಯತೆ ಹಾಗೂ ವಿದ್ಯುಚ್ಛಕ್ತಿ ಮತ್ತು ಶಾಖಗಳಿಗೆ ಅತ್ಯಧಿಕ ವಾಃಕತ್ವ ಗುಣವನ್ನು ಹೊಂದಿದೆ. ಆದುದ್ದರಿಂದ ಇದು ಮಹತ್ವವಾದ ಲೋಹವಾಗಿದೆ.
▶ ತಾಮ್ರವು ತುಕ್ಕು ನಿರೋಧಕತೆ ಗುಣವನ್ನು ಹೊಂದಿರುವುದರಿಂದ ನಿಕ್ಕಲ್ ಲೋಹದೊಂದಿಗೆ ತಾಮ್ರವನ್ನು ಮಿಶ್ರಣಗೊಳಿಸಿ ಮೊನೆಲ್ ಲೋಹವನ್ನು ಪಡೆಯಲಾಗುತ್ತದೆ. ಇದು ಅತಿ ಹೆಚ್ಚು ಕಠಿಣವಾಗಿದ್ದು ರಾಸಾಯನಿಕ ಕೈಗಾರಿಕೆಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ.
▶ ತಾಮ್ರವನ್ನು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಬಳಸುತ್ತಾರೆ
▶ ತಾಮ್ರವನ್ನು ಮನೆಗೆಲಸದ ಪಾತ್ರೆ, ಘರ್ಷಕ ಯಂತ್ರದ ಭಾಗ, ಸ್ವಯಂ ಚಾಲಕ ವಾಹನ, ದೂರವಾಣಿ ಮತ್ತು ದೂರವಾಣಿ ತಂತಿ, ರೇಡಿಯೋ, ಶೀತಕ, ವಾಯು ನಿಯಂತ್ರಣ ಮತ್ತು ಯುದ್ದ ಸಾಮಗ್ರಿಗಳಲ್ಲಿ ಬಳಸುತ್ತಾರೆ.
▶ ತಾಮ್ರವು ಕೀಟನಾಶಕ ಗುಣವನ್ನು ಹೊಂದಿದೆ. ಆದುದ್ದರಿಂದ ಕೀಟನಾಶಕಗಳ ತಯಾರಿಕೆಯಲ್ಲಿ ಬಳಸುತ್ತಾರೆ. ತಾಮ್ರದ ಸಲ್ಫೇಟ್ ನ್ನು ಕ್ಯಾಲಿಕೋ ಮುದ್ರಣದಲ್ಲಿ ಹಾಗೂ ಬಣ್ಣದ ತಯಾರಿಕೆಯಲ್ಲಿ ಬಳಸುತ್ತಾರೆ.
ಧನ್ಯವಾದಗಳು