Type Here to Get Search Results !

ಬೆಳ್ಳಿಯ ಉಪಯೋಗಗಳು - ಸಂಯುಕ್ತಗಳು - ಗುಣಲಕ್ಷಣಗಳು -ಬೆಳ್ಳಿ

ಬೆಳ್ಳಿ silver 

 
• ಇದರ ಲ್ಯಾಟಿನ್ ಹೆಸರು - ಅರ್ಜೆಂಟೇನಂ 
• ಬೆಳ್ಳಿಯ ರಾಸಾಯನಿಕ ಸಂಕೇತ -Ag
•ದ್ವಿತೀಯ ಸ್ಥಾನದಲ್ಲಿರುವ ಅಮೂಲ್ಯ ಲೋಹ.
Silver



ಬೆಳ್ಳಿಯ ಉಪಯೋಗಗಳು :


• ಬೆಳ್ಳಿಯು ಒಂದು ಅಪರೂಪದ ಲೋಹವಾಗಿದ್ಡು, ನಾಣ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಶೃಂಗಾರ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕನ್ನಡಿಗಳ ಹಿಂಭಾಗಕ್ಕೆ ಲೇಪನ ಮಾಡುವಲ್ಲಿ ಬಳಸುತ್ತಾರೆ.
• ವೈದ್ಯಕೀಯ ಕ್ಷೇತ್ರದಲ್ಲಿ ಬೆಳ್ಳಿಯು ಹಾಳೆಗಳಾಗಿ ಬಳಸುತ್ತಾರೆ, ಹಾಗೂ ಕ್ರಿಮಿನಾಶಕವಾಗಿ ಬಳಸುತ್ತಾರೆ. ಬೆಳ್ಳಿಯೊಂದಿಗೆ ತಾಮ್ರವನ್ನು ಸೇರಿಸುವುದರಿಂದ ಗಟ್ಟಿಯಾಗುತ್ತದೆ ಮತ್ತು ಬೇಗ ಕರಗುತ್ತದೆ. ವಿಗ್ರಹ ತಯಾರಿಕೆ, ಪಾತ್ರೆಗಳು, ಬಟ್ಟೆಗಳ ಜರಿ ತಯಾರಿಕೆ ಮತ್ತು ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
• ಬೆಳ್ಳಿಯನ್ನು ಪಾದರಸ, ತವರ ಹಾಗೂ ಇತರೆ ಲೋಹಗಳೊಂದಿಗೆ ಸೇರಿಸಿ ಅಮಾಲ್ಗಂ ತಯಾರಿಸಿ ದಂತದ ಗುಳಿಯಲ್ಲಿ ತುಂಬಲು ವೈದಿಕೀಯದಲ್ಲಿ ಬಳಸುತ್ತಾರೆ. ವಿಧ್ಯುತ್ ಲೇಪನ ಮಾಡಲು ಬಳಸುತ್ತಾರೆ. 
• ಬೆಳ್ಳಿಯನ್ನು ಬ್ಯಾಟರಿಗಳು, ಸಾಲ್ಡ್ರೀಂಗ್ ಗಳಲ್ಲಿ ಬಳಸುತ್ತಾರೆ. ಇದನ್ನು ರಾಸಾಯನಿಕ ಕ್ರಿಯೆ ಹಾಗೂ ಪದಕವನ್ನು ತಯಾರಿಸಲು ಬಳಸುತ್ತಾರೆ. 
• ಬೆಳ್ಳಿಯನ್ನು ಸೂಪರ್ ಕಂಟಕ್ಟಿವಿಟಿ ಗುಣವಿರುವುದರಿಂದ ಎಲೆಕ್ಟ್ರಾನಿಕ್ & ಎಲೆಕ್ಟ್ರಿಕಲ್ ಉಪಕರಣಗಳಲ್ಲಿ ಬಳಸಲಾಗುತ್ತದೆ.

ಬೆಳ್ಳಿಯ ಸಂಯುಕ್ತಗಳು ;

1) ಬೆಳ್ಳಿಯ ನೈಟ್ರೇಟ್ ( Silver Nitrate )

                                                ಕೂದಲಿಗೆ ಬಳಸುವ ಬಣ್ಣದ ತಯಾರಿಕೆಯಲ್ಲಿ ಬೆಳ್ಳಿಯ ನೈಟ್ರೇಟ್ ಬಳಸುತ್ತಾರೆ. ಕನ್ನಡಿಗಳಿಗೆ ಬೆಳ್ಳಿಯ ಲೇಪನ ಹಾಕಲು ಬಳಸುತ್ತಾರೆ. ಬೆಳ್ಳಿಯ ನೈಟ್ರೇಟ್ ಅನ್ನು ವೈದಿಕೀಯ ಕ್ಷೇತ್ರಗಳಲ್ಲಿ ಬಳಸುತ್ತಾರೆ. ಬೆಳ್ಳಿಯ ನೈಟ್ರೇಟ್ ಚರ್ಮದ ಮೇಲೆ ಬಿದ್ದಾಗ  ಚರ್ಮವು ಕಪ್ಪು ಬಣ್ಣ ಉಂಟಾಗುತ್ತದೆ. 

2) ಬೆಳ್ಳಿಯ ಬ್ರೋಮೈಡ್ ಗಳು ( Silver Bromides )

                                              ಬೆಳ್ಳಿಯ ಬ್ರೋಮೈಡ್ ಹೆಚ್ಚು ಬೆಳಕಿನ ಸಂವೇದನಾ ಶೀಲತೆ ಹೊಂದಿರುವುದರಿಂದ ಪೋಟೊಗ್ರಾಫಿಯಲ್ಲಿ ಬಳಸುತ್ತಾರೆ.


ಬೆಳ್ಳಿಯ ಗುಣಲಕ್ಷಣಗಳು ;

1. ಬೆಳ್ಳಿಗೆ ಹೊಳೆಯುವ ಗುಣವಿದೆ. ತಂತಿ & ಹಾಳೆಯಾಗಿ ಮಾಡಬಾವುದು. 
2. ಚೆನ್ನಾಗಿ ವಿಭಜಿಸಿದ ಬೆಳ್ಳಿಯು ಕಪ್ಪಾಗಿ ಕಾಣುತ್ತದೆ , ಕಾರಣ ಸ್ಪಟಿಕದ ಸಮತಲಗಳು ಯಾದೃಚ್ಛಿಕವಾಗಿ ಸಿದ್ದವಾಗುವುದರಿಂದ ಬೆಳಕು ಎಲ್ಲಾ ದಿಕ್ಕಿನಲ್ಲೂ ಪ್ರತಿಫಳಿಸುತ್ತದೆ. ಮತ್ತು ಬೆಳಕಿನ ಸ್ವಲ್ಪ ಭಾಗ ಮಾತ್ರ ವೀಕ್ಷಕನನ್ನು ತಲುಪ್ಪುತ್ತದೆ
3. ಬೆಳ್ಳಿಯು ಒಂದು ಉತ್ತಮವಾದಂತಹ ವಿದ್ಯುತ್ ವಾಹಕ ಆದರೆ, ಇದನ್ನು ವಿದ್ಯುತ್ ವಾಃಕವಾಗಿ ಬಲಸುವುದಿಲ್ಲ. ಕಾರಣ ಇದು ಹೆಚ್ಚು ಬೆಲೆಬಾಳುವ ಲೋಹವಾಗಿದೆ ಅದುದ್ದರಿಂದ ತಾಮ್ರ ಮತ್ತು ಅಲ್ಯೂಮಿನಿಯಂನ್ನು ವಿಧ್ಯುತ ವಾಹಕವಾಗಿ ಬಳಸುತ್ತಾರೆ. 
4. ಇದು ಉತ್ತಮವಾದಂತಹ ವಿದ್ಯುತ್ ವಾಃಕವಾಗಿದೆ 
5. ಬೆಳ್ಳಿಯ ನೈಟ್ರೇಟ್ ಆಮ್ಲದೊಂದಿಗೆ ಕರಗಿ ಸಿಲ್ವರ್ ನೈಟ್ರೇಟ್ ಅನ್ನು ಉತ್ಪತಿ ಮಾಡುತ್ತದೆ, ಸಿಲ್ವರ್ ನೈಟ್ರೇಟ್ ಅನ್ನು ಆಂಟಿ ಸೆಪ್ಟಿಕ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಬೆಳ್ಳಿಯ ದೊರೆಯುವಿಕೆ 

ಬೆಳ್ಳಿಯು ಚಿನ್ನದಂತೆ ಶುದ್ದ ರೂಪದಲ್ಲಿ ದೊರೆಯುತ್ತದೆ. ಬೆಳ್ಳಿಯು ಸಲ್ಫರ್ , ಆರ್ಸನಿಕ್, ಆಂಟಿಮನಿ or ಕ್ಲೋರಿನ್ ಹೊಂದಿರುವ ಆದಿರಿನೊಂದಿಗೆ ಮಿಶ್ರಣವಾಗಿ ದೊರೆಯುತ್ತದೆ.

ಬೆಳ್ಳಿಯ ಪ್ರಮುಖ ಆದಿರುಗಳು 

ಆರ್ಜೆಂಟೈಟಾ ( Ag2 s), ಹಾರ್ನ್ ಸಿಲ್ವರ್ ರೂಪದಲ್ಲಿರುವ ಕ್ಲೋರಾಗೈಟ್ (Agcl), ಫೈರರ್ ಗ್ರೈಟ್ ( Ag3 SbS3)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad