Type Here to Get Search Results !

Indian National Congress Party | Congress

 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 

            ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(Indian National Congress Party) 1885 ರಲ್ಲಿ ಸರ್ ಎ. ಓ ಹ್ಯೂಂ ರವರಿಂದ ಸ್ಥಾಪಿಸಲ್ಪಟ್ಟಿತ್ತು.1885 ರಲ್ಲಿ ಮುಂಬೈನಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯನ್ನು ಉಮೇಶ ಚಂದ್ರ ಬ್ಯಾನರ್ಜಿ ವಹಿಸಿದ್ದರು. ರಾಷ್ಟ್ರೀಯ ಚಳುವಳಿಯ ಮುಂಚೊಣಿಯಲ್ಲಿದ್ದ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಪಡೆದ ನಂತರ ರಾಜಕೀಯ ಪಕ್ಷದ ಸ್ವರೂಪವನ್ನು ಪಡೆಯಿತು. 

congress party
congress


ರಾಷ್ಟ್ರೀಯ ಕಾಂಗ್ರೆಸ್ ನ(congress) ಮುಖ್ಯ ನಾಯಕರ ಪಟ್ಟಿ 

ಸ್ವಾತಂತ್ರದ ಹಿಂದೆ 


ಸ್ವಾತಂತ್ರದ ನಂತರ 

9)ಎನ್ ಡಿ ತಿವಾರಿ ಮುಂತಾದವರು ........

INC ರಚನೆ (Congress Formation):

                ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್ ಪಕ್ಷದ ಸರ್ವೋಚ್ಚ ಸಮಿತಿಯಾಗಿದೆ. ಇದರ ಅಧ್ಯಕ್ಷರು ಪಕ್ಷದ ಅಂಗರಚನೆಯಲ್ಲಿ ಪ್ರಧಮ ಸ್ಥಾನ ಪಡೆದಿರುತ್ತಾರೆ. ಅಖಿಲ ಭಾರತದ ಕಾಂಗ್ರೆಸ್ ಸಮಿತಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಗಳ ಸದಸ್ಯರು ಪಕ್ಷದ ಅಧ್ಯಕ್ಷರನ್ನು 3 ವರ್ಷಗಳ ಅವಧಿಗೆ ಚುನಾಯಿಸುತ್ತಾರೆ. ಚುನಾವಣೆಯಿಲ್ಲದೆ ನಾಮಕರಣದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ ನಿರ್ದೇಶನಗಳೂ ಉಂಟು , ಪಕ್ಷದ ಅಧ್ಯಕ್ಷರಿಂದ ನೇಮಕಗೊಂಡ ಕಾರ್ಯಾಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಒಳಗೊಂಡಿರುತ್ತದೆ. 

ಕಾರ್ಯಕಾರಿ ಸಮಿತಿ :

                              ಇಂದಿನ ಕಾರ್ಯಕರಿ ಸಮಿತಿಯು ಕಾಂಗ್ರೆಸ್ ನ ಅಂಗರಚನೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ, ಇದನ್ನು ವರಿಷ್ಠರ ಮಂಡಳಿ [ High command] ಎಂದು ಕರೆಯುತ್ತಾರೆ. ಕಾರ್ಯಕರಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ 21 ಮಂದಿ ಸದಸ್ಯರನ್ನು ಹೊಂದಿರುತ್ತದೆ. ಇದರಲ್ಲಿ ಕೆಳೆವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಆಯ್ಕೆ ಮಾಡಿದರೆ, ಇನ್ನು ಕೆಲವರನ್ನು ಅಧ್ಯಕ್ಷರು ನೇಮಕ ಮಾಡುತ್ತಾರೆ. ಕಾಂಗ್ರೆಸ್ ಸಂಸದೀಯ ಮಂಡಳಿ[ Congress Parliamentary Board ]ಯು ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಂತೆ ಕಾರ್ಯ ನಿರ್ವಹಿಸುತ್ತದೆ. 
 
ಕೇಂದ್ರ ಚುನಾವಣಾ ಸಮಿತಿಯು ಪಕ್ಷದ ಮತ್ತೊಂದು ಪ್ರಮುಖ ಅಂಗವಾಗಿದೆ. ಇದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಚುನಾಯಿತರಾದ ಹಾಗೂ ಪಕ್ಷದ ಅಧ್ಯಕ್ಷಯರಿಂದ ನೇಮಕವಾದ ಸದಸ್ಯರನ್ನು ಒಳಕೋಂಡಿರುತ್ತದೆ. 


ಕಾಂಗ್ರೆಸ್ ಪಕ್ಷದ ಮುಖ್ಯ ತತ್ವಗಳು ಮತ್ತು ಕಾರ್ಯಕ್ರಮಗಳು :

1) ದೇಶದ ಏಕತೆ ( Unity ) ಮತ್ತು ಸಮಗ್ರತೆಯನ್ನು  ( Integrity ) ಕಾಪಾಡುವುದು . 
2) ರಾಷ್ಟ್ರ ವಿರೋಧಿ, ಪ್ರತ್ಯೇಕತೆ, ವಿಧ್ವಾಂಸಕ ಹಾಗೂ ಭಯೋತ್ಪಾದಕ ಶಕ್ತಿಗಳ ವಿರುದ್ದ ಹೋರಾಡುವುದು. 
3) ವಿಶ್ವಶಾಂತಿ, ನಿಶಸ್ತ್ರೀಕರಣ, ಅಂತರ ರಾಷ್ಟ್ರೀಯ ಸಹಕಾರವನ್ನು ಪ್ರೋತ್ಸಾಹಿಸುವುದು. 
4) ಅಲಿಪ್ತ ನೀತಿಯನ್ನು ಬಲಪಡಿಸುವುದು. 
5) ಪಂಚಾಯತ್ ರಾಜ್ ಮತ್ತು ನಗರ ಪಾಲಿಕಾ ಅಧಿನಿಯಮಗಳ ಪ್ರಾಮಾಣಿಕ ಅನುಷ್ಠಾನದ ಮೂಲಕ ಅಧಿಕಾರ ವಿಕೇಂದ್ರೀಕರಣವನ್ನು ಪ್ರೋತ್ಸಾಹಿಸುವುದು. 
6) ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಜಾತ್ಯಾತೀತತೆಯನ್ನು ಬಲಪಡಿಸುವುದು. 
7) ಯೋಜನೆಯ ಮೂಲಕ ಆರ್ಧಿಕಾಭಿವೃದ್ದಿಯನ್ನು ಸಾಧಿಸುವುದು. 
8) ಸಹಕಾರ ಚಳುವಳಿಯನ್ನು ನವೀಕರಿಸುವುದು. 
9) ಮಹಿಳೆಯರ ವಿಮೋಚನೆ. 
10) ಹಿಂಸಾಚಾರ ಮತ್ತು ಮೂಲಭೂತವಾದವನ್ನು ನಿರ್ಮೂಲನೆ ಕೋಳಿಸುವುದು. 
11) ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ರಕ್ಷಣೆ . 
12) ಪರಿಶಿಷ್ಟ ಜಾತಿ, ವರ್ಗ ಹಾಗೂ ಇತರೆಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದು. 
13) ರಾಷ್ಟ್ರೀಕರಣ 
14) ಭೂ ಸುಧಾರಣೆಗಳನ್ನು ಜಾರಿಗೆ ತರುವುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad