ಭಾರತದ ಸಂವಿಧಾನದ ರಚನೆ
ಸಂವಿಧಾನದ ರಚನೆಗೆ ಎಂ. ಎನ್ ರಾಯ್ ರವರು 1934 ರಲ್ಲಿ ಪ್ರಧಮ ಬಾರಿಗೆ ಭಾರತಕ್ಕೆ ಸಂವಿಧಾನ ರಚನಾ ಸಮಿತಿಯ ಅಗತ್ಯವನ್ನು ಪ್ರತಿಪಾದಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ 1935 ರಲ್ಲಿ ಪ್ರಧಾಮವಾಗಿ ಸಂವಿಧಾನ ರಚನಾ ಸಮಿತಿಯ ರಚನೆಗೆ ಅಧಿಕೃತ ಬೇಡಿಕೆಯನ್ನು ಮುಂದಿಟ್ಟಿತು. ಸಾರ್ವತ್ರಿಕ ವಯಸ್ಕ ಮತದಾನ ಪಡ್ಡತಿಯ ಆಧಾರದ ಮೇಲೆ ಚುನಾಯಿಸಲ್ಪಟ್ಟ ಸಂವಿಧಾನ ರಚನಾ ಸಭೆಯಿಂದ( ಬಾಹ್ಯ ಹಸ್ತಕ್ಷೇಪವಿಲ್ಲದ) ಸ್ವಾತಂತ್ರ ಭಾರತದ ಸಂವಿಧಾನ ರಚಿಸಲ್ಪಡಬೇಕು ಎಂಬುದಾಗಿ 1938 ರಲ್ಲಿ ಜವಾಹರಲಾಲ್ ನೆಹಾರುವರು ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಪರವಾಗಿ ಘೋಷಿಸಿದರು.
ಸಂವಿಧಾನ ರಚನೆ ಸಭೆಯ ಸ್ಥಾಪನೆಯ ಬೇಡಿಕೆಯನ್ನು 1940 ರ ಆಗಸ್ಟ್ ಕೊಡುಗೆಯಲ್ಲಿ ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು. 1942 ರಲ್ಲಿ ಬ್ರಿಟಿಷ್ ಸಚಿವ ಸಂಪುಟದ ಸದಸ್ಯರಾದ ಸರ್ ಸ್ಟಾ ಪರ್ಡ್ ಕ್ರಿಪ್ಸ್ ರವರು ಸಂವಿಧಾನ ರಚನಾ ಸಮಿತಿಯ ಸ್ಥಾಪನೆಗೆ ಸಂಬಂಧಿಸಿದಂತೆ ಕೆಲವು ಪ್ರಸ್ತಾವಣೆಗಳನ್ನು ಭಾರತೀಯ ನಾಯಕರ ಮುಂದಿಟ್ಟರು. ಇದು ಕ್ರಿಪ್ಸ್ ಪ್ರಸ್ತಾವನೆಗಳು ಎಂದೇ ಜನಪ್ರಿಯವಾಗಿದೆ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಗಳೆರಡು ಕ್ರಿಪ್ಸ್ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಅಂತಿಮವಾಗಿ ಕ್ಯಾಬಿನೆಟ್ ನಿಯೋಗ ಶಿಫಾರಸಿನ ಮೇರೆಗೆ ಸ್ವಾತಂತ್ರ ಭಾರತಕ್ಕೆ ಒಂದು ಸಂವಿಧಾನವನ್ನು ರಚಿಸಲು 1946 ರಲ್ಲಿ ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲಾಯಿತು.
![]() |
Indian Constitution |
ಸಂವಿಧಾನದ ರಚನಾ ಸಭೆಯ ರಚನೆ
ಕ್ಯಾಬಿನೆಟ್ ನಿಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಸಂವಿಧಾನ ರಚನಾ ಸಮಿತಿಯ ಸ್ಥಾಪನೆಗೆ 1946 ರ ಜುಲೈ ತಿಂಗಳಲ್ಲಿ ಚುನಾವಣೆಗಳನ್ನು ನಡೆಸಲಾಯಿತು. ಕ್ಯಾಬಿನೆಟ್ ಆಯೋಗ ಪರೋಕ್ಷ ಚುನಾವಣೆಗಳನ್ನು ಶಿಫಾರಸು ಮಾಡಿತ್ತು. ಆದ್ದರಿಂದ ಸಂವಿಧಾನ ರಚನಾ ಸಭೆಯ ಕೆಲವು ಸದಸ್ಯರು ಪ್ರಾಂತೀಯ ಶಾಸನ ಸಭೆಗಳ ಸದಸ್ಯರಿಂದ ಚುನಾಯಿತರದರೂ. ಇನ್ನೂ ಕೆಲವು ಸದಸ್ಯರು ದೇಶೀಯ ಸಂಸ್ಥಾನಗಳಿಂದ ನಾಮಕರಣಗೊಂಡರು. ಸಂವಿಧಾನ ರಚನಾ ಸಭೆಯು ಒಟ್ಟು 389 ಸದಸ್ಯರುಗಳನ್ನು ಹೊಂದಿತ್ತು. ಇವರ ಪೈಕಿ 296 ಮಂದಿ ಸದಸ್ಯರನ್ನು ಬ್ರಿಟಿಷ್ ಭಾರತದಿಂದ ( ಪ್ರಾಂತೀಯ ಶಾಸನ ಸಭೆಗಳಿಂದ) ಚುನಾಯಿಸಲಾಯಿತು. ಹಾಗೂ 93 ಮಂದಿ ಸದಸ್ಯರನ್ನು ದೇಶೀಯ ಸಂಸ್ಥಾನಗಳಿಂದ ನಾಮಕರಣ ಮಾಡಲಾಯಿತು.
ಹೀಗೆ ಸಂವಿಧಾನ ರಚನಾ ಸಭೆಯು ಪರೋಕ್ಷವಾಗಿ ಚುನಾಯಿಸಲ್ಪಟ್ಟ ಹಾಗೂ ನಾಮಕರಣಗೊಂಡ ಸಂಸ್ಥೆಯಾಗಿತ್ತು. ಸಂವಿಧಾನ ರಚನಾ ಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ 208 ಸ್ಥಾನಗಳನ್ನು ಮುಸ್ಲಿಂ ಲೀಗ್ 73 ಸ್ಥಾನಗಳನ್ನು ಗೆದ್ದು ಕೊಂಡವು.
ಸಂವಿಧಾನ ರಚನಾ ಸಭೆಯಲ್ಲಿ ಹಿಂದುಗಳು, ಮುಸ್ಲಿಂ ಮರು, ಆಂಗ್ಲೊ ಇಂಡಿಯನ್ನಾರು, ಪರಿಶಿಷ್ಟ ಜಾತಿಗಳು, ಹಿಂದುಳಿದ ಬುಡಕಟ್ಟು ಜನರು, - ಹೀಗೆ ಎಲ್ಲ ವರ್ಗದ ಜನಾಂಗದ ಜನರಿಗೆ ಪ್ರಾತಿನಿಧ್ಯತೆ ನೀಡಲಾಗಿತ್ತು.
ಸಂವಿಧಾನ ರಚನಾ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕನ್ನಡಿಗರು:-
1. ಮೈಸೂರುನ್ನು ಪ್ರತಿನಿಧಿಸಿದ ಪ್ರಮುಖರು :-
ಕೆ. ಚೆಂಗಲ್ ರಾಯ್ ರೆಡ್ಡಿ, ಟಿ. ಸಿದ್ದಲಿಂಗಯ್ಯ, ಎಚ್, ಆರ್, ಗುರುದೇವ ರೆಡ್ಡಿ, ಎಸ್.ವಿ. ಕೃಷ್ಣಮೂರ್ತಿ ರಾವ್, ಕೆ. ಹನುಮಂತಯ್ಯ, ಎಚ್. ಸಿದ್ಧವೀರಪ್ಪ, ಟಿ. ಚೆನ್ನಯ್ಯ .
2. ಸಂವಿಧಾನದ ರಚನಾ ಸಭೆಯಲ್ಲಿ ಕೊರ್ಗ್ ಪ್ರಾಂತೀಯವನ್ನು ಪ್ರತಿಪಾಧಿಸಿದವರು
ಕೆ. ಎಂ. ಪುನ್ನಚ
3. ಸಂವಿಧಾನದ ರಚನಾ ಸಭೆಯಲ್ಲಿ ಬಾಂಬೆ ಪ್ರಾಂತ್ಯವನ್ನು ಪ್ರತಿನಿಧಿಸಿದವರು
ಎಸ್. ನಿಜಲಿಂಗಪ್ಪ , ಆರ್, ದಿವಾಕರ್
ಧನ್ಯವಾದಗಳು