ಮಹಾಸಾಗರಗಳು ( Oceans )
ಭೂಮಿಯ ಮೇಲೆ 5 ಮಹಾಸಾಗರಗಳು ಇದ್ದು. ಇವು ಭೂಮಿಯ ಮೇಲ್ಮೈನ ಶೇ 40 ರಷ್ಟು ಭಾಗವನ್ನು ಆವರಿಸಿಕೊಂಡಿದೆ. ಗಾತ್ರದಲ್ಲಿ ದೊಡ್ಡದಿಂದ ಚಿಕ್ಕದರ ಕಡೆಗಿರುವ ಮಹಾಸಾಗರಗಳು ಇಲ್ಲಿ ನೀಡಿದೇವೇ :
1) ಫೆಸಿಫಿಕ್ ಸಾಗರ
2) ಅಟ್ಲಾಂಟಿಕ್ ಸಾಗರ
3) ಹಿಂದೂ ಮಹಾಸಾಗರ
4) ದಕ್ಷಿಣ ಮಹಾಸಾಗರ or ಅಂಟಾರ್ಟಿಕಾ ಸಾಗರ
5) ಆರ್ಟಿಕ್ ಸಾಗರ
![]() |
oceans |
ಫೆಸಿಫಿಕ್ ಸಾಗರ
ಫೆಸಿಫಿಕ್ ಸಾಗರವು ಭೂಮಿಯ ಅತ್ಯಂತ ದೊಡ್ಡ ಸಾಗರವಾಗಿದೆ. ಫೆಸಿಫಿಕ್ ಸಾಗರವನ್ನು ಶಾಂತ ಸಾಗರ ಎಂದು ಕೊಡ ಕರೆಯುತ್ತಾರೆ. ಫೆಸಿಫಿಕ್ ಸಾಗರಕ್ಕೆ ಹೆಸರು ಇಟ್ಟವರು - ಪೋರ್ಚುಗೀಸ್ ನಾವಿಕ ಫರ್ಡಿನಂಡ್ ಮೆಗಲಾನ್. ಈ ಸಾಗರವು ಉತ್ತರದ ಆರ್ಟಿಕ್ ಮತ್ತು ದಕ್ಷಿಣದ ಹಿಂದೂಮಹಾಸಾಗರದ ಮಧ್ಯೆದಲ್ಲಿ ಹರದಿಕೊಂಡಿದೆ. ಇದು ಭೂಮಿಯ ಮೇಲಿನ ಜಲರಾಶಿಯ ಶೇ 46ರಷ್ಟು ನೀರನ್ನು ಹೊಂದಿದೆ.
ಫೆಸಿಫಿಕ್ ಸಾಗರದ ಪಕ್ಕದ ದೇಶಗಳು :-
ಫೆಸಿಫಿಕ್ ಸಾಗರದ ಪಶ್ಚಿಮಕ್ಕೆ ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡವು ಮತ್ತು ಪೂರ್ವಕ್ಕೆ ಅಮೆರಿಕಾ ಖಂಡವಿದೆ. ಸಮಭಾಜಕ ವೃತ್ತವು ಫೆಸಿಫಿಕ್ ಸಾಗರವನ್ನು ಉತ್ತರ ಫೆಸಿಫಿಕ್ ಮತ್ತು ದಕ್ಷಿಣ ಫೆಸಿಫಿಕ್ ಸಾಗರ ಎಂದು ವಿಭಾಗಿಸಿದೆ.
ಈ ಸಾಗರದಲ್ಲಿ ಅತ್ಯಂತ ಆಳವಾದ ಸ್ಥಳವೆಂದರೆ : ಮೆರೀನಾ ಟ್ರಂಚ್.
ಅಟ್ಲಾಂಟಿಕ್ ಮಹಾಸಾಗರ
ಅಟ್ಲಾಂಟಿಕ್ ಮಹಾಸಾಗರವು 2 ನೇ ಅತಿ ದೊಡ್ಡ ಸಾಗರವಾಗಿದೆ. ಈ ಸಾಗರವು S ಆಕಾರದಲ್ಲಿದೆ. ಒಟ್ಟು ಜಲ ರಾಶಿಯ ಶೇ 29 ರಷ್ಟು ನೀರನ್ನು ಒಳಗೊಂಡಿದೆ. ಅಟ್ಲಾಂಟಿಕ್ ಸಾಗರದಲ್ಲಿ "ಮಿಲ್ವಾಯುಕಿ ತಗ್ಗು" ಅತ್ಯಂತ ಆಳವಾದ ತಗ್ಗಾಗಿದೆ. ಈ 8,380 ಮೀ ಆಳವಾಗಿದೆ ಈ ಮಹಾಸಾಗರದಲ್ಲಿ ಪ್ರಮುಖವಾದ ನೀರ್ಗಲ್ಲುಗಳಾದ "A22 A" ಕಂಡುಬರುತ್ತದೆ.
ಅಟ್ಲಾಂಟಿಕ್ ಮಹಾಸಾಗರದ ಪಕ್ಕದ ದೇಶಗಳು :
ಈ ಸಾಗರದ ಪೂರ್ವಕ್ಕೆ ಯುರೋಪ್ ಮತ್ತು ಆಫ್ರಿಕಾ ಖಂಡಗಳಿವೆ. ಪಶ್ಚಿಮಕ್ಕೆ ಅಮೇರಿಕಾ ಖಂಡವು ಇವೆ. ಈ ಸಾಗರದ ಉತ್ತರಕ್ಕೆ ಆರ್ಟಿಕ್ ಸಮುದ್ರವನ್ನು , ನೈರುತ್ಯದಲ್ಲಿ ಫೆಸಿಫಿಕ್ ಸಾಗರವನ್ನು , ಆಗ್ನೇಯದಲ್ಲಿ ಹಿಂದೂಮಹಾಸಾಗರವನ್ನು, ದಕ್ಷಿಣದಲ್ಲಿ ಅಂಟಾರ್ಟೀಕಾ ಸಾಗರವನ್ನು ಸಂಧಿಸುತ್ತದೆ. ಈ ಸಾಗರವು ಜಾಗತಿಕವಾಗಿ ಎಲ್ಲ ಸಾಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಅಂಟಾರ್ಟಿಕಾ ಮಹಾಸಾಗರ
ಅಂಟಾರ್ಟಿಕಾ ಮಹಾಸಾಗರವನ್ನು ದಕ್ಷಿಣ ದುವ್ರೀಯ ಸಾಗರ , ದಕ್ಷಿಣ ಸಾಗರ ಎಂದು ಕರೆಯುತ್ತಾರೆ. ಈ ಸಾಗರವು ವೃತ್ತಾಕಾರಾದಲ್ಲಿ 60 ಡಿಗ್ರಿ ದಕ್ಷಿಣ ಅಕ್ಷಾಂಶ ದಿಂದ ಆರಂಭವಾಗಿ ದ್ರುವ ಪ್ರದೇಶದ ವರೆಗೆ ಸಾಗುತ್ತದೆ. ಈ ಸಾಗರವು ಭೂಗರ್ಭಶಾಸ್ತ್ರದ ಪ್ರಕಾರ ಅತಿ ಕಿರಿಯ ಸಾಗರವಾಗಿದೆ ಈ ಸಾಗರದಲ್ಲಿ ಅತ್ಯಂತ ಆಳವಾದ ಪ್ರದೇಶವೆಂದರೆ " ಸೌತ್ ಸ್ಯಾಂಡ್ ವಿಚ್ ಟ್ರಂಚ್". lಇಲ್ಲಿ -2 ಡಿಗ್ರಿ ಇಂದ 10 ಸೇಲ್ಸಿಯಸ್ ವರೆಗೆ ಉಷ್ಣಾಂಶ ಹೊಂದಿರುತ್ತಾದ.
ಆರ್ಟಿಕ್ ಮಹಾಸಾಗರ
ಆರ್ಟಿಕ್ ಮಹಾಸಾಗರವು ಪ್ರಪಂಚ ಸಾಗರಗಳಲ್ಲಿ ಅತ್ಯಂತ ಚಿಕ್ಕ ಮತ್ತು ಕಡಿಮೆ ಆಳವಾದ ಸಾಗರವಾಗಿದೆ. ಈ ಸಾಗರವು ಉತ್ತರಾರ್ಧ ಗೋಳದಲ್ಲಿ ಉತ್ತರ ದ್ರುವ ಭಾಗದಲ್ಲಿ ಕಂಡುಬರುತ್ತದೆ. ಈ ಸಾಗರವು ಯುರೇನೆಶಿಯಾ ಮತ್ತು ಉತ್ತರ ಅಮೇರಿಕವನ್ನು ಸುತ್ತುವರೆಯುತ್ತದೆ. ಈ ಭಾಗದಲ್ಲಿ ಗ್ರೀನ್ ಲ್ಯಾಂಡ್ ಮತ್ತು ಕೆಳೆವು ದ್ವೀಪಗಳು ಕಂಡುಬರುತ್ತದೆ.
ಹಿಂದೂ ಮಹಾಸಾಗರ
ಹಿಂದೂಮಹಾಸಾಗರವು 3 ನೇ ದೊಡ್ಡ ಸಾಗರವಾಗಿದೆ. ಈ ಸಾಗರವು ಒಟ್ಟು ಜಲರಾಶಿಯ ಶೇ 20 ರಷ್ಟು ಜ ಜಲವನ್ನು ಹೊಂದಿದೆ. ಈ ಸಾಗರದ ಉತ್ತರದ್ದಲ್ಲಿ ಏಷ್ಯಾ ಖಂಡವು, ಪಾಶ್ಚಿಮಕ್ಕೆ ಆಫ್ರಿಕಾ ಖಂಡವು, ಪೂರ್ವಕ್ಕೆ ಆಸ್ಟ್ರೇಲಿಯಾ ಖಂಡವು, ದಕ್ಷಿಣಕ್ಕೆ ಆಂಟಾರ್ಟಿಕ ಖಂಡವು ಕಂಡುಬರುತ್ತದೆ. ಈ ಸಾಗರಕ್ಕೆ ಸಿಂಧೂ , ಗಂಗಾ , ಬ್ರಹ್ಮಪುತ್ರ ನದಿಗಳು ಹರಿಯುತ್ತದೆ. ಈ ಸಾಗರವು ಒಟ್ಟು ಜಲ ರಾಶಿಯಲ್ಲಿ ಶೇ 20 ರಷ್ಟು ನೀರನ್ನು ಒಳಗೊಂಡಿದೆ. ಅಂತರಾಷ್ಟ್ರೀಯ ಹೈಡ್ರೋಗ್ರಾಫಿಕ್ ಆರ್ಗನೈಜೇಷನ್ ನವರು ಸಾಗರದ ಗಡಿಯನ್ನು 1935 ರಲ್ಲಿ ನಿರ್ಧರಿಸಿದರು. ಈ ಸಾಗರವು ಅನೇಕ ದ್ವೀಪಗಳನ್ನು ಒಳಗೊಂಡಿದೆ ಅವುಗಳೆಂದರೆ ಮಡಗಾಸ್ಕರ್ , ಕುಮೊರೊಸ್ , ಶ್ರೀಲಂಕಾ , ಮಾಲ್ಡೀವ್ಸ್ , ಮಾರುಟಿಯಸ್ ದ್ವೀಪಗಳು , ಲಕ್ಷದ್ವೀಪ , ಅಂಡಮಾನ್ & ನಿಕೊಬಾರ್ ದ್ವೀಪಗಳು ಕಂಡುಬರುತ್ತದೆ.
ಧನ್ಯವಾದಗಳು