Type Here to Get Search Results !

ಚಿನ್ನ Gold uses, Property, Distribution, Production of Gold

 ಚಿನ್ನ (Gold)


1 ಇದು ಹಳದಿ ಬಣ್ಣದಿಂದ ಹೊಳೆಯುವ ಲೋಹ. 

2 ಇದು ಅಪರೂಪದ ಲೋಹವಾಗಿದೆ 

3 ಚಿನ್ನದ ರಾಸಾಯನಿಕ ಸಂಕೇತ -Au

4 ಚಿನ್ನದ ಲ್ಯಾಟಿನ್ ಹೆಸರು - ಆರಂ (Aurum)

5 ಚಿನ್ನವು ಮನುಷ್ಯನಿಗೆ ತಾಮ್ರದ ಯುಗದಿಂದ  ( ಚ್ಯಾಧೋಲಿತಿಕ್ ಯುವ ಯುಗ) ಪರಿಚಯವಿತ್ತು. 

ಚಿನ್ನದ ಉಪಯೋಗಗಳು


ಚಿನ್ನದ ಉಪಯೋಗಗಳು 

1 ಇದನ್ನು ಒಡವೆಗಳನ್ನಾಗಿ, ನಾಣ್ಯವನ್ನಾಗಿ ಬಳಸುತ್ತಾರೆ. 

2 ತವರ ಮತ್ತು ಚಿನ್ನದ ಕ್ಲೋರೈಡ್ ಗಳ ದ್ರಾವನದಿಂದ ತಯಾರಿಸಿದ ಕೆಂಪು or ಕೆನ್ನೀಲಿಯ ವರ್ಣದ್ರವ್ಯಯಕ್ಕೆ ಕ್ಸಾಸಿಯಸ್ ನ ಕೆನ್ನೀಲಿ ಎನ್ನುವರು ಇದನ್ನು ಗಾಜಿಗೆ ಬಣ್ಣ ಹಚ್ಚಲು ಉಪಯೋಗಿಸುತ್ತಾರೆ.

3 ವೈದ್ಯಕೀಯವಾಗಿ ಚಿನ್ನವನ್ನು ಚಿನ್ನದ ರೇಕುಗಳಾಗಿ ( Gold leaf) ಬಳಸುತ್ತಾರೆ. ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ. 

4 ಚಿನ್ನವನ್ನು ದಾರವನ್ನಾಗಿ ಮಾರ್ಪಡಿಸಿ ಕಸೂತಿ ಕೆಲಸಗಳಲ್ಲಿ ಬಳಸುತ್ತಾರೆ. 


ಚಿನ್ನದ ಗುಣಲಕ್ಷಣಗಳು 

1 ಇದು ಅತ್ಯಂತ ಮೃದುವಾದ ಲೋಹವಾಗಿದೆ. ಆಭರಣಗಳನ್ನು ತಯಾರಿಸಲು ಚಿನ್ನವನ್ನು ತಾಮ್ರ ಮತ್ತು ಬೆಳ್ಳಿಯನ್ನು ಸೇರಿಸಿ ಮಿಶ್ರ ಲೋಹ ಮಾಡುವುದರಿಂದ ಗಟ್ಟಿಯಾಗುತ್ತದೆ. ಚಿನ್ನವು ಗಾಳಿ, ನೀರು, ಆಮ್ಲ, ಪ್ರತ್ಯಾಮ್ಲಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. 

2 ಒಂದು ಗ್ರಾಂ ಚಿನ್ನವನ್ನು ಚದುರ ಮೀಟರ್ ಉದ್ದದ ಹಾಳೆಯನ್ನಾಗಿ ಮಾಡಬಹುದು. 

3 ಚಿನ್ನವು ಪೊ ಟ್ಯಾ ಶಿಯಂ or  ಸೋಡಿಯಂ ಸೈನೆಡ್ ನಿಂದಲೂ ಕೊಡ ಕರಗುತ್ತದೆ. 

4 ಚಿನ್ನದ ಸೈನೆಡ್ ನ್ನು ಎಲೆಕ್ಟ್ರೋಲೈಟ್ ಆಗಿ ಬಳಸುತ್ತಾರೆ.

5 ಲೋಹಗಳನ್ನು ಚಿನ್ನದಂತಹ ಹೊಳಪು ಬರುವ ಎಲೆಕ್ಟ್ರೋ  ಪ್ಲೇಟಿಂಗ್ ಕ್ರಿಯೆಯಲ್ಲಿ ಬಳಸುತ್ತಾರೆ 

6 ಚಿನ್ನವು ನೈಟ್ರಿಕ್ ಆಮ್ಲದಲ್ಲಿ ಕರಗುವುದಿಲ್ಲ. ಆದ್ದರಿಂದ ನೈಟ್ರಿಕ್ ಆಮ್ಲವನ್ನು ಚಿನ್ನದ ಶುದ್ದಿಕರಣದಲ್ಲಿ ಬಳಸುತ್ತಾರೆ ಹಾಗೂ ಚಿನ್ನವನ್ನು ಪರೀಕ್ಷಿಸುವಾಗ, ಆಮ್ಲ ಪರೀಕ್ಷೆಯಲ್ಲೂ ಕೊಡ ನೈಟ್ರಿಕ್ ಆಮ್ಲವನ್ನು ಬಳಸಿ ಪರೀಕ್ಷಿಸುತ್ತಾರೆ. ನೈಟ್ರಿಕ್ ಆಮ್ಲವು ಬೆಳ್ಳಿ ಮತ್ತು ಇತರೆ ಲೋಹಗಳನ್ನು ಕರಗಿಸುತ್ತದೆ. ಚಿನ್ನವು ಪಾದರಸದೊಂದಿಗೆ ಕರಗಿ ಅಮಾಲಗಮ್ ನ್ನು ಉತ್ಪತಿ ಮಾಡುತ್ತದೆ ಆದರೆ ಪಾದರಸದೊಂದಿಗೆ ಪ್ರತಿಕ್ರಿಯಿಸುವುದಿಲ್ಲ.


ಚಿನ್ನದ ಉತ್ಪಾದನೆ ( ದೇಶವಾರು ) :- 

 ಪ್ರಪಂಚದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಚೀನಾವು ( 399.7 ಟನ್ ), ಮೊದಲ ಸ್ಥಾನದಲ್ಲಿದೆ. ನಂತರ 2 ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ( 312 ಟನ್ ), 3 ನೇ ಸ್ಥಾನವನ್ನು ರಷ್ಯಾ ( 218.5 ಟನ್ ), 4 ನೇ ಸ್ಥಾನದಲ್ಲಿ ಕೆನಡಾ (193 ಟನ್ ), 5 ನೇ ಸ್ಥಾನದಲ್ಲಿ ಇಂಡೋನೇಷ್ಯಾ (190ಟನ್),


ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಹಂಚಿಕೆ 

* 1905 ರವರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವು ಅತ್ಯಂತ ಹೆಚ್ಚು ಚಿನ್ನ ಉತ್ಪಾದಿಸುವ ರಾಷ್ಟ್ರವಾಗಿತ್ತು. 

* ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಅತಿ ಹೆಚ್ಚು ಚಿನ್ನದ ಗಣಿಗಳಿದ್ದವು ಪ್ರಸ್ತುತವಾಗಿ ಚೀನಾ, ಆಸ್ಟ್ರೇಲಿಯಾ, ರಷ್ಯಾ, ಅಮೇರಿಕ, ಮತ್ತು ಕೆನಡಾ ದೇಶಗಳಲ್ಲಿ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. 

* ಚಿಲಿ ಮತ್ತು ಅರ್ಜೆಂಟೈನಾ ಮಧ್ಯದಲ್ಲಿರುವ ದಕ್ಷಿಣ ಆಫ್ರಿಕಾದ ಆಂಟಾಕೋಮಾ ಮರುಭೂಮಿಯಲ್ಲಿ ಜಗತ್ತಿನ ಕಾಲು ಭಾಗದಷ್ಟು ಚಿನ್ನವು ದೊರೆಯುತ್ತದೆ ಎಂದು ಪತ್ತೆಹಚ್ಚಲಾಗಿದೆ. 

* ಅಮೆರಿಕಾದ ಸಂಯುಕ್ತ ಸಂಸ್ಥಾನದ ದಕ್ಷಿಣ ಡಕೋಟಾ, ನೆವಡಾವು ಅಮೇರಿಕ ಸಂಯುಕ್ತ ಸಂಸ್ಥಾನದ 2/3 ರಷ್ಟು ಚಿನ್ನವನ್ನು ಪೂರೈಸುತ್ತದೆ.


ಭಾರತದ ದೇಶದಲ್ಲಿ ಚಿನ್ನದ ಹಂಚಿಕೆ 


* ಪ್ರಪಂಚದ ಉತ್ಪಾದನೆಯನ್ನು ಗಣನೆಗೆ ತೆಗದುಕೊಂಡರೆ ಅಲ್ಪ ಪ್ರಮಾಣದ ಬಂಗಾರ ಉತ್ಪಾದಿಸುವ ರಾಷ್ಟ್ರವಾಗಿದೆ. ಭಾರತವು ಪ್ರಸ್ತುತ ಪ್ರತಿ ವರ್ಷ 3,363 ಕಿ.ಗ್ರಾಂ ಚಿನ್ನವನ್ನು ಉತ್ಪಾದಿಸುತ್ತದೆ. 

* ಇತ್ತೀಚಿನ ದಿನದಳಲ್ಲಿ ಭಾರತದ ಚಿನ್ನದ ಉತ್ಪಾದನೆ ಕಡಿಮೆಯಾಗಿದೆ ಕಾರಣ ಚಿನ್ನದ ಗಣಿಗಳಲ್ಲಿ ಸಂಸ್ಕರಣಾ ವೆಚ್ಚವು ಉತ್ಪಾದನಾ ಚಿನ್ನದ ಮೌಲ್ಯಕ್ಕಿಂತ ಹೆಚ್ಚಾಗಿದ್ದು, ಇದು ಭಾರತದಲ್ಲಿ ಚಿನ್ನದ ಗಣಿಗಳನ್ನು ಮುಚ್ಚಲು ಕಾರಣವಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad