Type Here to Get Search Results !

ಕಬ್ಬಿಣದ ಅದಿರು - Iron Ores- types of irons

 ಕಬ್ಬಿಣದ ಅದಿರು 


1. ಬಾಕ್ಸೈಟ್ ನಂತರ ಭೂಮಿಯಲ್ಲಿ ಹೇರಳವಾಗಿ ಸಿಗುವ ಅದಿರು - ಕಬ್ಬಿಣ 

2. ಕಬ್ಬಿಣ ಅದಿರು ಭೂಮಿ ಒಟ್ಟು ಖನಿಜಡ ಶೇ 4 ರಷ್ಟಿದೆ. 

3. ಕಬ್ಬಿಣದ ಅದಿರಿನ ಶೇ 98 ರಷ್ಟು ಭಾಗವನ್ನು ಉಕ್ಕು ತಯಾರಿಸಲು ಬಳಸುತ್ತಾರೆ. ಭಾರತದಲ್ಲಿ ದೊರೆಯುವ ಕಬ್ಬಿಣವು ಉತ್ತಮ ದರ್ಜೆಯದಾಗಿದ್ದು ಶೇ 60 ರಷ್ಟು ಕಬ್ಬಿಣ ಅಂಶವನ್ನು ಹೊಂದಿರುತ್ತದೆ. 

4. ಭಾರತದಲ್ಲಿ ಹೆಮಟೈಟ್ & ಮ್ಯಾಗ್ನಟೈಟ್ ಆದಿರುಗಳು ಸಿಗುತ್ತದೆ. 

5. ಏಷ್ಯಾದಲ್ಲಿ ಭಾರತವು ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಷ್ಟ್ರದಲ್ಲಿ 2 ನೇ ಸ್ಥಾನದಲ್ಲಿದೆ. ರಷ್ಯಾವು ಪ್ರಧಮ ಸ್ಥಾನದಲ್ಲಿದೆ. 

6. ಕಬ್ಬಿಣದ ಉತ್ಪಾದನೆಯಲ್ಲಿ ಚೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ನಂತರ ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಕಬ್ಬಿಣವನ್ನು ಉತ್ಪಾದನೆ ಮಾಡುತ್ತದೆ. 

7. ಪ್ರಪಂಚದ ಕಬ್ಬಿಣದ ನಿಕ್ಷೇಪದಲ್ಲಿ ಭಾರತ 6 ನೇ ಸ್ಥಾನದಲ್ಲಿದ್ದು, ಉತ್ಪಾದನೆಯಲ್ಲಿ 4 ನೇ ಸ್ಥಾನದಲ್ಲಿದೆ. 

8. ಏಷ್ಯಾ ಖಂಡದಲ್ಲಿ ಕಬ್ಬಿಣದ ಉತ್ಪಾದನೆಯಲ್ಲಿ ಭಾರತವು 2 ನೇ ಸ್ಥಾನದಲ್ಲಿದೆ. 

9. ಭಾರತದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ನಿಕ್ಷೇಪದಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಉತ್ಪಾದನೆಯಲ್ಲಿ ಓಡಿಶ ರಾಜ್ಯ ಮೊದಲ ಸ್ಥಾನದಲ್ಲಿದೆ. 

ಕಬ್ಬಿಣದ ಅದಿರು


ಕಬ್ಬಿಣದ ಅದಿರುಗಳ  ವಿಧಗಳು 

1) ಮ್ಯಾಗ್ನಟೈಟ್ 

2) ಹೆಮಟೈಟ್ 

3) ಲಿಮೊಟೈಟ್ 

4) ಸಿಡರೈಟ್ 


1) ಮ್ಯಾಗ್ನಟೈಟ್ :-

1. ಇದು ಹೆಚ್ಚಿನ ಕಬ್ಬಿಣಾಂಶ (ಶೇ72) ಹೊಂದಿದ ಅದಿರು. ಆದುದರಿಂದ ಇದೊಂದು ಉತ್ತಮ ದರ್ಜೆಯ ಕಬ್ಬಿಣದ ಅದಿರು ಎನ್ನುವರು. 

2. ಮ್ಯಾಗ್ನಟೈಟ್ ನ್ನು ರಾಸಾಯನಿಕವಾಗಿ Feo, Fe2O3 ಎಂದು ಕೊಡ ಬರೆಯಬಹುದು. ಕಾರಣ ಇದು ಒಂದು ಭಾಗ ಯೂಸೈಟ್ ( FeO) ಹಾಗೂ ಒಂದು ಭಾಗ ಹೆಮೆಟೈಟ್ ( Fe2O3) ಹೊಂದಿದೆ. 

3. ಸ್ವಾಭಾವಿಕವಾಗಿ ಸಿಗುವ ಮ್ಯಾಗ್ನಟೈಟ್ ಅಯಸ್ಕಾಂತೀಯ ಗುಣ ಹೊಂದಿದ್ದು, ಇದನ್ನು " Lode Stone " ಎನ್ನುವರು. 

4. ಮ್ಯಾಗ್ನಟೈಟ್ ಅದಿರಿನಲ್ಲಿ ವೆನೆಡಿಯಂ, ಬಿಟಾನಿಯಂ & ಕ್ರೊಮಿಯಂ ದೊರೆಯುವುದರಿಂದ ಹೆಚ್ಚಿನ ಮಹತ್ವ ಹೊಂದಿದೆ. ಮ್ಯಾಗ್ನಟೈಟ್ ಇದು ಕಪ್ಪುಬಣ್ಣದಾಗಿದೆ. ಆದುದರಿಂದ ಇದನ್ನು " ಕಪ್ಪು ಅದಿರು " ಎನ್ನುವರು. 

5. ಜಗತ್ತಿನಲ್ಲಿ ದಕ್ಷಿಣ ಅಮೆರಿಕಾದ ಚಿಲಿ ಭಾಗದ ಅಟಕಾಮ ಪ್ರದೇಶದಲ್ಲಿ ನಿಕ್ಷೇಪಗಳು ಕಂಡುಬರುತ್ತದೆ. ಸ್ವೀಡನ್ ದೇಶದ ಕೈರುನಾ ಹಾಗೂ ಸ್ವೀಡನ್ ನಲ್ಲಿ ಕಂಡುಬರುತ್ತವೆ. 

6. ಇತ್ತೀಚಿಗೆ ಮ್ಯಾಗ್ನಟೈಟ್ ಉಂಗುರಗಳು ಬಂದಿವೆ. 

7. ದೇಶದ ಒಟ್ಟು ಮ್ಯಾಗ್ನಟೈಟ್ ಅದಿರಿನಲ್ಲಿ ಕರ್ನಾಟಕವು ಶೇಕಡಾ 89 ರಷ್ಟು ಹೊಂದಿದೆ. 

8. ಇದು ಭಾರತದಲ್ಲಿ ಜಾರ್ಖಂಡ, ಗೋವಾ, ಕೇರಳ, ತಮಿಳುನಾಡು, ಕರ್ನಾಟಕ & ಮಹರಾಷ್ಟ್ರ ರಾಜ್ಯಗಳಲ್ಲಿ ದೊರೆಯುತ್ತದೆ.


2) ಹೆಮಟೈಟ್ :-

1. ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು ಹೆಮಟೈಟ್ ಅದಿರನ್ನು ಹೊಂದಿದೆ. ಇದನ್ನು ಕೆಂಪು ಅದಿರು ಎನ್ನುವರು. 

2. ಇದರಲ್ಲಿ ಕಬ್ಬಿಣದ ಅಂಶವು ಶೇ 70ರಷ್ಟಿರುತ್ತದೆ. 

3. ಭಾರತದಲ್ಲಿ ದೊರೆಯುವ ಒಟ್ಟು ಕಬ್ಬಿಣದ ಅದಿರಿನಲ್ಲಿ ಹೆಮಟೈಟ್ ಅದಿರು ಶೇ 75 ರಷ್ಟಿರುತ್ತದೆ. 

4. ಭಾರತದಲ್ಲಿ ಹೆಮಟೈಟ್ ಅದಿರು ಧಾರವಾಡ- ಕಡಪ ಶಿಲಾಸ್ಥರಗಳಲ್ಲಿ ದೊರೆಯುತ್ತದೆ.

5. ಭಾರತದಲ್ಲಿ ಹೆಮಟೈಟ್ ಅದಿರಿನ ನಿಕ್ಷೇಪವು ಓಡಿಶಾ, ಜಾರ್ಖಂಡ, ಛತೀಸ್ ಘಡ, ಕರ್ನಾಟಕ, ಗೋವಾ, ಮಹರಾಷ್ಟ್ರ, ಆಂಧ್ರಪ್ರದೇಶ & ರಾಜಸ್ಥಾನದಲ್ಲಿ ದೊರೆಯುತ್ತದೆ. 


3) ಲಿಮೊನೈಟ್ :-

1. ಶೇ 50 ರಿಂದ 60 ರಷ್ಟು ಕಬ್ಬಿಣಾಂಶ ವನ್ನು ಹೊಂದಿದೆ. 

2. ಇದು ಹಳದಿ ಬಣ್ಣದಾಗಿದೆ 

3. ಇದು ಹೆಚ್ಚಿನ ಪ್ರಮಾಣದ ತೇವಾಂಶ ಒಳಗೊಂಡಿದೆ. 

4. ಭಾರತದ ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳು ಲಿಮೊಟೈಟ್ ನಿಕ್ಷೇಪವನ್ನು ಹೊಂದಿದೆ. 

5. ಲಿಮೊಟೈಟ್ ನಿಕ್ಷೇಪಗಳು ಕೊಡ ಭಾರತದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. 


4) ಸಿಡರೈಟ್ 

1. ಇದೊಂದು ಕಳಪೆ ದರ್ಜೆಯ ಕಬ್ಬಿಣದ ಅದಿರು 

2. ಶೇ 48 ರಷ್ಟು ಕಬ್ಬಿಣಾಂಶ ಹೊಂದಿರುವ ಅದಿರು 

3. ಕಬ್ಬಿಣದ ಕಾರ್ಬೊನೇಟ್ ಪ್ರಮಾಣ ಹೆಚ್ಚು ಇರುವುದರಿಂದ ಇದನ್ನು " ಕಂದು ಬಣ್ಣದ ಅದಿರು " ಎನ್ನುವರು. ಇದು ಕಡಿಮೆ ಪ್ರಮಾಣದ ಕಬ್ಬಿಣವನ್ನು ಹೊಂದಿರುವುದರಿಂದ ಹೆಮಟೈಟ್ ಮತ್ತು ಮ್ಯಾಗ್ನಟೈಟ್ ಅದಿರನ್ನು ಸೇರಿಸಿ ತಯಾರಿಸುತ್ತಾರೆ. 

4. ಸಿಡರೈಟ್ ಅದಿರು ಭಾರತದಲ್ಲಿ ಕಂದು ಬರುವುದಿಲ್ಲ. 




ಗಮನಿಸಿ:- ಕಬ್ಬಿಣದ ಅದಿರನ್ನು ಒಳಗೊಂಡಿರುವ ಖನಿಜಾಂಶದ ಪ್ರಮಾಣ & ಕಶ್ಮಲಗಳ ಪ್ರಮಾಣವನ್ನು ಆಧರಿಸಿ ನಾಲ್ಕು ಮುಖ್ಯಾ ವಿಧಗಳಾಗಿ ವಿಂಗಡಿಸಲಾಗಿದೆ. 

ಅವುಗಳೆಂದರೆ- 

1) ಮ್ಯಾಗ್ನಟೈಟ್ 

2) ಹೆಮಟೈಟ್ 

3) ಲಿಮೊಟೈಟ್ 

4) ಸಿಡರೈಟ್ 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad