Type Here to Get Search Results !

ಹಿಮಾಲಯದ ಪ್ರಾದೇಶಿಕ ವಿಭಾಗಗಳು | ಉಪಯೋಗಗಳು ಮತ್ತು ಧಾರ್ಮಿಕ

 ಹಿಮಾಲಯದ ಪ್ರಾದೇಶಿಕ ವಿಭಾಗಗಳು 

 ಹಿಮಾಲಯ ಪ್ರದೇಶವನ್ನು ಪೂರ್ವ ಪಶ್ಚಿಮವಾಗಿ ಪ್ರದೇಶಕ್ಕೆ ಅನುಗುಣವಾಗಿ 5 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ; 

     1. ಕಾಶ್ಮೀರ ಹಿಮಾಲಯ 

     2. ಹಿಮಾಚಲ ಹಿಮಾಲಯ 

     3. ಕುಮಾವುನ್ ಹಿಮಾಲಯ 

     4. ಸಿಕ್ಕಿಂ ಹಿಮಾಲಯ 

     5. ಅಸ್ಸಾಂ ಹಿಮಾಲಯ 

ಹಿಮಾಲಯದ ಪ್ರಾದೇಶಿಕ ವಿಭಾಗಗಳು | ಉಪಯೋಗಗಳು ಮತ್ತು ಧಾರ್ಮಿಕ


    ಕಾಶ್ಮೀರ ಹಿಮಾಲಯ 

                 ಇದು ಭಾರತದ ಅತ್ಯಂತ ಉತ್ತರ ಭಾಗದಿಂದ ದಕ್ಷಿಣದಲ್ಲಿ ಝೆಲಂ  ನದಿಯವರೆಗಿನ ಪ್ರದೇಶದಲ್ಲಿ ವ್ಯಾಪಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಸುಮಾರು 700 ಚ.ಕಿ.ಮೀ ಪ್ರದೇಶದಲ್ಲಿ ಹಂಚಿಕೆಯಾಗಿದೆ. ಈ ಭಾಗದಲ್ಲಿ ಕಾರಕೋರಂ ಶ್ರೇಣಿಗಳು ಕಂಡು ಬರುತ್ತೇದ. ಕಾಶ್ಮೀರ ಹಿಮಾಲಯದ ಈಶಾನ್ಯ ಭಾಗದಲ್ಲಿ ಲಡಾಕ್ ಪ್ರಸ್ಥಭೂಮಿ ಇದ್ದು,ಇದು ಭಾರತದ ಅತಿ ಎತ್ತರದ ಪ್ರಸ್ತಭೂಮಿಯಾಗಿದೆ. ಮಹಾ ಹಿಮಾಲಯ ಮತ್ತು ಕಾರಕೋರಂ ಶ್ರೇಣಿಗಳ ನಡುವೆ ರೇವಾ ಮಣ್ಣು, ಮರಳು ಮಣ್ಣು, ಜೇಡಿ ಮಣ್ಣುನಿಂದ ಕೊಂಡಿದ ಪ್ರದೇಶವಿದ್ದು ಇದನ್ನು ಕಾರೇವಾಸ್ ಪ್ರದೇಶ ಎನ್ನುವರು. ಇದು ಕಾಶ್ಮೀರ ಹಿಮಾಲಯದ ವಿಶೇಷ ಲಕ್ಷಣವಾಗಿದೆ. ಈ ಪ್ರದೇಶವು ಕಾಶ್ಮೀರದಲ್ಲಿ ಬಾದಾಮಿ, ಕೇಸರಿ, ಪೇರು ಹಣ್ಣು ಮತ್ತು ಸೇಬು ಹಣ್ಣಿನ ಸಾಗುವಳಿಗೆ ಪ್ರಸಿದ್ದವಾಗಿದೆ. ಈ ಹಿಮಾಲಯವು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್  ಪ್ರದೇಶದಲ್ಲಿ ಕಂಡುಬರುತ್ತದೆ. ಭಾರತದ ಎತ್ತರವಾದ ಶಿಖರ ಗಾಡ್ವಿನ ಆಸ್ಟಿನ್ ಇಲ್ಲಿಯೇ ಕಂಡುಬರುತ್ತದೆ. (ಹಿಮಾಲಯದ ಪ್ರಾದೇಶಿಕ ವಿಭಾಗಗಳು)


   ಹಿಮಾಚಲ ಹಿಮಾಲಯ 

                    ಈ ವಿಭಾಗವು ಕಾಶ್ಮೀರ ಹಿಮಾಲಯ ಮತ್ತು ಕುಮಾವುನ್ ಹಿಮಾಲಯದ ಮಧ್ಯದ ಪ್ರದೇಶವಾಗಿದೆ. ಉತ್ತರದಲ್ಲಿ ಝೆಲಂ ನದಿಯಿಂದ ದಕ್ಷಿಣದಲ್ಲಿನ ಸಟ್ಲೇಜ್ ನದಿಯವರೆಗಿನ ಪ್ರದೇಶದಲ್ಲಿ ಹಂಚಿಕೆಯಾಗಿದ್ದು, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಕಾಂಗ್ರಾ ಕಣಿವೆ, ಕುಲು ಕಣಿವೆ, ಸ್ಪಿತಿ ಕನಿವೇಗಳು ಪ್ರಸಿದ್ದಿಯಾಗಿವೆ ಮತ್ತು ಮಾನಲಿ, ಶಿಮ್ಲಾ, ಡಾಲ್ ಹೌಸಿ ಮತ್ತು ಚಂಬಾದಂತಹ ಗಿರಿಧಾಮಗಳು ಕಂಡು ಬರುತ್ತವೆ. ಇಲ್ಲಿ ಅತಿ ಹೆಚ್ಚು ಸೇಬು ಹಣ್ಣಿನ ತೋಟಗಳು ಕಂಡುಬರುತ್ತದೆ. (ಹಿಮಾಲಯದ ಪ್ರಾದೇಶಿಕ ವಿಭಾಗಗಳು)


   ಕುಮಾರವು ಹಿಮಾಲಯ 

                               ಇದು ಹಿಮಾಚಲ ಹಿಮಾಲಯದ ಮತ್ತು ಸಿಕ್ಕಿಂ ಹಿಮಾಲಯದ ಮಧ್ಯದ ಪ್ರದೇಶವಾಗಿದೆ.ಪಶ್ಚಿಮದಲ್ಲಿ ಸಟ್ಲೇಜ್ ನದಿಯಿಂದ ಪೂರ್ವದ ಮಾಹಾಕಲಿ ನದಿಯವರೆಗೆ ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದಲ್ಲಿ ವಿಸ್ತರಿಸಿದೆ. ಇಲ್ಲಿ ನಂದಾದೇವಿ ಮತ್ತು ಕಾಮೆಟ್ ಶಿಖರಗಳು ಪ್ರಸಿದ್ದಿಯಾಗಿವೆ. ಈ ಪ್ರದೇಶದಲ್ಲಿ ಗಂಗೋತ್ರಿ, ಯಮುನೋತ್ರಿ, ಪಿಂಡಾರ್, ಅಲಕಾಪುರದಂತಹ ಪ್ರಮುಖ ಹಿಮನದಿಗಳು ಕಂಡು ಬರುತ್ತದೆ. ಮಾನಾ, ನಿಟಿ, ಬಲ್ಚಾಧುರ ಇವು ಈ ವಿಭಾಗದ ಪ್ರಮುಖ ಕಣಿವೆ ಮಾರ್ಗಗಲಾಗಿವೆ. ಮಸ್ಸೂರಿ, ನೈನಿತಾಲ್, ರಾಣಿಕೇತ್ ಮತ್ತು ಅಲ್ಮೋರಾಗಳು ಈ ವಿಭಾಗದ ಪ್ರಸಿದ್ದ ಗಿರಿಧಾಮಗಲಾಗಿವೆ. (ಹಿಮಾಲಯದ ಪ್ರಾದೇಶಿಕ ವಿಭಾಗಗಳು)


   ಸಿಕ್ಕಿಂ ಹಿಮಾಲಯ 

                  ಇದು ಕುಮಾವುನ್ ಹಿಮಾಲಯ ಮತ್ತು ಅಸ್ಸಾಂ ಹಿಮಾಲಯದ ಮಧ್ಯ ಭಾಗವಾಗಿದ್ದು, ಪಶ್ಚಿಮದಲ್ಲಿ ಮಾಹಕಾಲಿ ನದಿಯಿಂದ ಮತ್ತು ಪೂರ್ವದ ತೀಸ್ತಾ ನದಿಯವರೆಗಿನ ಪ್ರದೇಶವಾಗಿದೆ. ಈ ವಿಭಾಗವು ನೇಪಾಳ ಮತ್ತು ಶಿಕಕೀಮನಲ್ಲಿ ಹಂಚಿಕೆಯಾಗಿದ್ದು, ಪಶ್ಚಿಮ ಬಂಗಾಳದ ಉತ್ತರದ ಸ್ವಲ್ಪ ಭಾಗದಲ್ಲಿಯೂ ಹಂಚಿಕೆಯಾಗಿದೆ. ಜಗತ್ತಿನ ಅತ್ಯಂತ ಎತ್ತರವಾದ ಶಿಖರಗಳು ಈ ಭಾಗದಲ್ಲಿ ಕಂಡುಬರುತ್ತದೆ. (ಹಿಮಾಲಯದ ಪ್ರಾದೇಶಿಕ ವಿಭಾಗಗಳು)



   ಅಸ್ಸಾಂ ಹಿಮಾಲಯ 

                       ಈ ಹಿಮಾಲಯ ವಿಭಾಗವು ಪಶ್ಚಿಮದ ಸಿಕ್ಕಿಂ ನಲ್ಲಿನ ತಿಸ್ತಾ ನದಿಯಿಂದ ಪೂರ್ವದಲ್ಲಿ ಬ್ರಹ್ಮಪುತ್ರ ನದಿಯವರೆಗೆ ಹಂಚಿಕೆಯಾಗಿದ್ದು, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಅಧಿಕ ಮಳೆ ಬೀಳುವುದರಿಂದಾಗಿ ನದಿಗಳ ಹರಿವಿನಿಂದ ಸವೆತ ಕಾರ್ಯ ಹೆಚ್ಚಾಗಿ ಕಂಡು ಬರುತ್ತದೆ, ಅಸ್ಸಾಂನ ಈ ವಲಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ನೀರನ್ನು ಹೊಂದಿರುವ ನದಿಯಾದ ಬ್ರಹ್ಮ ಪುತ್ರ ಈ ಭಾಗದಲ್ಲಿ ಹರಿಯುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಹಂಚಿಕೆಯಾಗಿರುವ ಈ ವಲಯವು ಚಹಾ ತೋಟಗಾರಿಕೆಗೆ ಪ್ರಸಿದ್ದಿಯಾಗಿದೆ. (ಹಿಮಾಲಯದ ಪ್ರಾದೇಶಿಕ ವಿಭಾಗಗಳು)

ಹಿಮಾಲಯ ಪರ್ವತದ ಉಪಯೋಗಗಳು



ಹಿಮಾಲಯ ಪರ್ವತದ ಉಪಯೋಗಗಳು 


1. ಮಾನ್ಸೂನ್ ಮಾರುತಗಳನ್ನು ತಡೆದು ಭಾರತಕ್ಕೆ ಹೆಚ್ಚು ಮಳೆಯನ್ನು ತರುತ್ತದೆ. 

2. ಇಲ್ಲಿ ಗಂಗಾ, ಯಮುನಾ, ಬ್ರಹ್ಮಪುತ್ರದಂತಹ ಜೀವ ನದಿಗಳು ಉಗಮವಾಗುವುದರಿಂದ ಇದನ್ನು ನದಿಗಳ ಉಗಮದ ತವರು ಎನ್ನಲಾಗುತ್ತದೆ. ಈ ನದಿಗಳು ಜಲವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ. 

3. ಹಿಮಾಲಯದಲ್ಲಿನ ಅನೇಕ ಗಿಡ ಮೂಲಿಕೆಗಳು ಔಷಧಿ ಗುಣವನ್ನು ಹೊಂದಿದೆ. 

4. ತೋಟಗಾರಿಕೆ ಮತ್ತು ಹಣ್ಣಿನ ಬೆಳೆಗೆ ಸಹಕರಿಯಾಗಿದೆ. 

5. ಮಧ್ಯ ಏಷ್ಯಾದಿಂದ ಬೀಸುವ ಶೀತ ಮಾರುತವನ್ನು ತಡೆಯುತ್ತದೆ. 

6. ಇದು ಭಾರತದ ಉತ್ತರದಲ್ಲಿ ನೈಸರ್ಗಿಕ ಗಡಿಯಂತಿದ್ದು, ಹೊರಗಿನ ಶತ್ರುಗಳ ದಾಳಿಯಿಂದ ಭಾರತವನ್ನು ರಕ್ಷಿಸುತ್ತದೆ. 

7. ಇಲ್ಲಿ ಅನೇಕ ಡೊನ್, ಗಿರಿಧಾಮಗಳು, ಸರೋವರಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿದೆ. 

8. ಮನರಂಜನೆ ಮತ್ತು ಕ್ರೀಡಾ ಚಟುವಟಿಕೆಗಳು ಅಂದರೆ ಪರ್ವತಾರೋಹಣ ಮತ್ತು ಟ್ರಕ್ಕಿಂಗ್ಗೆ ಪ್ರಸಿದ್ದಿಯಾಗಿದೆ. 



ಹಿಮಾಲಯದ ಧಾರ್ಮಿಕ ಹಾಗೂ ಪೌರಾಣಿಕ ಪ್ರಮುಖ್ಯತೆಗಳು 

ಹಿಮಾಲಯದ ಧಾರ್ಮಿಕ ಹಾಗೂ ಪೌರಾಣಿಕ ಪ್ರಮುಖ್ಯತೆಗಳು


●) ಹರಿದ್ವಾರ :-

                ಇಲ್ಲಿ ಗಂಗಾ ನದಿಯು ಪರ್ವತಗಳಿಂದಾಚಗೆ ಬಂದು ಸಮತಲ ಭೂಮಿಯನ್ನು ಹೊಕ್ಕುತ್ತದೆ. ಇದು ಉತ್ತರಖಂಡದಲ್ಲಿದ್ದು, ಕುಂಭಮೇಳ ಜರುಗುವ ತಾಣವಾಗಿದೆ. 


●) ಬದರೀನಾಥ್ :-

                   ಇಲ್ಲಿ ವಿಷ್ಣುವಿಗೆ ಮುಡಿಪಾದ ಮಂದಿರವಿದೆ. ದೇಶದ 4 ಚಾರ್ ಧಾಮ್ ಗಳಲ್ಲಿ ಇದು ಒಂದಾಗಿದೆ. ಇತರೆ ಚಾರ್ ಧಾಮ್ ಗಳೆಂದರೆ 1) ಹರಿದ್ವಾರ 2)ಪುರಿ 3) ರಾಮೇಶ್ವರಂ 


●) ಕೇದಾರನಾಥ್ :-

               ಭಾರತದ ಪ್ರಮುಖ 12 ಜ್ಯೋತಿರ್ ಲಿಂಗಗಳಲ್ಲಿ ಇದು ಒಂದಾಗಿದೆ. 


●) ಛೋಟಾ ಚಾರ್ ಧಾಮಗಳು :

                        ಉತ್ತರಖಂಡಗಲ್ಲಿರುವ 4 ಪವಿತ್ರ ಸ್ಥಳಗಳನ್ನು ಛೋಟಾ ಚಾರ್ ಧಾಮ್ ಗಳೆಂದು ಕರೆಯುತ್ತಾರೆ. ಅವುಗಳೆಂದರೆ, ಕೇದಾರನಾಥ್ , ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ. 


●)ಗೋಮುಖ್ :

            ಇದು ಭಗೀರಥಿ ನದಿಯ ಉಗಮ ಸ್ಥಳ, ಗಂಗೋತ್ರಿ ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ. 


●) ದೇವಪ್ರಯಾಗ : 

           ಅಲಕನಂದ ಮತ್ತು ಭಗೀರಥಿ ನದಿಗಳ ಸಂಗಮ ಸ್ಥಳವಾಗಿದ್ದು, ನಂತರ ಗಂಗಾ ನದಿಯಾಗಿ ಮುಂದೆ ಹರಿಯುತ್ತದೆ. ಇದು ಉತ್ತರಾಖಂಡ ರಾಜ್ಯದಲ್ಲಿ ಕಂಡುಬರುತ್ತದೆ. 


●) ಹೃಷಿಕೇಶ :

                ಇಲ್ಲಿ ಲಕ್ಷಣನ ದೇವಸ್ಥಾನವಿದೆ. ( 2020 ರ ಮರ್ಚನಲ್ಲಿ ಅಂತರರಾಷ್ಟ್ರೀಯ ಉತ್ಸವ ಜರುಗಿದ ಸ್ಥಳ)


●) ಕೈಲಾಸ ಪರ್ವತ :

             ಇದು 6,638 ಮೀ. ಎತ್ತರದ ಶಿಖರ. ಹಿಂದೊ ಧರ್ಮದವರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮದವರು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಬ್ರಹ್ಮ ಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ. 


●) ಅಮರನಾಥ :

                   ಇಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಲ್ಲಿ ಮಾತ್ರ ಕಂಡು ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ. 


●) ವೈಷ್ಣೋದೇವಿ :

                        ದುರ್ಗ ಭಕ್ತರಲ್ಲಿ ಈ ಮಂದಿರವು ಪ್ರಸಿದ್ಧವಾಗಿದೆ. 


●) ಧರ್ಮಶಾಲಾ :

                 ದಲೈಲಾಮ ಅವರ ನಿವಾಸ ಸೇರಿದಂತೆ ಟಿಬೆಟ್ ನ ಬೌದ್ಧ ಧರ್ಮದ ಹಲವಾರು ಸ್ಥಳಗಳು ಹಿಮಾಲಯದಲ್ಲಿ ಕಾಣುತ್ತೇವೆ. ಇದು ಹಿಮಾಚಲ ಪ್ರದೇಶದಲ್ಲಿರುವ ಟಿಬೆಟ್ ಧರ್ಮಗುರು ದಲೈಲಾಮ ಅವರ ನಿವಾಸವಾಗಿದೆ. ಸೆಂಟ್ರಲ್ ಟಿಬೆಟಿಯನ್ ಆಡಳಿತದ ಕೇಂದ್ರ ಕಛೇರಿಯಾಗಿದೆ. ಇದು ಹಿಮಾಚಲ ಪ್ರದೇಶದ 2 ನೇ ರಾಜಧಾನಿಯಾಗಿದೆ. 


●) ಶಂಭಾಲ :

                         ಇದು ಬೌದ್ಧ ಧರ್ಮದಲ್ಲಿ ಕಂಡುಬರುವ ಒಂದು ದೈವಿಕ ನಗರ. ಈ ನಗರದ ಬಗ್ಗೆ ಹಲವಾರು ಐತಿಹ್ಯಗಳಿವೆ. ಕೆಲವು ಐತಿಹ್ಯಗಳ ಪ್ರಕಾರ ಇದೊಂದು ನಿಜವಾದ ಭೌತಿಕ ನಗರ. ಇಲ್ಲಿ ಪುರಾತನವಾದ ಮತ್ತು ರಹಸ್ಯವಾದ ಬೌದ್ದಿಕ ಉಪದೇಶಗಳನ್ನು ರಕ್ಷಿಸಲಾಗುತ್ತಿದೆ. ಇನ್ನೂ ಕೆಲವು ನಂಬಿಕೆಗಳ ಪ್ರಕಾರ ಈ ನಗರವು ಭೌತಿಕ ಆಸ್ತಿತ್ವದಲ್ಲಿಲ್ಲ ಹಾಗೂ ಇದನ್ನು ಮಾನಸಿಕವಾಗಿ ಮಾತ್ರ ಊಹಿಸಿಕೊಳ್ಳಬಹುದು. 


●) ಶ್ರೀ ಹೇಮಕುಂಡ ಸಾಹೇಬ್ :

                  ಇದು ಸಿಖ್ ಧರ್ಮದ ಒಂದು ಗುರುದ್ವಾರ. ಸಿಖ್ಖರ 10 ನೇ ಗುರುಗಳಾದ ಗುರುಗೋಬಿಂದ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ಈ ಸ್ಥಳದಲ್ಲಿ ತಪ್ಪಸ್ಸು ಮಾಡಿ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

ಧನ್ಯವಾದಗಳು

Top Post Ad

Below Post Ad