Type Here to Get Search Results !

ಸಂವಿಧಾನದ ಮೂಲ ಸಂರಚನೆಯ ಅಂಶಗಳು

 ಸಂವಿಧಾನದ ಮೂಲ ಸಂರಚನೆಯ  ಅಂಶಗಳು

              ಪ್ರಸ್ತುತ್ಯದಲ್ಲಿ ಸಂಸತ್ತು ಸಂವಿಧಾನದ ಮೂಲ ಸಂರಚನೆಗೆ ಧಕ್ಕೆಯಾಗದಂತೆ ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ ಸಂವಿಧಾನದ ಯಾವುದೇ ಭಾಗವನ್ನು 368 ನೇ ವಿಧಿಯಡಿಯಲ್ಲಿ ತಿದ್ದುಪಡಿ ಮಾಡಬಹುದು. ಆದಾಗ್ಯೂ ಯಾವುದು ದಮವಿಧಾನದ ಮೂಲ ಸಂರಚನೆಯನ್ನು ಒಳಗೊಳ್ಳುತ್ತದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವು ಇನ್ನೂ ವ್ಯಾಖ್ಯಾನಿಸಬೇಕಾಗಿದೆ ಅಥವಾ ಸ್ಪಷ್ಟಪಡಿಸ ಬೇಕಾಗಿದೆ. ಈ ಕೆಳಗಿನ ಅಂಶಗಳು ನ್ಯಾಯಾಲಯದ ವಿವಿಧ ತೀರ್ಪುಗಳಿಂದ ಸಂವಿಧಾನದ ಮೂಲಭೂತ ಲಕ್ಷಣಗಳು ಅಥವಾ ಸಂವಿಧಾನದ ಮೂಲ ಸಂರಚನೆಯ ಅಂಶಗಳು ಅಥವಾ ಭಾಗಗಳಾಗಿ ಹೊರಹೊಮ್ಮಿದೆ. 


1. ಸಂವಿಧಾನದ ಶ್ರೇಷ್ಟತೆ 

2. ಭಾರತದ ರಾಜಕೀಯ ವ್ಯವಸ್ಥೆಯ ಸಾರವೋಭೌಮ, ಪ್ರಜಾಸತ್ತಾತ್ಮಕ ಮತ್ತು ಗಣರಾಜ್ಯದ ಸ್ವರೂಪ. 

3. ಸಂವಿಧಾನದ ಜಾತ್ಯಾತೀತತೆ ಸ್ವರೂಪ. 

4. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ನಡುವಿನ ಅಧಿಕಾರ ವಿಭಜನೆ. 

5. ಸಂವಿಧಾನದ ಒಕ್ಕೂಟ ಸ್ವರೂಪ 

6. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ 

7. ಸಾಮಾಜಿಕ-ಆರ್ಥಿಕ ನ್ಯಾಯ (ಕಲ್ಯಾಣ ರಾಜ್ಯ )

8. ನ್ಯಾಯಿಕ ವಿಮರ್ಶೆ 

9. ವ್ಯಕ್ತಿ ಸ್ವಾತಂತ್ರ್ಯ ಮತ್ತು ಘನತೆ 

10 ಸಂಸದೀಯ ಪದ್ದತಿ 

11. ಕಾನೂನಿನ ಆಧಿಪತ್ಯ 

12. ಸಮಾನತೆಯ ತತ್ವ 

13. ಔಚಿತ್ಯದ ತತ್ವ (Principle of reasonableness)

14. ನ್ಯಾಯವನ್ನು ಪಡೆಯಲು ಪರಿಣಾಮಕಾರಿಯಾದ ಅವಕಾಶ 

15. ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ನಡುವಣ ಮತ್ತು ಸಮತೋಲನ 

16. ಸಮಾನತೆಯ ತತ್ವ 

17. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನಗೆ ಇರುವ ಸೀಮಿತ ಅಧಿಕಾರ 

18. 32, 136, 141 ಮತ್ತು 142 ನೇ ವಿಧಿಗಳ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಇರುವ ಅಧಿಕಾರ 

19. ಪೂರ್ವ ಪರೀಕ್ಷೆಯಲ್ಲಿ ನಿರ್ದಿಷ್ಟ ಪಡಿಸಲಾಗಿರುವ ಉದ್ದೇಶ ಮತ್ತು ಗುರಿಗಳು 

20. 32 ಮತ್ತು 226 ನೇ ವಿಧಿಗಳು 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad