ಸೆಣಬು ಕೈಗಾರಿಕೆ
ಭಾರತದಲ್ಲಿ ಹತ್ತಿ ನಂತರ ಸೆಣಬಿನ ಕೈಗಾರಿಕೆಗಳು ಪ್ರಮುಖ ಸ್ಥಾನವನ್ನು ಪಡೆದಿದೆ. ಸೆಣಬಿನ ಕೈಗಾರಿಕೆಯು ಭಾರತದಲ್ಲಿ ಸುಮಾರು 26 ಲಕ್ಷ ಜನರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿದೆ. ಜಗತ್ತಿನ ಉತ್ಪಾದನೆಯಲ್ಲಿ ಶೇ.35 ರಷ್ಟು ಸೆಣಬಿನ ಉತ್ಪಾದನೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಇದರಿಂದ ಭಾರತದ ವಿದೇಶಿ ವಿನಿಮಯ ಹೆಚ್ಚಾಗಿದೆ. ಇದು ಬೇಗ ಕೊಳೆಯುವ ಗುಣ ಹೊಂದಿದೆ. ನವೀಕರಿಸಬಲ್ಲ ಮತ್ತು ಪರಿಸರ ಸ್ನೇಹಿಯಾದಂತಹ ಸೆಣಬಿನ ನಾರು ಹತ್ತಿಯ ನಂತರ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಇದರಿಂದ ದಿನನಿತ್ಯ ಬಳಕೆಗೆ ಬೇಕಾದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.
ಭಾರತದಲ್ಲಿ ಸೆಣಬಿನ ಕೈಗಾರಿಕೆ ಹೇಗೆ ಮತ್ತು ಯಾವಾಗ ಆರಂಭವಾಯಿತು
● ಭಾರತದಲ್ಲಿ ಸೆಣಬಿನ ಕೈಗಾರಿಕೆಯು ಪುರಾತನವಾಗಿದ್ದು, ಅಂದಿನ ದಿನಗಳಲ್ಲಿ ಇದು ಗೃಹ ಕೈಗಾರಿಕೆಯಾಗಿತ್ತು ಹಾಗೂ ಸಣ್ಣ ಪ್ರಮಾಣದಲ್ಲಿ ಸೆಣಬನ್ನು ಮನೆಗಳಲ್ಲೇ ಉತ್ಪಾದಿಸುತ್ತಿದ್ದರು ಮತ್ತು ಸೇನಾಬಿನಿಂದ ಬಟ್ಟೆ, ಗೃಹಪಯೋಗಿ ವಸ್ತುಗಳು ಹಾಗೂ ಕೃಷಿಗೆ ಬೇಕಾದ ವಸ್ತುಗಳನ್ನು ತಯಾರಿಸುತ್ತಿದ್ದರು.
● ಭಾರತದಲ್ಲಿ ಅತಿ ಹೆಚ್ಚು ಸೆಣಬನ್ನು ಉತ್ಪಾದಿಸುತ್ತಿರುವ ಪ್ರದೇಶವಿದ್ದು, ಅಂತಹ ಕಚ್ಚಾ ಸೆಣಬನ್ನು ಸಿದ್ದವಸ್ತುವನ್ನಾಗಿ ಮತ್ತು ಸೆಣಬಿನ ಉತ್ಪನ್ನವಾಗಿ ತಯಾರಿಸುವ ಅವಶ್ಯಕತೆ ಇತ್ತು. ಇದನ್ನರಿತ ಬ್ರಿಟಿಷರು U. Kಯಲ್ಲಿ ಸೆಣಬಿನ ಕೈಗಾರಿಕೆಯನ್ನು ಸ್ಥಾಪಿಸಿದರು
ಭಾರತದ ಮೊಟ್ಟ ಮೊದಲ ಸೆಣಬಿನ ಕೈಗಾರಿಕೆ
● ಭಾರತದಲ್ಲಿ ಸೆಣಬಿನ ಕೈಗಾರಿಕೆಯನ್ನು 1855 ರಲ್ಲಿ " ಕಲ್ಕತಾದ ಬಳಿಯ "ರಿಶ್ರಾ" ಎಂಬಲ್ಲಿ ಆರಂಭಿಸಲಾಯಿತು. ಇದು ಭಾರತದ ಮೊಟ್ಟ ಮೊದಲ ಸೆಣಬಿನ ಕೈಗಾರಿಕೆಯಾಗಿದೆ.
● ಸೆಣಬಿನ ಉತ್ಪನ್ನಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದ್ದರಿಂದ ಸೆಣಬಿನ ಕಾರ್ಖಾನೆಗಳು ಅತಿ ವೇಗವಾಗಿ ಬೆಳೆಯಲಾರಂಭಿಸಿದವು. 1914ರ ವೇಳೆಗೆ ಭಾರತದಲ್ಲಿ 60 ಸೆಣಬಿನ ಕೈಗಾರಿಕೆಗಳು ಸ್ಥಾಪನೆಯಾದವು
● ಅಖಂಡ ಭಾರತದಲ್ಲಿ ಸೆಣಬಿನ ಉತ್ಪಾದನೆ ಮತ್ತು ಸೆಣಬಿನ ಕೈಗಾರಿಕೆಗಳು ಹೆಚ್ಚಾಗಿದ್ದವು, ಭಾರತದ ಸ್ವತಂತ್ರ ಪಡೆದ ನಂತರ ಸೆಣಬನ್ನು ಉತ್ಪಾದಿಸುವ ಪ್ರದೇಶಗಳೆಲ್ಲಾ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೇರ್ಪಡೆಯಾದವು ಆದರೆ ಕೈಗಾರಿಕೆಗಳು ಮಾತ್ರ ಭಾರತದಲ್ಲೇ ಉಳಿಯಿತು.
● ಭಾರತದಲ್ಲಿ ಇತ್ತೀಚೆಗೆ ಸೆಣಬನ್ನು ಬೆಳೆಯಲಾಗುತ್ತಿದ್ದು, ಭಾರತವು ಜಗತ್ತಿನಲ್ಲೇ ಸೆಣಬು ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದಿದೆ.
● ಭಾರತದಲ್ಲಿ ಸೆಣಬಿನ ಕೈಗಾರಿಕೆಗಳು ಸೆಣಬು ನೆಲೆಯುವ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ. ಭಾರತದಲ್ಲಿ ಒಟ್ಟು 78 ಸೆಣಬಿನ ಕೈಗಾರಿಕೆಗಳಿವೆ ಅವುಗಳು ಈ ಕೆಳಗಿನ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ.
● ಭಾರತದಲ್ಲಿ ಪಶ್ಚಿಮ ಬಂಗಾಳದ ಮುಖಜ ಭೂಮಿ, ಅಸ್ಸಾಂ, ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾಗಳಲ್ಲಿ ಬೆಳೆಯಲಾಗುತ್ತಿದೆ. ಸೆಣಬಿನ ಕಾರ್ಖಾನೆಗಳು ಹೆಚ್ಚಾಗಿ ಹೂಗ್ಲಿ ನದಿಯ ಕೆಳ ಕಣಿವೆಯ ಭಾಗದಲ್ಲಿ ಕೇಂದ್ರೀಕೃತವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಕಚ್ಚಾ ಸೆಣಬು ಹೆಚ್ಚಾಗಿ ದೊರಕುವುದು, ಸಾರಿಗೆ ಸೌಕರ್ಯ, ಶಕ್ತಿ ಸಂಪನ್ಮೂಲಗಳು ದೊರೆಯುವಿಕೆ.
● ಭಾರತದಲ್ಲಿ ಸೆಣಬು ಕೈಗಾರಿಕೆಗಳು ಆಂಧ್ರಪ್ರದೇಶ, ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲೂ ಸ್ಥಾಪಿಸಲ್ಪಟ್ಟಿವೆ.
● ಅಸ್ಸಾಂ ರಾಜ್ಯದ ಬರಾಕ ಕಣಿವೆ ಪ್ರದೇಶವು ಅಸ್ಸಾಂನಲ್ಲಿ ಅತಿ ಹೆಚ್ಚು ಸೆಣಬನ್ನು ಉತ್ಪಾದಿಸುತ್ತಿದ್ದು, ಇದರಿಂದ ಪ್ರಸ್ತುತ ಅಸ್ಸಾಂ, ತ್ರಿಪುರ ಮತ್ತು ಮಿಜೋರಾಂ ನಲ್ಲಿ ಸೆಣಬು ಕೈಗಾರಿಕೆಗಳು ತಲೆ ಎತ್ತುತಿವೆ.
ಪಶ್ಚಿಮ ಬಂಗಾಳದಲ್ಲಿ ಸೆಣಬಿನ ಕೈಗಾರಿಕೆ
ಭಾರತದಲ್ಲಿರುವ ಅತಿ ಹೆಚ್ಚು ಸೆಣಬಿನ ಕೈಗಾರಿಕೆಗಳು ಪಶ್ಚಿಮ ಬಂಗಾಳದ ಹೂಗ್ಲಿ ಪ್ರದೇಶದಲ್ಲಿದೆ. 61 ಸೆಣಬಿನ ಕೈಗಾರಿಕೆಗಳಿವೆ. ಪಶ್ಚಿಮ ಬಂಗಾಳದ ರಿಶ್ರಾ, ಟಿಟಾಗಾರ್, ಬಾರಾನಗರ, ಸೆರಾಂಪುರ್, ಶ್ಯಾಂನಗರ, ಬಿರ್ಲಾ ಪುರ ಮುಂತಾದ ಕಡೆಗಳಲ್ಲಿ ಕೈಗಾರಿಕೆಗಳು ಕಂಡು ಬರುತ್ತದೆ. ಪಶ್ಚಿಮ ಬಂಗಾಳವು ದೇಶದ ಉತ್ಪಾದನೆಯಲ್ಲಿ ಶೇ 90 ರಷ್ಟು ಸೆಣಬಿನ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಪಶ್ಚಿಮ ಬಂಗಾಳದ ನೆರೆಹೊರೆ ರಾಜ್ಯಗಳಲ್ಲೂ ಕೊಡ ಸೆಣಬಿನ ಕೈಗಾರಿಕೆಗಳು ಕಂಡು ಬರುತ್ತದೆ. ಅಲ್ಲದೆ ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳಲ್ಲೂ ಕೊಡ ಸೆಣಬಿನ ಕೈಗಾರಿಕೆಗಳು ಸ್ಥಾಪನೆಗೊಂಡಿದೆ.
ಭಾರತದ ರಾಜ್ಯಗಳಲ್ಲಿ ಸೆಣಬಿನ ಕೈಗಾರಿಕೆಯ ಹಂಚಿಕೆ
| ರಾಜ್ಯ | ಸೆಣಬಿನ ಕೈಗಾರಿಕೆ ಇರುವ ಸ್ಥಳಗಳು |
|---|---|
| ಬಿಹಾರ | ಗಯಾ, ಸಮಾಷ್ಟಪುರ, ದರ್ಭಾಂಗ್ |
| ಉತ್ತರ ಪ್ರದೇಶ | ಗೋರಖ್ ಪುರ, ಖಾನ್ ಪುರ, ಶಯೆಂಜವನಂ |
| ಒಡಿಶಾ | ಕಟಕ್ |
| ಆಂಧ್ರಪ್ರದೇಶ | ಚಿತ್ವಾಸಾಲ್, ಗುಟ್ಟೂರು, ಬಿಟ್ವಾಲ್, ನೆಲ್ಲಿ ಮುರಾಲ್ಲಾ |
| ಮಧ್ಯೆ ಪ್ರದೇಶ | ರಾಯಗಡ |


ಧನ್ಯವಾದಗಳು