Type Here to Get Search Results !

ಪದಗಳ ಅರ್ಥ | Kannada word meanings

 

10ನೇ ತರಗತಿಯ ಕನ್ನಡ ಗದ್ಯಭಾಗದ ಪದಗಳ ಅರ್ಥಗಳು 


ಯುದ್ದ ಗದ್ಯ ಭಾಗದ ಪದಗಳ ಅರ್ಥ 


1. ಆರ್ತನಾದ  - ಕಷ್ಟಕ್ಕೆ ಸಿಕ್ಕಿದವರ ಕೂಗು 

2. ಕ್ರೌರ್ಯ  - ನಿರ್ದಯತೆ, ಕರುಣೆಯಿಲ್ಲದ 

3. ರೋದನ  - ಆಳುವಿಕೆ 

4. ಸೂಲಗಿತ್ತಿ  - ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು 

5. ಕಿವಿಗಡಚಿಕ್ಕು  - ಕಿವಿಗೆ ಕರ್ಕಶವಾಗು 

6. ಕ್ರೌಂಡ್  - ಭೂ ಪ್ರದೇಶ 

7. ಸಾಂತ್ವನ  - ಸಮಾಧಾನಪಡಿಸು 

8. ಹಂಬಲ  - ತೀವ್ರ ಆಸೆ 

9. ಹತಾಶೆ  - ನಿರಾಶೆ, ಆಶಾಭಂಗ 


ಶಬರಿ ಗದ್ಯಭಾಗದ ಪದಗಳ ಅರ್ಥ 

1. ಅಣಿ   - ಸಿದ್ದತೆ 

2. ಅರಿ  - ತಿಳಿ 

3. ಅಸುರ  - ರಾಕ್ಷಸ 

4. ಆದರ  - ಪ್ರೀತಿ 

5. ಆನು  - ತಾಳು 

6. ಊಣೆಯ  - ಕೊರತೆ 

7. ಎಡೆ   - ಸ್ಥಳ 

8. ಐದಿ  - ಹೋಗಿ 

9. ಕಡು  - ಅತಿ 

10. ಕರುಕ  - ಉರಿದ ಬತ್ತಿಯ ಕಪ್ಪು ಭಾಗ 

11. ಚೀರ (ತ್ಸ) - ಸೀರೆ(ದ್ಭ) - ನಾರುಬಟ್ಟೆ 

12. ತವಸಿ(ದ್ಭ) - ತಪಸ್ವಿ(ತ್ಸ) 

13. ತೃಷೆ  - ಬಾಯಾರಿಕೆ 

14. ದಿಟ್ಟಿ(ದ್ಭ)  - ದೃಷ್ಟಿ(ತ್ಸ) 

15. ನಲ್ಮೆ  - ಪ್ರೀತಿ 

16. ನೆರವು  - ಸಹಾಯ 

17. ಪೆರೆ  - ಚಂದ್ರ 

18. ಬಂಬಲ  - ಗುಂಪು 

19. ಬಯಕೆ  - ಇಚ್ಛೆ 

20. ಬೆರಗು  - ಆಶ್ಚರ್ಯ 

21. ಭೂಮಿಜಾತೆ  - ಸೀತೆ 

22. ಮಧುಪರ್ಕ  - ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ಹಾಲು, ಜೇನುತುಪ್ಪ, ಸಕ್ಕರೆ ಮಿಶ್ರಿತ ಪಾನೀಯ 

23. ರೇವು  - ಬಂದರು 

24. ವೇದಿ  - ಹೋಮ ನಡೆಯುವ ಸ್ಥಳ 

25. ಸನಿಯ(ಹ)  - ಸಮೀಪ 

26. ಸಿದ್ಧ  - ತಪಸ್ವಿ 

27. ಹವಣು  - ಸಿದ್ಧತೆ 

28. ಅಬ್ಬೆ  - ತಾಯಿ 

29. ಅರ್ತಿ  - ಪ್ರೀತಿ 

30. ಅಳಲು  - ದುಃಖ 

Kannada word meanings 

31. ಆನನ  - ಮುಖ 

32. ಉಲ್ಕೆ  - ಆಕಾಶದಿಂದ ಭೂಮಿಗೆ ಬೀಳುವ ತೇಜಃಪುಂಜವಾದ ಆಕಾಶಕಾಯ,

33. ಎಂಥರೋ  - ಎಂತಹವರೋ 

34. ಎರೆ  - ಬೇಡು, ಪ್ರಾರ್ಥಿಸು 

35. ಕಂಪು  - ಸುವಾಸನೆ 

36. ಕರ  - ಕೈ 

37. ಚಿರ  - ಶಾಶ್ವತ 

38. ತಣಿವು  - ತೃಪ್ತಿ 

39. ತುಸು  - ಸ್ವಲ್ಪವೂ 

40. ತೇಜ  - ಕಾಂತಿ 

41. ಧೃತಿ  - ಧೈರ್ಯ 

42. ನೆಚ್ಚು  - ನಂಬು 

43. ಪದ  - ಪಾದ 

44. ಪೂಗಳು  - ಹೂಗಳು 

45. ಬನ್ನ  - ಕಷ್ಟ, ತೊಂದರೆ 

46. ಬಳಿ  - ದಾರಿ 

47. ಬೇಗೆ  - ದುಃಖವೆಂಬ ಬೆಂಕಿ 

48. ಮಧುಕರ  - ದುಂಬಿ 

49. ಮುರುಳು  - ಮೋಡಿ 

50. ಲೇಸು  - ಉತ್ತಮ 

51. ಶ್ರಮಣಿ  - ತಪಸ್ವಿನಿ 

52. ಸವಿ  - ಸಿಹಿ 

53. ಸುರಭಿ  - ಕಾಮಧೇನು 

54. ಹಳು  - ಕಾಡು 

ಪದಗಳ ಅರ್ಥ | Kannada word meanings


ಲಂಡನ್ ನಗರ ಗದ್ಯಭಾಗದ ಪದಗಳ ಅರ್ಥ 

1. ಅಂಜು  - ಹೆದರು, ಭಯಪಡು 

2. ಪೆನ್ನಿ  - ಇಂಗ್ಲೆಂಡಿನ ನಾಣ್ಯ 

3. ಕೂಟ  - ಅನೇಕ ರಸ್ತೆಗಳ ಸೇರುವ ಜಾಗ 

4. ಟೈಪಿಸ್ಟ್  - ಬೆರಳಚ್ಚುಗಾರ 

5. ಕಾರಕೂನ  - ಗುಮಾಸ್ತ 

6. ಪಾಟಿ  - ಹಲಗೆ 

7. ಫೂಟು  - ಅಡಿ 

8. ಕಟೆ  - ಕೆತ್ತು 

9. ಕಬ್ಬಿಗ  - ಕೆವಿ 

10. ಚಣ್ಣ  - ಚಡ್ಡಿ 

11. ಟ್ರಾಮ್   - ವಿದ್ಯುತ್ ನಿಂದ ಓಡಾಡುವ ಸ್ಥಳೀಯ ರೈಲುಗಾಡಿ 

12. ಪುಚ್ಚ  - ಗರಿ 

13. ಮರ್ತ್ಯತ್ವವೇ  - ಮನುಷ್ಯ ಸ್ವಭಾವವೇ 

14. ಮೊರೆ  - ಮುಖ 

15. ವಸಾಹತು  - ಅನ್ಯ ದೇಶಿಯರ ಅಧಿಕಾರಕ್ಕೊಳಪಟ್ಟ ಪ್ರದೇಶ 

16. ಮಿಲಾಯತಿ  - ವಿದೇಶ 

17. ಸಿಂಪಿ  - ದರ್ಜೆಯವರು 

18. ಶೀಲಿಂಗ್  - ಇಂಗ್ಲೆಂಡಿನ ಒಂದು ಬೆಳ್ಳಿ ನಾಣ್ಯ 

19. ಸ್ಟೇಷನರಿ  - ಲೇಖನ ಸಾಮಗ್ರಿಗಳು ಇತ್ಯಾದಿ 


ಭಾಗ್ಯಶಿಲ್ಪಿಗಳು ಗದ್ಯಭಾಗದ ಪದಗಳ ಅರ್ಥ 

1. ಅಸ್ತಿಭಾರ  - ಬುನಾದಿ 
2. ಗಿರಣಿ  - ಹತ್ತಿಯನ್ನು ಬಿಡಿಸುವ, ನೂಲು ಮಾಡುವ, ಧಾನ್ಯ ಬೀಸುವ ಯಂತ್ರ ಮತ್ತು ಇಂತಹ ಯಂತ್ರಗಳಿಂದ ಕೂಡಿದ ಕಟ್ಟಡ, ಮಿಲ್ಲು 
3. ತಾಂತ್ರಿಕ  - ತಂತ್ರಜ್ಞಾನಕ್ಕೆ ಸಂಬಂಧಿಸಿದ 
4. ಮುಕ್ತಕಂಠ  - ತೆರದ ಮನಸು 
5.ಶತಮಾನೋತ್ಸವ  - ನೂರು ವರ್ಷ ತುಂಬಿದ ಸಮಯದಲ್ಲಿ ಆಚರಿಸುವ ಉತ್ಸವ 
6. ಸೂಪರ್ದಿ  - ವಶ 
7. ಸ್ಥೈರ್ಯ  - ದೃಢತೆ 
8. ಹರಿಕಾರ  - ಮುಂದಾಳು 
9. ಕಾಮಗಾರಿ  - ಕೆಲಸ 
10. ಗೊಮ್ಮಟ ವ್ಯಕ್ತಿತ್ವ  - ಉನ್ನತ ವ್ಯಕ್ತಿತ್ವ 
11. ದೋಷಣೆ  - ನಿಂದನೆ 
12. ವೈಜ್ಞಾನಿಕ  - ವಿಜ್ಞಾನಕ್ಕೆ ಸಂಬಂಧಿಸಿದ 
13. ಸಮುಚ್ಚಯ  - ಸಮೂಹ 
14. ಸುಸಂಗತ  - ಯೋಗ್ಯವಾದ 
15. ಹಂಬಲ  - ಬಯಕೆ 

ಎದೆಗೆ ಬಿದ್ದ ಅಕ್ಷರ ಗದ್ಯಭಾಗದ ಪದಗಳ ಅರ್ಥ 

1. ಆವಾಹಿಸು  - ಮೈಮೇಲೆ ಬರುವಂತೆ ಮಾಡಿಕೊ 
2. ಗುಡಿಮನೆ  - ಚಿಕ್ಕ ದೇವಸ್ಥಾನ 
3. ಕ್ಷೋಭೆ  - ತಳಮಳ 

ವ್ಯಾಘ್ರಗೀತೆ ಗದ್ಯಭಾಗದ ಪದಗಳ ಅರ್ಥ 

1. ಅಪ್ರತಿಭೆ  - ಹೋಲಿಕೆ ಇಲ್ಲದ, ಅಮೂರ್ತ 
2. ದಿಗ್ಬ್ರಮೆಗೊಂಡ  - ದಿಕ್ಕು ತೋಚ್ಚಾದ 
3. ಗಂಧ  - ವಾಸನೆ 
4. ಜಡ  - ಮಂದ, ಚಟುವಟಿಕೆಯಿಲ್ಲದ 
5. ಪಂಚೇಂದ್ರಿಯ  - ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ 
6. ಖಿರ್ದಿ  - ಕಂದಾಯ , ವಿವರಗಳನ್ನೂಳಗೊಂಡ ಪುಸ್ತಕ 
7. ಘಾನೇಂದ್ರಿಯ  - ಮೂಗು 
8. ತೋಟಾ  - ಬಂದೂಕಿನ ಗುಂಡು 
9. ಪಂಜ  - ಹುಲಿಯ ಅಂಗಾಲು 
10. ಲಾಂಛನ  - ಗುರುತು, ಚಿಹ್ನೆ 

ವೃಕ್ಷಸಾಕ್ಷಿ ಗದ್ಯಭಾಗದ ಪದಗಳ ಅರ್ಥ 

1. ಅತಿಕುಟಿಲಮನ  - ಅತಿಯಾದ ಮೋಸದ 
2. ಅನೃತ  - ಅಸತ್ಯ 
3. ಅಪರಗಿರಿ  - ಅಸ್ತಮಾನದ ಬೆಟ್ಟ, ಪಶ್ಚಿಮದ ಬೆಟ್ಟ 
4. ಅಬ್ಜೋದರ  - ವಿಷ್ಣು 
5. ಕಾಯಕಾಂತಿ  - ವಿಷ್ಣುವಿನ ದೇಹದ ಕಾಂತಿ 
6. ಅಯ್ಯ  - ತಂದೆ 
7. ಅಷ್ಟವಿಧ  - ಎಂಟುಬಗೆಯ 
8. ಆಚ್ಛಾದಿತ  - ಆವರಿಸಿದ 
9. ಆದಿತ್ಯ  - ಸೂರ್ಯ 
10. ಇಂಬು  - ಅವಕಾಶ 
11. ಉಯ್  - ಒಯ್ಯು 

12. ಉಯ್ದು  - ಒಯ್ದು 
13. ಉರಿಯಟ್ಟಲ್  - ಬೆಂಕಿ ಉರಿಯಲು 
14. ಉಸಿರ್  - ಹೇಳು 
15. ಎನ್ನೆಂದುದಂ  - ನಾನು ಹೇಳಿದನ್ನು 
16. ಒಡಂಬಡು  - ಒಪ್ಪು 
17. ಕಟ್ಟೇಕಾಂತ  - ಯಾರು ಇಲ್ಲದಂತಹ 
18. ಕರಾಮ್  - ತುಂಬಾ 
19. ಕಳವನಿಡು  - ಕಳ್ಳತನ ಆರೋಪಿಸು 
20. ಕಳೆದುಕೊಂಡುದರ್ಕೆ  - ಕದ್ದುದಕ್ಕೆ 
21. ಕಾಪು  - ರಕ್ಷಣೆ 
22. ಕಿಡಿಸು  - ಕೆಡಿಸು 
23. ಕಿಡು  - ನಾಶವಾಗು 
24. ಕೊರ್ಮೆ  - ಸ್ನೇಹ 
25. ಕೃತ್ರಿಮ  - ಮೋಸ 
26. ಕೆಲವಾನುಂ  - ಕೆಲವು 
27. ಕೈಕೊಳ್ಳು  - ಸಮ್ಮತಿಸು 
28. ಕೋಟರಕುಟೀರ  - ಮರದ ಪೊಟರೆ 
29. ಕ್ರಮಕ್ರಮದೆ  - ಮೆಲ್ಲಮೆಲ್ಲನೆ 
30. ಚೋದ್ಯ  - ಅದ್ಬುತ 
31. ತತ್ಪ್ರಪಂಚಂ  - ಈವರೆಗೆ ನಡೆದ ಘಟನೆ 
32. ತತ್ಸನ್ನಿಧಾನಸ್ಥಿತ  - ಅಲ್ಲಿರುವ 
33. ರಮಾಲ  - ಕತ್ತಲೆ 
34. ದುಷ್ಪುತ್ರ  - ದುಷ್ಟ ಪುತ್ರ 
35. ನಿರ್ವಾಹ  - ತಂತ್ರ 
36. ನೀರದ   - ಮೋಡ 
37. ನೆರವಿ  - ಜನಸಮೂಹ 
38. ನೇಸರ್  - ಸೂರ್ಯ 
39. ಪಚ್ಚು  - ಹಂಚು 
40. ಪನ್ನಗ  - ಹಾವು 
41. ಪರದು  - ವ್ಯಾಪಾರ 

Kannada word meanings 

42. ಪರಮ ಗಹನ  - ನಿಗೂಢ 
43. ಪರಿಗ್ರಹ  - ಮನೆಯವರು 
44. ಪರ್ವಿದ  - ಹಬ್ಬಿದ 
45. ಪಸಿಯದುಂಡು  - ಆಹಾರಕ್ಕೆ ಕೊರತೆಯಿಲ್ಲದೆ 
46. ಪಿರಿದಪ್ಪ  - ಬಹಳಷ್ಟು 
47. ಪುಗಿಸು  - ಹೊಗಿಸು 
48. ಪುಯ್ಲಿಟ್ಟು  - ಬೊಬ್ಬೆ ಹಾಕಿ 
49. ಪುಳ್ಳಿ  - ಕಟ್ಟಿಗೆ 
50. ಪೊನ್ನು  - ಸಂಪತ್ತು, ಹಣ 
51. ಪೊಯ್ದುಕೊಂಡು  - ಬಡಿದುಕೊಳ್ಳುತ್ತ 
52. ಪೊಗಲ್ಪಡೆ  - ಹೋಗಲು ಅನುವಾಗ 
53. ಪ್ರಕರಾಂಜನ ಪುಂಜ  - ಕಾಡಿಗೆಯರಾಶಿ 
54. ಪ್ರತ್ಯರ್ಥ  - ಪ್ರತಿವಾದಿ 
55. ಬಂಚಿಸು  - ವಂಚಿಸು 
56. ಬರವಂ  - ಬರುವಿಕೆಯನ್ನು 
57. ಬಲವಂದು  - ಪ್ರದಕ್ಷಿಣೆ ಬಂದು 
58. ಬವರ  - ಜಗಳ 
59. ಬಸಿರ್  - ಹೊಟ್ಟೆ 
60. ಬಹಿರುದ್ಯಾನವನ  - ಹೊರವಲಯದ ಮರಗಿಡಗಳ ಹೂದೋಟ 
61. ಬಳಾರಿ  - ಮಾರಿ 
62. ಬಾಯ್  - ಬಾಯಿ 
63. ಬಾಯಾರ್ದು  - ಕೂಗಾಡಿ 
64. ಬೀಡುಬಿಡು  - ತಂಗು 
65. ಬೀಯ(ದ್ಬ)  - ವ್ಯಯ(ತ್ಸ), ಖರ್ಚು 
66. ಬೇಹಾರಿ(ದ್ಬ)  - ವ್ಯಾಪಾರಿ(ತ್ಸ) 
67. ಮನದನ್ನ  - ಸ್ನೇಹಿತ 
68. ಮಹಾವಟವಿಟಪಿ  - ದೊಡ್ಡದಾದ ಅಶ್ವಸ್ಥ ಮರ 
69. ಮೇದಿನಿ  - ಭೂಮಿ 
70. ಲುಬ್ಧತೆ  - ದುರಾಸೆ 
71. ವಂದು  - ಬಂದು 
72. ಮಣಿಕ್ಷುತ್ರರೆ  -  ವ್ಯಾಪಾರಿಗಳ ಮಕ್ಕಳು 
73. ವರ್ಪುದು  - ಬರುವುದು 
74. ವ್ಯವಹಿತ  - ಮುಚ್ಚಿದ 
75. ಸಂದೆಯ(ದ್ಭ)  - ಸಂದೇಹ(ತ್ಸ)
76. ಸಮನಿಸು - ಸಂಭವಿಸು 
77. ಹರಣ  - ಕದಿಯು 
78. ಹುಸಿ  - ಸುಳ್ಳು 
79. ಕೋಕಿಲಾ(ತ್ಸ)  - ಕೋಗಿಲೆ(ದ್ಭ) 


ಸುಕುಮಾರಸ್ವಾಮಿಯ ಕಥೆ ಗದ್ಯಭಾಗದ ಪದಗಳ ಅರ್ಥ 

1. ಇರ್ವರ್ಗ್ಗಂ  - ಇಬ್ಬರಿಗೂ 
2. ಕಸವರ  - ಚಿನ್ನ 
3. ಖಂಡಮಾಗೆ  - ತುಂಡಾಗುವಂತೆ 
4. ತಗುಳ್ಚಿ ದರ್  - ಸೇರಿಸಿದರು 
5. ನೈಮಿತ್ತಿಕಂ  - ಜೋಯಿಸನು 
6. ಪರಿಯಣದ  - ಊಟದ ತಟ್ಟೆಯ 
7. ಭಾರ್ಯೆ  - ಸತಿ, ಹೆಂಡತಿ 
8. ವಿಭೂತಿಯಂ  - ಐಶ್ವರ್ಯವನ್ನು 
9. ನಿದ್ದಾರ್ಥಂಗಳಂ  - ಬಿಳಿ ಸಾಸಿವೆಗಳನ್ನು 
10. ಕರಂ ಸಾದು  - ಬಹು ಸಾಧುವಾದವನು 
11. ಕೆರ್ಪುಗಳೊಳ್  - ಎಕ್ಕಡಗಳಲ್ಲಿ, ಚಪ್ಪಳಿಗಳಲ್ಲಿ 
12. ಚೋದ್ಯಂಬಟ್ಟು  -  ಆಶ್ಚರ್ಯಪಟ್ಟು 
13. ದೊರೆಯಲ್ಲವು  - ಸಮಾನವಲ್ಲ 
14. ಪಚ್ಚುಗೊಟ್ಟೊಡೆ  - ವಿಭಾಗಿಸಿ ಕೊಟ್ಟರೆ 
15. ಪಾರುತ್ತಿರೆ  - ಎದುರು ನೋಡುತ್ತಿರಲು 
16. ಬಟ್ಟೆಯೊಳೆಲ್ಲಂ - ದಾರಿಯಲ್ಲೆಲ್ಲ 
17. ಸರುಸಪಂ  - ಸಾಸಿವೆಗಳು 
18. ಸೇಸೆಯನಿಕ್ಕಲ್  - ಮುಂತ್ರಾಕ್ಷತೆ  ಹಾಕಲು 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad