ಪ್ರಾಚೀನ ಭಾರತದ ಇತಿಹಾಸ
ಭಾರತದಲ್ಲಿ ಆಸ್ತಿತ್ವದಲ್ಲಿದ್ದ ಇತಿಹಾಸ ಪೂರ್ವ ಸಂಸ್ಕೃತಿಯನ್ನು ಮುಖ್ಯವಾಗಿ ಎರಡುರೀತಿಯಲ್ಲಿ ವಿಂಗಡಿಸಿದಾರೆ . ಅವುಗಳೆಂದರೆ
1. ಶಿಲಾಯುಗ
2. ಲೋಹಯುಗ
![]() |
| ಪ್ರಾಚೀನ ಭಾರತದ ಇತಿಹಾಸ |
ಶಿಲಾಯುಗ
ಶಿಲಾಯುಗದಲ್ಲಿ ಮಾನವನು ಮುಖ್ಯವಾಗಿ ಶಿಲೆಯಲ್ಲಿ ಮಾಡಿದ ಆಯುಧಗಳನ್ನು ಬಲಸುತ್ತಿದನು. ಶಿಲಾಯುಗವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
A. ಹಳೆ ಶಿಲಾಯುಗ
B. ಸೂಕ್ಷ್ಮ ಶಿಲಾಯುಗ
C. ನೂತನ ಶಿಲಾಯುಗ
A. ಹಳೆ ಶಿಲಾಯುಗ ( ಕ್ರಿ.ಪೂ. 35,000 ರಿಂದ 20,000)
ಪ್ರಾಚೀನ ಶಿಲಾಯುಗದಲ್ಲಿ ಮಾನವನು ಪ್ರಾಣಿಗಳನ್ನು ಬೇಟೆಯಾಡಿ, ಆಹಾರ ಸಂಗ್ರಹಣೆ ಮಾಡಿ ಬದುಕುತ್ತಿದ್ದನು. ಈ ಕಾಲದ ಮಾನವನು ಮುಖ್ಯವಾಗಿ ಒರಟು ಕಲ್ಲಿನಿಂದ ಕೊಡಿದ ಬೆಣಚು ಕಲ್ಲನ್ನು ಉಪಯೋಗಿಸುತ್ತಿದ್ದರಿಂದ ಇವನನ್ನು " ಬೆಣಚು ಕಲ್ಲಿನ" ಮಾನವ ಎಂಬುದಾಗಿ ಕರೆಯಲಾಗಿದೆ. ಹಳೆಯ ಶಿಲಾಯುಗದ ನಿವೇಶನಗಳನ್ನು ಸೋಹನ್ ಕಣಿವೆ (ಪಾಕಿಸ್ತಾನದಲ್ಲಿದೆ), ಬೋಲಾನ್ ಕಣಿವೆ ( ಅಫಘಾನಿಸ್ತಾನ ), ನರ್ಮದಾ, ತುಂಗಭದ್ರ, ಮಧ್ಯಪ್ರದೇಶದ ಭೀಮ್ ಬೆಟ್ಕಾಕ್, ತಿರುನೇಲ್ ವೇಲಿ ( ತಮಿಳುನಾಡು ), ಮಧ್ಯಪ್ರದೇಶ, ಭೂಪಾಲ್ ಮತ್ತು ಛೋಟಾ ನಾಗ್ಪುರದ ಪ್ರಸ್ತಭೂಮಿಗಳಲ್ಲಿ ಗುರುತಿಸಬಹುದು.
B. ಸೂಕ್ಷ್ಮ ಶಿಲಾಯುಗ ( ಮೆಸೊಲಿಥಿಕ್ ) ( ಕ್ರಿ.ಪೂ. 20,000 ರಿಂದ 10,000)
ಪ್ರಾಚೀನ ಶಿಲಾಯುಗ ಮತ್ತು ನೂತನ ಶಿಲಾಯುಗದ ಬೆಸುಗೆಯ ಕೊಂಡಿಯೇ ಮಧ್ಯ ಶಿಲಾಯುಗ ಈ ಕಾಲದಲ್ಲಿನ ಮಾನವನು ಅತಿ ಸೂಕ್ಷ್ಮವಾದ ಆಯುಧ ಮತ್ತು ಉಪಕರಣಗಳನ್ನು ಬಲಸುತ್ತಿದ್ದನು. ಬೇಟೆ ಮಾಡುವುದು ಮತ್ತು ಆಹಾರ ಸಂಗ್ರಹಣೆಯ ಜೊತೆಗೆ ಮೀನುಗಳನ್ನು ಹಿಡಿಯುವುದನ್ನು ಈ ಕಾಲದ ಮಾನವ ಮಾಡುತ್ತಿದ್ದನು. ಛೋಟನಾಗ್ಪುರ, ಮಧ್ಯ ಭಾರತ, ಕೃಷ್ಣ ನದಿಯ ದಕ್ಷಿಣಕ್ಕಿರುವ ಪ್ರದೇಶಗಳು, ಪಶ್ಚಿಮ ಬಂಗಾಳದ ಬಿರ್ಬಾನ್ ಪುರ, ತಮಿಳುನಾಡಿನ ಟಿನ್ನೆ ಕಣಿವೆ ಮತ್ತು ಅಫಘಾನಿಸ್ತಾನದ ಬೋಲಾನ್ ಕಣಿವೆಗಳಲ್ಲಿ ಈ ಅವಧಿಯ ನಿವೇಶಗಳನ್ನು ಗುರುತಿಸಲಾಗಿದೆ.
C. ನೂತನ ಶಿಲಾಯುಗ ( ಕ್ರಿ.ಪೂ 10,000 ರಿಂದ 4,000 )
ಈ ಯುಗವು ಮಾನವನ ವಿಕಾಸದಲ್ಲಿ ಕ್ರಾಂತಿಕಾರಿಯಾದುದು. ಈ ಯುಗದಲ್ಲಿ ಮಾನವನು ಕೃಷಿ ಪಶು ಸಂಗೋಪನೆ ಮಾಡುತ್ತಾ ಮನೆಗಳನ್ನು ಕಟ್ಟಿಕೊಂಡು ಸ್ಥಿರ ಜೀವನವನ್ನು ನಡೆಸುವುದನ್ನು ಆರಂಭಿಸಿದನು. ಈ ಯುಗದಲ್ಲಿ ಮಾನವನು ಹೆಚ್ಚು ಹೊಸಪು ನೀಡುವ ಹರಿತವಾದ ಕಲ್ಲಿನ ಆಯುಧಗಳನ್ನು ಬಳಸಲು ಪ್ರಾರಂಭಿಸಿದನು. ಈ ಕಾಲದ ವಿಶೇಷತೆಯೆಂದರೆ ಕಂದು, ಬೂದು ಹಾಗೂ ಕಪ್ಪು ಬಣ್ಣದ ಮಡಿಕೆಗಳನ್ನು ಚಕ್ರದ ಸಹಾಯದಿಂದ ತಯಾರಿಸುವುದನ್ನು ಮಾನವನು ಕಲಿತನು. ಈ ಕಾಲದ ಕೃಷಿಯ ಹಾಗೂ ಪಶು ಸಂಗೋಪನೆಯ ಪ್ರಥಮ ಕುರುಹು " ಮೆಹರ್ ಘರ್" ನಲ್ಲಿ ದೊರೆಕಿದೆ. ಈ ಯುಗದ ಪ್ರಮುಖ ನಿವೇಶಗಳೆಂದರೆ ಕಾಶ್ಮೀರದ ಬುರ್ಜ್ ಹಾಂ, ಕರ್ನಾಟಕದ ಮಸ್ಕಿ, ಬ್ರಹ್ಮ ಗಿರಿ, ತೆಕ್ಕಲಕೋಟೆ, ತಮಿಳುನಾಡಿನ ಪಯ್ಯಾಂಪಲ್ಲಿ, ಆಂಧ್ರಪ್ರದೇಶದ ಗುಂಟೂರು ಹಾಗೂ ಪಿಕ್ಕಿಲಿಹಾಳ.
2. ಶಿಲಾಯುಗ
ಕ್ರಿ.ಪೂ.ಸು. 4,000 ನಂತರದ ಯುಗವನ್ನು ಲೋಹಯುಗ ಎನ್ನುವರು. ಇದನ್ನು ಮುಖ್ಯವಾಗಿ ಎರಡು ವಿಧವಾಗಿ ವಿಂಗಡಿಸಬಹುದು.
A. ತಾಮ್ರ ಯುಗ ಅಥವಾ ಚಾಲ್ಕೋಲಿಥಿಕ್ ಯುಗ
B. ಕಬ್ಬಿಣ ಯುಗ
A. ತಾಮ್ರ ಯುಗ ಅಥವಾ ಚಾಲ್ಕೋಲಿಥಿಕ್ ಯುಗ
ನೂತನ ಶಿಲಾಯುಗದ ಕೊನೆಯ ವೇಳೆಗೆ ಮಾನವ ಲೋಹಗಳ ಬಳಕೆಯನ್ನು ಪ್ರಾರಂಭಿಸಿದನು. ತಾಮ್ರವನ್ನು ಹೆಚ್ಚಾಗಿ ಬಳಕೆ ಮಾಡಿದ್ದರಿಂದ ಈ ಯುಗವನ್ನು " ಚಾಲ್ಕೋಲಿಥಿಕ್ ಯುಗ " ಎಂದು ಕರೆಯುತ್ತಾರೆ. ಈ ಸಂಸ್ಕೃತಿಯಲ್ಲಿ ಮುಖ್ಯವಾಗಿ ತಾಮ್ರವನ್ನು ಬಳಸುತ್ತಿದ್ದರು. ಈ ಸಂಸ್ಕೃತಿಯ ಪ್ರಮುಖ ನಿವೇಶನಗಳೆಂದರೆ ರಾಜಸ್ಥಾನದ ಅಹಾರ್ ಮತ್ತು ಗಿಲುಂಡ್, ಕಾಯಂತ ಮತ್ತು ಮಧ್ಯಪ್ರದೇಶಗಳಲ್ಲಿ ಕಂಡುಬಂದಿದೆ. ಈ ಯುಗದ ಕೊನೆಗೆ ನಾಸಿಕ್, ಬಿಹಾರದ ಚಿರಾಂಡ್ ಕಯಂತ ಮತ್ತು ಮಧ್ಯಪ್ರದೇಶಗಳಲ್ಲಿ ಕಂಡುಬಂದಿದೆ. ಈ ಯುಗದ ಕೊನೆಗೆ ಮಾನವ ಕಂಚಿನ ಉಪಕರಣಗಳನ್ನು ಬಲಸುವುದನ್ನು ಕಲಿತನು
B. ಕಬ್ಬಿಣ ಯುಗ
ಕಾಲಾನಂತರದಲ್ಲಿ ಪುರಾತನ ಮಾನವ ನಿಧಾನವಾಗಿ ತಾಮ್ರ ಮತ್ತು ಕಂಚಿನ ಲೋಹಕ್ಕೆ ಬದಲಾಗಿ ಕಬ್ಬಿಣವನ್ನು ಬಳಸಲಾರಂಭಿಸಿದನು. ಕಬ್ಬಿಣದ ಆಯುಧಗಳು ಬಳಕೆಗೆ ಬಂದವು. ಉದ್ದವಾದ ಖಡ್ಗ, ಈಟಿ, ಚೂಪಾದ ಬಾಣದಂತಹ ಆಯುಧಗಳು ಸೃಷ್ಟಿಯಾದವು. ಈ ಆಯುಧಗಳಿಗೆ ಮರದ ಹಿಡಿಕೆಗಳನ್ನು ಹಾಕುತ್ತಿದ್ದರು. ಕಬ್ಬಿಣದ ಯುಗವೂ ಇತಿಹಾಸ ಕಾಲಾರಂಭದ ಮುನ್ಸೂಚನೆಯೆಂದೇ ಹೇಳಬಹುದು.


ಧನ್ಯವಾದಗಳು