ಕಾವೇರಿ ನದಿ
ಗಂಗಾ ನದಿಯಂತೆಯೇ ಕಾವೇರಿ ನದಿಯು ಒಂದು ಪವಿತ್ರ ನದಿಯಾಗಿದೆ. ಅದುದ್ದರಿಂದ ಈ ನದಿಯನ್ನು "ದಕ್ಷಿಣ ಭಾರತದ ಗಂಗೆ" ಎಂದು ಕರೆಯುತ್ತಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನ ಜೀವ ನದಿಯಾಗಿದೆ. ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಪ್ರದೇಶದ "ತಲಕಾವೇರಿ" ಎಂಬಲ್ಲಿ ಸಮುದ್ರ ಮಟ್ಟದಿಂದ 1,341 ಮೀ ಎತ್ತರದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಿದು ತಮಿಳುನಾಡಿನ ಕಾವೇರಿಪಟ್ಟಣಂ ಬಳಿ ಬಂಗಾಳಕೊಲ್ಲಿ ಸರುತ್ತದೆ. ಕಾವೇರಿ ನದಿಯು ಶಿವನ ಸಮುದ್ರದ ಬಳಿ ಹರಿಯುವ ಜಾಗದಲ್ಲಿ 91 ಮೀ ಎತ್ತರದಿಂದ ಗಗನ ಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳು ಸೃಷ್ಟಿಸಿದೆ. ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಕಾವೇರಿ ನದಿಗೆ ಮಂಡ್ಯಜಿಲ್ಲೆಯ ಶಿವನ ಸಮುದ್ರದ ಬಳಿ ಜಲವಿದ್ಯುತ್ ಕೇಂದ್ರವನ್ನು ಮೈಸೂರಿನ ದೀವನರಾದ ಶೇಷಾದ್ರಿ ಅಯ್ಯರ್ ರವರ ಅವಧಿಯಲ್ಲಿ ಆರಂಭಿಸಲಾಯಿತು. ಕೆ.ಜಿ.ಎಫ್ ನ ಚಿನ್ನದ ಗಣಿ ಅಗೆಯುವಾಗ ವಿದ್ಯುತ್ ಬಳಕೆಗಾಗಿ 1902 ರಲ್ಲಿ ಸರಬರಾಜು ಮಾಡಲಾಯಿತು.
ಕೃಷ್ಣರಾಜಸಾಗರ (KRS)
ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಕೃಷ್ಣರಾಜಸಾಗರ ಅಣೆಕಟ್ಟೆ ಕಟ್ಟಲಾಗಿದೆ. ಕೃಷ್ಣಸಾಗರ ಅಣೆಕಟ್ಟೆ 1932 ರಲ್ಲಿ ಪೂರ್ಣಗೊಂದಿತ್ತು. 1911 ರ ಅಕ್ಟೋಬರ್ 12 ರಂದು ದಿವಾನರಾದ ಟಿ ಆನಂದ್ ರಾವ್ ಅವರ ಅವಧಿಯಲ್ಲಿ ಈ ಯೋಜನೆಗೆ ಒಪ್ಪಿಗೆ ಸೂಚಿಸಲಾಯಿತು. ಕೆ.ಆರ್.ಎಸ್ ಗೆ ಹೊಂದಿಕೊಂಡಂತೆ ಬೃಂದಾವನ ಗಾರ್ಡನ್ ಕಟ್ಟಲಾಗಿದೆ. ಬೃಂದಾವನ ಉದ್ಯನಾ ನಿರ್ಮಾಣ ಮಾಡುವುದು ಮೈಸೂರಿನ ದಿವಾನರಾದ ಮಿರ್ಜಾ ಇಸ್ಮಾಯಿಲ್ ರವರ ಕನಸಿನ ಕೂಸಾಗಿತ್ತು. 1927 ರಲ್ಲಿ ಆರಂಭವಾಗಿ 1932 ರಂದು ಪೂರ್ಣಗೊಂದಿತ್ತು. ಬೃಂದಾವನ ಉದ್ಯಾನವು ಮೈಸೂರಿನ ಒಂದು ಪ್ರವಾಸಿ ತಾಣವಾಗಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಬೃಂದಾವನದಲ್ಲಿರುವ ಸಂಗೀತ ಕಾರಂಜಿಯನ್ನು ವೀಕ್ಷಿಸಲು ಆಗಮಿಸುತ್ತಾರೆ. ಮೈಸೂರಿನ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿಸಿದ ಈ ಅಣೆಕಟ್ಟು ಕಟ್ಟುವಲ್ಲಿ ಸರ್.ಎಂ, ವಿಶ್ವೇಶ್ವರಯ್ಯರವರ ಕೊಡುಗೆಯು ಅಪಾರವಾಗಿತು.
ಮೆಟ್ಟುರು ಜಲಾಶಯ
ಈ ಜಲಶಯವನ್ನು ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಮೆಟ್ಟುರಿನಲ್ಲಿ ನಿರ್ಮಿಸಲಾಗಿದೆ. 65 ಮೀ ಎತ್ತರ ವಿರುವ ಈ ಜಲಶಯವನ್ನು 1934 ರಲ್ಲಿ ನಿರ್ಮಿಸಲಾಯಿತು. ಈ ಜಲಶಯವನ್ನು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ತಮಿಳುನಾಡಿನ ಅತಿ ದೊಡ್ಡ ಅಣೆಕಟ್ಟೆಯಾಗಿದೆ. ಈ ಆಣೆಕಟ್ಟಿನ ಮುಂಭಾಗದಲ್ಲಿ ಎಲ್ಲಿಸ್ ಪಾರ್ಕ್ ಎಂಬ ಉದ್ಯಾನವನ ವಿದೆ. ಇದು ತಮಿಳುನಾಡಿನ 12 ಜಿಲ್ಲೆಗಳಿಗೆ ನೀರುಣಿಸುತ್ತದೆ. ಈ ಆಣೆಕಟ್ಟಿನ ಬಳಿ ಮೆಟ್ಟೂರು ಜಲ ವಿದ್ಯುತ್ ಶಕ್ತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಭವಾನಿ ಸಾಗರ
ಕಾವೇರಿ ನದಿಯ ಬಲದಂಡೆಯ ಉಪ ನದಿಯಾದ ಭವಾನಿ ನದಿಗೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಿರ್ಮಿಸಿದ ಜಲಶಯವಾಗಿದೆ.
ಕಾವೇರಿ ನದಿ ಮತ್ತು ಉಪನದಿಗಳ ಇತರೆ ಪ್ರಮುಖ ಅಣೆಕಟ್ಟೆಗಳು
| ಜಲಾಶಯ | ನದಿ | ರಾಜ್ಯ/ಜಿಲ್ಲೆ |
|---|---|---|
| ಹಾರಂಗಿ ಜಲಾಶಯ | ಹಾರಂಗಿ ನದಿ | ಕರ್ನಾಟಕದ , ಕೊಡಗು ಜಿಲ್ಲೆ |
| ಗೊರೂರು ಜಲಾಶಯ | ಹೇಮಾವತಿ ನದಿ | ಕರ್ನಾಟಕದ, ಹಾಸನ ಜಿಲ್ಲೆ |
| ಕಬಿನಿ ಜಲಾಶಯ | ಕಬಿನಿ ನದಿ | ಕರ್ನಾಟಕದ, ಮೈಸೂರು ಜಿಲ್ಲೆ |
| ಭವಾನಿ ಸಾಗರ | ಭವಾನಿ ನದಿ | ತಮಿಳುನಾಡಿನ, ಈರೋಡ್ ಜಿಲ್ಲೆ |
| ಮೆಟ್ಟೂರು ಜಲಾಶಯ | ಕಾವೇರಿ ನದಿ | ತಮಿಳುನಾಡಿನ, ಸೇಲಂ ಜಿಲ್ಲೆ |
| ಕೃಷ್ಣರಾಜ ಸಾಗರ | ಕಾವೇರಿ ನದಿ | ಕರ್ನಾಟಕದ, ಮಂಡ್ಯ ಜಿಲ್ಲೆ |
| ಮಾರ್ಕೋನ್ ಹಳ್ಳಿ ಜಲಾಶಯ | ಶಿಂಷಾ ನದಿ | ಕರ್ನಾಟಕದ, ತುಮುಕೂರು ಜಿಲ್ಲೆ |
| ತಿಪ್ಪುಗೊಂಡನಹಳ್ಳಿ ಜಲಾಶಯ | ಅರ್ಕಾವತಿ | ಕರ್ನಾಟಕದ ಬೆಂಗಳೂರು ಜಿಲ್ಲೆ |


ಧನ್ಯವಾದಗಳು