ಕರಾವಳಿ ಎಂದರೇನು ?
ಕರಾವಳಿ ಎಂದರೆ "ಸಮುದ್ರಕ್ಕೆ ತಾಗಿಕೊಂಡಿರುವ ಭೂ ಪ್ರದೇಶ" ಅಥವಾ ಸಮುದ್ರದ ಹಾಗೂ ಸಾಗರಗಳ ತೀರ ಪ್ರದೇಶವಾಗಿದೆ.
ಭಾರತದ ದೇಶವು ಪೂರ್ವ ಮತ್ತು ಆಗ್ನೇಯದಲ್ಲಿ ಬಂಗಾಳ ಕೊಳ್ಳಿಯನ್ನು ಹಾಗೂ ಪಶ್ಚಿಮ ಮತ್ತು ನೈರುತ್ಯದಲ್ಲಿ ಅರಬ್ಬೀ ಸಮುದ್ರವನ್ನು ದಕ್ಷಿಣದಲ್ಲಿ ಹಿಂದೊ ಮಹಾ ಸಾಗರವನ್ನು ಹೊಂದಿದ್ದು, ಇವುಗಳ ತೀರದ ಪ್ರದೇಶವನ್ನೇ " ಕರಾವಳಿ ಪ್ರದೇಶ " ಎನ್ನುವರು.
ಕರಾವಳಿಯ ಮಹತ್ವ
ಕರಾವಳಿಗಳು ನೈಸರ್ಗಿಕ ಮತ್ತು ಕೃತಕವಾದ್ದ ಬಂದರುಗಳ ಸೌಲಭ್ಯವನ್ನು ಒದಗಿಸುತ್ತದೆ. ಮೀನುಗಾರಿಕೆ ಮತ್ತಿ ಜಲ ಕೃಷಿಗೆ ಸಹಕಾರಿಯಾಗಿವೆ.
* ಕರಾವಳಿ ಮೈದಾನದ ಕೆಳಮಟ್ಟದ ಪ್ರದೇಶಗಳು ಉಪ್ಪು, ಸಮುದ್ರನೊರೆ, ಹವಳ ಮತ್ತು ಮುತ್ತುಗಳ ಉತ್ಪಾದನೆಗೆ ಸೂಕ್ತವಾಗಿದೆ.
* ಕರಾವಳಿಯು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಬೀಚ್ ಗಳು ಮನರಂಜನೆಯ ತಾಣವಾಗಿದೆ.
* ಹಿನ್ನೀರು ಮತ್ತು ಲಗೂನ್ ಸರೋವರಗಳು ತೀರದುದ್ದಕ್ಕೂ ನೌಕಾಯಾನಕ್ಕೆ ಉಪಯೋಗ್ಯವಾಗಿದೆ. ಕರಾವಳಿ ಪ್ರದೇಶವು ಹೇರಳವಾಗಿ ಖನಿಜ ಸಂಪತ್ತನ್ನು ಹೊಂದಿದ್ದು, ಥೋರಿಯಂ ಇಲ್ಲಿ ಹೇರಳವಾಗಿ ಕಂಡು ಬರುತ್ತದೆ.
ಜಗತ್ತಿನ ಅತಿ ಉದ್ದದ ಕರಾವಳಿ ತೀರವನ್ನು ಹೊಂದಿರುವ ದೇಶಗಳು
ಕೆನಡಾ :-
ಕೆನಡಾ ದೇಶವು ಜಗತ್ತಿನಲ್ಲೇ ಅತಿ ಉದ್ದದ ಕರಾವಳಿಯನ್ನು ಹೊಂದಿರುವ ದೇಶವಾಗಿದೆ. ಕೆನಡಾ ದೇಶವು 2,02,080 ಕಿಮೀ ಉದ್ದದ ಕರಾವಳಿಯನ್ನು ಹೊಂದಿದೆ.
ಇಂಡೋನೇಷಿಯಾ :-
ಈ ದೇಶವು 54,716 ಕಿಮೀ ಉದ್ದದ ಕರಾವಳಿಯನ್ನು ಹೊಂದಿದ್ದು, ಜಗತ್ತಿನಲ್ಲೇ 2 ನೇ ಸ್ಥಾನದಲ್ಲಿದೆ.
ಗ್ರೀನ್ ಲ್ಯಾಂಡ್ :-
ಈ ದೇಶವು 44,087 ಕಿ.ಮೀ ಕರಾವಳಿ ಹೊಂದಿದ್ದು . ಇದು 3 ನೇ ಸ್ಥಾನದಲ್ಲಿದೆ.
ರಷ್ಯಾ :-
ಈ ದೇಶವು 37,653 ಕಿ.ಮೀ ಕರಾವಳಿ ತೀರ ಹೊಂದಿದ್ದು 4 ನೇ ಸ್ಥಾನದಲ್ಲಿದೆ.
ಭಾರತದ :-
ಈ ದೇಶವು ಜಗತ್ತಿನ ರಾಷ್ಟ್ರಗಳಲ್ಲಿ ಹೆಚ್ಚು ಕರಾವಳಿ ಉದ್ದವನ್ನು ಹೊಂದಿರುವ ದೇಶಗಳ ಪೈಕಿ 18 ನೇ ಸ್ಥಾನದಲ್ಲಿದೆ.
ಭೂ ಆವೃತ ರಾಷ್ಟ್ರಗಳು (Land Locked Countries)
ಕರಾವಳಿ ಪ್ರದೇಶವನ್ನು ಹೊಂದದೇ ಇರುವ ರಾಷ್ಟ್ರಗಳನ್ನು "ಭೂ ಆವೃತ ರಾಷ್ಟ್ರಗಳು ಎಂದು ಕರೆಯುತ್ತಾರೆ.
ಈ ರಾಷ್ಟ್ರಗಳು ಸಂಪೂರ್ಣವಾಗಿ ಭೂಮಿಯಿಂದ ಆವೃತವಾಗಿರುತ್ತದೆ. ಜಗತ್ತಿನ 49 ರಾಷ್ಟ್ರಗಳು ಭೂ ಆವೃತ ರಾಷ್ಟ್ರಗಳಾಗಿವೆ.
ಉದಾ: ಭೂತಾನ್ , ನೇಪಾಳ, ಮಂಗೋಲಿಯ, ಅಫ್ಗನಿಸ್ತಾನ್.
ಭಾರತದ ಕರಾವಳಿ ಪ್ರದೇಶ
* ಪರ್ಯಾಯ ಪ್ರಸ್ಥಭೂಮಿಯು ಎರಡೂ ಬದಿಯಲ್ಲಿ ಉತ್ತರದಿಂದ ದಕ್ಷಿಣದವರೆಗೆ ವಿವಿಧ ಅಗಲದಲ್ಲಿ ಕಿರಿದಾದ ಕರಾವಳಿ ಮೈದಾನವನ್ನು ಹೊಂದಿದ್ದು, ಅವುಗಳನ್ನು ಪೂರ್ವ ಕರಾವಳಿ ಮೈದಾನವನ್ನು ಹೊಂದಿದ್ದು. ಅವುಗಳನ್ನು ಪೂರ್ವ ಕರಾವಳಿ ಮತ್ತು ಪಶ್ಚಿಮ ಕರಾವಳಿ ಮೈದಾನಗಳೆಂದು ಕರೆಯುತ್ತಾರೆ. ಅವುಗಳು ನದಿಗಳ ಸಂಚಯನ ಮತ್ತು ಸಮುದ್ರ ಅಲೆಗಳ ಸವೆತ ಹಾಗೂ ಸಂಚಯನ ಕಾರ್ಯದಿಂದ ನಿರ್ಮಿತಗೊಂಡಿದೆ.
* ಭಾರತದ ಕರಾವಳಿ ಪ್ರದೇಶವು ಗುಜರಾತ್ ನ ಕಛ್ ನಿಂದ ಪೂರ್ವದಲ್ಲಿ ಗಂಗಾ ನದಿಯ ಮುಖಜ ಭೂಮಿಯವರೆಗೂ ವ್ಯಾಪಿಸಿದೆ.
* ಭಾರತದ ಕರಾವಳಿ ಒಟ್ಟು ಉದ್ದ 6,100 ಕಿಮೀ
* ಕೇಂದ್ರಾಡಳಿತ ಪ್ರದಶಗಳನ್ನು ಒಳಗೊಂಡಂತೆ ಭಾರತದ ಕರಾವಳಿ ಉದ್ದ - 7,516 ಕಿ.ಮೀ - ಕರ್ನಾಟಕವು 320 ಕಿಮೀ ಉದ್ದದ ಕರಾವಳಿಯನ್ನು ಹೊಂದಿದೆ.
* ಭಾರತದ ಅತಿ ಉದ್ದದ ಕರಾವಳಿ ಪ್ರದೇಶ ಹೊಂದಿರುವ ರಾಜ್ಯ - ಗುಜರಾತ್, 2 ನೇ ಸ್ಥಾನ - ಆಂಧ್ರ ಪ್ರದೇಶ
ಭಾರತದ ಕರಾವಳಿ ಪ್ರದೇಶಗಳು ಹೊಂದಿರುವ ರಾಜ್ಯಗಳು - 9
* ಪೂರ್ವ ಕರಾವಳಿ ರಾಜ್ಯಗಳು :-
ಪಶ್ಚಿಮ ಬಂಗಾಳ , ಒಡಿಶಾ, ಆಂಧ್ರ ಪ್ರದಶ ಮತ್ತು ತಮಿಳುನಾಡು
* ಪಶ್ಚಿಮ ಕರಾವಳಿ ರಾಜ್ಯಗಳು :-
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ
ಭಾರತದಲ್ಲಿ ಕರಾವಳಿ ಪ್ರದೇಶ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳು
1. ಲಕ್ಷ ದ್ವೀಪ
2. ದಿಯು ಮತ್ತು ದಮನ್ , ದಾದ್ರ, ನಗರ ಹವೇಲಿ
3. ಪಾಂಡಿಚೇರಿ
4. ಅಂಡಮಾನ್ ನಿಕೊಬಾರ್
ಭಾರತದ ಕರಾವಳಿಯನ್ನು ಎರಡು ವಿಧಗಳಾಗಿ ವಿಂಗಡಿಸಬಹುದು
1) ಪೂರ್ವ ಕರಾವಳಿ


ಧನ್ಯವಾದಗಳು