ಡಾಪ್ಲರ್ ಪರಿಣಾಮ ( Doppler Effect )
⁕ ಆಸ್ಟ್ರೀಯ ದೇಶದ ಭೌತಶಾಸ್ತ್ರಜ್ಞ ಕ್ರಿಶ್ಚಿಯನ್ ಡಾಪ್ಲರ್ ಅವರು 1842 ರಲ್ಲಿ "ಡಾಪ್ಲರ್ ಪರಿಣಾಮ"ವನ್ನು ಪ್ರತಿಪಾದಿಸಿದರು.
⁕ ತರಂಗದ ಜವವು, ಅದು ಪ್ರಸರಿಸುವ ಮಾಧ್ಯಮವನ್ನು ಅವಲಂಬಿಸಿರುತ್ತದೆ. ತರಂಗವು ಯಾವುದಾದರೂ ಮಾಧ್ಯಮದಲ್ಲಿ ಪ್ರಸರಿಸುವಾಗ ಅದರ ಜವ ಮತ್ತು ಆವೃತ್ತಿ ಒಂದೇ ಆಗಿರುತ್ತದೆ. ಆದರೆ ತರಂಗದ ಆಕರ ಮತ್ತು ವೀಕ್ಷಕರ ಸಾಪೇಕ್ಷ ಚಾಲನೆ ಇದ್ದಲ್ಲಿ ತರಂಗದ ಆವೃತ್ತಿಯು ಬದಲಾದಂತೆ ಭಾಸವಾಗುತ್ತದೆ. ಇದನ್ನು "ಡಾಪ್ಲರ್ ಪರಿಣಾಮ" ಎನ್ನುವರು
ಉದಾ||
ಸೀಟಿ ಹಾಕುತ್ತಾ ಹತ್ತಿರ ಬರುತ್ತಿರುವ ರೈಲಿನ ಶಬ್ಧದ ಆವರ್ತನ ಸಂಖ್ಯೆ ರೈಲಿನ ನಿಲ್ದಾಣದಲ್ಲಿ ನಿಂತಿರುವವರಿಗೆ ಹೆಚ್ಚಾದಂತೆ ಕೇಳಿಸುತ್ತದೆ. ದೂರ ಹೋದಂತೆ ಶಬ್ಧದ ಆವರ್ತನ ಸಂಖ್ಯೆ ಕಡಿಮೆಯಾದಂತೆ ಕೇಳಿಸುತ್ತದೆ. ಇದಕ್ಕೆ ಮೂಲ ಕಾರಣ " ಶಬ್ದದ ಮೂಲ ಮತ್ತು ಶ್ರಾವಕದ ನಡುವೆ ಸಾಪೇಕ್ಷ ಚಲನೆಯಲ್ಲಿದ್ದಾಗ ಅನುಭವಕ್ಕೆ ಬರುವ ಶಬ್ಧದ ಆವರ್ತನ ಸಂಖ್ಯೆಯ ವ್ಯತ್ಯಾಸ" ಈ ಪರಿಣಾಮವನ್ನೇ " ಡಾಪ್ಲರ್ ಪರಿಣಾಮ" ಎಂದು ಕರೆದರು.
ಡಾಪ್ಲರ್ ಪರಿಣಾಮ ಉಂಟಾಗುವ ಸಂದರ್ಭಗಳು
◆ ತರಂಗದ ಆಕರ ಅಥವಾ ವೀಕ್ಷಕ ಚಳಿಸುತ್ತಿರಬೇಕು, ಅಥವಾ ಎರಡೂ ಸಾಪೇಕ್ಷವಾಗಿ ಚಲಿಸುತ್ತಿರಬೇಕು.
◆ ಆಕರ ಮತ್ತು ವೀಕ್ಷಕರು ಒಂದೇ ದಿಕ್ಕಿನಲ್ಲಿ ಇಂದೇ ಜವದಲ್ಲಿ ಚಳಿಸುವಾಗ ಡಾಪ್ಲರ್ ಪರಿಣಾಮವಾಗುವುದಿಲ್ಲ.
◆ ಶಬ್ಧ ಮತ್ತು ಬೆಳಕು ಇವೆರಡು ತರಂಗಗಳಾದ ಕಾರಣ ಡಾಪ್ಲರ್ ಪರಿಣಾಮ ಎರಡರಲ್ಲೂ ಉಂಟು.
◆ ಒಂದು ತರಂಗದ ಆಕರ ನಿಂತಿರುವ ವೀಕ್ಷಕನೆಡೆಗೆ ಚಳಿಸುವಾಗ, ಆಕಾರದ ಮುಂದಿನ ತರಂಗಗಳು ಸಂಪೀಡನಗೊಂಡಂತೆ ಕಾಣುತ್ತದೆ.
◆ ತರಂಗ ದೂರ ಕಡಿಮೆಯಾಗುತ್ತದೆ. ವೀಕ್ಷಕನೆಡೆಗೆ ಹೆಚ್ಚು ತರಂಗಗಳು ಬಂದು ತಲುಪುತ್ತವೆ. ಆದ್ಧರಿಂದ ಧ್ವನಿ ತರಂಗದ ಆವರತವು ಹೆಚ್ಚಾದಂತೆ ಭಾಸವಾಗುತ್ತದೆ.
◆ ವೀಕ್ಷಕರಿಗೆ ಕೇಳಿಸುವ ಧ್ವನಿಯ ಸ್ಥಾಯಿ ಹೆಚ್ಚಾದಂತೆ ಭಾಸವಾಗುತ್ತದೆ.
◆ ವೀಕ್ಷಕನು ಒಂದು ಸ್ಥಾಯಿ ಶಬ್ಧಕಾರಕದೆಡೆಗೆ ಚಳಿಸುತ್ತಿದ್ದಾಗಲೂ ಸಹ ಇದೇ ಪರಿಣಾಮವಾಗುತ್ತದೆ.


ಧನ್ಯವಾದಗಳು