Type Here to Get Search Results !

Vitamin - A Complete detain in Kannada

 ವಿಟಮಿನ್ - A ( Vitamin - A )


◆ ವಿಟಮಿನ್ - Aಯ ರಾಸಾಯನಿಕ ಹೆಸರು ರೆಟಿನಾಲ್ 

◆ ವಿಟಮಿನ್ - A ಕಣ್ಣಿನ ರೆಟಿನಾಕ್ಕೆ ಅವಶ್ಯಕವಾಗಿರುವ ವಿಟಮಿನ್ ಆಗಿದೆ. 

◆  ಇದು ಕಡಿಮೆ ಬೆಳಕಿನಲ್ಲಿ ವಸ್ತುಗಳನ್ನು ವೀಕ್ಷಿಸಲು ಮತ್ತು ಬಣ್ಣಗಳನ್ನು ವೀಕ್ಷಿಸಲು ಅವಶ್ಯಕವಾಗಿ ಬೇಕಾಗುವಂತಹ ವಿಟಮಿನ್ ಆಗಿದೆ. 

◆ ವಿಟಮಿನ್ - A ಯು ಚರ್ಮ ಮತ್ತು ಜೀವಕೋಶಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ. ಮತ್ತು ಭ್ರೂಣಗಳ ಬೆಳವಣಿಗೆ ಮತ್ತು ಸಂತಾನೋತ್ಪತಿಯಲ್ಲಿ ಪಾತ್ರವಾಹಿಸುತ್ತದೆ. 

◆ ವಿಟಮಿನ್ - A ಯನ್ನು ಎಲ್ಮೀರ್. ವಿ ಮ್ಯಾಕ್ ಕಲಂ ಮತ್ತು ಎಂ. ಡೇವಿಸ್ ಎಂಬುವರು 1913 ರಲ್ಲಿ ಕಂಡು ಹಿಡಿದರು. 


ವಿಟಮಿನ್ - A ಹೊಂದಿರುವ ಆಹಾರ ಪದಾರ್ಥಗಳು 

 ವಿಟಮಿನ್ - A ಹೊಂದಿರುವ ಆಹಾರ ಪದಾರ್ಥಗಳೆಂದರೆ ಕ್ಯಾರೆಟ್, ಗೆಣಸು, ಬೆಣ್ಣಿ, ಲಿವರ್ ( ಕಾಡ್ ಲಿವರ್ ಆಯಿಲ್ ),

ಮೊಟ್ಟೆ, ಹಾಲು, ಮೀನು, ಬಟಾಣಿ, ಹಸಿರು ಎಲೆ ತರಕಾರಿಗಳು ಮತ್ತು ಸೊಪ್ಪು. 


ವಿಟಮಿನ್ - Aಯ ಕೊರತೆಯಿಂದ ಬರುವ ರೋಗಗಳು 


● ನೈಕ್ಟಲೋಫಿಯಾ ( Nyctaopia ) 

          ನೈಕ್ಟಲೋಫಿಯಾವನ್ನು " ಇರುಳು ಗುರುಡುತನ " ಎಂದು ಕರೆಯುತ್ತಾರೆ. ಇದು ವಿಟಮಿನ್ - A ಕೊರತೆಯಿಂದ ಬರುವ ರೋಗ್ಯವಾಗಿದೆ. ಇದರ ಕಡಿಮೆ ಬೆಳಕಿನಲ್ಲಿ ವಸ್ತುಗಳನ್ನು ನೋಡಲು ಕಷ್ಟವಾಗುತ್ತದೆ. ಈ ರೋಗವು ಪ್ರಮುಖವಾಗಿ ರೆಟಿನಾದಲ್ಲಿರುವಂತಹ ರಾಡ್ ಜೀವಕೋಶಗಳು ಬೆಳಕಿಗೆ ಸ್ಪಂಧಿಸುವಂತಹ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಕೆಲವರಿಗೆ ಈ ರೋಗವು ಹುಟ್ಟಿನಿಂದಲೇ ಆರಂಭವಾಗುತ್ತದೆ. 


● ಜಿರೋಸಿಸ್ ( Xerosis ) 

     ಚರ್ಮ ಅಥವಾ ಮ್ಯೂಕಸ್ ಪದರಗಳು ಅತಿಯಾಗಿ ಒಣಗುವುದನ್ನು ಜಿರೋಸಿಸ್ ಎಂದು ಕರೆಯುತ್ತಾರೆ. 


● ಕ್ಲಿರೋಪೆ ಥಾಲ್ಮಿಯಾ ( Xerophthalmia ) 

  ಈ ರೋಗದ ಪ್ರಮುಖ ಲಕ್ಷಣಗಳೆಂದರೆ ಕಣ್ಣುಗಳು ಕಣ್ಣೀರು ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. 


● ಹೈಪರ್ ಕ್ಯಾರಿಟೋಸಿಸ್ 

        ಚರ್ಮದ ಹೊರ ಪದರವಾದ ಹೆಪಿಡರ್ವಿಸ್ ನ ಸ್ಟ್ಯಾಟೋಕಾರ್ನಿಯಂ ಒರಟಾಗುವುದನ್ನು " ಹೈಪರ್ ಕ್ಯಾರಿಟೋಸಿಸ್ " ಎನ್ನುವರು. 


Vitamin - A Complete detain in Kannada


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad