ಮ್ಯಾಂಗನೀಸ್
* ಮ್ಯಾಂಗನೀಸ್ ನ ರಾಸಾಯನಿಕ ಸಂಕೇತ Mn
* ಮ್ಯಾಂಗನೀಸ್ ನ ಅದಿರು ಅತಿ ಮುಖ್ಯ ಮಿಶ್ರಲೋಹ ಖನಿಜವಾಗಿದೆ. ಇದೊಂದು ಕಬ್ಬಿಣದ ವರ್ಗದ ಲೋಹವಾಗಿದೆ.
* ಉಕ್ಕಿನ ಗಡಸುತನವು ಮ್ಯಾಂಗನೀಸ್ ಪ್ರಮಾಣವನ್ನು ಅವಲಂಭಿಸಿದೆ.
* ಇದು ಕಬ್ಬಿಣವನ್ನು ಹೋಲುವಂತಹ ಕಂದು ಬಣ್ಣದ ಲೋಹವಾಗಿದೆ. ಇದು ತುಂಬಾ ಗಟ್ಟಿಯಾದ ಲೋಹವಾಗಿದೆ.
ಮ್ಯಾಂಗನೀಸ್ ನ ದೊರೆಯುವಿಕೆ
* ಮ್ಯಾಂಗನೀಸ್ ಭೂಮಿಯ ಮೇಲಿನ ತೊಗಟೆಯಲ್ಲಿ ಶೇ 0.1ರಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ಇದು ಭೂಮಿಯಲ್ಲಿ ದೊರೆಯುವ ಮೂಲ ವಸ್ತುಗಳ ಪ್ರಮಾಣದಲ್ಲಿ 12 ನೇ ಸ್ಥಾನದಲ್ಲಿದೆ. ಭೂಮಿಯನ್ನು ಮ್ಯಾಂಗನೀಸ್ ಶುದ್ದ ರೂಪದಲ್ಲಿ ದೊರೆಯುವುದಿಲ್ಲ. ಇದರ ಅದಿರಿನಿಂದ ಲೋಹವನ್ನು ಉತ್ಪಾದಿಸಲಾಗುವುದು.
* ಮ್ಯಾಂಗನೀಸ್ ಅದಿರಿನ ಗಣಿಗಳು ಕಬ್ಬಿಣದ ಅದಿರಿನ ನಿಕ್ಷೇಪದ ಸಮೀಪದಲ್ಲೇ ಇರುವುದರಿಂದ ಉಕ್ಕಿನ ಉತ್ಪಾದನೆಗೆ ಸಹಾಯಕವಾಗಿದೆ.
![]() |
ಮ್ಯಾಂಗನೀಸ್ ನ ಉಪಯೋಗಗಳು |
ಮ್ಯಾಂಗನೀಸ್ ನ ಉಪಯೋಗಗಳು
* ಮ್ಯಾಂಗನೀಸ್ ಉಕ್ಕಿನ ತಯಾರಿಕೆಯಲ್ಲಿ ಮಿಶ್ರ ಲೋಹವಾಗಿ ಬಳಕೆಯಾಗುತ್ತದೆ. ಇದನ್ನು ಉಕ್ಕಿನ ತಯಾರಿಕೆಯಲ್ಲಿ ಬೆರೆಸುವುದರಿಂದ ಉಕ್ಕಿನ ಕಠಿಣತೆ, ತೀವ್ರತೆ, ಹೊಳಪು ಮತ್ತು ಗಟ್ಟಿತನ ಬರುತ್ತದೆ.
* ಮ್ಯಾಂಗನೀಸನ್ನು ರಾಸಾಯನಿಕ ಕಾರ್ಖಾನೆಗಳಲ್ಲಿ ಪೋಟ್ಯಾಶಿಯಂ ಪರಮಾಂಗನೇಟ್ ನ್ನು, ಬ್ಲೀಚಿಂಗ್ ಪೌಡರ್ ತಯಾರಿಸಲು ಬಳಸುತ್ತಾರೆ. ವಿದ್ಯುತ್ ಕೈಗಾರಿಕೆಗಳಲ್ಲಿ ಬಳಸುತ್ತಾರೆ.
* ಬಣ್ಣ ಮತ್ತು ವಾರ್ನಿಶ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ.
* ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಇದನ್ನು ಅದಿರು ಕರಗಿಸುವ ಸ್ರಾವಕವಾಗಿ ಬಳಸುತ್ತಾರೆ.


ಧನ್ಯವಾದಗಳು