Type Here to Get Search Results !

ಮಾರುತಗಳು

ಮಾರುತಗಳು

 

ಭೂಮಿಯ ಮೇಲೆ ಸಮಾನಾಂತರವಾಗಿ ಚಲಿಸುವ ವಾಯುವನ್ನು ಮಾರುತ ಎಂದು ಕರೆಯುತ್ತಾರೆ. ಮಾರುತವು ವಾಯುಮಂಡಲನ ಉಷ್ಣಾಂಶ ಮತ್ತು ಆರ್ದ್ರತೆಯ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾರುತಗಳು ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಚಲಿಸುತ್ತದೆ.

 

1)      ಗಾಳಿ ಬೀಸುವ ದಿಕ್ಕನ್ನು ಗುರುತಿಸುವ ಸಾಧನ ಅಥವಾ ಉಪಕರಣ ಯಾವುದು = ಪವನ ದಿಕ್ಸೂಚಿ ( Wind Vane )

2)      ವಾಯುವಿನ ವೇಗವನ್ನು ಅಳೆಯುವ ಸಾಥನ ಅಥವಾ ಉಪಕರಣ ಯಾವುದು = ಪವನ ವೇಗ ಮಾಪಕ ( Anemometer )

ಮಾರುತಗಳು ಲಕ್ಷಣಗಳು

ಮಾರುತಗಳು ಲಕ್ಷಣಗಳನ್ನೂ ನಾವು ಈಗ ನೋಡೋಣ.

1.      ಒತ್ತಡದಲ್ಲಿ ವ್ಯತ್ಯಾಸ :

                 ಮಾರುತವೂ ಯಾವಾಗಲೂ ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಚಲಿಸುತ್ತದೆ ಅಥವಾ ಬೀಸುತ್ತದೆ. ಒತ್ತಡದ ಇಳಿಜಾರಿನ ಪ್ರಮಾಣವು ಮಾರುತದ ವೇಗವು ನಿಯಂತ್ರಿಸುತ್ತದೆ. ಒತ್ತಡದ ಇಳಿಜಾರಿನ ಪ್ರಮಾಣವು ಹೆಚ್ಚಾಗಿದ್ದಾರೆ ಮಾರುತದ ವೇಗವು ಸಹ ಹೆಚ್ಚಾಗಿರುತ್ತದೆ. ಒತ್ತಡದ  ಇಳಿಜಾರಿನ ಪ್ರಮಾಣವು ಕಡಿಮೆಯಾಗಿದ್ದಾರೆ ಮಾರುತದ ವೇಗವು ಸಹ ಕಡಿಮೆಯಾಗಿರುತ್ತದೆ.

Simple tricks  

 

 

2.      ದೈನಂದಿನ ಚಲನೆ :

           ಭೂಮಿಯ ದೈನಂದಿನ ಚಲನೆಯ ಪರಿಣಾಮವಾಗಿ ಉತ್ತರಾರ್ಧ ಗೋಳದಲ್ಲಿ ಮಾರುತಗಳು ತಮ್ಮ ಬಲ ದಿಕ್ಕಿಗೆ ಅಥವಾ ಕ್ಲೋಕ್ ಆನುಗುಣವಾಗಿ ಬೀಸುತ್ತದೆ. ದಕ್ಷಿಣಾರ್ಧಾ ಗೋಳದಲ್ಲಿ ಮಾರುತಗಳು ತಮ್ಮ ಎಡ ಅಥವಾ ಅಂತಿಕ್ಲಾಕ್ ವಾಯ್ಸ್ ಗೆ ಬೀಸುತ್ತದೆ.

 

 

3.      ಮಾರುತದ ದಿಕ್ಕು :

               ಮಾರುತವನ್ನು ಸಾಮಾನ್ಯವಾಗಿ ಅವು ಬೀಸುವ ದಿಕ್ಕಿನ ಆಧಾರದ ಮೇಲೆ ಗುರುತಿಸಲಾಗುವುದು.  ಇದರಿಂದ ಭೂಮಿಯ ಮೇಲೆ ಹಲವಾರು ರೀತಿಯ ಮಾರುತಗಳು ನೋಡಬಹುದು.

 

 ಮಾರುತಗಳು ವಿಧಗಳು

 ಉಷ್ಣಾಂಶ, ಒತ್ತಡ, ಮಾರುತದ ಉಗಮ, ಸ್ವರೂಪ ಮತ್ತು ಗುಣಲಕ್ಷಣಗಳ ಆಧಾರದ ಮೇಲೆ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ.

1.      ನಿರಂತರ ಮಾರುತಗಳು

2.      ನಿಯತಕಾಲಿಕ ಮಾರುತಗಳು

3.      ಸ್ಥಳೀಯ ಮಾರುತಗಳು

4.      ಅನಿಶ್ಚಿತ ಮಾರುತಗಳು

 

1.      ನಿರಂತರ ಮಾರುತಗಳು

     ನಿರಂತರ ಮಾರುತವನ್ನು ನಿತ್ಯ ಮಾರುತ ಎಂದು ಕರೆಯುತ್ತಾರೆ. ಇದು ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ವರ್ಷದ ಎಲ್ಲಾ ಕಾಲದಲ್ಲಿಯೂ ಬೀಸುತ್ತದೆ. ಈ ಮಾರುತದಿಂದ ಪ್ರಭಾವ ಬೀರುವ ಅಂಶಗಳೆಂದರೆ, ವಾಯುಗುಣ ಬದಲಾವಣೆ, ಮರುಭೂಮಿ ಉಗಮ, ನೌಕಾಯಾನ ಮಾರ್ಗಗಳ ಮೇಲೆ ಪ್ರಭಾವ ಬೀರುತ್ತದೆ.

ನಿರಂತರ ಮಾರುತಗಳು ವಿಧಗಳು

1.      ವಾಣಿಜ್ಯ ಮಾರುತಗಳು

2.      ಪ್ರತಿ ವಾಣಿಜ್ಯ ಮಾರುತಗಳು ಅಥವಾ ಪಶ್ಚಿಮ ಮಾರುತಗಳು

 

 

2.      ನಿಯಕಾಲಿಕ ಮಾರುತಗಳು

ವಿವಿಧ ಋತುಮಾನಗಳಲ್ಲಿ ಪರಸ್ಪರ ತದ್ವಿರುದ್ಧ ದಿಕ್ಕಿನಿಂದ ಬಿಸುವ ಮಾರುತವನ್ನು ನಿಯತಕಾಲಿಕ ಮಾರುತ ಅಥವಾ ಋತುಕಾಲಿಕ ಮಾರುತ ಎಂದು ಕರೆಯುತ್ತಾರೆ. ಮಾನ್ಸೂನ್ ಮಾರುತವು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾಹರಣೆಯಾಗಿದೆ.

 

3.      ಸ್ಥಳೀಯ ಮಾರುತಗಳು

  ಭೂಮಿಯ ಮೇಲೆ ವಿಸ್ತಾರವಾದ ಪ್ರದೇಶಗಳಲ್ಲಿ ಬೀಸುವ ನಿರಂತರ ಮತ್ತು ನಿಯತಕಾಲಿಕ ಮಾರುತಗಳು, ಸ್ಥಳೀಯ ಉಷ್ಣಾಂಶ ಒತ್ತಡಗಳ ವ್ಯತ್ಯಾಸದ ಪರಿಣಾಮದಿಂದ ಉಂಟಾಗುತ್ತದೆ. ಇಂತಹ ಮಾರುತಗಳಿಗೆ ಸ್ಥಳೀಯ ಮಾರುತಗಳು ಎಂದು ಕರೆಯುತ್ತಾರೆ.

ಸ್ಥಳೀಯ ಮಾರುತಗಳು ವಿಧಗಳು

1.      ಭೂ ಮತ್ತು ಸಮುದ್ರ ಗಾಳಿ

2.      ಪರ್ವತ ಮತ್ತು ಕಣಿವೆ ಗಾಳಿ

 

4.      ಅನಿಶ್ಚಿತ ಮಾರುತಗಳು

ಪ್ರಾದೇಶಿಕ ಉಷ್ಣಾಂಶ  ಮತ್ತು ಒತ್ತಡಗಳಲ್ಲಿ  ವ್ಯತ್ಯಾಸ ಉಂಟಾಗಿ ನಿರ್ಮಾಣವಾದ ಮಾರುತಗಳಿಗೆ ಅನಿಶ್ಚಿತ ಮಾರುತಗಳು ಎಂದು ಕರೆಯುತ್ತಾರೆ. 

ಅನಿಶ್ಚಿತ ಮಾರುತಗಳ ವಿಧಗಳು

1.      ಆವರ್ತ ಮಾರುತಗಳು

2.      ಪ್ರತ್ಯಾವರ್ತ ಮಾರುತಗಳು

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad