ಲೇಖನ ಚಿಹ್ನೆಗಳು
ಬರವಣಿಗೆಯಲ್ಲಿ ಲೇಖನ ಚಿಹ್ನೆಗಳು ಮುಖ್ಯವಾದ ಪಾತ್ರವಹಿಸುತ್ತದೆ. ಲೇಖನ ಚಿಹ್ನೆ ಗಳಿಲ್ಲದೆ ಯಾವದೇ ಬರವಣಿಗೆಗಳು ಸ್ಪಷ್ಟವಾದ ಅರ್ಥ ಕೊಡಲು ಅಥವಾ ನೀಡಲು ಸಾಧ್ಯವಿಲ್ಲ. ಆದುದರಿಂದ ಲೇಖನ ಚಿಹ್ನೆಗಳ ಬಗ್ಗೆ ಅತ್ಯಂತ ಲಕ್ಷ್ಯ ಅವಶ್ಯಕ. ಈ ಕೆಳಗೆ ಎಲ್ಲಿ ಎಲ್ಲಿ ಎಂಥ ಎಂಥ ಲೇಖನ ಚಿಹ್ನೆಗಳು ಬಳಸುತ್ತಾರೆ ಅಥವಾ ಬಳಸಬೇಕು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ಕನ್ನಡದಲ್ಲಿ ಮೊದಲು ಲೇಖನ ಚಿಹ್ನೆಗಳು ರೂಢಿಯಲ್ಲಿರಲಿಲ್ಲ. ಕನ್ನಡ ಹಸ್ತಪ್ರತಿಯಲ್ಲಿ, ಶಾಸನಗಳಲ್ಲಿಯು ಲೇಖನ ಚಿಹ್ನೆಗಳನ್ನೂ ಇರಲಿಲ್ಲ. ಆಂಗ್ಲ ಭಾಷೆಯ ಪ್ರಭಾವದಿಂದ ಕೆಲವು ಲೇಖನ ಚಿಹ್ನೆಗಳು ಕನ್ನಡ ಭಾಷೆಯಲ್ಲಿಯೂ ರೂಢಿಗೆ ಬಂದಿದೆ.
ಲೇಖನ ಚಿಹ್ನೆಗಳ ರೀತಿಗಳು
(a)
ಪೂರ್ಣವಿರಾಮ :
ಪೂರ್ಣವಿರಾಮ ಚಿಹ್ನೆ ಯಾವುದು ಅಂದರೆ (.). ಪೂರ್ಣ ಕ್ರಿಯೆಯಿಂದ ಕೂಡಿರುವ ಅಥವಾ ಕೂಡಿದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬರೆಯಬೇಕು.
ಉದಾಹಣೆಗಾಗಿ:-
1.
ಪುನೀತ್ ರಾಜಕುಮಾರ್ ಪತ್ರ
ಬರೆದರು. ( ಇಲ್ಲಿ “ಬರೆದರು” ಎಂಬ ಪದವು ಪೂರ್ಣ ಕ್ರಿಯೆಯಾಗಿದೆ )
2.
ಶಿವರಾಜ್ ಕುಮಾರ್ ಪತ್ರವನ್ನು
ಓದಿ ಮುಗಿಸಿದರು. ( ಇಲ್ಲಿ “ಓದಿ ಮುಗಿಸಿದರು” ಪೂರ್ಣ ಕ್ರಿಯೆಯಾಗಿದೆ)
(b)
ಅರ್ಧ ವಿರಾಮ :
ಅರ್ಧ ವಿರಾಮ ಚಿಹ್ನೆ ಯಾವುದು ಅಂದರೆ (;). ಅನೇಕ ಉಪವಾಕ್ಯಗಳು ಒಂದು ಪ್ರಾಧನ ವಾಕ್ಯಕ್ಕೆ ಅಧೀನವಾಗಿದ್ದಾಗ, ಉಪವಾಕ್ಯಗಳು ಇನ್ನೂ ಮುಗಿದಿಲ್ಲ ಎಂದು ಅರ್ಧ ವಿರಾಮದ (;) ಈ ಚಿಹ್ನೆಯನ್ನು ಬಳಸುತ್ತಾರೆ.
ಉದಾಹಣೆಗೆ :
1.
ಅವನು ಮಾದಪ್ಪನ ಬೆಟ್ಟಕ್ಕೆ ಹೋಗಿ ಬಂದನು; ಆದರೂ ಕೆಟ್ಟ ಬುದ್ದಿಯನ್ನು ಬಿಟ್ಟಿಲ್ಲ.
2.
ಆ ದಿನ ಬಿಸಿಲು ಹೆಚ್ಚಾಗಿತ್ತು; ಆದುದರಿಂದ ಜಮೀನು ಕೆಲಸ ಮಾಡಲು ಸಾಧ್ಯವಾಗಿಲ್ಲ; ಅದಕ್ಕೆ ಜಮೀನಿನಲ್ಲಿ ಕಳೆಗಳು ಹೆಚ್ಚಾಗಿದೆ.
(c)
ಅಲ್ಪ ವಿರಾಮ :
ಅಲ್ಪ ವಿರಾಮ ಚಿಹ್ನೆ ಯಾವುದು ಅಂದರೆ (,) ಸಂಬೋಧನೆಯ ಮುಂದೆ, ಅನೇಕ ಬೇರೆ ಬೇರೆ ವಿಶೇಷಣಗಳು ಕರ್ತೃ ಪದಕ್ಕಾಗಲಿ, ಕರ್ಮಪದಕ್ಕಾಗಲಿ, ಕ್ರಿಯಪದಕ್ಕಾಗಲಿ ವಿಶೇಷಣಗಳಿದ್ದಾಗ ಕೊನೆಯ ವಿಶೇಷಣವನ್ನುಳಿದು ಉಳಿದವುಗಳು ಮುಂದೆ ಅಲ್ಪ ವಿರಾಮ ಚಿಹ್ನೆಯನ್ನು ಬರೆಯುವುದು.
ಅನೇಕ ಕರ್ತೃಗಳು ಮತ್ತು ಕರ್ಮಗಳು ಬಂದಾಗ, ಕೊನೆಯದನ್ನುಳಿದು ಉಳಿದವುಗಳ ಮುಂದೆ ಅಲ್ಪವಿರಾಮ ಚಿಹ್ನೆಯನ್ನು ಬರೆಯಬೇಕು.
ಉದಾಹರಣೆಗೆ :-
(|) ಸಂಭೋಧನೆಯ ಮುಂದೆ ಅಲ್ಪ ವಿರಾಮ
(•) ಪುನೀತ್, ಊಟ ಮಾಡು.
(•) ಹುಡುಗರೇ, ಬನ್ನಿ .
(•) ದೇವರೇ, ಕಾಪಾಡು.
(d) ಪ್ರಶ್ನಾರ್ಥಕ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ ಯಾವುದು ಅಂದರೆ (?). ಪ್ರಶ್ನಾರ್ಥಕ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕವಾದ (?) ಈ ಚಿಹ್ನೆಯನ್ನು ಬಳಸುತ್ತಾರೆ.
ಉದಾಹರಣೆಗೆ:-
(1)
ಏಕೆ?
(2)
ಯಾವುವು?
(3)
ನಿನಗೆ ವಯಸು ಎಷ್ಟು?
(4)
ನೀನು ಯಾವ ಕಾಲೇಜಿನಲ್ಲಿ ಓದಿದೆ?
(e)
ಭಾವ ಸೂಚಕ ಚಿಹ್ನೆ :
ಭಾವ ಸೂಚಕ ಚಿಹ್ನೆ ಯಾವುದು ಅಂದರೆ (!). ಹರ್ಷ, ಸಂತೋಷ, ವಿಷಾದ, ದುಃಖ, ಕೋಪ, ಆಶ್ಚರ್ಯ, ಆನಂದ, ಇತ್ಯಾದಿ ಭಾವ ಸೂಚಕ ಶಬ್ದಗಳ ಮುಂದೆ ‘!’ ಈ ರೀತಿಯ ಭಾವ ಸೂಚಕ ಚಿಹ್ನೆ ಯನ್ನು ಬರೆದರೆ ಆ ವಾಕ್ಯ ಸ್ಪಷ್ಟವಾಗಿರುತ್ತದೆ.
ಉದಾಹರಣೆಗೆ:-
(1)
ಆಹಾ! ಎಷ್ಟು ಸಂತೋಷವಾಗಿದೆ.
(2)
ಅಯ್ಯೋ! ಅವನಿಗೆ ಏನಾಯ್ತು.
(3)
ಛೀ! ಆಯ್ಯೋಗ್ಯ ತೊಲಗು!
(f)
ಆವರಣ ಚಿಹ್ನೆ :
ಆವರಣ ಚಿಹ್ನೆ ಯಾವುದು ಆದರೆ “()”. ಒಂದು ಶಬ್ದವನ್ನೋ ಅಥವಾ ಒಂದು ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಶಬ್ದವನ್ನೋ ವಾಕ್ಯವನ್ನೋ ಹೇಳುವಾಗ ಈ ಆವರಣ ಚಿಹ್ನೆಯನ್ನು ಬಳಸಬೇಗಾಗಿದೆ.
ಉದಾಹರಣೆಗೆ :
(1)
ಕರ್ನಾಟಕ ಒಟ್ಟು ಶೇಕಡಾ 21% ಅರಣ್ಯ (ಕಾಂತಾರ) ಪ್ರದೇಶವನ್ನು ಹೊಂದಿದೆ.
(2)
ಸಮುದ್ರದ ಉದಕ (ನೀರು) ಕುಡಿಯಲು ಯೋಗ್ಯವಲ್ಲ.
(3)
ನರೇಂದ್ರ ಮೋದಿ (ಪ್ರಧಾನ ಮಂತ್ರಿ) ಕರ್ನಾಟಕಕ್ಕೆ ಬಂದಿದ್ದರು.
ಧನ್ಯವಾದಗಳು