Type Here to Get Search Results !

Deshiya padagalu and anyadeshi padagalu

 ೇಶೀಯ ಮತ್ತು ವಿದೇಶೀಯ ಪದಗಳು ತತ್ಸಮ ತದ್ಭವ  

 

ಯಾವದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯತ್ತಾ. ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ. ನಾವಾಡುವ ಕನ್ನಡ ಭಾಷೆಯಲ್ಲೂ ತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳನ್ನು ಸೇರಿವೆ. ನಮ್ಮ ಕನ್ನಡ ಪದಗಳು ಸಹ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ. ಬೇರೆ ಭಾಷೆಯಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಶಬ್ದವನ್ನು ಮಾತ್ರ ಕೈಬಿಡಬಾರದು. ನಮ್ಮ ಭಾಷೆಯು ಶಬ್ದವು ಇರಬೇಕು; ಪರಭಾಷೆಯ ಶಬ್ದವು ಸಹ ಇರಬೇಕು. ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು. ಈ ಕೆಳಗಿನ ಉದಹರಣೆಯನ್ನು ನೋಡಿ: 

 

ಮೋಟರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿplಬೇಕು. 

ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿದೆ. 

  1. ಮೋಟಾರು ಇದು ಇಂಗ್ಲಿಷ್ ಭಾಷೆಯಿಂದ ಬಂದಿರುವ ಪದ. 

  1.  ಜಬರ್ದಸ್ತಿ ಇದು ಹಿಂದಿ ಭಾಷೆಯಿಂದ ಬಂದಿರುವ ಪದ. 

  1. ಜೀವನದ ಮುಖ್ಯ ಇದು ಸಂಸ್ಕೃತ ಭಾಷೆಯ ಪದಗಳಿಂದ ಬಂದಿದೆ 

  1. ಓಡಾಡು, ಗುರಿ, ನಾವು, ತಿಳಿಯಬೇಕು ಇವು ಕನ್ನಡ ಭಾಷೆ. 

 

 

  1. ದೇಶೀಯ ಅಚ್ಚಗನ್ನಡ ಶಬ್ದಗಳು 

ಶುದ್ದವಾದ ಅಚ್ಚಗನ್ನಡ ಪದಗಳನ್ನು ತಿಳಿದುಕೊಳ್ಳುವುದು ರಿಂದ ಅನ್ಯದೇಶೀಯ ಪದಗಳ ಬಗ್ಗೆ ಅರಿವು ಸಿಗುತ್ತದೆ. ಕೆಲವು ಅಚ್ಚಗನ್ನಡ ಪದಗಳು ಅಥವಾ ಶಬ್ದಗಳನ್ನು ಕೆಳಗೆ ನೀಡಲಾಗಿದೆ 

 

ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಗಣ, ಮೂಡಣಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು ಹೊಳೆ, ಹೋಗು, ಹೊಗು, ಬರು ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ, ಚೆನ್ನಾಗಿ, ತಿಳುವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಅಗಿ, ಅಲರು, ಅರೆ, ನುರಿ, ಉಡು, ತೊಡು, ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು, ಹಿರಿದು, ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು , ಆಕಳು, ತುರು, ನೆರೆ, ಸೇರು, ಕಾರು, ಹೀರು, ಸೋರು, ಸಾರು, ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ , ಎಳ್ಳು, ಎಣ್ಣೆ, ಬೆಣ್ಣೆ - ಇತ್ಯಾದಿ . 

 

Deshiya padagalu and anyadeshi padagalu


  1. ಅನ್ಯದೇಶಿ ಪದಗಳು ಅಥವಾ ಶಬ್ದಗಳು 

ಅನ್ಯದೇಶಿ ಪದಗಳು ಅನೇಕರು ನಮ್ಮ ಭಾರತಕ್ಕೆ ಬಂದು ವ್ಯಾಪಾರ ನಡೆಸಿದವರು ಮತ್ತು ಭಾರತವನ್ನು ಆಳ್ವಿಕೆ ನಡೆಸಿದ ಹೊರ ದೇಶದ ಭಾಷೆಯನ್ನು ನಾವು ನಮ್ಮ ಕನ್ನಡದಲ್ಲಿ ಸ್ವಲ್ಪ ಮಟ್ಟಕ್ಕೆ ಬದಲಾವಣೆ ಮಾಡಿ ಬಳಕೆಮಾಡುತಿರುವ ಪದಗಳನ್ನು ಅನ್ಯದೇಶಿ ಪದಗಳು ಅಥವಾ ಶಬ್ದಗಳು ಎಂದು ಕರೆಯುತ್ತೇವೆ. ಯಾವ ಯಾವ ಭಾಷೆಯಿಂದ ಯಾವ ಯಾವ ಪದಗಳು ಅಥವಾ ಶಬ್ದವನ್ನು ಎಂಬುವುದನ್ನು ಈ ಕೆಳಗೆ ತಿಳಿಯೋಣಬನ್ನಿ; 

 

() ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಶಬ್ದಗಳು :  

ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದ ಶಬ್ದಗಳನ್ನು ತಿಳಿಯಲು  ಸ್ಥೂಲವಾಗಿ ಕೆಳಗಣ ವಿಷಯಗಳನ್ನು ನೆನಪಿನಲ್ಲಿಡಬೇಕು 

  1. , , , ಕ್ಷ, ಜ್ಞ, ತ್ರ ವಿಸರ್ಗ, ಸ್ತ್ರೀ, ಸ್ತ್ರ ಅಕ್ಷರಗಳಲ್ಲಿರುವ ಶಬ್ದಗಳು 

  1. ಮಹಾಭಾರತ, ರಾಮಾಯಣಗಳೇ ಮೊದಲಾದ ಪುರಾಣ ಗ್ರಂಥಗಳಲ್ಲಿ ಬರುವ ವ್ಯಕ್ತಿ, ಸ್ಥಳ, ಪರ್ವತ್ವ, ನದಿ, ಋಷಿಗಳೇ ಮೊದಲಾದವರ ಹೆಸರುಗಳು ಮತ್ತು ಋತು, ಮಾಸ, ದಿವಸ, ನಕ್ಷತ್ರ, ಯೋಗ, ಕರಣಗಳು 

  1. ವಿ, , ಅನ್, ಸು, , ನಿಸ್, ನಿರ್, ನಿಃ, ದುಃ, ದುಸ್, ದುರ್ ಇತ್ಯಾದಿ  ಉಪಸರ್ಗ ಪೂರ್ವಕ ಶಬ್ದಗಳು, ಉದಾ: ವಿಚಲಿತ, ಅಚಲಿತ, ದುರಾಚಾರ, ಅನಗತ್ಯ, ವಿಶೇಷ…. ಇತ್ಯಾದಿ; 

  1. ಇವಲ್ಲದೆ ಇನ್ನೂ ಅನೇಕ ಶಬ್ದಗಳಿವೆ. ಇಲ್ಲಿ ಹೇಳಿರುವುದು ಕೇವಲ ಸ್ಥೂಲಮಾತ್ರ 


ಸಂಸ್ಕೃತ ಪದಗಳು 

ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಕೆಲವು ಪ್ರಮುಖ ಪದಗಳನ್ನು ಈ ಕೆಳಗಡೆ ನೀಡಲಾಗಿದೆ 

ಭೂಮಿ, ಪೃಧ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತ್ರುಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ, ಸಂಗ, ಸಂಗಮ, ಸಮಾಗಮ, ದೇವತಾ, ಯಾತ್ರಾ, ದೇವಾಲಯ, ಋಷಿ, ಮುನಿ, , ಋತು, ವೇದ, ಪುರಾಣ, ಶಾಸ್ತ್ರ, ಶಾಸ್ತ್ರೀ, ಆಗಮ, ಉಪನಿಷತ್ತು, ಅರಣ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಪಂಚ, ತ್ರಯ, ದಶ, ಏಕ, ಅಷ್ಟ, ಸಪ್ತ, ಆದಿತ್ಯವಾರ, ಸೋಮವಾರ, ಮಂಗಳವಾರ, ಬುಧುವಾರ, ನಕ್ಷತ್ರ, ಗ್ರಹ, ಗೃಹ, ಗೃಹಿಣಿ, ಗೃಹಸ್ಥ, ಬ್ರಹ್ಮಚಾರಿ, ವಿದ್ಯಾರ್ಥಿ, ಅನ್ನ, ಪಕ್ವಾನ, ತೀರ್ಥ ,  ಅಸಾಧ್ಯ, ಅಶಕ್ಯ, ಅಶಕ್ತ, ಆಸಕ್ತಿ, ನಿಶ್ಯಕ್ತಿ, ವಿಶೇಷ, ಜ್ಞಾನ, ವಿದ್ಯಾ, ವಿದ್ಯಾರ್ಜನೆ, ಶಾಲಾ, ವಿಶ್ವವಿದ್ಯಾಲಯ, ಘಟಿಕಾ, ಘಟಿಕೋತ್ಸವ, ವಿವಾಹ,   ಲಗ್ನ, ಲಗ್ನಪತ್ರ, ಪುತ್ರ, ಮಿತ್ರ, ಕಳತ್ರ, ಆಗಮ, ಆದೇಶ, ಲೋಪ, ಅಗ್ರಹಾರ, ಪುರ, ಪುರಿ, ನಗರ, ಗ್ರಾಮ, ಅಧಿಕಾರ, ಮಂತ್ರಿ, ರಾಜನ್ ರಾಣಿ, ಚಕ್ರವರ್ತಿ, ಸಾಮಂತ, ಮಂಡಲೇಶ್ವರ, ಸಾಮ್ರಾಜ್ಯ, ಚಕ್ರಾಧಿಪತ್ಯ, ಶಬ್ದ, ಅಕ್ಷರ, ಪದ, ಪ್ರಕೃತಿ, ವಾಕ್ಯ, ಗ್ರಂಥ, ಸಂಪುಟ, ಧರ್ಮ, ಮತ, ಮೋಕ್ಷ, ಸ್ವರ್ಗ, ನರಕ, ವಿಷಯ, ಅಧ್ಯಾಯ, ಪ್ರಕರಣ, ಪರಿಚ್ಛೇದ, ಆಮ್ಲಜನಕ, ಜಲಜನಕ, ವಿಮಾನ, ಆಕಾಶ, ಫಲ, ಫಲಾಹಾರ, ಗಂಧ, ಚಂದನ, ಲೇಪನ, ಕುಂಕುಮ, ಶಿರ, ಹಸ್ತ, ಪಾದ, ನೇತ್ರ, ಮುಖ, ದಂತ, ನಕ್ಷೆ, ಲೇಖನ, ಲೇಖ, ಪತ್ರ, ಶತ್ರು, ಉತ್ತರ, ದಕ್ಷಿಣ, ಪೂರ್ವ, ಪಕ್ಷಿಮ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಗಗನ, ವಾಯು, ವಾಯುಮಂಡಲ, ಜಗತ್, ಮಹಾ, ಉನ್ನತ, ಶಿಖರ, ರಾಶಿ, ಪೂಂಜ, ಪುಷ್ಪ, ಪತ್ರಾವಳಿ, ಫಲಾವಳಿ, ಭೋಜನ,ಭುಂಜನ, ಸರ್ಪ, ಉರಗ, ಔಷಧ, ವೈಧ್ಯ, ಆಯುಷ್ಯ, ವರ್ಷ, ಯುಗ, ಶತ, ಶತಮಾನ, ಶತಕ, ವರ್ತಮಾನ, ಸಂಗ್ರಹ, ಗದಾ, ದಂಡ, ಬಾಣ, ಬಾಣಪ್ರಯೋಗ, ಧನು, ದರಿದ್ರ, ದೀ, ದಲಿತ, ಮಾರ್ಗ, ಮಧ್ಯ, ಧೋಲಿ, ದ್ವಾರ, ಗುಹಾ, ಸಹಸ್ರ, ಪಾಡ್ಯಮೀ, ಏಕಾಶೀ, ದ್ವಾದಶೀ, ದೀಕ್ಷಾ, ದೈನ್ಯ, ದಿನಾಂಕ, ಸ್ಮಾರಕ, ಪಕ್ಷ, ತಿಥಿ, ಪಂಚಾಂಗ, ಪಂಚಾ, ದ್ರೌಪತಿ, ಧೃತರಾಷ್ಟ್ರ, ಕಾವೇರಿ, ಕೃಷ್ಣ, ಗೋದಾವರಿ, ನರ್ಮದಾ, ಬ್ರಹ್ಮಪುತ್ರ, ಗಂಗಾ, ಯಮುನಾ, ಸರಸ್ವತಿ, ಶಿವ, ವಿಷ್ಣು, ಮಹೇಶ, ಈಶ್ವರ, ನಶ್ವರ, ……ಇತ್ಯಾದಿ. 

 

() ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು 

ಅರ್ಜಿ, ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ, ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ, ಕುರ್ಚು, ಜಮೀನ್ದಾರ್, ಗುಲಾಮ, ಖಾಜಿ, ಸುಬೇದಾರ್, ದಾಪೇದಾರ್, ಹವಾಲ್ದಾರ್, ದಾಖಲ್, ದುಕಾನ್, ಅಮಲ್ದಾರ್, ಸವಾರ, ದವಾಖನೆ, ಕಾಗದ, ಬಂದೂಕು, ಹೂಜೂರು, ಖವಾಂದ್, ಜನಾಬ್, ಮಹಲ್, ಕಿಲ್ಲಾ,…. ಮುಂದಾದವುಗಳು 

 

() ಇಂಗ್ಲೀಷ್ ನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು ಅಥವಾ ಪದಗಳು 

ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಮೈಲು, ಪ್ಲೇಗು, ಪೋಲಿಷ್, ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೋಟೆಲ್, ಚೇರ್ಮನ್, ರೂಮ್, ಸ್ಕೂಲ್, ಕಾಲೇಜು, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ಹೈಡ್ರೋಜನ್, ಆಸಿಡ್, ರಿಜಿಸ್ಟರ್, ಬೈಲ್, ಡ್ರೆಸ್, ಬೂಟ್ಸ್, ಪುಟ್ ಪಾತ್, ಬೈಸೈಕಲ್, ಮೋಟಾರ್ಸೈಕಲ್, ಸ್ಕೂಟರ್, ಜಾಮಿಟ್ರಿ, ಮಿಷನ್, ಡಿಗ್ರೀ, ಡಾಕ್ಟರ್, ಪ್ಲಾನ್, ಬ್ರೆಡ್, ಕಾಫಿ, ಟೀ, ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್ಮೆಂಟ್, ಗವರ್ನಮೆಂಟ್, ಅಪ್ಪಾಯಿನ್ಮೆಂಟ್, ಆರ್ಡರ್, ಪ್ರೈಮರಿ, ಮಿಡಲ್, ನರ್ಸರಿ, ಹೈಸ್ಕೂಲ್, ಅಗ್ರಿಕಲ್ಚರ್, ಸೋಪ್, ಬುಕ್, ನೋಟ್ಸ್, ಪೇಜ್, ಮಾಸ್ಟರ್, ಲೆಕ್ಚರರ್, ರೀಡರ್, ಲೈಬ್ರೆರಿ, ಪ್ರೆಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್, ಮ್ಯಾಪ್, ಸಿನೆಮಾ, ಫಿಲ್ಮ್, ಸರ್ಟಿಫಿಕೇಟ್, ಲೀವ್, ಎಜುಕೇಷನ್ , ಕಾಂಗ್ರೆಸ್, ಪಾರ್ಟಿ, ಕ್ರಿಕೆಟ್, ಪುಟ್ ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಡಿಸ್ಟ್ರಿಕ್ಟ್, ಸರ್ಕಲ್, ಸೊಸೈಟಿ, ಮಿಲ್, ಪೆನ್ಸಿಲ್, ಪೆನ್, ಇಂಕ್, ಬಾಟಲ್, ಸ್ಪೀಡ್, ಸ್ವಿಚ್….. ಇತ್ಯಾದಿ 

() ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಪದಗಳು 

ಅಲಮಾರು, ಸಾಬೂನು, ಪಾದ್ರಿ, ಮೇಜುಇತ್ಯಾದಿ 

 

() ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸನಾಡುಕೊಂದು ಕನ್ನಡಕ್ಕೆ ಬಂದ ಶಬ್ದಗಳು 

ಇದರಲ್ಲಿ ಸ್ವಲ್ಪ ಬದಲಾವಣೆ ಹಿಂದಿರುವುದು ಮತ್ತು ಹೆಚ್ಚು ಬದಲಾವಣೆ ಹೊಂದಿದವು ಎಂದು ಎರಡು ವಿಧವಾಗಿ ವಿಭಾಗಿಸಬಹುದು 

  1. ಸ್ವಲ್ಪ ಬದಲಾವಣೆ ಹೊಂದಿ ಬಂದವುಗಳು 

   ಉದಾ:- ಸೀತೆ, ಲಕ್ಷ್ಮಿ, ಮಾಲೆ, ದೇವತೆ, ರಾಜ, ಮಹ, ಯಸ, ಬೃಹತ್ತು, ಮಹತ್ತು, ವಿಪತ್ತು, ವಿಯತ್ತು, ಸರಿತ್ತು…. ಇತ್ಯಾದಿಗಳು 

  1. ಹೆಚ್ಚು ಬದಲಾವಣೆ ಹೊಂದಿ ಬಂದವುಗಳು 

ಉದಾ:- ಸಕ್ಕರೆ, ಸಾವಿರ, ಬಸವ, ಸಂತೆ, ಪಟಕ, ಸರ, ತಾಣ, ದೀವಿಗೆ, ಬತ್ತಿ, ಬಸದಿ, ನಿಚ್ಚ, ಕಜ್ಜ, ಅಂಚೆ, ಕಂತೆ, ಅಜ್ಜ, ಕವಳ ಇತ್ಯಾದಿಗಳು. 

 

 

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad