Introduction
ಭೂ ಸ್ವರೂಪಗಳೆಂದರೆ ಭೂಮಿಯ ಮೇಲಿರುವ ವೈಶಿಷ್ಟ್ಯತೆಗಳನ್ನು ಮತ್ತು ವಿವಿಧ ಭೂಮೇಲ್ಮೈ ಲಕ್ಷಣಗಳನ್ನು ಭೂ ಸ್ವರೂಪಗಳೆಂದು ಕರೆಯುತ್ತಾರೆ. ಅಂತಹ ಭೂ ಸ್ವರೂಪಗಳೆಂದರೆ ಪರ್ವತ, ಬೆಟ್ಟ, ಕಣಿವೆ, ಮೈದಾನ, ಮರುಭೂಮಿ, ಮತ್ತು ದ್ವೀಪಗಳು. ಭೂ ಸ್ವರೂಪಗಳು
![]() |
ಭೂ ಸ್ವರೂಪಗಳು |
ಭೂಸ್ವರೂಪದ ವಿಧಗಳು
1) ಪರ್ವತಗಳು
2) ಪ್ರಸ್ಥಭೂಮಿಗಳು
3) ಮೈದಾನಗಳು
4) ಪರ್ವತಗಳು
1) ಪರ್ವತಗಳು :-
ಭೂಮಿಯ ಮೇಲ್ಮೈನ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಎತ್ತರವುಳ್ಳ ಮತ್ತು ಮೇಲಕ್ಕೆ ಎತ್ತಲ್ಪಟ್ಟ ಭೂಭಾಗಗಳು. ಇವುಗಳು ಕಡಿದಾದ ಇಳಿಜಾರುಗಳು ಮತ್ತು ಶಿಖರಗಳನ್ನು ಹೊಂದಿದ್ದು, ಸಮುದ್ರ ಮಟ್ಟದಿಂದ ಸಾವಿರಾರು ಮೀಟರ್ಗಳಿಗೂ ಎತ್ತರವಾಗಿವೆ. ಪರ್ವತದ ಅತ್ಯಂತ ಎತ್ತರವಾದ ತುದಿಗೆ "ಶಿಖರ" ಎನ್ನುವರು.
ಪರ್ವತ ಮತ್ತು ಬೆಟ್ಟಕ್ಕೆ ಇರುವ ವ್ಯತ್ಯಾಸಗಳು
ಬೆಟ್ಟಗಳು ಭೂಮಿಯ ಒಂದು ನೈಸರ್ಗಿಕ ಒಂದು ಎತ್ತರವಾದ ಭಾಗವಾಗಿದೆ. ಇವು ಸಾಮಾನ್ಯವಾಗಿ 600 ಮೀಟರ್ ಎತ್ತರವುಳ್ಳವು. ಅವುಗಳ ಇಳಿಜಾರು ಅಷ್ಟೊಂದು ಕಡಿದಾಗಿಲ್ಲ.
ಪರ್ವತ ಸರಣಿ :-
ಶಿಖರವುಳ್ಳ ಅಥವಾ ಎಲ್ಲದ ಪರ್ವತಗಳ ಸಾಲನ್ನು "ಪರ್ವತ ಸರಣಿ" ಎನ್ನುವರು. ಉದಾ : ಆಂಡೀಸ್ ಪರ್ವತ - ದಕ್ಷಿಣ ಅಮೆರಿಕದ, ಏಷ್ಯಾದ - ಹಿಮಾಲಯ, ಉತ್ತರ ಅಮೆರಿಕದ - ರಾಕಿ.
ಪರ್ವತದ ನಿರ್ಮಾಣ :-
ಪರ್ವತಗಳು ಶಿಲಾ ಸ್ಥರಗಳ ಮಡಿಕೆ ಮತ್ತು ಜ್ವಾಲಮುಖಿಗಳಂಥಹ ಆಂತರಿಕ ಶಕ್ತಿಗಳಿಂದ ನಿರ್ಮಿತಕೊಂಡಿವೇ. ಅತ್ಯಂತ ಎತ್ತರವುಳ್ಳ ಪರ್ವತಗಳ ಅತೀ ಎತ್ತರ ಭಾಗಗಳು ಹಿಮದಿಂದ ಆವೃತವಾಗಿರುತ್ತದೆ. ಅವುಗಳು ಸಾಮಾನ್ಯವಾಗಿ ಕಠಿಣ ಶಿಲೆಗಳಿಂದ ರಚಿತವಾಗಿವೆ. ಪರ್ವತಗಳ ನಿರ್ಮಾಣಕ್ಕೆ ಅನುಸಾರವಾಗಿ 2 ರೀತಿಯಲ್ಲಿ ವಿಂಗಡಿಸಬಹುದು.
1. ಇತ್ತೀಚಿನ ಪರ್ವತಗಳು
2. ಪುರಾತನ ಪರ್ವತಗಳು
1. ಇತ್ತೀಚಿನ ಪರ್ವತಗಳು :-
ಇವು ಇತ್ತೀಚಿಗೆ ನಿರ್ಮಾಣಗೊಂಡ ಪರ್ವತಗಲಾಗಿವೆ. ಉದಾ : ಹಿಮಾಲಯ ಪರ್ವತ, ಆಲ್ಬಸ್ ಪರ್ವತ.
2. ಪುರಾತನ ಪರ್ವತಗಳು :-
ಇವು ಹಳೆಯ ಪರ್ವತಗಳು ಉದಾ : ಭಾರತದ ಆರಾವಳಿ ಬೆಟ್ಟಗಳು, ಉತ್ತರ ಅಮೆರಿಕದ ಅಪಲೇಷಿಯನ್ ಭೂ ಸ್ವರೂಪಗಳು ಪರ್ವತಗಳು ಪುರಾತನ ಕಾಲದ ಪರ್ವತಗಳಿಗೆ ಉದಾಹರಣೆಯಾಗಿವೆ.
ನಿರ್ಮಾಣದ ಆಧಾರದ ಮೇಲೆ ಪರ್ವತದ ವಿಧಗಳು
Ⅰ) ಮಡಿಕೆ ಪರ್ವತಗಳು
Ⅱ) ಖಂಡ ಪರ್ವತಗಳು
Ⅲ) ಜ್ವಾಲಮುಖಿ ಜನಿತ ಪರ್ವತಗಳು
Ⅰ) ಮಡಿಕೆ ಪರ್ವತಗಳು :-
ಇವು ಶಿಲಾ ಸ್ತರಗಳು ಮುದುಡಿಕೊಳ್ಳುವುದರಂದ ನಿರ್ಮಾಣವಾದಂತವು. ಇವು ಅತಿ ಎತ್ತರದ ಪರ್ವತಗಳಾಗಿವೆ. ಉದಾ : ಏಷ್ಯಾದ ಹಿಮಾಲಯ ಪರ್ವತ, ಯುರೋಪ್ ನ ಆಲ್ಪಸ್ ಪರ್ವತ ( Alps Mountain ).
Ⅱ)ಖಂಡ ಪರ್ವತಗಳು :-
ಎರಡು ಸಮಾನಾಂತರ ಶಿಲಾ ಸ್ತರಬಂಗಗಳ ನಡುವಣ ಭಾಗವು ಮೇಲೆಕ್ಕೆ ಎತ್ತಲ್ಪಡುವುದರಿಂದ ನಿರ್ಮಾಣವಾಗುತ್ತಾವೆ. ಅವು ಅತೀ ಎತ್ತರವಾಗಿಲ್ಲ. ಉದಾ : ಸಿಯೆರ್ರ ನಿವೇಡ ( ಉತ್ತರ ಅಮೇರಿಕ ) ಮತ್ತು ವಾಸ್ ಜೆಸ್ ( ಯೂರೋಪ್ ).
Ⅲ) ಜ್ವಾಲಮುಖಿ ಜನಿತ ಪರ್ವತಗಳು :-
ಇವು ಜ್ವಾಲಮುಖಿಯಿಂದ ನಿರ್ಮಿತವಾದ ಪರ್ವತಗಳಾಗಿವೆ. ಅವುಗಳ ತಳ ವಿಸ್ತಾರವಾಗಿರುತ್ತದೆ. ಎತ್ತರವಾದ ಶಂಖಾಕೃತಿಯ ಶಿಖರಗಳನ್ನು ಒಳಗೊಂಡಿವೆ. ಉದಾ : ಜಪಾನಿನ ಫ್ಯೂಜಿಯಾಮ ಮತ್ತು ಆಫ್ರಿಕಾದ ಕಿಲೋಮಾಂಜರೋ.
ಪರ್ವತಗಳ ಮಹತ್ವಗಳು (ಭೂ ಸ್ವರೂಪಗಳು )
• ಪರ್ವತಗಳು 2 ದೇಶದ ನಡುವೆ ಸ್ವಾಭಾವಿಕ ಗಡಿಗಳನ್ನು ನಿರ್ಮಿಸುತ್ತದೆ
• ಜಲವಿದ್ಯುತ್ ತಯಾರಿಕೆಗೆ ನೀರನ್ನು ಪೂರೈಸುತ್ತದೆ
• ಜೀವನದಿಗಳು ಉಗಾಮಿಸುತ್ತದೆ ಉದಾ : ಗಂಗಾ, ಯಮುನಾ, ಬ್ರಹ್ಮಪುತ್ರ, ಸಿಂಧೂ ನದಿಗಳು ಉಗಮಿಸುತ್ತದೆ.
• ನೈಸರ್ಗಿಕ ಸಂಪನ್ಮೂಲಗಳ ಉಗ್ರಾಣವಾಗಿವೆ.
• ಪ್ರವಾಸಿ ತಾಣವಾಗಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜಕವಾಗಿವೆ. ನಡುತೋಪು ಬೆಳೆ ( Plantations )ಗಳಿಗೆ ಪುರಕವಾಗಿವೆ.
• ಇವುಗಳು ವಿದೇಶಿ ಆಕ್ರಮಣವನ್ನು ತಡೆಯುತ್ತಡದೆ.
• ವಾಯುಗುಣದ ಮೇಲೊ ಪ್ರಭಾವ ಬೀರುತ್ತದೆ.
2) ಪ್ರಸ್ತಭೂಮಿ :-
ಸಮಾತಟ್ಟಾದ ಮೇಲ್ಭಾಗ ಮತ್ತು ಕಡಿದಾದ ಬದಿಗಳಿಂದ ಕೊಂಡಿದೆ. ಇವುಗಳನ್ನು ಪೀಠಭೂಮಿಗಳೆಂದು ಕರೆಯುತ್ತಾರೆ. ಪ್ರಸ್ಥಭೂಮಿಗಳು ಸುತ್ತಮುತ್ತಲ ಪ್ರದೇಶಗಲಿಗಿಂತ ಒಮ್ಮೆಲೇ ಎತ್ತರವಾಗಿದ್ದು, ಸಣ್ಣ ಪ್ರಮಾಣದ ಏರಿಳಿತಗಳನ್ನು ಹೊಂದಿದೆ.
ಪ್ರಸ್ತಭೂಮಿಗಳ ವಿಧಗಳು
1. ವಿಶಾಲವಾದ ಪ್ರಸ್ಥಭೂಮಿ
ಉದಾ : ಭಾರತದ ದಖ್ಖನ್ ಪ್ರಸ್ಥಭೂಮಿ
2. ಅತಿ ಎತ್ತರವಾದ ಪ್ರಸ್ಥಭೂಮಿ
ಉದಾ : ಟಿಬೆಟ್ ಪ್ರಸ್ಥಭೂಮಿ ( ಈ ಪ್ರಸ್ಥಭೂಮಿ ಜಗತ್ತಿನಲ್ಲೇ ಅತೀ ಎತ್ತರವಾದ ಪ್ರಸ್ಥಭೂಮಿಯಾಗಿದೆ , ಇದನ್ನು "ಪ್ರಪಂಚದ ಮೇಲ್ಛಾವಣಿ " ಎಂದು ಕರೆಯುತ್ತಾರೆ )
ಪ್ರಸ್ತಭೂಮಿಯ ವಿಧಗಳು :-
1. ಅಂತರ ಪರ್ವತ ಪ್ರಸ್ಥಭೂಮಿ
2. ಪರ್ವತ ಪಾದ ಪ್ರಸ್ಥಭೂಮಿ
3. ಖಂಡಾಂತರ ಪ್ರಸ್ಥಭೂಮಿ
1. ಅಂತರ ಪರ್ವತ ಪ್ರಸ್ಥಭೂಮಿ :-
ಇವು ಸುತ್ತಲೂ ಪರ್ವತ ಶ್ರೇಣಿಗಳಿಂದ ಸುತ್ತುವರೆದಿರುತ್ತದೆ. ಉದಾ : ಟೆಬೆಟ್ ಪ್ರಸ್ಥಭೂಮಿ (ಏಷ್ಯಾ), ಬೋಲಿವಿಯಾ ಪ್ರಸ್ಥಭೂಮಿ ( ದಕ್ಷಿಣ ಅಮೇರಿಕ )
2. ಪರ್ವತ ಪಾದ ಪ್ರಸ್ಥಭೂಮಿ :-
ಒಂದು ಕಡೆ ಪರ್ವತಗಳಿಂದಲೂ ಮತ್ತು ಇನ್ನೊಂದು ಕಡೆ ಮೈದಾನ ಮತ್ತು ಸಾಗರಗಳಿಂದಲೂ ಸುತ್ತುವರೆದಿರುತ್ತದೆ. ಉದಾ: ದಕ್ಷಿಣ ಅಮೆರಿಕದ ಪಟಗೋನಿಯಾ ಪ್ರಸ್ಥಭೂಮಿ.
3. ಖಂಡಾಂತರ ಪ್ರಸ್ಥಭೂಮಿ :-
ಖಂಡಾಂತರದ ಭಾಗ ಮೇಲಕ್ಕೆತ್ತುವಿಕೆ ಅಥವಾ ಶಿಲಾ ಪಾಕದ ಹರಡುವಿಕೆಯಿಂದ ನಿರ್ಮಾಣವಾಗಿದೆ. ಉದಾ: ಭಾರತದ ವಾಯುವ್ಯ ದಖ್ಖನ್ ಪ್ರಸ್ಥಭೂಮಿ.
ಪ್ರಸ್ತಭೂಮಿಯ ವಿಶೇಷತೆ
ಕೆಲವು ಪ್ರಸ್ಥಭೂಮಿಗಳು ತಗ್ಗು ಭಾಗದಲ್ಲಿವೆ. ಕಠಿಣ ಶೆಲೆಗಳಿಂದ ಕೊಡಿರುತ್ತವೆ. ಅಂತಹ ಶಿಲೆಗಳು ಸಮ್ವೃದ್ದ ಖನಿಜಗಳಿಂದ ಕೊಡಿವೆ. ಕರ್ನಾಟಕದ ನೈರುತ್ಯ ಭಾಗವು ಪ್ರಸ್ತಭೂಮಿಯಾಗಿದೆ.
ಪ್ರಸ್ತಭೂಮಿಯ ಪ್ರಾಮುಖ್ಯತೆ
ಇವುಗಳು ಜಲವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿವೆ. ಫಲವತ್ತಾದ ಭೂಮಿಯನ್ನು ಹೊಂದಿದ್ದು, ಕೃಷಿಗೆ ಸಹಕಾರಿಯಾಗಿದೆ. ಖನಿಜ ಸಂಪತ್ತಿನ ಆಗರವಾಗಿವೆ. ಪ್ರಾಣಿ ಸಾಕಲು ಉಪಯುಕ್ತವಾಗಿದೆ.
![]() |
ಭೂ ಸ್ವರೂಪಗಳು |
3) ಮೈದಾನಗಳು
" ವಿಶಾಲವಾದ ಸಮಾತಟ್ಟ ಅಥವಾ ಸ್ವಲ್ಪವೇ ಏರಿಳಿತಗಳನ್ನು ಒಳಗೊಂಡ ತಗ್ಗಾದ ಭೂಭಾಗವನ್ನು ಮೈದಾನ " ಎಂದು ಕರೆಯುತ್ತಾರೆ. ಮೈದಾನಗಳು ಫಲವತ್ತಾದ ಭೂಮಿಯನ್ನು ಹೊಂದಿರುತ್ತದೆ. ಬಹಳಷ್ಟು ಮೈದಾನಗಳು ನದಿಗಳು ಸವೆಸಿ, ಸಾಗಿಸಿ, ತಂದ ರೇವೆ, ಮಡ್ಡಿ ಮತ್ತು ಮರಳಿನಂತಹ ವಸ್ತುಗಳ ಸಂಚಯನದಿಂದ ನಿರ್ಮಿತವಾಗಿವೆ. ಮತ್ತೆ ಕೆಲವು ಮೈದಾನಗಳು ಹಿಮನದಿ ಮಾರಿತ ಮತ್ತು ಅಲೆಗಳ ಕಾರ್ಯದಿಂದ ನಿರ್ಮಿತವಾಗಿವೆ. ನದಿ ಕಣಿವೆ ಮತ್ತು ಸಮುದ್ರ ತೀರಗಳ ಉದ್ದಕ್ಕೂ ಅನೇಕ ಮೈದಾನಗಳನ್ನು ಹೊಂದಿದೆ. ಉದಾ : ಗಂಗಾ ನದಿ ಬಯಲು ಮತ್ತು ಅದರ ಮುಖಜಭೂಮಿ.
ಮೈದಾನದ ವಿಧಗಳು
1. ರಚನಾ ಮೈದಾನಗಳು
2. ಸವೆತದಿಂದಾದ ಮೈದಾನಗಳು
3. ಸಂಚಯನದಿಂದಾದ ಮೈದಾನಗಳು
1. ರಚನಾ ಮೈದಾನಗಳು :-
ಸಮುದ್ರದ ತಾಳಭಾಗವು ಮೇಲಕ್ಕೆ ಎತ್ತಲ್ಪಡುವುದರಿಂದ ಅಥವಾ ಯಾವುದಾದರೂ ಒಂದು ಭಾಗ ತಗ್ಗಾಗುವುದರಿಂದ ನಿರ್ಮಾಣವಾಗುತ್ತವೆ. ಉದಾ : ಅಮೆರಿಕಾದ ಆಗ್ನೇಯದ ಮೈದಾನ.
2. ಸವೆತದಿಂದಾದ ಮೈದಾನಗಳು :-
ಪರ್ವತ ಅಥವಾ ಪ್ರಸ್ಥಭೂಮಿಗಳು ಸವೆತಕ್ಕೊಳಗಾಗಿ ತಗ್ಗು ಮೈದಾನಗಳಾಗಿರುವುದರಿಂದ ನಿರ್ಮಾಣವಾಗಿವೆ. ಉದಾ: ಸೈಬೀರಿಯಾದ ಪಶ್ಚಿಮ ಭಾಗ
3. ಸಂಚಯನದಿಂದಾದ ಮೈದಾನಗಳು :-
ನದಿ, ಹಿಮನದಿ, ಮಾರುತ ಮೊದಲಾದ ನೈಸರ್ಗಿಕ ಕರ್ತೃಗಳು ಹೊತ್ತು ತಂದ ಮೆಕ್ಕಲು ಮಡ್ಡಿಗಳ ಸಂಚಯನದಿಂದ ನಿರ್ಮಿತವಾದವುಗಲಾಗಿವೆ. ಉದಾ: ಸಿಂಧೂ ಗಂಗಾ ನದಿ ಬಯಲು
ಮೈದಾನಗಳ ಉಪಯುಕ್ತತೆ
ಇವುಗಳು ಮೆಕ್ಕಲು ಮಣ್ಣಿನಿಂದ ಕೊಡಿದ್ದು, ಫಲವತ್ತಾದ ಪ್ರದೇಶವಾಗಿದೆ. ಮತ್ತು ಸಮತಟ್ಟಾದ ಭೂಮಿಯನ್ನು ಹೊಂದಿದೆ. ಕೃಷಿ ಮತ್ತು ಕೈಗಾರಿಕಾ ಅಭಿವೃದ್ದಿಗೆ ಸಹಕಾರಿಯಾಗಿದೆ. ಸಾರಿಗೆ ಸಂಪರ್ಕದ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿದೆ.
▶ ನಾಗರಿಕತೆ ಕೇಂದ್ರಗಳ ನಾಡಾಗಿದೆ.
▶ ಪಟ್ಟಣ ನಗರಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
▶ ರೈಲ್ವೆಯಂತಹ ಸಾರಿಗೆ ಸಂಪರ್ಕಗಳಿಗೆ ಉಪಯುಕ್ತಕಾರಿಯಾಗಿದೆ.
I WANT PDF
ಪ್ರತ್ಯುತ್ತರಅಳಿಸಿಧನ್ಯವಾದಗಳು