Type Here to Get Search Results !

ಭಾರತದ ಸಂವಿದನದ ಐತಿಹಾಸಿಕ ಹಿನ್ನಲೆ | Historical Background

 CONSTITUTION OF INDIAN  


 ಭಾರತದ ಸಂವಿದಾನ 


ಸಂವಿದನದ ಸಂವಿದಾನಾತ್ಮಕ ಬೆಳವಣಿಗೇಯ ಐತಿಹಾಸಿಕ ಹಿನ್ನಲೆ [Historical Background of Constitution] 


          ಭಾರತದಲ್ಲಿ ಬ್ರಿಟಿಷ್ ಆದಿಪತ್ಯದ ಆಡಳಿತವನ್ನು ನಿಯಂತ್ರಿಸಲು ಬ್ರಿಟನಿನ ಸಂಸತ್ತು ರೇಗ್ಯುಲೇಟಿಂಗ್ ಕಾಯಿದೆ-1773, ಪಿಟ್ಸ್ ಇಂಡಿಯನ್ ಕಾಯಿದೆ-1784,ಚಾರ್ಟ್ ರ್ ಕಾಯಿದೆ-1833, ಭಾರತ ಸರ್ಕಾರದ ಕಾಯಿದೆ-1858, ಭಾರತದ ಕೌನ್ಸಿಲ್ ಕಾಯಿದೆ-1861, ಭಾರತ ಸರ್ಕಾರ ಕಾಯಿದೆ-1919, ಭಾರತ ಸರ್ಕಾರದ ಕಾಯಿದೆ-1935 ಇವುಗಳು ಜಾರಿಗೆ ಬಂದಿತು. 

         ಭಾರತೀಯರ ಬೇಡಿಕೆಯ ಮೇರೆಗೆ ಕೆಲವು ಸೂದರಣೆಗಳನ್ನು ತರುವುದು ಕೂಡ ಈ ಕಾಯಿದೆಗಳನ್ನು ಜಾರಿಕೋಳಿಸಿದ ಹಿಂದಿನ ಉದ್ದೇಶವಾಗಿದೆ. ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ಸಲುವಾಗಿ ಭಾರತ ಸ್ವಾತಂತ್ರ್ಯ ಕಾಯಿದೆ-1947 ನ್ನು ರೂಪಿಸಲಾಯತ್ತು .  
indian constitutional history assembly
Historical Background of Indian Constitution 




ರೇಗ್ಯುಲೇಟಿOಗ್  ಕಾಯಿದೆ -1773

 [ಐತಿಹಾಸಿಕ ಹಿನ್ನಲೆ(HISTIRICAL BACKGROUND)]

          ರೇಗ್ಯುಲೇಟಿಂಗ್ ಕಾಯಿದೆಯನ್ನು ಪಾಸು ಮಾಡುವುದರ ಮೂಲಕ ಬ್ರಿಟಿಷ್ ಸರ್ಕಾರವು ಪ್ರಧಮ ಬಾರಿಗೆ ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯ ವ್ಯವಹಾರಗಳನ್ನು ನಿಯಂತ್ರಿಸಿತು. ಈ ಕಾಯಿದೆ ಯ ಮೂಲಕ ಬ್ರಿಟಿಷ್ ಸರ್ಕಾರವು ಮೊಟ್ಟ ಮೊದಲ ಬಾರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ವಹಿಸಿತು. ಈ ಎಲ್ಲ ಕಾರಣಗಳಿಂದ ಈ ಕಾಯಿದೆಯು ಅತ್ಯಂತ ಹೆಚ್ಚಿನ ಸಮಿಡನಾತ್ಮಕ ಪ್ರಾಮುಖ್ಯತೆ ಪಡೆದಿದೆ.  Read More
regulating act assembly
Regulating Assembly
                                                                   
 


ಪಿಟ್ ಇಂಡಿಯಾ ಕಾಯಿದೆ-1784 

[ಐತಿಹಾಸಿಕ ಹಿನ್ನಲೆ(Historical Background )]


           ರೇಗ್ಯುಲೇಟಿಂಗ್ ಕಾಯಿದೆಯ ಲೋಪ ದೋಷವನ್ನು ಸರಿಪಡಿಸಲು ಬ್ರಿಟಿಷ್ ಸಂಸತ್ತು ತಿದ್ದುಪಡಿ ಕಾಯಿದೆ 1781ನ್ನು ಪಾಸು ಮಾಡಿತು . ನಂತರ ಜಾರಿಗೆ ಬಂದ ಮಹತ್ವದ ಕಾಯಿದೆ ಎಂದರೆ ಪಿಟ್ಸ್  ಇಂಡಿಯಾ ಕಾಯಿದೆ-1781  Read more
pitts india act assembly
Pitts India act time pic




1786 ರ ಕಾಯಿದೆ [ಐತಿಹಾಸಿಕ ಹಿನ್ನಲೆ]

             ಈ ಕಾಯಿದೆಯು ಗವರ್ನರ್ ಜನರಲ್ನನ್ನು ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೇನಾ ಪಡೆಗಳ ಮುಖ್ಯಸ್ಧನಾಗಿ (ಕಮಾಂಡರ್ ಇನ್ ಚೀಫ್) ಮಾಡಿತು. ವಿಶೇಷ ಸಂದರ್ಬಗಳಲ್ಲಿ ಸಮಿತಿ (ಕೌನ್ಸಿಲ್)ಯ ನಿರ್ದಾರಗಳನ್ನು ತಿರಸ್ಕರಿಸಿ , ತಾನೇ ವಿವೇಚನಾಯುಕ್ತವಾಗಿ ನಿರ್ದಾರಗಳನ್ನು ತೆಗದುಕೊಳ್ಳುವ ವಿಶೇಷ ಅಧಿಕಾರವನ್ನು ಗವರ್ನರ್ ಜನರಲ್ಲನಿಗೆ ನೀಡಲಾಯತು 


ಚಾರ್ಟ್ ರ್ ಕಾಯಿದೆ -


  *ಚಾರ್ಟ್ ರ್ ಕಾಯಿದೆ - 1793  
  *ಚಾರ್ಟರ್  ಕಾಯಿದೆ - 1833    
  *ಚರ್ಟರ್   ಕಾಯಿದೆ - 1853 

             1793ರಿಂದ 1853ರ ವರೆಗಿನ ಬ್ರಿಟಿಷ್ ಸಂಸತ್ತಿನಿಂದ ಹೊರಡಿಸಲ್ಪಟ್ಟ ಚರ್ಟರ್ ಕಾಯಿದೆಗಳಲ್ಲಿ 1853 ಚರ್ಟರ್   ಕಾಯಿದೆ ಕೊನೆಯ ಕಾಯಿದೆ ಯಾಗಿರುತೆ. ಇದು ಕೊಡ ಭಾರತ ಸಂವಿದಾನ ದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. 1853 ರ ಚರ್ಟರ್  ಕಾಯಿದೆ ಇಂದ ಭಾರತವನ್ನು ಸಂಸದೀಯ ಪದ್ದತಿ ಪ್ರಾರಂಭವಾಯ್ತು. Read More

ಭಾರತ ಸರ್ಕಾರ ಕಾಯಿದೆ - 1858 [ಐತಿಹಾಸಿಕ ಹಿನ್ನಲೆ]

            1857 ರ ಪ್ರಧಮ ಸ್ವಾತಂತ್ರ್ಯ ಸಂಗ್ರಾಮ ಅಧವಾ ಸಿಪಾಯಿ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಸಂಸತ್ತು ಭಾರತ ಸರ್ಕಾರ ಕಾಯಿದೆ 1858 ರಲ್ಲಿ ಹೊರದಿಸಿತು. ಈ ಕಾಯಿದೆ ಯನ್ನು ರಾಣಿಯ ಘೋಷಣೆ ಪತ್ರ ಎಂದು ಕರೆಯುತರೆ.

 ಈ ಕಾಯಿದೆ ಯ ಮೂಲಕ ಮಹಾರಾಣಿ ವಿಕ್ಟೋರಿಯಾ ಭಾರತ ಆಡಳಿತದ ಹೊಣೆಯನ್ನು ಈಸ್ಟ್ ಇಂಡಿಯಾ ಕಂಪನಿಯಿಂದ ತನ್ನ ನೇರ ಅಡಲಿತಕೆ ವಹಿಸಿಕೊಂಡರು. ಅಂದರೆ ಈ ಕಾಯಿದೆ ಮೂಲಕ ಈಸ್ಟ್ ಇಂಡಿಯಾ ಕಂಪನಿಯನ್ನು ರದ್ದುಗೊಳಿಸಿ ಭಾರತದ ಆಡಳಿತವನ್ನು ನೇರವಾಗಿ ಬ್ರಿಟಿಷ್ ಸಾಮ್ರಾಜಯಕೆ ವರ್ಗಾಯ್ಸಲಾಯ್ತು . ಆದ್ದರಿಂದ ಈ ಕಾಯಿದೆ ಅತ್ಯಂತ ಮಹತ್ವ ಪೊರ್ಣ ಕಾಯಿದೆ ಎಂದು ಹೇಳ ಬಹುದು. Read More

1858 act pic
1858 act



ಭಾರತದ ಕೌನ್ಸಿಲ್ ಕಾಯಿದೆ 


   *ಭಾರತ ಕೌನ್ಸಿಲ್ ಕಾಯಿದೆ - 1861 
   *ಭಾರತ ಕೌನ್ಸಿಲ್ ಕಾಯಿದೆ - 1892 
   *ಭಾರತದ ಕೌನ್ಸಿಲ್ ಕಾಯಿದೆ - 1909 
                1858 ರ ಭಾರತ ಸರ್ಕಾರ ಕಾಯಿದೆ ಯ ಮೂಲಕ ಜಾರಿಗೆ ತರಲಾದ ಕೇಂದ್ರೀಕೃತ ಆಡಳಿತ ಪದ್ದತಿ ಭಾರತೀಯರಲ್ಲಿ ಅಸಂತೃಪ್ತಿ  ಮೋಡಿಸಿತು ಆಡಳಿತ ವಿಕೇಂದ್ರೀಕರಣ ಭಾರತೀಯರ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರಿಸಲು ಮತ್ತು ಆಡಳಿತ ವ್ಯವಸ್ತೆಯಲ್ಲಿ ಸೋಕ್ತ ಬದಲಾವಣೆ ತರುವುದಕಾಗಿ ಬ್ರಿಟಿಷ್ ಸಂಸತ್ತು 1861 ಭಾರತೀಯ ಕೌನ್ಸಿಲ್ ಕಾಯಿದೆ ಯನ್ನು ಪಾಸು ಮಾಡಿತು. ಈ ಕಾಯಿದೆ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರನ್ನು ನಾಮಕರಣ ಮಾಡಲು ಅವಕಾಶ ಕಲ್ಪಿಸಿತು. 
ಇದರಿಂದ ಭಾರತೀಯರು ಪ್ರಧಮ ಬಾರಿಗೆ ಭಾರತದ ಅಡಲಿತದಲ್ಲಿ ಪಾಲ್ಗೊಳ್ಳಲು ಅವಕಾಶವಾಯ್ತು. ಆದುದರಿಂದ ಭಾರತ ಸಂವಿದಾನ ಬೆಳವಣಿಗೆಗೆ 1861ರ ಕಾಯಿದೆ ಪ್ರಮುಕವಾದದು. 

                 1861 ರ ಕಾಯಿದೆ ಪ್ರಕಾರ ಸ್ಥಾಪಿತವಾಗಿರುವ ಮಂಡಳಿಗಳಲ್ಲಿ ಭಾರತೀಯರಿಗೆ ನ್ಯಾಯ ಸಮ್ಮತವಾದ ಪ್ರಾತಿನಿಧ್ಯತೆಯನ್ನು ನೀಡಲಾಗಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರತಿಭಟಿಸಿತು . ಜೊತೆಗೆ ಶಾಸನಿಯ ಮಂಡಲಿಗಳ ಸದಸ್ಯರ ನೇಮಕಾತಿ ಪಡ್ಡತಿಯನ್ನು ವಿರೋಧಿಸಿದ್ದಲ್ಲದೆ ಚುನಾಯ್ತ ಪದ್ದತಿ, ಆಯಾ ವ್ಯಯ ಪಟ್ಟಿಯ ಮೇಲೆ ಮಂಡಳಿಗೆ ಅಧಿಕಾರ, ಕಾರ್ಯಾಂಗದ ಮೇಲೆ ಶಾಸಕಾಂಗದ ನಿಯಂತ್ರಣ ಮುಂತಾದ ಬೇಡಿಕೆಕಳಿಗೆ ಕಾಂಗ್ರೆಸ್ ಬ್ರಿಟಿಷ್ ಸರ್ಕಾರದ ಮುಂದೆ ಇಟ್ಟಿತು. ಈ ಬೇಡಿಕೆ ಈಡೇರಿಸುವ ಸಲುವಾಗಿ 1892 ರ ಭಾರತೀಯ ಕೌನ್ಸಿಲ್ ಕಾಯಿದೆ ಜಾರಿಗೆ ಬಂತು. 

               ಭಾರತ ಕೌನ್ಸಿಲ್ ಕಾಯಿದೆ 1909 ನ್ನು ಮಾರ್ಲೆ  - ಮಿಂಟ್ೂ  ಸುಧಾರಣೆ ಎಂದು ಕರೆಯುತರೆ. ಈ ಕಾಯಿದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಭಾರತದ ಕಾರ್ಯದರ್ಶಿಯಾಗಿದ್ದರು ಮತ್ತು ಲಾರ್ಡ್ ಮಿಂಟ್ೋ ಭಾರತದ ವೈಸ್ ರಾಯ್  ಆಗಿದ್ದರು.
minto-marley act

ಭಾರತ ಸರ್ಕಾರ ಕಾಯಿದೆ - 1919 

[ಐತಿಹಾಸಿಕ ಹಿನ್ನಲೆ(Historical Background )]

              ಮೊದಲನೇ ಜಾಗತಿಕ ಯುದ್ದ ದ ಸಮಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವಯಂ ಆಡಳಿತದ ಬೇಡಿಕೆಯನ್ನು ಇಡತೊಡಗಿತ್ತು . ಯುದ್ದ ದಲ್ಲಿ ಬ್ರಿಟಿಷ್ ರಗಿ ಸಹಕಾರ ನೀಡಿದರೆ ಯುದ್ದ ದ ನಂತರ ಭಾರತೀಯರಿಗೆ ಸ್ವಯಂ ಆಡಳಿತ ನೀಡುವುದಾಗಿ ವಾಗ್ದಾನ ಮಾಡಲಾಯಿತು. 
1909 ರ ಕಾಯಿದೆ ಯ ಲೋಪದೋಷಗಳನ್ನು ಸಾರಿಪಡಿಸಬೇಕು ಎಂಬ ಒತ್ತಡವೂ ಇತ್ತು. ಭಾರತದಲ್ಲಿ ಕ್ರಮೇಣವಾಗಿ ಜವಾಬ್ದಾರಿ ಸರ್ಕಾರವನ್ನು ಜಾರಿಕೋಲಿಸುವ ಉದ್ದೇಶದಿಂದ ಭಾರತ ಸರ್ಕಾರ ಕಾಯಿದೆ 1919 ನ್ನು ರೋಪಿಸಲಾಯಿತು. 

          ಮಾಂಟೆಗೋ  ರವರು ಭಾರತದ ಕಾರ್ಯದರ್ಶಿಯಾಗಿ(Secretary of State for India) ಹಾಗೂ ಲಾರ್ಡ್ ಚೆಲ್ಮ್ಸ್  ಪರ್ಡ್ ಭಾರತದ ವೈಸ್ ರಾಯ್ ಆಗಿಯು ಕಾರ್ಯ ನಿರ್ವಹಿಸುತಿದ್ದರು. ಆದ್ದರಿಂದ   ಈ ಕಾಯಿದೆ ಯನ್ನು ಮಾಂಟೆಗೋ  -  ಚೆಲ್ಮ್ಸ್  ಪರ್ಡ್ ಸೂದರಣೆ ಎಂದು ಕರೆಯುತರೆ. 
Historical Background of Indian Constitution
Montague - Chelmsford 



           1919ರ ಕಾಯಿದೆ ಯ ಕಾರ್ಯ ನಿರ್ವಹಣೆ ಸಂಬಂಧಿಸಿದಂತೆ ವರದಿ ನೀಡಲು ಮತ್ತು ಆಗತ್ಯವೆನಿಸಿಯಲ್ಲಿ ಸೂದರಣೆಗಳನ್ನು ಶಿಪಾರಸು ಮಾಡಲು 1927ರಲ್ಲಿ ಸೈಮನ್ ಆಯೋಗವನ್ನು ನೇಮಿಸಲಾಯಿತು 



ಭಾರತ ಸರ್ಕಾರ ಕಾಯ್ದೆ -1935 

[ಐತಿಹಾಸಿಕ ಹಿನ್ನಲೆ(Historical Background )]

              1919 ರ ಕಾಯಿದೆ ಯ ಸೂದರಣೆಗಳಿಂದ ತೃಪ್ತಿ ಆಗದ ಭಾರತೀಯರು ಇನ್ನೂ ಹೆಚ್ಚಿನ ಶುದ್ಧಾರಣೆಗಳನ್ನು ಜಾರಿಗೆ ತರಬೇಕೆಂದು ಬ್ರಿಟಿಷ್ ಸರ್ಕಾರಕೆ ಇತ್ತಾಯಿಸಿದರು . ಬ್ರಿಟಿಷ್ ಸರ್ಕಾರ ಭಾರಟಕೆ ಸ್ವಾತಂತ್ರ ನೀಡಬೇಕೆಂದು ತನ್ನ ಬೇಡಿಕೆಯನ್ನು ಕಾಂಗ್ರೆಸ್ ಮುಂದುವರಿಸಿತು  ಹಾಗೂ 1920 ರಲ್ಲಿ ಅಸಹಕಾರ ಚಳುವಳಿಯನ್ನು ಆರಂಭಿಸಿತು. 
ಈ ಹಿನ್ನಲೆಯಲ್ಲಿ ಭಾರತೀಯರ ಅಸಂತೃಪ್ತಿ ಯನ್ನು ಕಡಿಮೆ ಮಾಡವ ಉದ್ದೇಶದಿಂದ  ಬ್ರಿಟಿಷ್ ಸರ್ಕಾರವು ಭಾರತ ಸರ್ಕಾರ ಕಾಯ್ದೆ -1935 ನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯನ್ನು ಜವಾಬ್ದಾರಿಯುತ ಸರ್ಕಾರದ ರಚನೆಯತ್ತ ಎರಡು ಮೈಲಿಗಲ್ಲು ಎಂದು ಕರೆಯಬಹುದು. ಈ ಕಾಯ್ದೆ ಯನ್ನು ಭಾರತ ಸಂವಿದನದ ನೀಲಿ ನಕಾಶೆ ಎಂದು ಕರೆಯುತರೆ. ಇದು 321 ಸೆಕ್ಷನ್ ಗಳು ಹಾಗೂ 10 ಆನುಸೂಚಿಗಳಿಂದ ಕೊಡಿದ ವಿಸ್ಕೃತವಾದ , ವಿವರಾತ್ಮಕ ದಾಖಲಾಗಿದೆ.

1935 act


ಭಾರತ ಸ್ವಾತಂತ್ರ್ಯ ಕಾಯ್ದೆ - 1947 

[ಐತಿಹಾಸಿಕ ಹಿನ್ನಲೆ(Historical Background )]

                          1947 ರ ಭಾರತ ಸ್ವಾತಂತ್ರ್ಯ ಕಾಯ್ದೆ ಯು ಭಾರತ ಸಂವಿದನದ ಬೆಳವಣಿಗೆಯ ಇತಿಹಾಸದಲ್ಲಿ ಬ್ರಿಟಿಷ್ ರಿಂದ ರೋಪಿಸಲ್ಪಟ್ಟ ಕೊನೆಯ ಕಾಯ್ದೆ ಯಾಗಿದೆ . ಒಂದು ಸ್ವಾತಂತ್ರ್ಯ ರಾಶತ್ರವನ್ನು ಸೃಸ್ಟಿಸುವುದು ಈ ಕಾಯ್ದೆಯ ಉದ್ದೇಶವಾಗಿತ್ತು  

                          ಜೂನ್ 30 1948 ರ ಹೊತ್ತಿಗೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಕೊನೆಕೊಂಡು, ನಂತರ ಅಡಿಕಾರವನ್ನು ಭಾರತೀಯರಿಗೆ ಹಸ್ತಾಂತರಿಸುವುದು ಎಂಬುದಾಗಿ 1947 ಫೆಬ್ರವರಿ 20 ರಂದು ಬ್ರಿಟೆನಿನ ಪ್ರಧಾನಿ ಕ್ಲೆಮೆಂಟ್ ಅಟ್ಲಿ ಘೋಷಿಸಿದರು . ಈ ಘೋಷಣೆಯ ವಿರುದ ಪ್ರತಿಪಾಟಿಸಿದ ಮುಸ್ಲಿಂ ಲೀಗ್ ದೇಶ ವಿಭಜನೆ ಬೇಡಿಕೆಯನ್ನು ಮೂಂದಿಟ್ಟಿತು. ಜೂನ್ 3 1947 ರಂದು ಭಾರತದ ವೈಸ್ ರಾಯಾಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ನು ವಿಭಜಿಸುವ ಯೋಜನೆಯನ್ನು ಪ್ರಸ್ತಾಪಿಸಿದನು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಎರಡು ಈ ಯೋಜನೆಗೆ ಸಮ್ಮಿತಿ   ನೀಡಿದವು. ಭಾರತ ಸ್ವಾತಂತ್ರ್ಯ ಕಾಯ್ದೆ 1947 ನ್ನು ಜಾರಿಕೋಳಿಸುವ ಮೂಲಕ ಲಾರ್ಡ್ ಮೌಂಟ್ ಬ್ಯಾಟನ್ಯೋಜನೆಯನ್ನು ಅನುಷ್ಟಾನಗೊಳಿಸಿದನು  
INDIPENDENCE DAY
INDIPENDENCE ANNOUNCE TIME


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad